BBK 11: ಬಿಗ್‌ಬಾಸ್ ಮೇಲೆ ಮತ್ತೆ ಜಗದೀಶ್ ಗರಂ; ಅವಾಚ್ಯ ಪದಗಳಿಂದ ನಿಂದನೆ

ಮತ್ತೊಮ್ಮೆ ಲಾಯರ್ ಜಗದೀಶ್ ಬಿಗ್‌ಬಾಸ್ ಬಗ್ಗೆಯೇ ಕೆಟ್ಟದಾಗಿ ಮಾತನಾಡಿದ್ದಾರೆ. ಕ್ಯಾಮರಾ ಎದುರು ನಿಂತು ಅವರು ಮಾತನಾಡಿರುವ ಮಾತಿನ ಕೆಲವು ಭಾಗಗಲ್ಲಿ ಬೀಪ್ ಹಾಕುವಂತಾಗಿತ್ತು.

ಉಗ್ರಂ ಮಂಜು, ರಂಜಿತ್ ಎಲ್ಲರೂ ಜಗದೀಶ್ ವಿರುದ್ಧ ಗರಂ ಆಗಿದ್ದರು. ಕೊನೆಗೆ ಬಿಗ್‌ಬಾಸ್ ಎಲ್ಲರನ್ನು ಶಾಂತಗೊಳಿಸಬೇಕಾಯಿತು. ಕ್ಯಾಪ್ಟನ್ ಶಿಶಿರ್‌ನ ಫೋನ್ ಬೂತ್‌ಗೆ ಕರೆದು ಜಗದೀಶ್ ಅವರನ್ನು ಸಮಾಧಾನ ಪಡಿಸುವಂತೆ ಬಿಗ್‌ಬಾಸ್ ಹೇಳುವಂತಾಯಿತು.

Bigg Boss kannada 11 Lawyer Jagadish angry over bigg boss again

ಜಗದೀಶ್ ಬಳಸಿದ ಅವಾಚ್ಯ ಪದಗಳು ಮನೆಯ ಇತರ ಸ್ಪರ್ಧಿಗಳಿಗೆ ಅಹಸ್ಯ ಮೂಡಿಸಿತ್ತು. ಒಂದು ಹಂತದಲ್ಲಿ "ನಿನ್ನ ಪ್ರೋಗ್ರಾಂ ನೀನೇ ಮಾಡ್ಕೋ. ನಾನು ಹೊರಗೆ ಹೋಗ್ತೀನಿ. ನನ್ನ ಇಮೇಜ್‌​ಗೆ ಡ್ಯಾಮೇಜ್ ಮಾಡಿಕೊಂಡು ನಾನಿಲ್ಲಿ ಇರಲ್ಲ. ಹೊರಗೆ 100 ಜನಕ್ಕೆ ನಾನು ಊಟ ಹಾಕಿದ್ದೇನೆ. ಇಲ್ಲಿ ನೋಡಿದರೆ ಊಟಕ್ಕೆ ರೂಲ್ಸ್ ಮಾಡ್ತಾರೆ. ಈಗ ಬಾಗಿಲು ತೆರೆಯಿರಿ. ನಾನು ಹೊರಗೆ ಹೋಗ್ತೀನಿ. ಕಿರಿಕ್ ಮಾಡ್ಕೊಂಡು ಮಜಾ ತಗೋಳೊರಿಗೆ ಬೆಲೆ ಜಾಸ್ತಿ. ನಾನು ಬ್ಯಾಗ್ ತಗೊಂಡು ಹೋಗ್ತೀನಿ" ಎಂದು ಜಗದೀಶ್ ಹೇಳಿದ್ದು ಹೈಲೆಟ್ ಆಗಿತ್ತು.

ಬಿಗ್‌ಬಾಸ್ ಮನೆಯಲ್ಲಿ ಮತ್ತೆ ಲಾಯರ್ ಜಗದೀಶ್ ಆರ್ಭಟ ಜೋರಾಗಿದೆ. ಚೈತ್ರಾ ಕುಂದಾಪುರ ಜೊತೆ ಜಗದೀಶ್ ಕಿರಿಕ್ ತಾರಕಕ್ಕೇರಿತ್ತು. ಚೈತ್ರಾ ವೈಯಕ್ತಿಕ ವಿಚಾರದ ಬಗ್ಗೆ ಜಗದೀಶ್ ಮಾತನಾಡಿದ್ದು ಮನೆಯಲ್ಲಿ ಅಶಾಂತಿಗೆ ಕಾರಣವಾಗಿತ್ತು.

ಚೈತ್ರಾ ಮೇಲೆ 28 ಕೇಸ್ ಇದೆ. ಅವಳು ನನ್ನ ಬಗ್ಗೆ ಮಾತನಾಡುತ್ತಾಳೆ ಎಂದು ಜಗದೀಶ್ ಹೇಳಿದ್ದು ಚೈತ್ರಾ ಆಕ್ರೋಶಕ್ಕೆ ಕಾರಣವಾಗಿತ್ತು. ಜಗದೀಶ್ ಮಾತಿಗೆ ಗರಂ ಆಗಿದ್ದ ಚೈತ್ರಾ "ತಾಕತ್ತಿದ್ದರೆ ಎದುರು ನಿಂತು ಮಾತನಾಡು. ನನ್ನ ಕೇಸ್‌ಗಳ​ ಬಗ್ಗೆ ಮಾತನಾಡುವ ಯಾವ ಯೋಗ್ಯತೆ ಇಲ್ಲ. 50 ಅಲ್ಲ, 100 ಕೇಸ್​ ಬೇಕಾದರೂ ಹಾಕಿಸಿಕೊಳ್ತೀನಿ. ನಾನು ಇವರಪ್ಪನಿಗೆ ಹೊಡೆದು ನಾನು ಕೇಸ್ ಹಾಕಿಸಿಕೊಂಡಿಲ್ಲ. ಯಾವನಾದ್ರೂ ಅಪ್ಪನಿಗೇ ಹೊಟ್ಟಿದ್ರೆ ನನ್ನ ಕೇಸ್​ ಬಗ್ಗೆ ನನ್ನ ಎದುರು ಬಂದು ಮಾತನಾಡಲಿ" ಎಂದು ಚಾಲೆಂಜ್ ಮಾಡಿದರು.

ಇನ್ನು ಜಗದೀಶ್ ಜೊತೆ ಉಗ್ರಂ ಮಂಜು ತಿಕ್ಕಾಟವೂ ತಾರಕಕ್ಕೇರಿದೆ. ಮೊದಲಿನಿಂದಲೂ ಬಹಳ ಜೋರು ಮಾತನಾಡುವ ಜಗದೀಶ್‌ಗೆ ಖಡಕ್ ಆಗಿ ಎದುರು ನಿಲ್ಲುತ್ತಿರುವುದು ಉಗ್ರಂ ಮಂಜು ಮಾತ್ರ. ಇತ್ತೀಚೆಗೆ ಜಗ್ಗು ಕೂಗಾಟ ಹೆಚ್ಚಾಗುತ್ತಿದ್ದಂತೆ ಮಂಜು ವ್ಯಂಗ್ಯವಾಗಿ ಗೇಲಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. 16ನೇ ದಿನ ಇದು ಮತ್ತೊಂದು ಹಂತಕ್ಕೆ ಹೋಗಿತ್ತು.

ಬಿಗ್‌ಬಾಸ್ ವಿರುದ್ಧವೇ ಕೆಟ್ಟದಾಗಿ ಮಾತನಾಡುವ ಜಗದೀಶ್ ಮನೆಯಲ್ಲಿ ತಮ್ಮ ವಿರುದ್ಧ ನಿಂತವರನ್ನೆಲ್ಲಾ ಮಾತಿನಲ್ಲೇ ಎದುರಿಸುವ ಕೆಲಸ ಮಾಡುತ್ತಿದ್ದಾರೆ. ಉಗ್ರಂ ಮಂಜು ಜೊತೆಗೂ ಅದೇ ರೀತಿ ವರ್ತಿಸುತ್ತಿದ್ದಾರೆ. ಇಬ್ಬರ ನಡುವೆ ಏಕವಚನದಲ್ಲಿ ಮತ್ತೊಮ್ಮೆ ವಾಕ್ಸಮರ ನಡೆದಿದೆ. ಆವಾಚ್ಯ ಶಬ್ಧಗಳನ್ನು ಬಳಸಿ ಮಾತನಾಡಿದ್ದಾರೆ. ಆದರೆ ಅದನ್ನು ವೀಕ್ಷಕರು ನಾಳಿನ ಎಪಿಸೋಡ್‌ನಲ್ಲಿ ನೋಡಬಹುದು.

ಮನೆಯಿಂದ ಬಿಗ್‌ಬಾಸ್ ಬ್ರೇಕ್ ತೆಗೆದುಕೊಂಡಿದ್ದು ಇಡೀ ಮನೆಗೆ ಧ್ವನಿ ಈಗ ಕೇಳಿಸುತ್ತಿಲ್ಲ. ಫೋನ್ ಬೂತ್ ಒಳಕ್ಕೆ ಕ್ಯಾಪ್ಟನ್ ಶಿಶಿರ್ ಅವರನ್ನು ಕರೆದು ಸಲಹೆ ಸೂಚನೆಗಳನ್ನು ಕೊಡುತ್ತಿದ್ದಾರೆ. ಶಿಶಿರ್ ಹೊರ ಬಂದು ಅದನ್ನು ಎಲ್ಲರಿಗೂ ಹೇಳುತ್ತಿದ್ದಾರೆ. ಮನೆಯನ್ನು ಸ್ವಚ್ಛಗೊಳಿಸಿದ್ದಕ್ಕೆ ಎಲ್ಲರಿಗೂ ಸರ್‌ಪ್ರೈಸ್ ಆಗಿ ಐಸ್‌ಕ್ರೀಂ ತಿನ್ನುವ ಅವಕಾಶ ಸಿಕ್ಕಿತ್ತು.

More from Filmibeat

English summary
BBK 11: Lawyer Jagadish Gets Into An Ugly Fight With Chitra Kundapura and Ugram Manju;
Read more about: bigg boss bigg boss kannada 11 tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X