BBK 11: ಎಷ್ಟು ದಿನ ನಡೆಸಿಕೊಂಡು ಬಂದಿದ್ದೀನಿ ಬಿಗ್ ಬಾಸ್‌ನ; ಅನುಷಾಗೆ ಕಿಚ್ಚನ ಎಚ್ಚರಿಕೆ

By ಎಸ್ ಸುಮಂತ್

ವಾರದ ಕತೆ ಕಿಚ್ಚನ ಜೊತೆಯಲ್ಲಿ ಒಂದಷ್ಟು ವಿಚಾರಗಳ ಬಗ್ಗೆ ಸುದೀಪ್ ಅವರು ಚರ್ಚೆ ಮಾಡುತ್ತಾರೆ. ಗೊತ್ತಿದ್ದು ತಪ್ಪು ಮಾಡಿದವರಿಗೆ ಎಚ್ಚರಿಕೆ ಕೊಡುತ್ತಾರೆ. ಗೊತ್ತಿಲ್ಲದೆ ತಪ್ಪು ಮಾಡಿದವರಿಗೆ ಮತ್ತೊಮ್ಮೆ‌ ಮಾಡದಂತೆ ಸಲಹೆ ನೀಡುತ್ತಾರೆ.

ಅವರವರ ಬಗ್ಗೆ ತಿಳಿದುಕೊಳ್ಳುವ, ಸ್ಪರ್ಧಿಗಳು ಈಗ ಯಾವ ಸ್ಥಾನದಲ್ಲಿದ್ದೀವಿ ಎಂಬುದನ್ನು ಮನವರಿಕೆ ಮಾಡಿಕೊಡುವ ಟಾಸ್ಕ್ ಅನ್ನು ಆಡಿಸುತ್ತಾರೆ. ಅದರಲ್ಲೂ ಇನ್ನು ಉತ್ತಮವಾಗಿ ಆಡುತ್ತಾರೆ ಇನ್ನು ಉತ್ತಮವಾಗಿ ಆಡುತ್ತಾರೆ ಎಂಬುವವರನ್ನು ಹುರಿದುಂಬಿಸುತ್ತಾರೆ.

Bigg boss kannada 11 host kichcha Sudeep warns Anusha in weekend episode

ಪ್ರತಿ ವಾರದಂತೆ ಈ ವಾರವೂ ಒಂದಷ್ಟು ಮಾತುಕತೆ ನಡೆಯಿತು. ಅದರಲ್ಲೂ ಈ ವಾರ ಹೆಚ್ಚು ಹೈಲೇಟ್ ಆಗಿದ್ದು ಹನುಮಂತ. ಕಿಚ್ಚ ಸುದೀಪ್ ಕೂಡ ಹನುಮಂತ ಬಗ್ಗೆ ಹೆಚ್ಚು ಮಾತಾಡಿದರು. ಮನೆಯಲ್ಲಿರುವ ಕೆಲವರು ಹನುಮಂತ ಬಗ್ಗೆ ಅವನಲ್ಲದ ವ್ಯಕ್ತಿತ್ವದ ಬಗ್ಗೆ ಮಾತಾಡಿದ್ದರು. ಆತ ಎಷ್ಟು ಮುಗ್ಧ ಎಂಬುದನ್ನು ಪ್ರಶ್ನೆಗಳ ಮೂಲಕವೇ ಅರ್ಥ ಮಾಡಿಸಿದ್ದಾರೆ.

ಹನುಮಂತಗೆ ಹೊಸ ಟಾಸ್ಕ್

ಕಿಚ್ಚ ಸುದೀಪ್ ಅವರು ಹನುಮಂತನನ್ನು ಸ್ಟೋರ್ ರೂಮಿಗೆ ಕಳುಹಿಸಿ ನಂಬರ್‌ಗಳನ್ನ ತರಿಸಿದರು. ಬಿಗ್ ಬಾಸ್ ಮನೆಗೆ ಬಂದಾಗ ಯಾರಿಗೆ ಯಾವ ನಂಬರ್ ಕೊಡಬೇಕೆಂದು ನಿಮಗೆ ಗೊತ್ತಿರಲಿಲ್ಲ. ಈಗ ಒಂದು ಅಂದಾಜು ಸಿಕ್ಕಿರುತ್ತೆ. ಯಾರು ಎಷ್ಟನೇ ಸ್ಥಾನದಲ್ಲಿದ್ದಾರೆ ಕೊಡಿ ಎಂದು ಹೇಳಿದ್ದಾರೆ.

Bigg boss kannada 11 host kichcha Sudeep warns Anusha in weekend episode

ಧರ್ಮ-ಅನುಷಾಗೆ 8-9

ಹನುಮಂತಗೆ ಏನು ಅನ್ನಿಸಿತೋ ಆ ರೀತಿಯ ನಂಬರ್ ಕೊಟ್ಟು ಕಾರಣವನ್ನು ಹೇಳಿದರು. ಆದರೆ ಅದು ಪಕ್ಕಾ ಸತ್ಯ ಎಂಬ ಭಾವನೆಯೂ ಸುದೀಪ್ ಅವರಿಗೂ ಬಂತು. ಅದರಲ್ಲಿ ಧರ್ಮ ಹಾಗೂ ಅನುಷಾ ಅವರಿಗೆ ಅಕ್ಕ ಪಕ್ಕದ ನಂಬರ್ ಕೊಟ್ಟಿದ್ದರು. 8 ಧರ್ಮ, 9 ಅನುಷಾ. ಧರ್ಮ ಅವರು ಬರೀ ಅನುಷಾ ಜೊತೆಗೆ ಇರುತ್ತಾರೆ. ಎಲ್ಲರೊಟ್ಟಿಗೂ ಬೆರೆಯಬೇಕು. ಅನುಷಾ ಅವರು ಕೀಡ ಧರ್ಮ ಅವರನ್ನು ಬಿಟ್ಟು ಎಲ್ಲರೊಟ್ಟಿಗೂ ಬರೆಯಬೇಕು ಎಂಬ ಕಾರಣ ನೀಡಿದ್ದರು.

ಧರ್ಮ ಕೊಟ್ಟ ಕ್ಲಾರಿಟಿ ಏನು?

ಸುದೀಪ್ ಅವರು ಧರ್ಮ ಹಾಗೂ ಅನುಷಾ ಅವರಿಗೆ ಈ ಬಗ್ಗೆ ಅಭಿಪ್ರಾಯ ಕೇಳಿದ್ದರು. ಹನುಮಂತುಗೆ ಯಾಕೆ ಆ ರೀತಿ ಅನ್ನಿಸಿದೆಯೋ ಗೊತ್ತಿಲ್ಲ. ಕಳೆದ ಬಾರಿ ಚಪಾತಿ, ಲವ್ ವಿಚಾರ ತೆಗೆದಿದ್ದರು. ಅದಕ್ಕೆ ಕ್ಲಾರಿಟಿ ಕೊಟ್ಟಿದ್ದೆ. ಈ ಬಾರಿ ಬೆರೆಯಬೇಕು ಅಂತಿದ್ದಾರೆ. ಸಹಜವಾಗಿ ನಾನು ಎಲ್ಲರೊಟ್ಟಿಗೆ ಬೆರೆಯುತ್ತೀನಿ ಎಂದು ಧರ್ಮ ಹೇಳಿದ್ದರು‌. ಅನುಷಾ ಕೂಡ ಹನುಮಂತು ಮಾತಿಗೆ ಕ್ಲಾರಿಟಿ ಕೊಡಲು ಹೋದಾಗ, ಕಿಚ್ಚ ಸುದೀಪ್ ಕೊಂಚ ಗರಂ ಆದರು.

ಅನುಷಾ ಮೇಲೆ ಕಿಚ್ಚ ಗರಂ?

'ಕ್ಲೋಸ್ ಆಗಿರೋದು ತಪ್ಪು ಅಂತ ಅಲ್ಲ. ಕ್ಲೋಸ್ ಆಗಿರೋದೆ ಅಜೆಂಡಾ ಮಾಡಿಕೊಂಡರೆ. ಒಬ್ಬ ವ್ಯಕ್ತಿ ಫೈನಲ್ ತನಕ ಹೋಗ್ಬೇಕು ಅಂತ ಆಸೆ ಪಡೋರು.. ಎಷ್ಟು ಸೀಸನ್ ನಡೆಸಿಕೊಂಡು ಬಂದಿದ್ದೀನಿ ಅನುಷಾ. ನಾನು ಈಗ್ಲೆ ಹೇಳ ಬಲ್ಲೆ ಯಾರ್ಯಾರು ಫೈನಲ್ ಹೋಗ್ತಾರೆ ಅಂತ. ಅದು ಹೇಗೆ..? ಅನುಭವ ಅಲ್ಲ ನೀವೆಲ್ಲಾ ಕೊಡುವ ಅಭಿಪ್ರಾಯ. ನೀವೆಲ್ಲಾ ನನ್ನ ಕಂಟೆಸ್ಟೆಂಟ್. ಪ್ರತಿ ವಾರ ಬರೋದು ನನಗೆಲ್ಲ ಗೊತ್ತಿದೆ‌ ನಿಮಗೇನು ಗೊತ್ತಿಲ್ಲ ಅಂತ ಅಲ್ಲ ನಿಮ್ಮನ್ನ ನೋಡಿ ಎಷ್ಟೋ ಸಲ ಕಲಿತೀವಿ. ಈ ರೀತಿಯೆಲ್ಲಾ ಯೋಚನೆ ಮಾಡುತ್ತಾರಾ ಅಂತ' ಎಂದು ಬುದ್ದಿ ಹೇಳಿ, ಆಟವನ್ನ ಸ್ವಲ್ಪ ಬದಲಾಯಿಸಿದರು.

More from Filmibeat

English summary
Colors kannada bigboss Written Update on Bigboss season 11 November 2nd episode. Here is the details about Kiccha Sudeep warned Anusha;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X