BBK 11: ಹನುಮಂತಗೆ ಧನರಾಜ್ ಲೆಕ್ಕಕ್ಕಿಲ್ಲ ಅಂತ ಅನ್ಸಿದೆಯಾ ಬಿಗ್ ಬಾಸ್‌ಗೆ?
ಬಿಗ್ ಬಾಸ್ ಮನೆಯಲ್ಲಿ ರಿಯಲ್ ಎಂಟರ್ಟೈನರ್ ಅಂದ್ರೆ ಅದು ಹನುಮಂತ. ಜೊತೆಗೆ ಇರುವ ಧನರಾಜ್ ಕೂಡ ಒಳ್ಳೆ ಮನರಂಜನೆಯನ್ನೇ ನೀಡ್ತಾ ಇದಾರೆ. ಧನರಾಜ್ ಮೊದಲಿನಿಂದಾನೂ ಹಾಸ್ಯ ಮಾಡುವ ಪ್ರತಿಭೆಯನ್ನು ಹೊಂದಿದ್ದಾರೆ. ಅವರ ಸೋಶಿಯಲ್ ಮೀಡಿಯಾ ಪೇಜ್ ನೋಡಿದರೆ ಅರ್ಥವಾಗುತ್ತದೆ. ಆದರೆ ಬಿಗ್ ಬಾಸ್ ಮನೆಗೆ ಬಂದ ಮೇಲೆ ಅವರ ಮನರಂಜನೆ ಕಾಣಿಸಲೇ ಇಲ್ಲ. ಸೈಲೆಂಟ್ ಆಗಿ ಒಂಟಿತನ ಅನುಭವಿಸುತ್ತಿದ್ದ ಧನರಾಜ್‌ಗೆ ಜೋಡಿಯಾಗಿ ಬಂದದ್ದು ಹನುಮಂತ.
ಹೌದು ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಬಂದರು. ಅಲ್ಲಿಂದ ವಾತಾವರಣವೇ ಬದಲಾಗಿ ಹೋಯ್ತು. ಅದರಲ್ಲೂ ಧನರಾಜ್ ಜೊತೆಗೆ ಸಿಕ್ಕಾಪಟ್ಟೆ ಕ್ಲೋಸ್ ಆದರು. ಇಲ್ಲಿವರೆಗೂ ಮನೆಯ ಗಾಸಿಪ್ ಅನ್ನು ಹೆಚ್ಚು ಮಾಡಿರುವವರು ಇವರಿಬ್ಬರೇ. ಆದರೆ ಇತ್ತೀಚೆಗೆ ಆ ಗಾಸಿಪ್ ಬೇಡ ಅಂತಾನೇ ಹನುಮಂತ ನಿರ್ಧಾರ ಮಾಡಿದಂತೆ ಇದೆ. ಹೀಗಾಗಿ ಬಿಗ್ ಬಾಸ್‌ಗೆ ಏನೋ ಅನುಮಾನ ಮೂಡಿದಂತಾಗಿದೆ.

ಕಿಚ್ಚನ Yes or No ಪ್ರಶ್ನೆಗಳು
ಸಾಮಾನ್ಯವಾಗಿ ಶನಿವಾರ ಹಾಗೂ ಭಾನುವಾರ ನಡೆಯುವ ವೀಕೆಂಡ್ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಒಂದಷ್ಟು ಮನವರಿಕೆ ಮಾಡುವ ಪ್ರಯತ್ನ ಮಾಡ್ತಾರೆ. ಅದರಲ್ಲೂ Yes are No ರೌಂಡ್ ಕೊಟ್ಟು ಜನರ ಮನಸ್ಸಲ್ಲಿ ಮೂಡಿರುವ ಪ್ರಶ್ನೆಗಳಿಗೆ ಮನೆಯವರಿಂದಾನೇ ಉತ್ತರ ಪಡೆಯುತ್ತಾರೆ. ಈ ರೌಂಡ್‌ನಲ್ಲಿ ಮೈನಸ್ ಪಾಯಿಂಟ್ ಕೂಡ ಇರುತ್ತದೆ. ಅದನ್ನ ತಿದ್ದಿಕೊಳ್ಳಬೇಕು ಅಷ್ಟೇ.
ಭವ್ಯಾ ಬಗ್ಗೆ ಕೇಳಿ ಕಾಲೆಳೆದ ಕಿಚ್ಚ
ಇಂದಿನ ಪಂಚಾಯ್ತಿಯಲ್ಲಿ ಬಹಳ ಮುಖ್ಯವಾಗಿ ತ್ರಿವಿಕ್ರಂ, ಮಂಜಣ್ಣ, ಹನುಮಂತು ಬಗ್ಗೆ ಸಂಬಂಧಿಸಿದ ಪ್ರಶ್ನೆಗಳಿದ್ದವು. ಗೌತಮಿಯ ತಪ್ಪನ್ನು ಮಂಜಣ್ಣ ಬೇಗ ಹೇಳ್ತಾರೆ, ತ್ರಿವಿಕ್ರಂಗೆ ಭವ್ಯಾ ಸಪೋರ್ಟ್ ತುಂಬಾ ಬೇಕಾಗಿದೆ ಎಂಬ ಪ್ರಶ್ನೆ. ಅದರಲ್ಲೂ ತ್ರಿವಿಕ್ರಂಗೆ ಸಂಬಂಧಿಸಿದ ಪ್ರಶ್ನೆಯಲ್ಲಿ ಸತ್ಯಾಂಶ ಏನು ಎಂಬುದು ಮನೆಯವರಿಗೆ ಗೊತ್ತಿಲ್ಲದ ಕಾರಣ ಎಲ್ಲರೂ ನೋ ಎಂಬ ಬೋರ್ಡ್ ಅನ್ನೇ ತೋರಿಸಿದ್ದರು. ಅದಕ್ಕೆ ಕಿಚ್ಚ ಸಖತ್ತಾಗಿಯೇ ಕಿಚಾಯಿಸಿದರು. ಅಣ್ಣ ತಂಗಿ ಎಂಬಂತೆ ರೇಗಿಸಿದರು
ಬಿಗ್ ಬಾಸ್‌ಗ್ಯಾಕೆ ಅನುಮಾನ
ಇನ್ನು ಬಹಳ ಮುಖ್ಯವಾಗಿ ಹನುಮಂತು ಬಗ್ಗೆ ಪ್ರಶ್ನೆ. ಧನರಾಜ್ ಹನುಮಂತು ಮೇಲೆ ಡಿಪೆಂಡ್ ಆಗಿದ್ದಾರೆ. ಆದರೆ ಹನುಮಂತುಗೆ ಧನರಾಜ್ ಏನೇನು ಅಲ್ಲ ಎಂಬುದು. ಇದಕ್ಕೆ ಹಲವರು ಎಸ್ ಅಂದ್ರೆ ಹಲವರು ನೋ ಅಂದ್ರು. ಬಿಗ್ ಬಾಸ್ ಮಂದಿ ಒಳಗೆ ಕಾಣದ್ದನ್ನ ಬಿಗ್ ಬಾಸ್ ಕ್ಯಾಮೆರಾಗಳು ಜನರಿಗೂ ಕಾಣುವಂತೆ ತೋರಿಸಿರುತ್ತದೆ. ಆದರೂ ಇಬ್ಬರ ಆತ್ಮೀಯತೆಯಲ್ಲಿ ಕೊಂಚ ಆ ಕಡೆ ಈ ಕಡೆ ಆಗುತ್ತಿರೋದು ಗೊತ್ತಾಗ್ತಾ ಇದೆ.
ಚೈತ್ರಾ, ಭವ್ಯಾ ಹೌದು ಅಂದಿದ್ದೇಕೆ?
ಈ ಪ್ರಶ್ನೆಗೆ ಚೈತ್ರಾ ಹಾಗೂ ಭವ್ಯಾ ಹೌದು ಎಂದಿದ್ದು, ಇತ್ತೀಚೆಗೆ ಹನುಮಂತು ಅವಾಯ್ಡ್ ಮಾಡ್ತಾ ಇರೋದು ಕಾಣಿಸ್ತಾ ಇದೆ ಸರ್. ಏನಾದರೂ ಹೇಳೋದಕ್ಕೆ ಹೋದರೆ ದೋಸ್ತಾ ನನ್ನ ತಲೆ ಹಾಳು ಮಾಡಬ್ಯಾಡ ಅಂತಾರೆ ಎಂಬ ದೂರು ಹೇಳಿದ್ದಾರೆ. ಆಕ್ಚುಲಿ ಹನುಮಂತ ತನಗೆಲ್ಲ ಗೊತ್ತು ಎಂಬಂತೆ ಬಿಲ್ಡಪ್ ಕೊಡಲ್ಲ. ಹಾಗಂತ ದುಡುಕಿ ನಿರ್ಧಾರ ಮಾಡಲ್ಲ. ಯೋಚಿಸಿ ಹೆಜ್ಜೆ ಇಡುತ್ತಾರೆ. ಈಗ ಬಿಗ್ ಬಾಸ್ ಗೆಲ್ಲೋದು ಮುಖ್ಯವಿದೆ. ಹೀಗಾಗಿ ದೋಸ್ತನನ್ನ ಎಷ್ಟು ಬೇಕೊ ಅಷ್ಟು ಮಾತ್ರ ಉಳಿಸ್ಕೊಳ್ತಾರಾ ನೋಡಬೇಕಿದೆ.


Click it and Unblock the Notifications











