BBK 11: ಧನು ಇಲ್ಲದ ಹನುಮಂತು.. ಗೌತಮಿ ಇಲ್ಲದ ಮಂಜು ಹೇಗಿದ್ದಾರೆ ದೊಡ್ಮನೆಯಲ್ಲಿ?
ಬಿಗ್ ಬಾಸ್ ಫಿನಾಲೆ ವಾರ ನಡೆಯುತ್ತಿದೆ. ಆರಂಭದಲ್ಲಿ ಬಂದ 17 ಮಂದಿಯಲ್ಲಿ ಈಗ ಉಳಿದುಕೊಂಡಿರುವುದು ಆರು ಜನ ಮಾತ್ರ. ಫಿನಾಲೆ ವೇದಿಕೆಯಲ್ಲಿ ಮೂರು ಜನ ಎಲಿಮಿನೇಟ್ ಆಗ್ತಾರೆ. ಒಬ್ಬರು ವಿನ್ನರ್ ಇನ್ನಿಬ್ಬರು ರನ್ನರ್ ಅಪ್ ಆಗಲಿದ್ದಾರೆ. ಸದ್ಯ ಇರುವ ಆರು ಮಂದಿಯಲ್ಲೂ ನಾನು ವಿನ್ನರ್ ಆಗಬಹುದು ಎಂಬ ಸಣ್ಣ ಆಸೆಯಂತೂ ಇದ್ದೇ ಇದೆ. ಬೈ ಲಕ್ ಗೆಲ್ಲುತ್ತೇನೆಂಬ ನಂಬಿಕೆಯೂ ಇದೆ. ಆದರೆ ಭಾನುವಾರವಷ್ಟೇ ಆ ಕುತೂಹಲಕ್ಕೆ ತೆತೆ ಬೀಳಲಿದೆ.
ಗೌತಮಿ ಜಾದವ್ ಕೂಡ ಫಿನಾಲೆ ತಲುಪುತ್ತೇನೆಂದು ಭಾವಿಸಿದ್ದರು. ಹನುಮಂತು ಬಂದ ಮೇಲಂತು ಧನು ಆಕ್ಟೀವ್ ಆಗಿದ್ದರು. ಆದರೆ ಅವರ ಕನಸು ಫಿನಾಲೆ ವಾರ ತಲುಪುವುದಕ್ಕೂ ಮುನ್ನವೇ ಕಮರಿ ಹೋಗಿದೆ. ಈಗ ಆ ಇಬ್ಬರ ಗೆಳೆಯರು ತಮ್ಮ ಆಟವನ್ನ ಮುಂದುವರೆಸಿದ್ದಾರೆ.

ಹನುಮಂತು ಹೊಗಳಿದ ಮಂಜಣ್ಣ
ಧನು ಜೊತೆಗೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದರು ಹನುಮಂತು. ಅದೇ ರೀತಿ ಗೌತಮಿಯನ್ನ ಸಿಕ್ಕಾಪಟ್ಟೆ ಹೊಂದಿಕೊಂಡಿದ್ದರು ಮಂಜಣ್ಣ. ಆದರೆ ಈಗ ಧನು, ಗೌತಮಿ ಮನೆಯಿಂದ ಹೊರಗೆ ಬಂದಿದ್ದಾರೆ. ಈಗ ಮಂಜಣ್ಣ ಹಾಗೂ ಹನುಮಂತು ಜೊತೆಗೆ ಕೂತು ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ಇದೇ ವೇಳೆ ಮಂಜಣ್ಣ ಹನುಮಂತು ಅವರನ್ನು ಹೊಗಳಿದ್ದಾರೆ. ನೀನು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ ಕಣೋ. ನಿನ್ನ ಪಾಡಿಗೆ ನೀನು ಆಡುತ್ತಾ ಇರುತ್ತೀಯಾ. ನಾನು ಕೂಡ ಮೊದಲೆಲ್ಲ ಇದೇ ರೀತಿ ಇದ್ದೆ ಎಂದು ಹನುಮಂತು ಅವರನ್ನು ಮಂಜಣ್ಣ ಹೊಗಳಿದ್ದಾರೆ.
ಹನುಮಂತ ಕೂಲ್ ಆಗಿರೋದ್ಯಾಕೆ?
ನಂಗೆ ಸುದೀಪ್ ಸರ್ ಚಪ್ಪಾಳೆ ಸಿಕ್ತಲ್ಲ ಅಂದೇ ಕಪ್ ಗೆದ್ದಷ್ಟೇ ಖುಷಿ ಆಯ್ತು. ನಾನು ಬಂದದ್ದೇ ಅದಕ್ಕೆ ಕಿಚ್ಚನ ಚಪ್ಪಾಳೆ ಬೇಕು ಎಂಬುದಕ್ಕೆ. ಎರಡನೇ ವಾರದಲ್ಲಿಯೇ ಚಪ್ಪಾಳೆ ಬಂತಲ್ಲ ಖುಷಿ ಆಯ್ತು. ಇಲ್ಲಿ ಯಾರಾದ್ರೂ ಕಪ್ ಗೆದ್ದು ತಲೆಯ ಮೇಲೆ ಇಟ್ಟುಕೊಂಡು ಹೋದ್ರು ಚಿಂತೆ ಇಲ್ಲ. ಇಲ್ಲಿ ಕಲಿತ ಪಾಠವನ್ನು ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದಿದ್ದಾರೆ. ಹನುಮಂತು ಮಾತಿಗೆ ಬಿಗ್ ಬಾಸ್ ವೀಕ್ಷಕರು ಶಬ್ಬಾಶ್ ಎಂದಿದ್ದಾರೆ.
ಕಪ್ ಗೆಲ್ತೇನೆ ಎಂದ ಹಳ್ಳಿ ಹೈದ
ಬಿಗ್ ಬಾಸ್ ಮನೆಯಲ್ಲಿ ಹೊಸದಾದ ಟಾಸ್ಕ್ ಒಂದನ್ನ ಕೊಟ್ಟಿದ್ದಾರೆ. ತಮ್ಮ ಬಗ್ಗೆ ತಾವೂಗಳು ಕಿರುಚಿ ಹೇಳಬೇಕುಬೆಂಬಂತೆಮ ಅದಕ್ಕೆ ಹನುಮಂತು, ಇಡೀ ಮನೆ ಮಂದಿಗಿಂತ ಜೋರಾಗಿ ಕಿರುಚಿ ಹೇಳಿದ್ದಾರೆ. ಅವ್ವ ನಾನು ಕಪ್ ಗೆದ್ದೇ ಬರುತ್ತೇನೆ. ಸಿಹಿ ಅಡುಗೆ ರೆಡಿ ಮಾಡಿಟ್ಟಿರು ಅಂತ ಉತ್ತರ ಕರ್ನಾಟಕ ಭಾಷೆಯಲ್ಲಿಯೇ ಜೋರಾಗಿ ಹೇಳಿದ್ದಾರೆ.
ಉಗ್ರಂ ಮಂಜು ರಿಯಲ್ ಅವತಾರ
ಇಷ್ಟು ದಿನ ಗೌತಮಿ ಜೊತೆಗೆ ಬಿಟ್ಟರೆ ಮಂಜು ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಅದನ್ನ ಕಿಚ್ಚ ಸುದೀಪ್ ಕೂಡ ಎಚ್ಚರಿಸಿದ್ದರು. ಆದರೆ ಗೌತಮಿ ಔಟ್ ಆದ ಒಂದೇ ದಿನಕ್ಕೆ ಎಲ್ಲರಿಗೂ ಠಕ್ಕರ್ ಕೊಡ್ತಾ ಇದಾರೆ. ಇನ್ನು ಹನುಮಂತು ತಾನೂ ಹೇಗಿದ್ದರೋ ಅದೇ ರೀತಿ ಇದ್ದಾರೆ. ದೋಸ್ತ ಇಲ್ಲ ಎಂಬ ಬೇಸರ ಇದೆ. ಆದರೂ ಆಟ ಆಡಬೇಕು ಎಂಬ ಕಾರಣಕ್ಕೆ ತಾನಾಯ್ತು ತನ್ನ ಪಾಡಾಯ್ತು ಅಂತ ಅಡ್ಡಾಡುತ್ತಾ ಇದ್ದಾರೆ. ಮಂಜು ಕಂಪನಿ ಲೊಡ್ತಾ ಇದಾರೆ. ಇನ್ಮೇಲೆನಿದ್ರು ಜನ ಗೆಲ್ಲಿಸಲಿ ಎಂದು ಬೇಡಿಕೊಳ್ಳಬೇಕಿದೆ.


Click it and Unblock the Notifications











