BBK 11 Grand Finale:ಹನುಮಂತನ ಹುಡುಗಿಯ ಬಗ್ಗೆ ಕೆದುಕಿದ ಕಿಚ್ಚ: ಅಪ್ಪ ಅಮ್ಮನಿಂದಲೂ ಸಿಕ್ತು ಗ್ರೀನ್ ಸಿಗ್ನಲ್
ಬಿಗ್ ಬಾಸ್ ಸೀಸನ್ 11 ರ ಗ್ರ್ಯಾಂಡ್ ಫಿನಾಲೆಯಲ್ಲಿ ಕಿಚ್ಚನ ಮಾತು ಕೇಳುವುದೇ ಚೆಂದ. ಸುದೀಪ್ ಎಂದರೆ ಒಂದು ಕಿಚ್ಚು. ಅವರ ಮಾತಿನ ತೂಕಕ್ಕೆ ಬಹಳಷ್ಟು ಜನ ಫಿದಾ ಆಗಿದ್ದಾರೆ. ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯೊಳಗೆ ಕುಳಿತಿರುವ ಕಂಟೆಸ್ಟೆಂಟ್ ಜೊತೆ ಮಾತಿನ ಜೊತೆ ನಗೆಯ ಹೊನಲನ್ನು ಹರಿಸುತ್ತಾರೆ. ಭವ್ಯಾ ಗೌಡ, ಮೋಕ್ಷಿತಾ ಪೈ, ತ್ರಿವಿಕ್ರಮ್, ಮಂಜು, ಹಾಗೆಯೇ ಹನುಮಂತ ಇವರ ಪೈಕಿ ಬಿಗ್ ಬಾಸ್ ಗೆಲ್ಲುವ ಸ್ಪರ್ಧಿ ಯಾರು ಎನ್ನುವ ಕೂತೂಹಲ ಮನೆ ಮಾಡಿರುವುದು ಸತ್ಯ.
ಮೊದಲಿಗೆ ಕಿಚ್ಚ ಸುದೀಪ್ ರಜತ್ ಕಾಲೆಳೆಯುತ್ತಿದ್ದರು. ಬಳಿಕ ಅವರ ದೃಷ್ಟಿ ಹನುಮಂತನ ಕಡೆಗೆ ತಿರುಗಿತ್ತು. ಕೂಡಲೇ ಹನುಮಂತನ ಹುಡುಗಿಯ ಬಗ್ಗೆ ಮಾತು ಶುರು ಮಾಡಿದ್ದರು. "ಹನುಮಂತು ಅವರೇ ಬಿಗ್ ಬಾಸ್ ಮನೆಗೆ ನಿಮ್ಮ ಹುಡುಗಿ ಬಂದರೆ ನೀವೇನು ಮಾಡುತ್ತೀರಿ?" ಎಂದಾಗ ಹನುಮಂತು ಕೊಂಚ ನಾಚಿ ನೀರಾಗಿದ್ದರು. ಆ ಬಳಿಕ ಕಿಚ್ಚ ಸುದೀಪ್ ಹನುಮಂತನ ಬಳಿ ಕೊಂಚ ಜೋರಾಗಿಯೇ ಹನುಮಂತನ ತಂದೆ ತಾಯಿಯ ಬಳಿ ಹೇಳುತ್ತಾರೆ.

ಹನುಮಂತ ನಿಮ್ಮ ತಂದೆ ತಾಯಿ ಎದುರು ಒಪ್ಪಿಕೊ ಎಂದಾಗ ಹನುಮಂತು ಏನು ಹೇಳದೆ ಸುಮ್ಮನೆ ಕುಳಿತಿದ್ದರು. ಆದರೆ ಹನುಮಂತು ತಂದೆ ತಾಯಿ ಕಿಚ್ಚನ ಮಾತು ಕೇಳಿ ಶಾಕ್ ಆಗುತ್ತಾರೆ. ಕೊನೆಗೆ ಹನುಮಂತು ಪ್ರೀತಿಗೆ ಅವರ ತಂದೆ ತಾಯಿ ಒಪ್ಪಿಗೆ ಸೂಚಿಸುತ್ತಾರೆ. ಇದೀಗ ರಜತ್ ಬಗ್ಗೆ ಅವರ ಪತ್ನಿ ಅಕ್ಷತಾ ಅವರನ್ನು ಮಾತನಾಡಿಸಿದರು. ಕಿಚ್ಚ ಸುದೀಪ್ ನೇರವಾಗಿ ಅಕ್ಷತಾ ಬಳಿ "ಈ ಯಪ್ಪಾನ ಹೇಗೆ ತಡೆದುಕೊಳ್ಳುತ್ತಿರಾ?" ಎಂದು ಕೇಳಿದಾಗ ರಜತ್ ಕೊಂಚ ಜೋರಾಗಿಯೇ ನಾನು ಒಳ್ಳೆಯವನು ಸರ್ ಎಂದಿದ್ದಾರೆ.
ಮಂಜು ಭಾವುಕ ಮಾತು
ಕಿಚ್ಚ ಸುದೀಪ್ ಕೂಡಲೇ ಅದೇ ಗೊತ್ತಾಯಿತು. ನಿಮ್ಮ ಹೆಂಡತಿ ಮೊಗದ ರಿಯಾಕ್ಷನ್ ನೋಡಿದರೆ ಗೊತ್ತಾಗುತ್ತೆ ಎಂದಾಗ ಪ್ರೇಕ್ಷಕರು ಗೊಳ್ಳೆಂದು ನಗಾಡಿದ್ದರು. ಈ ವೇಳೆ ಮಂಜು ತಂದೆ ಬಹಳ ಭಾವನಾತ್ಮಕವಾಗಿ ಮಾತನಾಡುತ್ತಾರೆ. ಮೊದಲಿದ್ದ ಮಂಜುಗೂ ಹಾಗೆಯೇ ಈಗ ಇರುವ ಮಂಜುಗೆ ಬಹಳಷ್ಟು ವ್ಯತ್ಯಾಸ ಇದೆ. ತನ್ನ ಮಗ ಬಿಗ್ ಬಾಸ್ ಮೆಟ್ಟಿಲು ಯಾವಾಗ ಹತ್ತಿದ್ದಾನೋ ಅವತ್ತೇ ಆತ ಗೆದ್ದ ಎಂದು ತಂದೆ ಹೇಳಿದಾಗ ಮಂಜುಗೆ ಕೊಂಚ ಮಟ್ಟಿಗೆ ಭಾವುಕರಾಗುತ್ತಾರೆ.
ಬಿಗ್ ಬಾಸ್ ಫಿನಾಲೆಯಲ್ಲಿ ಮಸ್ತ್ ಡ್ಯಾನ್ಸ್
ಮೊದಲೆಲ್ಲ ಮಂಜು ಕುಡಿತದ ಚಟಕ್ಕೆ ದಾಸ ಆಗಿದ್ದರು. ಆದರೆ, ಬಿಗ್ ಬಾಸ್‌ಗೆ ಬಂದಾಗ ಮೊದಲ ಎರಡು ದಿನ ಮದ್ಯಪಾನದ ನೆನಪಾಗಿದೆ. ಅದಾದ ಬಳಿಕ ಟಾಸ್ಕ್‌ನಿಂದಾ ಸುಸ್ತಾಗಿ ಮೈ ಕೈ ನೋವು ಬಂದಾಗ ಅದೆಲ್ಲ ಮರೆತೇ ಹೋಗಿದೆ ಎಂದು ಸ್ವತಃ ಮಂಜು ಅವರೇ ಹೇಳಿಕೊಂಡಿದ್ದಾರೆ. ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಪರ್ಧಿಗಳ ಮನೆ ಮಂದಿ ಎಲ್ಲರೂ ತಮ್ಮ ಮನೆಯ ಮಗುವಿಗಾಗಿ ಸ್ಟೇಜ್ ನಲ್ಲಿ ಡ್ಯಾನ್ಸ್ ಮಾಡಿ ಎಲ್ಲರನ್ನೂ ಮನರಂಜನೆ ನೀಡಿದ್ದಾರೆ.
ಬಿಗ್ ಬಾಸ್ ವಿನ್ನರ್ ಯಾರಾಗುತ್ತಾರೆ?
ಬಿಗ್ ಬಾಸ್ ಹೇಳಿದ ಮಾತುಗಳನ್ನು ಕೇಳಿಕೊಂಡು ಬಹಳ ಕಷ್ಟಪಟ್ಟು , ತನ್ನನ್ನು ತೊಡಗಿಸಿಕೊಂಡಿರುವುದಕೆ ಖಂಡಿತವಾಗಿಯೂ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಮಂಜು ಹೇಳಿದಾಗ ಎಲ್ಲರಿಗೂ ಖುಷಿ ಆಗುತ್ತದೆ. ಹದಿನೇಳು ವಾರಗಳ ಜರ್ನಿಯ ಝಲಕನ್ನು ಫಿನಾಲೆ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ತೋರಿಸಿದಾಗ ಸ್ಪರ್ಧಿಗಳಿಗೆ ಬಹಳಷ್ಟು ಖುಷಿ ಆಗುತ್ತದೆ.


Click it and Unblock the Notifications











