Bigg Boss Kannada:ಬಿಗ್ ಬಾಸ್ ಆರಂಭದಲ್ಲಿ ದ್ವೇಷ.. ಫಿನಾಲೆಯಲ್ಲಿ ಪ್ರೀತಿ ಗಳಿಸಿದ ಸ್ಪರ್ಧಿಗಳ್ಯಾರು?

By ಅನಿತಾ ಬನಾರಿ

ಬೆಳ್ಳಿತೆರೆಯಾಗಲೀ ಅಥವಾ ಕಿರುತೆರೆಯಾಗಲೀ ಪ್ರೇಕ್ಷಕರ ಮೆಚ್ಚುಗೆ ಮೇಲೆಯೇ ಅದರ ಭವಿಷ್ಯ ನಿಂತಿರುವುದು. ವೀಕ್ಷಕರೂ ತಮ್ಮ ಅಭಿರುಚಿಗೆ ಸರಿಯಾಗಿ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ.

ಆದರೆ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ವಿನ ವೀಕ್ಷಕರು ಬಹಳಷ್ಟು ವಿಭಿನ್ನ. ಈ ರಿಯಾಲಿಟಿ ಶೋ ನಲ್ಲಿ ನಾನಾ ರೀತಿಯ ಸ್ಪರ್ಧೆಗಳು ನಾನಾ ಕ್ಷೇತ್ರದಿಂದ ಬರುವುದರಿಂದ ವೆರೈಟಿ ವೀಕ್ಷಕರನ್ನು ತಮ್ಮತ್ತ ಸೆಳೆಯುತ್ತದೆ ಈ ಶೋ. ಈಗ ಕಳೆದೆರಡು ಸೀಸನ್ಗಳನ್ನೇ ಗಮನಿಸಿದರೆ ಬಿಗ್ ಬಾಸ್ ಶೋ ಮುಂದುವರಿದಂತೆ ವೀಕ್ಷಕರ ಟೇಸ್ಟ್ ಬದಲಾಗುವುದು ಕಾಣುತ್ತದೆ.

Bigg Boss Kannada 11 is coming to an end do you know who is the audience s favorite contestant

ಕನ್ನಡ ಬಿಗ್ ಬಾಸ್ ಸೀಸನ್ 10ರಲ್ಲಿ ನಟ ವಿನಯ್ ಗೌಡ ಅವರನ್ನು ಪ್ರೇಕ್ಷಕರು ಬಹಳಷ್ಟು ದೊಡ್ಡ ಮಟ್ಟದಲ್ಲಿ ಟೀಕೆ ಮಾಡಿದ್ದರು. ಬಹಳಷ್ಟು ಸನ್ನಿವೇಶಗಳನ್ನು ಮನದಲ್ಲಿಟ್ಟುಕೊಂಡು ವಿನಯ ಗೌಡ ಅವರನ್ನು ಟ್ರೋಲ್ ಮಾಡಿದ್ದ ವೀಕ್ಷಕ ಮಂದಿ ಕ್ರಮೇಣ ಇಷ್ಟಪಡಲು ಶುರುವಿಟ್ಟುಕೊಂಡರು. ಅದೇ ನಟಿ ಸಂಗೀತಾ ಶೃಂಗೇರಿ ಅವರನ್ನು ಶುರುವಿನಿಂದಲೂ ಇಷ್ಟಪಟ್ಟ ಮಂದಿ ಕ್ರಮೇಣ ತಮ್ಮ ಆಸಕ್ತಿ ಹಾಗೂ ಅಭಿಮಾನವನ್ನು ಬೇರೆ ಸ್ಪರ್ಧಿಗಳತ್ತ ಹರಿಸಿದ್ದರು.

ಅಂತೆಯೇ ಬಿಗ್ ಬಾಸ್ ಸೀಸನ್ 11 ರಲ್ಲಿ ಲಾಯರ್ ಜಗದೀಶ್ ಅವರನ್ನು ಬಹಳಷ್ಟು ಕಾರಣಗಳಿಗೆ ಜನ ಇಷ್ಟಪಟ್ಟಿರಲಿಲ್ಲ. ಅದೇ ಒಮ್ಮೆ ಜಗದೀಶ್ ಮನೆಯಿಂದ ಹೊರ ನಡೆಯುತ್ತಿದ್ದಂತೆ ಅವರನ್ನು ಇಷ್ಟಪಡುವ ಒಂದು ಹೊಸ ಪ್ರೇಕ್ಷಕ ವರ್ಗ ಸೃಷ್ಟಿಯಾಯಿತು. ಹುಚ್ಚ ವೆಂಕಟ್, ಅವರಿಗೂ ಇದೇ ರೀತಿಯ ವಿಭಿನ್ನ ಪ್ರೇಕ್ಷಕ ಬಳಗ ಹುಟ್ಟಿದೆ.

ಸದಾ ಚಟಪಟ ಮಾತನಾಡುವ ಚೈತ್ರಾ ಕುಂದಾಪುರ ಒಳ್ಳೆಯ ಹುಡುಗ ಪ್ರಥಮವರಿಗೂ ಅವರನ್ನು ಇಷ್ಟಪಡುವ ಅಭಿಮಾನಿ ಬಳಗವಿದೆ. ಅವರ ಮಾತು ನಡೆ ನುಡಿ ಎಲ್ಲವೂ ಒಂದು ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.

ಇನ್ನು ಮೊದಲಿನಿಂದಲೂ ಹನುಮಂತು ಹಾಗೂ ಸುನಾಮಿ ಕಿಟ್ಟಿ ಅವರನ್ನು ಜನ ಬಹಳಷ್ಟು ಇಷ್ಟಪಟ್ಟರು. ಈ ಸ್ಪರ್ಧಿಗಳ ಮುಗ್ಧತೆಯನ್ನು ಕನ್ನಡ ಜನತೆ ಬಹಳ ಮೆಚ್ಚಿದೆ. ಹಳ್ಳಿಯಿಂದ ಮುನ್ನೆಲೆಗೆ ಬಂದ ಇವರನ್ನು ಹಳ್ಳಿಯ ಜನರಷ್ಟೇ ಅಲ್ಲದೆ ಎಲ್ಲರೂ ಇಷ್ಟಪಟ್ಟರು.

ಅದೇ ಬಹಳಷ್ಟು ಚಾರ್ಮ್ ಇದ್ದು ಸದಾ ಜನರನ್ನು ರಂಜಿಸಲು ಇಷ್ಟಪಟ್ಟ ವೈಲ್ಡ್ ಕಾರ್ಡ್ ಎಂಟ್ರಿಯ ರಜತ್ ಬುಜ್ಜಿ ಹಾಗು ಡೈರೆಕ್ಟರ್ ಗುರುಪ್ರಸಾದ್, ಸೃಜನ್ ಲೋಕೇಶ್ ಮುಂತಾದವರನ್ನು ಜನ ಮೆಚ್ಚಿದರು.

ಅಲ್ಲದೆ ಖಡಕ್ ಆಗಿಯೇ ಜನಮನ ಗೆದ್ದ ತ್ರಿವಿಕ್ರಮ್, ತನಿಷಾ ಕುಪ್ಪಂದ ಮುಂತಾದವರಿಗೂ ಬಹು ದೊಡ್ಡ ಫ್ಯಾನ್ ಫಾಲೋಯಿಂಗ್ ಇರುವುದು ಕಂಡು ಬಂದಿದೆ. ಒಂದಷ್ಟು ಸ್ಕ್ಯಾಮ್ ಗಳ ನಂತರ ಬಿಗ್ ಬಾಸ್ ಗೆ ಕಾಲಿಟ್ಟ ಡ್ರೋನ್ ಪ್ರತಾಪ್ ಗೂ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕವೇ ಹೊಸ ಅಭಿಮಾನಿ ಬಳಗ ಸೃಷ್ಟಿಯಾಗಿತ್ತು.

ಹೀಗೆ ಬಹು ದೊಡ್ಡ ರಿಯಾಲಿಟಿಶೋ ಆಗಿರುವ ಬಿಗ್ ಬಾಸ್ ಬಹಳಷ್ಟು ವಿಚಾರಗಳಿಗೆ ಸ್ಪೆಷಲ್ ಆಗಿ ನಿಂತಿದೆ. ನಾನಾ ಐಡೆಂಟಿಗಳೊಂದಿಗೆ ಬಿಗ್ ಮನೆಗೆ ಕಾಲಿಟ್ಟ ಜನ ಹೊಸ ಐಡೆಂಟಿಟಿಯೊಂದಿಗೆ ಸಮಾಜಕ್ಕೆ ಪರಿಚಯವಾಗಿ ಅವಕಾಶಗಳ ಮಹಾಪೂರವನ್ನೇ ತಮ್ಮತ್ತ ಸೆಳೆದುಕೊಂಡ ಹಲವು ಉದಾಹರಣೆಗಳೂ ಇವೆ.

ನಾನಾ ರೀತಿಯ ವ್ಯಕ್ತಿತ್ವಗಳನ್ನು ತನ್ನ ಮನೆಯೊಳಗಿಟ್ಟು ಅವರ ಬೇರೆ ಬೇರೆ ಮುಖಗಳನ್ನು ಪ್ರೇಕ್ಷಕರಿಗೂ ಒಳಗಿರುವ ಸ್ಪರ್ಧೆಗಳಿಗೂ ತೋರಿಸುವ ಬಿಗ್ ಬಾಸ್ ನಾನಾ ವ್ಯಕ್ತಿತ್ವ, ಆಸಕ್ತಿ ಹಾಗೂ ಅಭಿರುಚಿಯಿರುವ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಬಿಗ್ ಬಾಸ್ ನಿಜವಾಗಿಯೂ ರಿಯಾಲಿಟಿ ಷೋಗಳ ಬಿಗ್ ಬಾಸ್ ಎಂದರೆ ಉತ್ಪ್ರೇಕ್ಷೆಯಲ್ಲ!

More from Filmibeat

English summary
Bigg Boss Kannada 11 is coming to an end. Do you know who is the audience's favorite contestant?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X