BBK 11: ಬಿಗ್ ಬಾಸ್ ಮನೆಗೆ ವೀಕ್ಷಕರು; ಪ್ರೋಮೋದಲ್ಲಿ ಮಿಸ್ ಆಗಿದ್ಯಾಕೆ ಮೂವರು?

By ಎಸ್ ಸುಮಂತ್

ಬಿಗ್ ಬಾಸ್ ಫಿನಾಲೆಗೆ ಉಳಿದಿರೋದು ಕೇವಲ ಮೂರು ದಿನ ಮಾತ್ರ. ಭಾನುವಾರ ವಿನ್ನರ್ ಯಾರೆಂಬುದರ ಕುತೂಹಲಕ್ಕೆ ತೆರೆ ಬೀಳಲಿದೆ. ಆದರೆ ಉಳಿದಿರುವ ಆರು ಸ್ಪರ್ಧಿಯಲ್ಲಿ ವಿನ್ನರ್ ಯಾರಾಗಬಹುದು ಎಂಬ ಅಂದಾಜಿನ ಲೆಕ್ಕವನ್ನು ವೀಕ್ಷಕರು ಮಾಡುತ್ತಿದ್ದಾರೆ. ಆದರೆ ಫಿನಾಲೆ ವೇದಿಕೆಯಲ್ಲಿ ಸುದೀಪ್ ಯಾರ ಕೈ ಮೇಲೆತ್ತುತ್ತಾರೆ ಎಂಬುದೇ ಸದ್ಯಕ್ಕೆ ಕಾತುರದಿಂದ ಕಾಯುವಂತೆ ಮಾಡಿರುವ ವಿಚಾರ.

ಆರಂಭದಿಂದ ಬಂದವರು, ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದವರು ಸೇರಿ ಫಿನಾಲೆಯ ಸ್ಪರ್ಧೆಗೆ ನಿಂತಿದ್ದಾರೆ. ಈಗಾಗಲೇ ಟ್ರೋಫಿ ಮುಂದೆ ತನಗೆ ಈ ಗೆಲುವು ಎಷ್ಟು ಮುಖ್ಯ, ಗೆದ್ದರೆ ಲೈಫ್ ಹೇಗೆ ಚೆಂಜ್ ಆಗುತ್ತೆ ಎಂಬುದನ್ನು ಮನಬಿಚ್ಚಿ ಮಾತನಾಡಿದ್ದಾರೆ. ಟ್ರೋಫಿಗೆ ಜೀವ ಇದ್ದಿದ್ದರೆ ಎಲ್ಲರಿಗೂ ಧೈರ್ಯ ತುಂಬಿ ಪ್ರೋತ್ಸಾಹ ನೀಡುತ್ತಿತ್ತು ಎನಿಸುತ್ತದೆ. ಆದರೆ ಇಂದು ವೀಕ್ಷಕರೆಲ್ಲ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.

Bigg boss Kannada 11 is latest Promo hinting Who will win trophy

ಮನೆ ಒಳಗೆ ಬಂದ ವೀಕ್ಷಕರು

ಕಳೆದ ಕೆಲವು ದಿನಗಳ ಹಿಂದಷ್ಟೇ ಬಿಗ್ ಬಾಸ್ ಮನೆ ಸ್ಪರ್ಧಿಗಳ ಕುಟುಂಬಸ್ಥರಿಂದ ತುಂಬಿ ತುಳುಕುತ್ತಾ ಇತ್ತು. ಎಲ್ಲರೂ ಕುಟುಂಬಸ್ಥರನ್ನ ಕಂಡು ನಕ್ಕು ನಲಿದರು, ಫುಲ್ ಖುಷಿಯಾದರು. ಒಂಥರ ಎಕ್ಸ್ಟ್ರಾ ಎನರ್ಜಿ ಬಂದಂತಾಗಿತ್ತು. ಇದೀಗ ಫಿನಾಲೆಯ ಟೆನ್ಶನ್‌ನಲ್ಲಿ ಎಲ್ಲಾ ಸ್ಪರ್ಧಿಗಳು ಇದ್ದಾರೆ. ಅವರನ್ನ ಗೆಲ್ಲಿಸಬೇಕಿರುವುದೇ ವೀಕ್ಷಕರು. ಇದೀಗ ಅದೇ ವೀಕ್ಷಕರು ಬಿಗ್ ಬಾಸ್ ಮನೆಯೊಳಗೆ ಬಂದಿದ್ದಾರೆ. ಇದು ಒಂದು ರೀತಿಯಲ್ಲಿ ಧೈರ್ಯ ಬಂದಂತೆ ಫೀಲ್ ಆಗಿದ್ದಾರೆ ಸ್ಪರ್ಧಿಗಳು.

ಸ್ಪರ್ಧಿಗಳ ಬಿಗ್ ಬಾಸ್ ಜರ್ನಿ

ವೀಕ್ಷಕರ ಮುಂದೆ ಸ್ಪರ್ಧಿಗಳು ತಮ್ಮ ಗೆಲುವನ್ನ ನೆನೆದಿದ್ದಾರೆ. ಕಣ್ಣೀರಾಗುವ ಕಥೆಗಳು ಕಾಣಬಹುದೇನು. ಅದು ರಾತ್ರಿಯ ಎಪಿಸೋಡ್‌ನಲ್ಲಿ ನಮಗೆ ಸಿಗಲಿದೆ. ಸದ್ಯಕ್ಕೆ ಬಿಟ್ಟಿರುವ ಪ್ರೋಮೋದಲ್ಲಿ ಅಡೆತಡೆಗಳನ್ನೆಲ್ಲ ದಾಟಿಕೊಂಡು ನುಗ್ಗಿಕೊಂಡು ಬಂದ ನಿಮ್ಮ ಅಣ್ಣನ, ತಮ್ಮನೋ ಈ ರೀತಿ ಇರ್ತಾನೆ ಅಂತ ಭಾವಿಸ್ತೀನಿ ಎಂದು ತ್ರಿವಿಕ್ರಂ ಹೇಳಿದ್ರೆ, ಇಲ್ಲಿಗೆ ಬಂದಿರೋದು ನಾವೊಬ್ರು, ಆಟ ಆಡೋದು ನಾವೊಬ್ರೆ, ಗೆಲ್ಲೋದು ಒಬ್ರೆ ಅಂತ ಮೋಕ್ಷಿತಾ ಕಿರುಚಿ ಹೇಳಿದ್ದಾರೆ. ಹನುಮಂತು ಅಷ್ಟೊಂದು ಜನರನ್ನು ಒಟ್ಟಿಗೆ ನೋಡಿ ಶಾಕ್ ಆಗಿದ್ದಾರೆ.

ಫೋಟೋ ಹಿಡಿದು ಸಪೋರ್ಟ್

ಮನೆಗೆ ಬಂದ ವೀಕ್ಷಕರು ನೆಚ್ವಿನ ಸ್ಪರ್ಧಿಗಳ ಫೋಟೋ ಹಿಡಿದು ಬಂದಿದ್ದಾರೆ. Love Trivikram ಎಂಬ ಸಾಲುಗಳಿರಯವ ಬೋರ್ಡ್, Vote For Mokshitha, ಅರ್ಥ ಆಯ್ತಾ ಎಂಬ ಬೋರ್ಡ್, ಹನುಮಂತು ಬಗ್ಗೆ ದೋಸ್ತಾ ಎಂಬ ಬೋರ್ಡ್ ಗಳನ್ನ ಹಿಡಿದು ಬೆಂಬಲ ನೀಡುತ್ತಿದ್ದಾರೆ. ಸ್ಪರ್ಧೆಯ ಹಾದಿಯಲ್ಲಿ ನಿಂತವರಿಗೆ ಈ ರೀತೊಯ ಸಪೋರ್ಟ್ ಕೊಂಚ ಟೆನ್ಶನ್ ಕಡಿಮೆ ಮಾಡಲಿದೆ.

ಪ್ರೋಮೋದಲ್ಲಿ ಮಿಸ್ ಆಗಿದ್ಯಾರು?

ರಂಜಿತ್ ಯಾವಾಗಲೂ ತಾನೇ ಪ್ರೋಮೋ ಕಂಟೆಸ್ಟೆಂಟ್ ಆಗಬೇಕೆಂದು ಬಯಸುತ್ತಿದ್ದರು. ಅರಚಾಡುವುದು, ಕಿರುಚಾಡುವುದೇ ಪ್ರೋಮೋ ಕೂಡ ಆಗ್ತಾ ಇತ್ತು. ಆದರೆ ಈ ಬಾರಿ ಬೆಳಗಿನ ಮೊದಲ ಪ್ರೋಮೋದಲ್ಲಿಯೇ ರಂಜಿತ್ ಮಿಸ್ ಆಗಿದ್ದಾರೆ. ರಂಜಿತ್ ಮಾತ್ರವಲ್ಲ ಭವ್ಯಾ, ಮಂಜಣ್ಣ ಕೂಡ ಈ ಪ್ರೋಮೋದಲ್ಲಿ ಕಾಣಿಸ್ತಾ ಇಲ್ಲ. ಜನರ ಪ್ರೀತಿ ಗೆಲ್ಲುವಲ್ಲಿ ತ್ರಿವಿಕ್ರಂ, ಮೋಕ್ಷಿತಾ, ಹನುಮಂತು ಸಕ್ಸಸ್ ಆದರಾ ಎಂಬ ಭಾವನೆ ಬರುತ್ತಿದೆ. ಮನೆಗೆ ಬಂದ ವೀಕ್ಷಕರ ಬಳಿಯೂ ಬೇರೆಯವರ ಫೋಟೋಗಳು ಕಾಣಿಸ್ತಾ ಇಲ್ಲ. ಫಿನಾಲೆ ತಲುಪುವ ಮೂವರು ಇವರೇ ಇರಬಹುದಾ..?

More from Filmibeat

English summary
BBK 11: Netizens believe This finalist will lift the trophy.
Read more about: bigg boss bigg boss kannada 11 tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X