BBK 11: ಮಂಜು ಮುಖಕ್ಕೆ ಟೀ ಎರಚಿದ ಗೌತಮಿ; ಏನಾಗ್ತಿದೆ ಬಿಗ್ ಬಾಸ್ ಮನೆಯಲ್ಲಿ?

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ದೋಸ್ತಿಗಳೇ ಈಗ ಹಗ್ಗಜಗ್ಗಾಟಕ್ಕೆ ನಿಂತಿದ್ದಾರೆ. ಎಲ್ಲಾ ವಿಚಾರದಲ್ಲೂ ಇವರಿಗೆ ಇವರೇ ಸಪೋರ್ಟ್ ಎನ್ನುತ್ತಿದ್ದರು. ಆದರೆ ಈಗ ಎಲ್ಲವೂ ಉಲ್ಟಾ ಆಗ್ತಾ ಇದೆ. ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದ ಮಂಜು, ಗೌತಮಿ ಹಾಗೂ ಮೋಕ್ಷಿತಾ ಬೆಸ್ಟ್ ಫ್ರೆಂಡ್ಸ್ ಆಗಿದ್ದವರು. ಮಂಜು ಹಾಗೂ ಗೌತಮಿ ಡಾಮಿನೇಟ್ ಮಾಡ್ತಾರೆ ಅಂತ ಮೋಕ್ಷಿತಾ ಅವರ ಸಹವಾಸವನ್ನೇ ಬಿಟ್ಟರು. ಈಗ ಗೌತಮಿ ಹಾಗೂ ಮಂಜು ಅಂಟಿಕೊಂಡೆ ಇರುತ್ತಾರೆ.

ವೀಕೆಂಡ್ ಎಪಿಸೋಡ್‌ಗಳಲ್ಲಿ ಮಂಜು ಬದಲಾಗಲಿ, ಅವರಿಗೋಸ್ಕರ ಆಟ ಆಡೋದಕ್ಕೆ ಶುರು ಮಾಡಲಿ ಅಂತ ಕಿಚ್ಚ ಸುದೀಪ್ ಅವರು ಸಾಕಷ್ಟು ಸಲ ಗೌತಮಿ ವಿಚಾರಕ್ಕೆ ಮಾತನಾಡಿದ್ದಾರೆ. ಆದರೆ ಅದ್ಯಾಕೋ ಮಂಜು ತಿದ್ದಿಕೊಳ್ಳುವಂತೆ ಕಾಣಿಸುತ್ತಿಲ್ಲ. ಆದರೆ ಇಂದು ಗೌತಮಿಯೇ ಮಂಜು ಮುಖಕ್ಕೆ ಟೀ ಎರಚಿದ್ದಾರೆ.

Bigg Boss kannada 11 Gowtha mi throws tea On Manju s Face

ಸ್ಪರ್ಧಿಗಳಿಗೆ ಹೊಸ ಟಾಸ್ಕ್

ಬಿಗ್ ಬಾಸ್ ಆಗಾಗ್ಗೆ ಮನೆ ಮಂದಿಗೆ ತಮ್ಮನ್ನು ತಾವೂ ಗುರುತಿಸಿಕೊಳ್ಳುವಂತಹ, ತಾವೇನು ತಪ್ಪು ಮಾಡುತ್ತಾ ಇದ್ದೀವಿ ಎಂಬುದರ ಅರಿವು ಮೂಡಿಸುವಂತಹ ಟಾಸ್ಕ್ ನೀಡುತ್ತಾ ಇರುತ್ತಾರೆ. ಇದೀಗ ಇಂದು ಕೂಡ ಬಿಗದ ಬಾಸ್ ಹೊಸ ಟಾಸ್ಕ್ ಒಂದನ್ನ ನೀಡಿದ್ದು, ಎಚ್ಚೆತ್ತುಕೊಳ್ಳಿ ಎಂದು ಹೇಳಿದೆ. ಕುದಿಯುತ್ತಿರುವ ಮನಸ್ಸಿನ ಬೇಗೆಯನ್ನು ತಣ್ಣಗಾಗಿರುವ ಟೀ ಎರಚಿ ಎಚ್ಚೆತ್ತುಕೊಳ್ಳುವಂತ ಟಾಸ್ಕ್ ನೀಡಿದೆ.

ಮುಖಕ್ಕೆ ಟೀ ಎರಚಿದ ಗೌತಮಿ

ಗೌತಮಿಗೋಸ್ಕರ ಮಂಜು ಏನು ಬೇಕಾದರೂ ಮಾಡುತ್ತಾರೆ. ಅಷ್ಟರಮಟ್ಟಿಗೆ ಅವರನ್ನ ಸೇಫ್ ಮಾಡುತ್ತಿದ್ದಾರೆ. ಅವರೊಟ್ಟಿಗೆ ಇರುತ್ತಾರೆ. ಕಿಚ್ಚ ಸುದೀಪ್ ಕೂಡ ಆಗಾಗ ಆ ಬಗ್ಗೆ ಮಾತಾಡುತ್ತಲೇ ಇರುತ್ತಾರೆ. ಇಂದು ತನ್ನ ಗೆಳೆಯನ ಮುಖಕ್ಕೆ ಗೌತಮಿ ಟೀ ಎರಚಿದ್ದಾರೆ. ಇನ್ನಾದರೂ ಮಂಜು ಎಚ್ಚೆತ್ತುಕೊಳ್ಳುತ್ತಾರಾ ನೋಡಬೇಕಿದೆ. 'ಗೌತಮಿ ಇದ್ದಾಗ ಮಂಜು ಮಾತಾಡಲ್ಲ.. ಗೌತಮಿಗೆ ಹೆದರುತ್ತಾರೆ.. ಎಚ್ಚೆತ್ತುಕೊಳ್ಳಿ' ಎಂದು ಟೀ ಎರಚಿದ್ದಾರೆ.

ಭವ್ಯಾ-ಐಶು ಟೀ ಎರೆಚಾಟ

ಐಶ್ವರ್ಯಾ ಹಾಗೂ ಭವ್ಯಾ ನಡುವೆ ಕೋಲ್ಡ್ ವಾರ್ ನಡೆಯುತ್ತಲೆ ಇರುತ್ತದೆ. ಇಬ್ಬರ ನಡುವಿನ ಮನಸ್ತಾಪ ಎಂದಿಗೂ ಸರಿ ಆಗಲ್ಲ ಎಂಬಂತೆ ಕಾಣಿಸುತ್ತಿದೆ. ನಾಮಿನೇಷನ್ ಅಂತ ಬಂದಾಗ ಭವ್ಯಾ - ಐಶ್ವರ್ಯಾ ಅವರ ಹೆಸರನ್ನೇ ತೆಗೆದುಕೊಳ್ಳುತ್ತಾರೆ. ಈಗ ಎಚ್ಚೆತ್ತುಕೊಳ್ಳಿ ಟಾಸ್ಕ್ ನಲ್ಲೂ ಐಶ್ವರ್ಯಾ ಅವರ ಹೆಸರನ್ನೇ ತೆಗೆದುಕೊಂಡಿದ್ದು, ಅವರ ಮುಖಕ್ಕೆ ಟೀ ಎರಚಿದ್ದಾರೆ. ಹಾಗೇ ಗೌತಮಿ, ಹನುಮಂತು, ಚೈತ್ರಾ, ಮೋಕ್ಷಿತಾಗೆ ಟೀ ಎರಚುತ್ತಿರುವುದು ಇಂದಿನ ಪ್ರೋಮೋದಲ್ಲಿ ಕಾಣಿಸಿದೆ. ಟೀ ಎರಚಿ ಎಚ್ಚೆತ್ತುಕೊಳ್ಳಿ ಎಂದವರು ಎಚ್ಚೆತ್ತುಕೊಳ್ಳುತ್ತಾರಾ ನೋಡಬೇಕಿದೆ.

ಐಶು-ಚೈತ್ರಾ ಮಧ್ಯೆ ಕಿರಿಕ್

ಇನ್ನು ಈ ಆಟದ ಬಳಿಕ ಚೈತ್ರಾ ಹಾಗೂ ಐಶ್ವರ್ಯಾ ನಡುವೆ ಜೋರು ಗಲಾಟೆಯೇ ನಡೆದಿದೆ. ಈ ವಾರ ನಿಮ್ಮ ಆಟಗಳಿಗೆ ನಾನು ಬಲಿಪಶು ಆದೆ ಎಂದು ಐಶ್ವರ್ಯಾ ಕೋಪಗೊಂಡಿದ್ದಾರೆ. ಇದಕ್ಕೆ ಉತ್ತರವಾಗಿ ಟಾರ್ಗೆಟ್ ಬಲಿಪಶು ಇದೆ ಐಶ್ವರ್ಯಾ ಬಾಯಲ್ಲಿ ಬಂದಿರುವ ಮಾತು ಎಂದು ಚೈತ್ರಾ ಹೇಳಿದ ಕೂಡಲೇ ಐಶ್ವರ್ಯಾ ಹೇಯ್ ಸುಳ್ಳು ಹೇಳುತ್ತಾ ಇದ್ದೀರಾ ನೀವೂ ಎಂದಿದ್ದೇ ತೆ, ಆ ಕಡೆಯಿಂದ ಚೈತ್ರಾ ರೊಚ್ಚಿಗೆದ್ದಿದ್ದಾರೆ. ನೀನ್ ಯಾವಳೇ ಹೋಯ್ ಅನ್ನೋಕೆ ಅಂತಮ ಇಬ್ಬರ ಮಾತಿನ ಸಮರ ಜೋರಾಗಿ ಅವಳು ಇವಳು ಎಂದೆಲ್ಲಾ ಕಿತ್ತಾಡಿದ್ದಾರೆ. ಕ್ಯಾಪ್ಟನ್ ಭವ್ಯಾ ಅವರು ಬಿಡಿಸಲು ಹೋಗಿ ಸುಸ್ತಾಗಿ ಹೋಗಿದ್ದಾರೆ.

More from Filmibeat

English summary
BBK 11: Here is the details about Gautami and Manju's fight.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X