BBK 11: ಮಂಜು ಬಿಗ್ ಬಾಸ್ ಅಲ್ಲ.. ಚೈತ್ರಾಗೆ ಕಿಚ್ಚನ ಕಿವಿ ಮಾತು!
ವಾರದ ಕಥೆ ಕಿಚ್ಚನ ಜೊತೆ ಪಂಚಾಯ್ತಿಗೆ ನೋವಿನಲ್ಲೂ ಸುದೀಪ್ ಬಂದಿದ್ದಾರೆ. ಕಲರ್ಸ್ ಕನ್ನಡದ ವತಿಯಿಂದ ಸುದೀಪ್ ಅವರ ತಾಯಿಗೆ ಗೌರವಯುತ ನಮನ ಸಲ್ಲಿಕೆ ಮಾಡಿದ್ದಾರೆ.
ಸುದೀಪ್ ಅವರು ಒಂದು ಕ್ಷಣ ತುಂಬಾ ನೋವಿಗೆ ಜಾರಿದರು. ಆದರೆ ತಕ್ಷಣ ಎಚ್ಚೆತ್ತುಕೊಂಡು, ನಂಗೆ ಬೇಜಾನ್ ಕೆಲಸ ಇದೆ ಎಂದು ಪಂಚಾಯ್ತಿ ಮುಂದುವರೆಸಿದರು. ಪಂಚಾಯ್ತಿಯಲ್ಲಿ ಕಳೆದ ವಾರದಿಂದ ಸ್ಪರ್ಧಿಗಳು ಹೇಗಿದ್ದರು ಎಂಬುದರ ಬಗ್ಗೆ ಒಂದಷ್ಟು ಚರ್ಚೆ ಮಾಡಿದರು.

ಈ ವಾರ ಮಂಜು ಅವರ ವಿಚಾರವೇ ಹೈಲೇಟ್ ಆಗಿತ್ತು. ಬಿಗ್ ಬಾಸ್ ಮನೆಯಲ್ಲಿ ಮಂಜು ಅವರ ಮಾತನ್ನು ಕೇಳಿ ಹಿಂದೇಟು ಹಾಕುವ ಬಳಗವೇ ಇದೆ. ಈಗ ಅವರನ್ನೆಲ್ಲ ಕಿಚ್ಚ ಸುದೀಪ್ ಎಚ್ಚರಿಸುವ ಕೆಲಸ ಮಾಡಿದ್ದಾರೆ. ಮೋಕ್ಷಿತಾ, ಚೈತ್ರಾಗೆ ಮಂಜು ವಿಚಾರವಾಗಿ ಕಿಚ್ಚ ಬುದ್ದಿ ಮಾತು ಹೇಳಿದ್ದಾರೆ.
ಮೋಕ್ಷಿತಾ ಮಾತಿಗೆ ಕಿಚ್ಚನ ಉತ್ತರ
ಇನ್ನೇನು ಮೋಕ್ಷಿತಾ ನಾಮಿನೇಟ್ ಆಗಿಯೇ ಬಿಟ್ಟರು ಎಂದುಕೊಂಡಗ ಎರಡು ನಿಮಿಷಗಳಲ್ಲಿಯೇ ಮನೆಗೆ ವಾಪಾಸ್ ಬಂದಿದ್ದರು. ಬಂದೊಡನೆ ತ್ರಿವಿಕ್ರಮ್ ಮೇಲೆ ಸಿಕ್ಕಾಪಟ್ಟೆ ರೊಚ್ಚಿಗೆದ್ದಿದ್ದರು. ಎರಡು ವಾರಗಳ ಕಾಲ ಸೈಲೆಂಟ್ ಆಗಿದ್ದ ಮೋಕ್ಷಿತಾ ವೈಲೆಂಟ್ ಆಗಿದ್ದೇಕೆ ಎಂದು ಸುದೀಪ್ ಅವರು ಕೇಳಿದಾಗ, ತ್ರಿವಿಕ್ರಮ್ ಹೇಳಿದ್ದ ಮಾತುಗಳು. ಆದರೆ ಅದನ್ನ ನೇರವಾಗಿ ಕೇಳುವುದಕ್ಕೆ ಮಂಜಣ್ಣ ಬಿಟ್ಟಿರಲಿಲ್ಲ. ಇದನ್ನ ಕೇಳಿ ಕಿಚ್ಚ ಕಿವಿ ಮಾತನ್ನು ಹೇಳಿದರು.
ಅನುಷಾ ರೈ, ಚೈತ್ರಾ ನಡುವೆ ಕ್ಲಾರಿಟಿ
ಈ ಸಲ ಕ್ಯಾಪ್ಟನ್ ಆಗುವುದಕ್ಕೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಬಲೆಯೊಳಗೆ ಹೋಗಿ, ಅವರದಲ್ಲದೇ ಬೇರೊಬ್ಬರ ಫೋಟೋ ಬಾಕ್ಸ್ ಎತ್ತಿಕೊಂಡು ಬರುವುದು. ಈ ಟಾಸ್ಕ್‌ನಲ್ಲಿ ವಿನ್ ಆಗಿ ಕ್ಯಾಪ್ಟನ್ ಆಗಿದ್ದು, ಹನುಮಂತ. ಉಳಿದವರೆಲ್ಲಾ ಸ್ಟಾಟರ್ಜಿ ಮಾಡಿಯೇ ಸೋತಿದ್ದರು. ವಾರದ ಪಂಚಾಯ್ತಿಯಲ್ಲಿ ಪ್ರತಿಯೊಬ್ಬರ ಬಳಿಯೂ ಕಿಚ್ಚ ಈ ಕ್ಲಾರಿಟಿ ಕೇಳಿದ್ದಾರೆ. ಆಗ ಅನುಷಾ, ಚೈತ್ರಾ ಹಾಗೂ ಧರ್ಮ ಮೇಲಿಟ್ಟ ನಂಬಿಕೆ ಹುಸಿಯಾಗಿದ್ದರ ಬಗ್ಗೆಯೂ ಮಾತಾಡಿದ್ದಾರೆ.
ಗೇಮ್ ಪ್ಲ್ಯಾನ್ ಬಗ್ಗೆ ಕಿಚ್ಚನ ಪ್ರಶ್ನೆ
ಎಲ್ಲರೂ ಸೇರಿ ಯಾರನ್ನ ಗೆಲ್ಲಿಸಬೇಕು, ಸೋಲಿಸಬೇಕು ಎಂಬ ಪ್ಲ್ಯಾನ್ ಮಾಡಿದ್ದರು. ಅದರಂತೆ ಟಾಸ್ಕ್ ಆಡಲು ಹೋಗಿ ಸೋಲಿಸಬೇಕು ಎಂಬುದು ತೀರ್ಮಾನವಾಗಿದ್ದವರ ಫೋಟೋ ಸಿಕ್ಕರೆ ಒಳಗೆ ನಿಂತು ಬಿಡುತ್ತಿದ್ದರು. ಆ ಬಗ್ಗೆ ಚೈತ್ರಾ ಒಳಗೆ ಹೋದವರು ಹೊರಗೆ ಯಾಕೆ ಬರಲಿಲ್ಲ ಎಂದಾಗ, ಚೈತ್ರಾ ಅಲ್ಲಿ ಸತ್ಯ ಹೇಳಿದ್ದಾರೆ. ಮಂಜಣ್ಣ ಪ್ಲ್ಯಾನ್ ಮಾಡಿದ ಮೇಲೆ ಇದೆಲ್ಲ ಚೇಂಜ್ ಆಯ್ತು ಎಂದಿದ್ದಾರೆ.
ಮಂಜಣ್ಣ ಬಿಗ್ ಬಾಸ್ ಅಲ್ಲ
ಇದೆಲ್ಲವನ್ನು ಕೇಳಿಸಿಕೊಂಡಂತ ಸುದೀಪ್ ಅವರು ಒಂದು ಮಾತನ್ನು ಹೇಳ್ತೀನಿ ಮಂಜಣ್ಣ ಬಿಗ್ ಬಾಸ್ ಅಲ್ಲ. ನಿಮ್ಮನ್ನು ಒಂದು ದಿನ ನಾಮಿನೇಟ್ ಮಾಡುವ ಸ್ಪರ್ಧಿ ಅಷ್ಟೇ ಎಂದು ಹೇಳಿ ಹನುಮಂತು ಯಾವುದೇ ಸ್ಟಾಟರ್ಜಿ ಮಾಡದೆ ಆಟವನ್ನು ಆಡಿದ್ದಾರೆ. ಹೀಗಾಗಿ ಆಟದಲ್ಲಿ ಗೆದ್ದಿದ್ದಾರೆ ಎಂದು ಅಂದು ಆಟದಲ್ಲಿ ನಡೆದ ಗೊಂದಲದ ವಿಚಾರಕ್ಕೆ ತೆರೆ ಎಳೆದರು. ಇದರ ಜೊತೆಗೆ ವಾರದ ಕಿಚ್ಚನ ಚಪ್ಪಾಳೆಯನ್ನು ಹನುಮಂತು ಅವರಿಗೆ ನೀಡಿದ್ದಾರೆ. ಚಪ್ಪಾಳೆ ಕೊಟ್ಟು ಅರ್ಥವನ್ನು ಕೇಳಿದರು. ಹನುಮಂತ ಹೇಳಿದ್ದಕ್ಕೆ ಕಿಚ್ಚ ಕೂಡ ಖುಷಿಯಾಗಿದ್ದರು.


Click it and Unblock the Notifications











