BBK 11: ಕೆಸರೆರಚಾಟಕ್ಕೆ ಹಂಸಾ ಕಂಗಾಲು; ಮನೆ ಬಿಟ್ಟು ಹೊರ ಬರ್ತೀನಿ ಎಂದು ಕಣ್ಣೀರು

ಕಿರಿಕ್‌ಗಳಿಲ್ಲದ ಬಿಗ್‌ಬಾಸ್ ಸೀಸನ್ ಯಾವುದು ಇಲ್ಲ. ಆದರೆ ಈ ಬಾರಿಯ ಬಿಗ್‌ಬಾಸ್ ಮನೆ ಆರಂಭದಲ್ಲೇ ರಣಾಂಗಣವಾಗಿದೆ. ಸ್ಪರ್ಧಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ, ಕೂಗಾಟ, ಹಾರಾಟ ನಡೀತಿದೆ. 2ನೇ ವಾರದ ಕೊನೆಯ ನಾಮಿನೇಷನ್‌ ಬಳಿಕ ಟಾಸ್ಕ್‌ ಕೂಡ ಇತ್ತು. ಟಾಸ್ಕ್‌ನಲ್ಲಿ ಗೆದ್ದವರಿಗೆ ನಾಮಿನೇಷನ್‌ನಿಂದ ತಪ್ಪಿಸಿಕೊಳ್ಳುವ ಅವಕಾಶವೂ ಇತ್ತು.

ಸ್ವರ್ಗ ಹಾಗೂ ನರಕ ನಿವಾಸಿಗಳ ನಡುವೆ ಕೆಸರಿನ ಟಾಸ್ಕ್ ಎದುರಾಗಿತ್ತು. ಕೆಸರಿನಲ್ಲಿ ಇಬ್ಬರು ಸ್ಪರ್ಧಿಗಳು ಉರುಳಾಡಿ ಸಂಗ್ರಹಿಸಿದ ಕೆಸರು ಮಣ್ಣನ್ನು ಬಳಸಿ ಎದುರಿಗೆ ಇದ್ದ 5 ಪೇಪರ್ ಹಾಳೆಯನ್ನು ಒಡೆದು ಅರಿಯುವ ಟಾಸ್ಕ್ ಅದು. ಉಸ್ತುವಾರಿ ವಹಿಸಿದ್ದ ಕ್ಯಾಪ್ಟನ್ ಹಂಸಾ ಅವರ ಸಣ್ಣ ತಪ್ಪಿನಿಂದ ಎರಡು ತಂಡಗಳ ನಡುವೆ ಭಾರೀ ತಿಕ್ಕಾಟವೇ ನಡೆಯಿತು.

Bigg boss kannada 11 last task of week goes wrong hamsa breaks down

ಕೆಲವರಿಗೆ ನಾಮಿನೇಷನ್‌ನಿಂದ ತಪ್ಪಿಸಿಕೊಳ್ಳುವ ಅವಕಾಶವೂ ಕೈತಪ್ಪಿತು ಎನ್ನುವ ಬೇಸರ ಹೆಚ್ಚಾಗಿತ್ತು. ಇದೇ ಕಾರಣಕ್ಕೆ ಎರಡೂ ತಂಡಗಳ ನಡುವೆ ಸಂಘರ್ಷ ನಡೀತು. ಎಲ್ಲರೂ ಕ್ಯಾಪ್ಟನ್ ಹಂಸ ಮೇಲೆ ಕಿರುಚಾಡಿದರು. ಕೊನೆಗೆ ಬಿಗ್‌ಬಾಸ್ ಟಾಸ್ಕ್‌ ತೀರ್ಪು ಘೋಷಣೆ ಮಾಡಿದರು. ನರಕ ತಂಡವೇ ಗೆದ್ದಿದೆ ಎಂದು ಹೇಳುತ್ತಿದ್ದರಂತೆ ಸ್ವರ್ಗ ನಿವಾಸಿಗಳ ಆಕ್ರೋಶ ಮತ್ತಷ್ಟು ಹೆಚ್ಚಾಯಿತು.

ಮೋಕ್ಷಿತಾಗೆ ಸ್ವರ್ಗದಿಂದ ನರಕಕ್ಕೆ ಅದೇ ರೀತಿ ನರಕದಿಂದ ಸ್ವರ್ಗದಕ್ಕೆ ಒಬ್ಬರನ್ನು ಬದಲಾಯಿಸುವ ಅವಕಾಶ ನೀಡಲಾಯಿತು. ನರಕದಲ್ಲಿದ್ದ ಮಾನಸ ಅವರನ್ನು ಸ್ವರ್ಗಕ್ಕೆ ಕಳುಹಿಸುವಂತೆ ಕೇಳಿದರು. ಅದೇ ಸ್ವರ್ಗದಲ್ಲಿದ್ದ ಐಶ್ವರ್ಯ ನರಕಕ್ಕೆ ಹೋಗಬೇಕು ಎಂದರು. ಕೂಡಲೇ ಕ್ಯಾಪ್ಟನ್ ಹಂಸಾ ತಪ್ಪು ಮಾಡಿದ್ದು ನಾನು, ನಾನೇ ಶಿಕ್ಷೆ ಅನುಭವಿಸುತ್ತೀನಿ. ನಾನೇ ನರಕಕ್ಕೆ ಹೋಗುತ್ತೇನೆ, ಐಶ್ವರ್ಯ ಸ್ವರ್ಗದಲ್ಲೇ ಇರಲಿ ಎಂದರು. ಆದರೆ ಬಿಗ್‌ಬಾಸ್ ಅದಕ್ಕೆ ಒಪ್ಪಲಿಲ್ಲ.

ತಮ್ಮಿಂದ ಆದ ತಪ್ಪಿಗೆ ಕ್ಯಾಪ್ಟನ್ ಹಂಸಾ ಕಣ್ಣೀರಾದರು. ಮನೆ ಮಂದಿ ಎಲ್ಲಾ ಸಮಾಧಾನ ಮಾಡಿದರು. ನಾನು ಬಿಗ್‌ಬಾಸ್ ಮನೆಯಿಂದ ಹೊರ ಬರ್ತೀನಿ, ನನ್ನ ಬದಲು ಬೇರೆ ಯಾರನ್ನಾದರೂ ಕರೆದುಕೊಳ್ಳಿ ಎಂದು ಕ್ಯಾಮರಾ ಮುಂದೆ ಭಾವುಕರಾದರು. ಬಳಿಕ ಐಶ್ವರ್ಯ ಕೂಡ ಅತ್ತು ನರಕಕ್ಕೆ ಬಂದ ಬಗ್ಗೆ ಮಾತನಾಡಿದರು. ಕೊನೆಗೆ ಜಗದೀಶ್ ಮಾತನಾಡಿ ಹಂಸ, ಗೌತಮಿ ಬಳಿ ಕ್ಷಮೆ ಕೇಳಿದರು. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದರು.

ಇನ್ನು ಕ್ಯಾಪ್ಟನ್ ಹಂಸಾ ಅವರನ್ನು ಜಗದೀಶ್ ಫ್ಲಟ್ ಮಾಡುವುದು ಮುಂದುವರೆಸಿದ್ದಾರೆ. ಬಾತ್‌ ರೂಮ್ ಸ್ವಚ್ಛಗೊಳಿಸುವಾಗ ಮತ್ತೊಮ್ಮೆ ಜೋಕ್ ಮಾಡಿ ಹಂಸಾ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಇನ್ನು ಯಜಮಾನರು, ಮಗ ಎಲ್ಲರೂ ನೋಡುತ್ತಿದ್ದಾರೆ. ಆದರೂ ಪರವಾಗಿಲ್ಲ ಏನು ಮಾಡೋಕೆ ಆಗೊಲ್ಲ ಎಂದು ಜಗದೀಶ್ ಫ್ಲಟ್ ಮಾಡಿದ್ದಾರೆ.

ಅಲ್ಲೇ ಇದ್ದ ಜಗದೀಶ್ 'ಮುಂಗಾರು ಮಳೆ' ಚಿತ್ರದ ಡೈಲಾಗ್ ಹೇಳಿ ನೀವು ಸಿಗಲ್ಲ ಅಂತ ಗೊತ್ತು ಆದರೂ ಬಿಡಲ್ಲ ಎಂದು ಹೇಳಿದ್ದಾರೆ. ಅದೇ ಡೈಲಾಗ್ ಅನ್ನು ಜಗದೀಶ್ ಪುನರಾರ್ತಿಸಿದ್ದಾರೆ. ಕೊನೆಗೆ ಈ ವಾರ ಎಲಿಮಿನೇಟ್ ಆಗಲು ನಾಮಿನೇಟ್ ಆಗಿರುವವ ಹೆಸರನ್ನು ಬಿಗ್‌ಬಾಸ್ ಹೇಳಿದ್ದಾರೆ. ಭವ್ಯ ಗೌಡ, ಧನರಾಜ್, ಧರ್ಮ, ರಂಜಿತ್, ತ್ರಿವಿಕ್ರಮ್, ಮಾನಸ, ಐಶ್ವರ್ಯ, ಗೋಲ್ಡ್ ಸುರೇಶ್, ಹಂಸ, ಜಗದೀಶ್, ಅನುಷಾ ನಾಮಿನೇಟ್ ಲಿಸ್ಟ್‌ನಲ್ಲಿದ್ದಾರೆ.

ನಾಳಿನ ಎಪಿಸೋಡ್‌ನಲ್ಲಿ ಮುಂದಿನ ವಾರದ ಕ್ಯಾಪ್ಟನ್ ಆಯ್ಕೆಗಾಗಿ ಟಾಸ್ಕ್ ನಡೆಯಲಿದೆ. ಮುಂದಿನ ವಾರ ಬಿಗ್‌ಬಾಸ್ ಮನೆಗೆ ಯಾರು ಕ್ಯಾಪ್ಟನ್ ಆಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
BBK 11: From heated arguments to team Naraka victory, here is day 10 highlights.
Read more about: bigg boss kannada 11 bigg boss tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X