BBK 11: ವುಮೆನ್ ಕಾರ್ಡ್ ತಪ್ಪಾಗಿ ಬಳಕೆ; ಅಮ್ಮನ ಉದಾಹರಣೆ ಕೊಟ್ಟು ಎಚ್ಚರಿಸಿದ ಕಿಚ್ಚ!

By ಎಸ್ ಸುಮಂತ್

ಬಿಗ್ ಬಾಸ್ ವಾರದ ಕಥೆ ಕಿಚ್ಚನ ಜೊತೆ ಪಂಚಾಯ್ತಿಯಲ್ಲಿ ಇಂದು ಈ ವಾರ ನಡೆದ ಒಂದಷ್ಟು ಮಿಸ್ಟೇಕ್ಸ್, ಸ್ಪರ್ಧಿಗಳ ಸ್ಟಾಟರ್ಜಿ ಎಲ್ಲವನ್ನು ಸುದೀಪ್ ಅವರು ಮಾತಾಡುವ ಮೂಲಕ ಸರಿ ಮಾಡಿದರು.

ಆಡುವಾಗ ಮನುಷ್ಯತ್ವವನ್ನು ಮರೆಯುತ್ತಾರೆ, ಬಿಗ್ ಬಾಸ್‌ನ ಮೂಲ ನಿಯಮಗಳನ್ನು ಕೈ ಬಿಡುತ್ತಾರೆ. ಆ ಎಲ್ಲದರ ಬಗ್ಗೆಯೂ ಕಿಚ್ಚನ ಕ್ಲಾಸ್ ಇದ್ದೆ ಇರುತ್ತದೆ. ಖಡಕ್ ಆಗಿ ಕೊಡಬೇಕಾದ ಪ್ರಶ್ನೆಗೆ ಖಡಕ್ ಆಗಿನೇ ಎಚ್ಚರಿಕೆ ಕೊಡುತ್ತಾರೆ. ಒಳ್ಳೆಯದ್ದನ್ನ ಲಾಭಕ್ಕಾಗಿ ಮಿಸ್ ಯೂಸ್ ಮಾಡಿಕೊಂಡರೆ ಅದಕ್ಕೆ ಹೇಗೆ ಉತ್ತರ ಕೊಡಬೇಕೋ ಹಾಗೆ ಕೊಡುತ್ತಾರೆ.

Bigg Boss Kannada 11 Kichcha Sudeep Schools chaitra kundapura about women card

ಈ ವಾರ ಬಿಗ್ ಬಾಸ್ ಒಂದಷ್ಟು ಕಾರ್ಡ್‌ಗಳನ್ನ ಮನೆ ಮಂದಿಗೆ ನೀಡಿತ್ತು. ಅದು ಕೂಡ ಒಂದು ಟಾಸ್ಕ್ ಆಗಿತ್ತು. ಅದರಲ್ಲಿ ಉಳಿಸುವ ಅವಕಾಶ ಕೂಡ ಇತ್ತು. ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಕಾರ್ಡ್ ಕೂಡ ಇತ್ತು. ಆ ಕಾರ್ಡ್ ಬಗ್ಗೆ ಮಬೆಯವರು ಮಾಡಿದ ಮಿಸ್ಟೇಕ್ ಅನ್ನು ಎತ್ತಿ ಹಿಡಿದಿದ್ದಾರೆ. ಅದರಲ್ಲೂ ಇವತ್ತು ಕಿಚ್ಚನ ಪಂಚಾಯ್ತಿಯಲ್ಲಿ ಇನೊಸೆಂಟ್ ಹಾಗೂ ವುಮೆನ್ ಕಾರ್ಡ್ ಸದ್ದು ಮಾಡಿದೆ.

ರೊಚ್ಚಿಗೆದ್ದ ಹನುಮಂತ

ಹನುಮಂತ ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಹಲವರಿಗೆ ಆಗ್ತಿಲ್ಲ. ಹಾಗಂತ ಹನುಮಂತ ತಲೆನೆ ಕೆಡಿಸಿಕೊಳ್ತಿಲ್ಲ. ನಿಮ್ಗೆ ಅನ್ನಿಸಿದ್ದನ್ನ ಹೇಳಿದ್ದೀರಿ ಬಿಡಿ ಅಂದು ಸುಮ್ನಾಗ್ತಾರೆ. ಆದ್ರೆ ಹನುಮಂತ ತಗೊಂಡಷ್ಟು ಪಾಸಿಟಿವ್ ಆಗಿ ಯಾರು ತೆಗೆದುಕೊಳ್ತಿಲ್ಲ. ಈಗ ಇನೊಸೆಂಟ್ ಕಾರ್ಡ್ ವಿಚಾರದಲ್ಲೂ ಅದೇ ಆಗಿದೆ. ಮೋಕ್ಷಿತಾ, ಗೌತಮಿ, ವಿಕ್ರಮ್, ಚೈತ್ರಾ ಸೇರಿ ಹನುಮಂತ ಇನೊಸೆಂಟ್ ಥರ ಡ್ರಾಮಾ ಆಡ್ತಾ ಇದಾರೆ ಎಂದಿದ್ದಾರೆ. ಅವ್ರು ಅಷ್ಟೇ ಇನೊಸೆಂಟ್ ಥರ ಡ್ರಾಮಾ ಆಡ್ತಾ ಇದಾರೆ ಎಂದು ಹನುಮಂತ ತಿರುಗಿ ಉತ್ತರಿಸಿದ್ದಾರೆ.

ಚೈತ್ರಾ ಕುಂದಾಪುರಗೆ ಸಿಕ್ತು ಕಾರ್ಡ್

ಕಿಚ್ಚ ಸುದೀಪ್ ವುಮೆನ್ ಕಾರ್ಡ್ ಬಗ್ಗೆ ಹೆಚ್ಚು ಸಾರಿ ಹೇಳಿ ತೋರಿಸಿದ್ದಾರೆ. ಈ ಕಾರ್ಡ್ ಪ್ರತಿ ಸೀಸನ್‌ನಲ್ಲೂ ಬಳಕೆ ಮಾಡಲಾಗುತ್ತದೆ ಅಂತ ಹೇಳಿ ವುಮೆನ್ ಕಾರ್ಡ್ ತೋರಿಸಿದ್ದಾರೆ. ಎಲ್ಲಾ ಸಮಯದಲ್ಲೂ ಮುಂದೆ ಬರುವವರು ಕೆಲವೊಂದು ಹೆಣ್ಣು ಮಕ್ಕಳು ಎಂಬ ಪದ ಬಳಕೆ ಮಾಡುತ್ತಾರೆ. ಈ ಕಾರ್ಡ್ ಅನ್ನ ಯಾರಿಗೆ ಕೊಡ್ತೀರಿ ಎಂದಾಗ ಚೈತ್ರಾ ಹೆಸರು ಚಾಲ್ತಿಗೆ ಬಂದಿದೆ.

ಬೇಸರ ಹೊರ ಹಾಕಿದ ಶಿಶಿರ್

ಸುದೀಪ್ ಮಾತು ಮುಗಿದ ಮೇಲೆ ಮಾತಾಡಿದ ಶಿಶಿರ್, ಹೌದು ಸರ್ ಒಮ್ಮೊಮ್ಮೆ ನಮಗೆ ಅನ್ನಿಸುತ್ತೆ ಹೆಣ್ಣು ಮಕ್ಕಳ ಬಗ್ಗೆ ನಾವೇನು ಮಾತೇ ಆಡಿರಲ್ಲ. ಆದ್ರೂ ಈ ಮಾತು ಯಾಕೆ ಬಂತು ಅನ್ನೋದೆ ಗೊತ್ತಿರಲ್ಲ ಎಂದಾಗ, ಸುದೀಪ್ ಅವರು ಆಗ ಯಾಕಾದ್ರೂ ಗಂಡಸರಾಗಿ ಹುಟ್ಟಿದ್ವೋ ಅನ್ನಿಸಿರಬೇಕು ಅಲ್ವಾ ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಶಿಶಿರ್ ಕೂಡ ಹೌದು ಎಂದಿದ್ದಾರೆ.

ಅಮ್ಮನನ್ನು ನೆನೆದ ಕಿಚ್ಚ

ಕಿಚ್ಚ ಸುದೀಪ್ ಇತ್ತೀಚೆಗಷ್ಟೇ ತನ್ನ ತಾಯಿಯನ್ನು ಕಳೆದುಕೊಂಡಿದ್ದಾರೆ. ಆ ನೋವು ಕಮ್ಮಿ ಆಗಿಲ್ಲವಾದರೂ ವೇದಿಕೆ ಮೇಲೆ ಹೆಚ್ಚು ತೋರಿಸಿಕೊಳ್ಳಲ್ಲ. ಆದರೆ ತಾಯಿಯ ಗುಣದ ಬಗ್ಗೆ ಹೆಮ್ಮೆಯಿಂದ ಉದಾಹರಣೆ ಕೊಡುತ್ತಾರೆ. ಚೈತ್ರಾ ವುಮೆನ್ ಕಾರ್ಡ್ ಬಳಕೆ ಮಾಡಿದ್ದಕ್ಕೆ, ಎಲ್ಲೆಂದರಲ್ಲಿ ಬಳಸೋ ಅಷ್ಟು ವೀಕ್ ಅಲ್ಲ ಹೆಣ್ಣು ಮಕ್ಕಳು. ನಮ್ಮ ಮನೆಯಲ್ಲಿ ನಮ್ಮ ತಾಯಿ ಆ ಸ್ಥಾನ ಪಡೆದಿದ್ದರು. ಗಟ್ಟಿ ಅವರು. ಹೆಣ್ಣು ಮಕ್ಕಳು ಹಾಗೇ ಇರಬೇಕು. ಹಾಗೆಲ್ಲ ವುಮೆನ್ ಕಾರ್ಡ್ ಬಳಸಬೇಡಿ ಎಂದು ತನ್ನ ತಾಯಿಯ ಉದಾಹರಣೆ ಕೊಟ್ಟು ಬುದ್ದಿ ಹೇಳಿದ್ದಾರೆ.

More from Filmibeat

English summary
Colors kannada bigboss Written Update on Bigboss season 11 November 9th episode. Here is the details about Kiccha gave the example of his mother Saroja;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X