BBK 11 Grand Finale: ಬಿಗ್‌ಬಾಸ್ ಮನೆಯಿಂದ ಉಗ್ರಂ ಮಂಜು ಎಲಿಮಿನೇಟ್
ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಈಗಾಗಲೇ ಆರಂಭವಾಗಿದೆ. ನಿನ್ನೆ ಶನಿವಾರ(ಜನವರಿ 25) ಭವ್ಯಾ ಗೌಡ ಎಲಿಮಿನೇಟ್ ಆಗಿ ಹೊರ ಬಂದಿದ್ದರು. 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಇದೀಗ ಉಗ್ರಂ ಮಂಜು ಔಟ್ ಆಗಿದ್ದಾರೆ ಎನ್ನಲಾಗ್ತಿದೆ. ಬೆಳಗ್ಗೆ 11 ಗಂಟೆಯಿಂದಲೇ ಫಿನಾಲೆ ಶೋ ಚಿತ್ರೀಕರಣ ಆರಂಭವಾಗಿತ್ತು.
ಉಗ್ರಂ ಮಂಜು ಈ ಬಾರಿ ಗೆದ್ದೇ ಗೆಲ್ಲುತ್ತಾರೆ ಎಂದು ಬಹುತೇಕರು ಅಂದುಕೊಂಡಿದ್ದರು. ಶಾಕಿಂಗ್ ಎನ್ನುವಂತೆ ಮಂಜು ಹೊರ ಬಂದಿದ್ದಾರೆ. ಕೊನೆ ಪಕ್ಷ 2ನೇ ಸ್ಥಾನವನ್ನು ಅವರು ಅಲಂಕರಿಸುತ್ತಾರೆ ಎನ್ನುವುದು ಬಹುತೇಕರ ಲೆಕ್ಕಾಚಾರವಾಗಿತ್ತು. ಆದರೆ ಅಚ್ಚರಿ ಫಲಿತಾಂಶ ಹೊರಬಿದ್ದಿದೆ.

ಹನುಮಂತ ಅಥವಾ ಉಗ್ರಂ ಮಂಜು ಬಿಗ್‌ಬಾಸ್ ಸೀಸನ್ 11ರ ವಿನ್ನರ್ ಆಗ್ತಾರೆ ಎನ್ನುವುದು ಬಹುತೇಕರ ಲೆಕ್ಕಾಚಾರವಾಗಿತ್ತು. ಆದರೆ ಎಲ್ಲರ ಲೆಕ್ಕ ತಪ್ಪಾಗಿದೆ. ಈ ಬಾರಿ ಒಟ್ಟು 17 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಲಾಯರ್ ಜಗದೀಶ್ ಹಾಗೂ ಚೈತ್ರಾ ಕುಂದಾಪುರ ಬಳಿಕ ಪ್ರಬಲ ಸ್ಪರ್ಧಿ ಅನ್ನಿಸಿಕೊಂಡಿದ್ದವರು ಮಂಜು. ಆದರೆ ಗೌತಮಿ ಅವರ ಸ್ನೇಹದಿಂದ ಮಂಜು ನೈಜ ಆಟ ಹೊರ ಬರಲಿಲ್ಲ ಎನ್ನಲಾಗಿತ್ತು. ಈ ಬಗ್ಗೆ ಸುದೀಪ್ ಸಹ ಮಾತನಾಡಿದ್ದರು. ಮಂಜು, ಗೌತಮಿ, ಮೋಕ್ಷಿತಾ ಒಳ್ಳೆ ಸ್ನೇಹಿತರಾಗಿ ಇದ್ದಿದ್ದು ಗೊತ್ತೇಯಿದೆ.
ಒಮ್ಮೆ ಮೂವರು ದೂರಾಗಿದ್ದರು. ನಾನು ಗೆಲ್ಲಬೇಕು ಅಂದರೆ ಏಕಾಂಗಿಯಾಗಿ ಮುಂದೆ ಹೋಗಬೇಕು ಎಂದು ಮೂರು ಜನ ನಿರ್ಧರಿಸಿದ್ದರು. ಕೆಲ ದಿನ ಟೂ ಬಿಟ್ಟಿದ್ದರು. ಬಳಿಕ ಮತ್ತೆ ಒಂದಾಗುತ್ತಿದ್ದಾರೆ ಎಂದುಕೊಳ್ಳುವ ವೇಳೆಗೆ ಗೌತಮಿ ಎಲಿಮಿನೇಟ್ ಆಗಿ ಹೊರ ಬಂದಿದ್ದರು.
ಮಂಜುಗೆ ಅಭಿಮಾನಿಗಳ ಬಲ ಕೂಡ ದೊಡ್ಡದಾಗಿದೆ. ಹಾಗಾಗಿ ಗೆದ್ದೆ ಗೆಲ್ಲುತ್ತಾರೆ ಎನ್ನುವುದು ಸಾಕಷ್ಟು ಜನರ ಅಭಿಪ್ರಾಯವಾಗಿತ್ತು. ಮಂಜು ಹೊರ ಬಂದಿರುವುದರಿಂದ ಹನುಮಂತ ಗೆಲುವು ಸುಲಭವಾಗಬಹುದು. ಕಾರಣ ಇವರಿಬ್ಬರ ನಡುವೆಯೇ ಭಾರೀ ಪೈಪೋಟಿ ಇತ್ತು. ಒಂದಷ್ಟು ಡ್ಯಾನ್ಸರ್ಸ್ ಮನೆಯೊಳಗೆ ಹೋಗಿ ಡ್ಯಾನ್ಸ್ ಮಾಡುತ್ತಾ ಮಂಜು ಅವರನ್ನು ಅಲ್ಲಿಂದ ಕರೆದುಕೊಂಡು ಹೊರಗೆ ಬಂದಿದ್ದಾರೆ. ಅಲ್ಲಿಗೆ 120ನೇ ದಿನ ಅವರ ಬಿಗ್‌ಬಾಸ್ ಜರ್ನಿ ಮುಗಿದಿದೆ. 5ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿದ್ದಾರೆ.
ಎಲಿಮಿನೇಷನ್‌ಗೂ ಮುನ್ನ ಒಂದು ಸೂಟ್‌ಕೇಸ್‌ನಲ್ಲಿ ಹಣ ಇಟ್ಟು 5 ಜನರಲ್ಲಿ ಯಾರು ಬೇಕಾದರೂ ಇದನ್ನು ತೆಗೆದುಕೊಂಡು ಹೊರಬರಬಹುದು. ನೀವು ಆಟ ಮುಂದುವರೆಸಿದರೆ ಗೆಲ್ಲಬಹುದು, ಗೆಲ್ಲದೆಯೂ ಇರಬಹುದು. ಹಣ ಬಹಳ ಮುಖ್ಯ ಎಂದು ಸುದೀಪ್ ಹೇಳಿದ್ದರು. ಆಗ ಕೂಡ 5 ಜನ ಈ ಹಣ ಬೇಡ. ಮುಂದೆ ಏನಾಗುತ್ತದೆ ನೋಡೋಣ ಎಂದಿದ್ದರು.


Click it and Unblock the Notifications











