BBK 11 Grand Finale: ಬಿಗ್‌ಬಾಸ್‌ನಲ್ಲಿ ಉಗ್ರಂ ಮಂಜುಗೆ ಬಿದ್ದ ಕಳ್ಳ ವೋಟ್‌ಗಳು ಎಷ್ಟು? ಹಾಕಿದ್ಯಾರು?
ಬಿಗ್‌ಬಾಸ್ ಕನ್ನಡ 11 ಗ್ರ್ಯಾಂಡ್ ಫಿನಾಲೆ ರಂಗೇರಿದೆ. ಕಿಚ್ಚನ ಮಾತುಗಳ ಜೊತೆಗೆ ಕಲರ್‌ಫುಲ್ ಪರ್ಫಾರ್ಮನ್ಸ್‌ಗಳು ಸದ್ದು ಮಾಡ್ತಿದೆ. ಸ್ಪರ್ಧಿಗಳ ಆಪ್ತರು ವೇದಿಕೆ ಏರಿ ಹೆಜ್ಜೆ ಹಾಕಿದ್ದರು. ರಜತ್ ಕುಟುಂಬಸ್ಥರು, ಉಗ್ರಂ ಮಂಜು ತಂದೆ, ಭವ್ಯಾ ಗೌಡ ಸಹೋದರಿಯರು ಕುಣಿದಿದ್ದಾರೆ.
ಸುದೀಪ್ ಬಹಳ ತಮಾಷೆಯಾಗಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾರೆ. ಸ್ಪರ್ಧಿಗಳಿಗೆ ಭಾರೀ ಸರ್‌ಪ್ರೈಸ್‌ಗಳು ಸಿಗುತ್ತಿದೆ. ಹನುಮತನ ಪ್ರೀತಿ, ಮದುವೆ ಜೊತೆ ಉಗ್ರಂ ಮಂಜು ಮದುವೆ ವಿಚಾರವೂ ಚರ್ಚೆಗೆ ಬಂದಿದೆ. ಇನ್ನು ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಆತ್ಮೀಯ ಒಡನಾಟದ ಬಗ್ಗೆಯೂ ತಮಾಷೆಯಾಗಿ ಸುದೀಪ್ ಕಾಲೆಳೆದಿದ್ದಾರೆ. ಇನ್ನು ವೇದಿಕೆಯಲ್ಲೇ ಸ್ಪರ್ಧಿಗಳಿಗೆ ಸಿಕ್ಕ ವೋಟ್‌ಗಳ ಬಗ್ಗೆ ಚರ್ಚೆ ಆಗಿದೆ.

ಈ ಬಾರಿ ವಿಜೇತರಿಗೆ 5 ಕೋಟಿಗೂ ಅಧಿಕ ಮತಗಳು ಸಿಕ್ಕಿದ್ದರೆ 6ನೇ ಸ್ಥಾನದಲ್ಲಿರುವವರಿಗೆ 60 ಲಕ್ಷಕ್ಕೂ ಹೆಚ್ಚು ಮತ ದಕ್ಕಿದೆ. ಇದೆಲ್ಲದರ ನಡುವೆ ಉಗ್ರಂ ಮಂಜು ಬಿದ್ದ ಕಳ್ಳ ವೋಟ್‌ಗಳ ಬಗ್ಗೆಯೂ ಬಿಗ್‌ಬಾಸ್ ಹೇಳಿದ್ದಾರೆ. ಆದರೆ ಇದೀಗ ಗಂಭೀರ ಸಂಗತಿ ಅಲ್ಲ. ತಮಾಷೆಯ ಸಂಗತಿ. ಮಂಜಣ್ಣನ ಎಣ್ಣೆ ವಿಚಾರಕ್ಕೆ ಸಂಬಂಧಿಸಿದ್ದು.
ಉಗ್ರ ಮಂಜು ಕುಡಿತದ ಚಟದ ಬಗ್ಗೆ ಈ ಹಿಂದೆ ಕೂಡ ಬಿಗ್‌ಬಾಸ್ ಮನೆಯಲ್ಲಿ ಚರ್ಚೆ ಆಗಿತ್ತು. ಮನೆಯೊಳಗೆ ಹೋದಮೇಲೆ ಅದರಿಂದ ದೂರ ಇದ್ದೀನಿ. ಇನ್ನುಮುಂದೆ ಅದರಿಂದ ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳುತ್ತೇನೆ. ಇದಕ್ಕೆ ಬಿಗ್‌ಬಾಸ್ ಸಹಕಾರಿಯಾಗಿದೆ ಎಂದು ಮಂಜು ಹೇಳಿದ್ದಾರೆ. ಮೂರು ಮದ್ಯದ ಬಾಟಲಿಗಳು ಮಾತನಾಡಿದಂತೆ ಒಂದು ವೀಡಿಯೋ ಪ್ಲೇ ಮಾಡಲಾಗಿದೆ.
ಎಣ್ಣೆ ಬಾಟಲಿ ಬಿಗ್‌ಬಾಸ್ ಸ್ಪರ್ಧಿ ಮಂಜು ಬಗ್ಗೆ ಮಾತನಾಡುವಂತೆ ಎಡಿಟ್ ಮಾಡಲಾಗಿದೆ. ಮಂಜುನ ಮಿಸ್ ಮಾಡಿಕೊಂಡಂತೆ, ಗೆಲ್ಲಬೇಕು ಎಂದು ಬಾಟಲ್ ಶುಭಾಶಯ ಕೋರಿದಂತೆ ವೀಡಿಯೋ ಇದೆ. ಅದರಲ್ಲಿ ಮಂಜಣ್ಣ ನೀವು ಶೋ ಗೆಲ್ಲಬೇಕು, ನೀವು ತರುವ ಕಪ್‌ನಲ್ಲಿ ಎಣ್ಣೆ ಹಾಕ್ಕೊಂಡು ಕುಡಿಬೇಕು, ನಿಮಗೆ 90-90 ವೋಟ್ ಹಾಕಿದ್ದೀವಿ, ನಾರ್ಮಲ್ ವೋಟ್ ಸಾಲಲ್ಲ ಅಂತ ಒಂದಷ್ಟು ಕಳ್ಳ ವೋಟ್ ಹಾಕ್ಸಿದ್ದೀವಿ, ಅದರಿಂದ ಆದರೂ ನೀನು ಗೆದ್ದೇ ಗೆಲ್ತೀಯಾ ಎಂದು ತಮಾಷೆಯಾಗಿ ಹೇಳಿರುವುದು ನೋಡಬಹುದು.
ಅಂದಹಾಗೆ ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್ ಸ್ಪರ್ಧಿಗಳಿಗೆ 99 ಮತ ಹಾಕುವ ಅವಕಾಶವಿದೆ. ಕಳ್ಳ ವೋಟ್ ಎನ್ನುವುದೆಲ್ಲ ಜಸ್ಟ್ ತಮಾಷೆಗಾಗಿ ಅಷ್ಟೇ. ಒಟ್ಟಾರೆ ಈ ವೋಟ್ ವಿಚಾರ ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಬಹಳ ಸದ್ದು ಮಾಡ್ತಿದೆ. 5 ಕೋಟಿ ಮತಗಳನ್ನು ಪಡೆದ ಆ ಸ್ಪರ್ಧಿ ಯಾರು? ಆ ವಿಜೇತ ಯಾರು? ಎನ್ನುವ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.


Click it and Unblock the Notifications











