BBK 11 ; ಫಿನಾಲೆ ಹೊಸ್ತಿಲಿನಲ್ಲಿಯೇ ಬಿಗ್ ಬಾಸ್‌ನಿಂದ ಹೊರ ನಡೆದ ಸುದೀಪ್...!

ಕರುನಾಡಿನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಈ ಪರಿ ಯಶಸ್ವಿಯಾಗಲು ಕಾರಣ ಸುದೀಪ್. ಹನ್ನೊಂದು ವರ್ಷದಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಬಂದ ಸುದೀಪ್ ಈ ಕಾರ್ಯಕ್ರಮಕ್ಕೆ ದುಡ್ಡನ್ನು ಮೀರಿದ ಶ್ರಮವನ್ನು ಧಾರೆಯೆರೆದಿದ್ದಾರೆ. ಇದು ಆ ವಾಹಿನಿ ಈ ವಾಹಿನಿಯ ಕಾರ್ಯಕ್ರಮ ಎನ್ನದೇ ಯಾವುದೇ ಮೂಲೆಯಲ್ಲಿ ಇದ್ದರೂ ಬಿಗ್ ಬಾಸ್ ಕಾರ್ಯಕ್ರಮಕ್ಕೆ ತೊಡಗಿಸಿಕೊಂಡಿದ್ದಾರೆ. ನಿದ್ರೆಯನ್ನು ಕೂಡ ಮರೆತು ಬಿಗ್ ಬಾಸ್‌ಗೋಸ್ಕರ ಬೆವರು ಸುರಿಸಿದ್ಧಾರೆ.

ಇಂಥಾ ಸುದೀಪ್ ಅವರಿಗೆ ಬಿಗ್ ಬಾಸ್ ಸುದೀಪ್ ಅವರ ಪಾಲಿಗೆ ಸೈಡ್ ಪ್ರಾಜೆಕ್ಟ್ ಆಗಿರಲಿಲ್ಲ. ಬದುಕಿನ ಬಹುಮುಖ್ಯವಾದ ಭಾಗವಾಗಿತ್ತು. ಖುದ್ದು ಸುದೀಪ್ ಈ ಮಾತನ್ನು ಈ ಹಿಂದೆ ಹೇಳಿದ್ದರು ಕೂಡ. ಆದರೆ ಅದೇನಾಯ್ತೋ ಭಾರವಾದ ಹೃದಯದಿಂದ ಇದೇ ನನ್ನ ಕೊನೆಯ ಬಿಗ್ ಬಾಸ್ ಎಂದು ಸುದೀಪ್ ಹೇಳಿದರು. ಬಾಂಬ್ ಸಿಡಿಸಿದರು.ಈ ಮೂಲಕ ಅನೇಕರನ್ನು ಅಚ್ಚರಿಗೆ ದೂಡಿದರು. ಈ ಕಾರಣಕ್ಕೆ ಅನೇಕರು ಸುದೀಪ್ ಇಲ್ಲದ ಬಿಗ್ ಬಾಸ್ ಕಾರ್ಯಕ್ರಮ ನೋಡುವುದಾದರೂ ಹೇಗೆ ಎಂದು ಚರ್ಚೆಯನ್ನು ಶುರು ಮಾಡಿದ್ದರು. ಇವತ್ತು ಕೂಡ ಈ ಚರ್ಚೆ ನಿಂತಿಲ್ಲ. ಇದರ ನಡುವೆ ಬಿಗ್ ಬಾಸ್ ಮುಗಿಯಲು ಇನ್ನೂ ಕೆಲ ದಿನಗಳಿರುವ ಸಮಯದಲ್ಲಿ ಸುದೀಪ್ ಏಕಾಏಕಿ ಬಿಗ್ ಬಾಸ್ ಮನೆಯಿಂದ ನಿರ್ಗಮಿಸಿದ್ದಾರೆ.

Bigg Boss Kannada 11 Kiccha Sudeep Walks Off Stage After Getting Frustrated with Contestants

ಹೌದು, ಅಸಲಿಗೆ ಎಲ್ಲರಿಗೆ ಗೊತ್ತಿರುವಂತೆ ಸುದೀಪ್ ಪ್ರತಿ ವಾರ ಪಂಚಾಯ್ತಿಯನ್ನು ಮಾಡುತ್ತಾರೆ. ವಾರದ ಕಥೆಯನ್ನು ನಡೆಸಿಕೊಡ್ತಾರೆ. ಈ ವಾರ ಕೂಡ ಸುದೀಪ್ ಮನೆಯಲ್ಲಿನ ಸದಸ್ಯರ ಜಗಳ ಬಗೆಹರಿಸಲು ಬಂದಿದ್ದರು. ಮನಸ್ತಾಪಗಳನ್ನು ದೂರ ಮಾಡಲು ಬಂದಿದ್ದರು. ಆದರೆ ಈ ಬಾರಿ ಸ್ಫರ್ಧಿಗಳ ನಡಾವಳಿಗಳಿಂದ ಸುದೀಪ್ ಗರಂ ಆಗಿದ್ದಾರೆ. ನೀವು ನೀವೆ ಮಾತನಾಡಿಕೊಳ್ಳಿ ಎಂದು ಹೊರ ನಡೆದಿದ್ದಾರೆ.

ವಾರಾಂತ್ಯದ ಕಾರ್ಯಕ್ರಮದಲ್ಲಿ ಸ್ಫರ್ಧಿಗಳ ಕಥೆಯನ್ನು ಕೇಳಿ ಎಲ್ಲರಿಗೆ ಪ್ರತ್ಯುತ್ತರವನ್ನು ನೀಡಿ ಕ್ಲಾಸ್ ತೆಗೆದುಕೊಳ್ಳಲು ಬಂದಿದ್ದ ಸುದೀಪ್, ಗ್ರಾಸರಿ ಟಾಸ್ಕ್ ಕುರಿತು ಮಾತನಾಡಲು ಶುರು ಮಾಡಿದ್ದಾರೆ. ಭವ್ಯಾ ಅವರಿಗೆ ಪ್ರಶ್ನೆಯನ್ನು ಕೇಳಿದ್ದಾರೆ. ಆಗ ಭವ್ಯಾ ನನಗಿಂತ ಹನುಮಂತ ಬೆಸ್ಟ್ ಎನ್ನುವ ಉತ್ತರವನ್ನು ನೀಡಿದ್ದಾರೆ. ಇದಕ್ಕೆ ಎಲ್ಲದರಲ್ಲಿ ಸಾಮರ್ಥ್ಯ ಇದ್ದವರು ಈ ಕಪ್ ಗೆಲ್ಲಬೇಕು ಭವ್ಯಾ ಎಂದು ಸುದೀಪ್ ಖಡಕ್ ಆಗಿ ಹೇಳಿದ್ದಾರೆ. ನೀವು ಫಿಟ್ ಇಲ್ಲ ಎಂದು ನೀವೆ ಡಿಕ್ಲೇರ್ ಮಾಡ್ತಿದ್ದೀರಾ ಎಂದು ಕಿಡಿ ಕಾರಿದ್ದಾರೆ.

ಆ ನಂತರ ಮಾತನಾಡಿರುವ ಉಗ್ರಂ ಮಂಜು ನಾನೇನು ಅನ್ನೋದನ್ನು ಸಾಬೀತುಪಡಿಸಿದ್ದೇನೆ. ಅಪ್ಪರ್​ ಹ್ಯಾಂಡ್. ನೀವೇನು ಅನ್ನೋದನ್ನು ಪ್ರೂವ್​ ಮಾಡಿ ಅನ್ನೋ ಮಾತು ಬಂದಿದೆ ಎಂದು ಮಂಜು ಹೇಳಿದ್ದಾರೆ. ನಡುವೆ ಹಳ್ಳಿ ಹೈದ ಹನುಮಂತು, ಇಷ್ಟು ವಾರ ಊಟ ಹಾಕಿದ್ದೀವಿ, ಈಗ ಗೆದ್ದು ನೀವು ಊಟ ಹಾಕ್ರಿ ಅನ್ನೋ ಮಾತು ಹೇಳಿದ್ದಾರೆ ಎಂದು ತ್ರಿವಿಕ್ರಮ್ ಕಡೆ ಬೆರಳು ತೋರಿಸಿದ್ದಾರೆ. ಹನುಮಂತು ಮಾತನಾಡಿದ ನಂತರ ಸುದೀಪ್ ಅವರ ಅಪ್ಪಣೆಗೆ ಅರೆ ಕ್ಷಣವೂ ಕಾಯದ ತ್ರಿವಿಕ್ರಮ್ ನಡುವೆ ಬಾಯಿ ಹಾಕಿದ್ದಾರೆ. ನಾನು ಆ ತರ ಹೇಳಿಯೇ ಇಲ್ಲ ನಿಮಗೆ ಎಂದು ವಾದ ಮಾಡಲು ಶುರು ಮಾಡಿದ್ದಾರೆ. ಇದರಿಂದ ಕೆರಳಿದ ಸುದೀಪ್ ಒಂದು ಕೆಲಸ ಮಾಡಿ ನೀವು ನೀವೆ ಮಾತನಾಡಿಕೊಳ್ಳಿ ಎಂದು ವೇದಿಕೆಯಿಂದ ಹೊರ ನಡೆದಿದ್ದಾರೆ. ಸದ್ಯಕ್ಕೆ ಈ ಪ್ರೋಮೋ ಕುತೂಹಲ ಕೆರಳಿಸಿದ್ದು ಮುಂದೇನಾಗುತ್ತೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಸುದೀಪ್ ಅವರ ಮನವೊಲಿಸಿ ಹೇಗೆ ಕರೆತರುತ್ತಾರೆ ಎನ್ನುವ ಪ್ರಶ್ನೆ ಕೂಡ ಅನೇಕರನ್ನು ಕಾಡುತ್ತಿದೆ.

More from Filmibeat

Read more about: biggboss bigg boss sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X