BBK 11: ಬಿಗ್‌ಬಾಸ್ ಮನೆಯಿಂದ ಹಂಸಾ ಔಟ್; ಆಕೆ ಹೊರ ಬರಲು ಕಾರಣ ಅದೇನಾ?

ಕಳೆದ ವಾರ ಬಿಗ್‌ಬಾಸ್ ಮನೆಯಿಂದ ಯಾರು ಎಲಿಮಿನೇಟ್ ಆಗಿರಲಿಲ್ಲ. ಆದರೆ ವಾರದ ಮೊದಲ ದಿನವೇ ಹಂಸಾ ಮನೆಯಿಂದ ಹೊರ ಬಂದಿದ್ದಾರೆ. ಮಾನಸಾ ಬಿಗ್‌ಬಾಸ್ ಮನೆಯಿಂದ ಹೊರ ಬರಲು ಗೇಟ್‌ಪಾಸ್ ಸಿಗುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಆಕೆ ಸೇಫ್ ಆಗಿದ್ದಾರೆ.

ನಟಿ ಹಂಸ ನಾರಾಯಣಸ್ವಾಮಿ 10ನೇ ಸ್ಪರ್ಧಿಯಾಗಿ ಮನೆಯೊಳಗೆ ಹೋಗಿದ್ದರು. ಮೊದಲ ವಾರವೇ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದರು. ಇನ್ನು ಲಾಯರ್ ಜಗದೀಶ್ ಜೊತೆಗಿನ ಕೆಮೆಸ್ಟ್ರಿಯಿಂದಲೂ ಗಮನ ಸೆಳೆದಿದ್ದರು. ಆದರೆ ಬಹಳ ದಿನ ಮನೆಯಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಹಂಸಾ ಮನೆಯಿಂದ ಇಷ್ಟು ಬೇಗ ಹೊರ ಬಂದಿದ್ದು ವೀಕ್ಷಕರಿಗೂ ಶಾಕ್ ತಂದಿದೆ.

Bigg boss kannada 11 Hamsa gets evicted from Sudeep hosted reality show

ಮೋಕ್ಷಿತಾ ಹಾಗೂ ಹಂಸಾ ಬಿಗ್‌ಬಾಸ್ ಮನೆಯಿಂದ ಹೊರ ಬರಲು ಅಂತಿಮ ಹಂತದಲ್ಲಿದ್ದರು. ಮನೆಯೊಳಗೆ ಬಂದ ಎರಡು ಕಾರುಗಳಲ್ಲಿ ಇಬ್ಬರನ್ನು ಹತ್ತಿಸಿಕೊಂಡು ಹೊರಗೆ ಕರೆ ತರಲಾಯಿತು. ಕೆಲ ನಿಮಿಷಗಳ ಬಳಿಕ ಮೋಕ್ಷಿತಾ ಇದ್ದ ಕಾರು ಮಾತ್ರ ಮತ್ತೆ ಮನೆಯೊಳಗೆ ಬಂದು ಆಕೆಯನ್ನು ಇಳಿಸಿತ್ತು. ಅಲ್ಲಿಗೆ ಹಂಸಾ ಎಲಿಮಿನೇಟ್ ಆಗಿರುವುದು ಎಲ್ಲರಿಗೂ ಖಚಿತವಾಯಿತು.

4 ವಾರಗಳ ಕಾಲ ಹಂಸಾ ಉತ್ತಮವಾಗಿಯೇ ಆಡಿದ್ದರು. ಆದರೂ ಯಾಕೆ ಅವರು ಇಷ್ಟು ಬೇಗ ಎಲಿಮಿನೇಟ್ ಆದರೂ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಆದರೆ ಹಂಸಾ ಅವರಿಗೆ ಕಡಿಮೆ ಮತಗಳು ಬಂದಿದ್ದರಿಂದ ಅವರು ಹೊರಗೆ ಬಂದಿದ್ದಾರೆ. ಅಷ್ಟಕ್ಕೂ ಆಕೆ ಹೊರಬರಲು ಕಾರಣ ಏನು? ಎನ್ನುವುದನ್ನು ನೋಡುವುದಾದರೆ ಆಕೆ ಏಕಾಂಗಿಯಾಗಿ ಒಳ್ಳೆ ಆಟ ಆಡಲಿಲ್ಲ.

ಕ್ಯಾಪ್ಟನ್ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಹಂಸಾ ಎಡವಿದ್ದರು. ಆಕೆಯ ಮಾತನ್ನು ಕೆಲವರು ಕೇಳಲು ಸಿದ್ಧರಿರಲಿಲ್ಲ. ಲಾಯರ್ ಜಗದೀಶ್ ಕೈಯಲ್ಲಿ ಮನೆ ಕೆಲಸಗಳನ್ನು ಮಾಡಿಸಲು ಆಕೆ ಪಟ್ಟ ಪಾಡು ಅಷ್ಟಿಷ್ಟಲ್ಲ. ಇನ್ನು ಸ್ವರ್ಗ ನರಕ ಕಾನ್ಸೆಪ್ಟ್ ವೇಳೆ ನರಕ ವಾಸಿಗಳನ್ನು ಸ್ವರ್ಗಕ್ಕೆ ಕರೆತರಲು ಆಕೆ ನಡೆಸಿದ ಪ್ರಯತ್ನಗಳು ವಿಫಲವಾಯಿತು. ಇದು ಆಕೆಗೆ ಮುಳುವಾಗುತ್ತಾ ಹೋಯಿತು.

Bigg boss kannada 11 Hamsa gets evicted from Sudeep hosted reality show

ಹಂಸಾ ಕ್ಯಾಪ್ಟನ್ ಆಗಿದ್ದಾಗ ತಾನು ಯಾರ ಪರ ವಹಿಸಬೇಕು ಎನ್ನುವ ಗೊಂದಲಕ್ಕೆ ಸಿಲುಕಿದ್ದರು. ಒಬ್ಬರನ್ನು ಓಲೈಸಲು ಹೋಗಿ ಮತ್ತೊಬ್ಬರ ಅಸಹಕಾರಕ್ಕೆ ತುತ್ತಾದರು. ಕ್ಯಾಪ್ಟನ್ ಆಗಿ ತೆಗೆದುಕೊಂಡ ನಿರ್ಧಾರಗಳು ಕೈಗೂಡಲಿಲ್ಲ. ಒಟ್ಟಾರೆ ಕ್ಯಾಪ್ಟನ್ ಆಗಿ ಸಂಪೂರ್ಣವಾಗಿ ಸೋತಿದ್ದರು ಎಂದರೆ ತಪ್ಪಾಗಲ್ಲ.

ಜಗದೀಶ್ ಮನೆಯೊಳಗೆ ಇದ್ದಾಗ ಹಂಸಾ ಕೂಡ ಗಮನ ಸೆಳೆದಿದ್ದರು. ಆದರೆ 3ನೇ ವಾರದ ನಡುವೆಯೇ ಲಾಯರ್ ಜಗದೀಶ್ ಮನೆಯಿಂದ ಹೊರ ನಡೆದರು. ಬಳಿಕ ಹಂಸಾ ಮನೆಯಲ್ಲಿ ಹೈಲೆಟ್ ಆಗಲೇಯಿಲ್ಲ.

ಹಂಸಾ ಮನೆಯಿಂದ ಸೇರಿ ಇದೀಗ 4 ಜನ ಬಿಗ್‌ಬಾಸ್ ಸೀಸನ್ 11ರಲ್ಲಿ ಮನೆಯಿಂದ ಹೊರಬಂದಂತೆ ಆಗಿದೆ. ಮೊದಲ ವಾರ ಯಮುನಾ ಶ್ರೀನಿಧಿ ಎಲಿಮಿನೇಟ್ ಆಗಿದ್ದರು. 2ನೇ ವಾರ ಯಾವುದೇ ಎಲಿಮಿನೇಷನ್ ಇರಲಿಲ್ಲ. 3ನೇ ವಾರ ಜಗದೀಶ್ ಹಾಗೂ ರಂಜಿತ್ ಶಿಕ್ಷೆಗೆ ಗುರಿಯಾದರು. ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಜಗದೀಶ್, ಹಲ್ಲೆಗೆ ಯತ್ನಿಸಿದ್ದಕ್ಕೆ ರಂಜಿತ್ ಮನೆಯಿಂದ ಹೊರ ಬರಬೇಕಾಯಿತು.

ಇನ್ನು ಹಂಸಾ ಮನೆಯಿಂದ ಹೊರ ಬರುವಾಗ ಆಕೆಗೆ ಒಂದು ವಿಶೇಷ ಅಧಿಕಾರ ಸಿಕ್ಕಿತ್ತು. ಈ ವಾರಕ್ಕೆ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವಂತೆ ಬಿಗ್‌ಬಾಸ್ ಸೂಚಿಸಿದ್ದರು. ಆಕೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದ ಹನುಮಂತ ಹೆಸರನ್ನು ಸೂಚಿಸಿದ್ದಾರೆ. ಹನುಮಂತ ಯಾರ ಜೊತೆಗೆ ಹೆಚ್ಚು ಬೆರೆಯುತ್ತಿಲ್ಲ, ಯಾರಾದರೂ ಕೇಳಿದಾಗ ಮಾತ್ರ ಹಾಡು ಹಾಡುತ್ತಾನೆ, ತಾನಾಗಿಯೇ ಮನೆಮಂದಿಯನ್ನು ರಂಜಿಸುತ್ತಿಲ್ಲ ಎನ್ನುವ ಕಾರಣಗಳನ್ನು ಹಂಸಾ ಕೊಟ್ಟಿದ್ದಾರೆ.

More from Filmibeat

English summary
BBK 11: Main Reason for Hamsa elimination from bigg boss house;
Read more about: bigg boss kannada 11 bigg boss tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X