BBK 11; ಸುದೀಪ್ ಕೊನೆ ಬಿಗ್ ಬಾಸ್ ಶೋ ನೋಡಲು ಬಂದ ತಂದೆ - ಮಗಳು; ವೇದಿಕೆ ಮೇಲೆ ಸರೋಜಾ ಅವರ ದರ್ಶನ!
ಬಿಗ್ ಬಾಸ್ ಸೀಸನ್ 11.. ಇದು ಕಿಚ್ಚ ಸುದೀಪ್ ಅವರ ಕೊನೆಯ ಸೀಸನ್. ಮೊದಲ ಸೀಸನ್‌ನಿಂದ ಇಲ್ಲಿಯವರೆಗೂ ಅದ್ಭುತವಾಗಿ ನಡೆಸಿಕೊಂಡು ಬಂದ ಕಿಚ್ಚ ಇದು ಕೊನೆಯ ಬಿಗ್ ಬಾಸ್ ಎಂದು ಅವರೇ ಅನೌನ್ಸ್ ಮಾಡಿದ್ದಾರೆ. ಮುಂದಿನ ಬಿಗ್ ಬಾಸ್ ನಿರೂಪಕರು ಯಾರಾಗ್ತಾರೆ ಎಂಬ ಕುತೂಹಲಕ್ಕಿಂತ ಇನ್ಮುಂದೆ ಸುದೀಪ್ ಅವರು ಇರಲ್ವಲ್ಲ ಎಂಬ ಬೇಸರ ವೀಕ್ಷಕರದ್ದು. ಆದರೆ ಕೊನೆಯ ಸೀಸನ್ ನಲ್ಲಿ ಎಲ್ಲಾ ವೀಕ್ಷಕರಿಗೂ ಸಂತಸ, ದುಃಖ ಎರಡೂ ಆಗುವಂತ ಸನ್ನಿವೇಶ ನಿರ್ಮಾಣ ಆಗಿದೆ.
ಬಿಗ್ ಬಾಸ್ ವೀಕೆಂಡ್ ಶೋ ನಡೆಸಿಕೊಡುವಾಗ ಸುದೀಪ್ ಅವರ ತಾಯಿ ಸರೋಜಾ ಅವರು ಸೀರಿಯಸ್ ಕಂಡೀಷನ್ ನಲ್ಲಿದ್ದರು. ಅವರನ್ನ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದರು. ಆದರೆ ಸುದೀಪ್ ಅವರು ತಮ್ಮ ವೃತ್ತಿ ನಿಷ್ಠೆ ತೋರಿದ್ದರು. ಆರೋಗ್ಯ ಸ್ಥಿತಿ ಕೈಮೀರಿ ಸರೋಜಾ ಅವರು ನಿಧನರಾದರು.

ವೇದಿಕೆಗೆ ಬಂದ ಸಂಜೀವ್ - ಸಾನ್ವಿ
ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುವುದಕ್ಕೆ ಶುರುವಾಗಿ ಇದು 11ರ ಸೀಸನ್. ಇಲ್ಲಿಯವರೆಗೂ ಬಿಗ್ ಬಾಸ್ ಸ್ಪರ್ಧಿಗಳ ಪೋಷಕರು ಫಿನಾಲೆಯಲ್ಲಿ ಭಾಗವಹಿಸುತ್ತಾ ಇದ್ದರು. ಆದರೆ ಇದೇ ಮೊದಲ ಬಾರಿಗೆ ಸುದೀಪ್ ಅವರ ತಂದೆ ಹಾಗೂ ಮಗಳು ಸಾನ್ವಿ ಬಂದಿದ್ದಾರೆ. ಇದು ಸುದೀಪ್ ಅವರ ಕಡೆಯ ಬಿಗ್ ಬಾಸ್ ಕೂಡ ಆಗಿರುವ ಕಾರಣ ಸುದೀಪ್ ಅವರ ಕುಟುಂಬವೂ ಫಿನಾಲೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಸುದೀಪ್ - ಸಾನ್ವಿ ಕಣ್ಣಲ್ಲಿ ನೀರು
ವೇದಿಕೆ ಮೇಲೆ ಸರೋಜಾ ಹಾಗೂ ಸುದೀಪ್ ಅವರ ಫೋಟೋ ಜೊತೆಗೆ ಒಂದು ಧ್ವನಿಯೂ ಬಂದಿದೆ. ಮಗನ ಬಗ್ಗೆ ಹೆಮ್ಮೆಯ ಮಾತುಗಳು ಅವು. ಅಮ್ಮ ಅಮ್ಮ ಅನ್ನೋ ಹಾಡಿದೆ ಒಂದು ಅದ್ಬುತ ಪರ್ಫಾಮೆನ್ಸ್ ಕೂಡ ನೀಡಲಾಗಿದೆ. ಈ ಪರ್ಫಾಮೆನ್ಸ್ ನೋಡುತ್ತಲೇ ಸುದೀಪ್, ತಂದೆ ಸಂಜೀವ್, ಮೊಮ್ಮಗಳು ಸಾನ್ವಿ ಕಣ್ಣಲ್ಲಿ ನೀರು ಬಂದಿದೆ. ದುಃಖ ತಡೆಯಲಾಗಲಿಲ್ಲ.
ಪತ್ನಿ ನೆನೆದು ಸಂಜೀವ್ ಕಣ್ಣೀರು
ವೇದಿಕೆ ಮೇಲೆ ಸರೋಜಾ ಅವರನ್ನ ರಿಕ್ರಿಯೇಟ್ ಮಾಡಲಾಗಿತ್ತು. ಅವರಂತೆ ಸೀರೆಯುಟ್ಟು ಬಂದ ಕಲಾವಿದೆಯೂ ಸರೋಜಾ ಅವರನ್ನ ನೆನಪಿಸಿತ್ತು. ಆ ಇಡೀ ಪರ್ಫಾಮೆನ್ಸ್, ಸುದೀಪ್ ಅವರ ಬೆಳವಣಿಗೆಯಲ್ಲಿ ಅವರ ಅಮ್ಮನ ಪಾತ್ರ ಎಂಥದ್ದು ಎಂಬುದನ್ನು ತೋರಿಸಿತ್ತು. ಡ್ಯಾನ್ಸ್ ಮುಗಿದ ಮೇಲೆ ಫ್ಯಾಮಿಲಿಯ ಫೋಟೋ ಹಾಕಲಾಗಿತ್ತು. ಒಂದು ಕ್ಷಣ ಇಡೀ ವಾತಾವರಣವೇ ಮೌನವಾಗಿತ್ತು. ಸಂಜೀವ್ ಅವರ ಕಣ್ಣಲ್ಲಿ ಪತ್ನಿಯ ನೆನಪು ಕಾಡಿತ್ತು.
ಗೌರವ ಪೂರ್ಣ ಬೀಳ್ಕೊಡುಗೆ
ಈ ಅದ್ಭುತ ಯಶಸ್ಸಿಗೆ ಕಾರಣವಾದ ಕಿಚ್ಚ ಸುದೀಪ್ ಅವರಿಗೆ ಬಿಗ್ ಬಾಸ್ ಹಾಗೂ ತಂಡದ ವತಿಯಿಂದ ಅನಂತ ಅನಂತ ಧನ್ಯವಾದಗಳು. ಈ ಸೀಸನ್ ನಮ್ಮೆಲ್ಲರಿಗೂ ಎಂದಿಗೂ ಮರೆಯಲಾಗದ್ದು. ಈ ಸೀಸನ್ ನ ಅಭೂತಪೂರ್ವ ಯಶಸ್ಸಿಗೆ ಕಾರಣವಾದ ನಿಮಗೆ ಒಂದು ಚಿಕ್ಕ ನೆನಪಿನ ಕಾಣಿಕೆ ಎಂದಹ ಆ ಕಾಣಿಕೆ ನೀಡಲು ಯೋಗರಾಜ್ ಭಟ್ ಅವರನ್ನ ಕರೆಸಿದೆ. ಬಿಗ್ ಬಾಸ್ ಗೆ ಒಬ್ಬರು ಬಿಗ್ ಬಾಸ್ ಅಲ್ಲಿ ಕೂತಿದ್ದಾರೆ. ಗ್ರ್ಯಾಂಡ್ ಫಿನಾಲೆ ಇಂದು ನಿಮ್ಮ ಆಗಮನದಿಂದ ಇನ್ನಷ್ಟು ಗ್ರ್ಯಾಂಡ್ ಆಗಿದೆ ಎಂದು ಸಂಜೀವ್ ಅವರನ್ನು ಯೋಗರಾಜ್ ಭಟ್ ಅವರು ಸ್ವಾಗತಿಸಿದ್ದಾರೆ.


Click it and Unblock the Notifications











