BBK 11: ಕ್ಯಾಪ್ಟನ್ ಹಂಸಾ ಜೊತೆ ಜಗದೀಶ್ ಅಸಭ್ಯ ಮಾತು; 'ಜಗ್ಗು ಮಹಾನ್ ಪೋಲಿ' ಎಂದ ನೆಟ್ಟಿಗರು
ಬಿಗ್‌ಬಾಸ್ ಕನ್ನಡ ಸೀಸನ್ 11 ಇದೀಗ 2ನೇ ವಾರಕ್ಕೆ ಕಾಲಿಟ್ಟಿದೆ. ಹಂಸಾ ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಆದರೆ ಆಕೆಯ ಲಾಯರ್ ಜಗದೀಶ್ ಮಾಡುತ್ತಿರುವ ಕಿರಿಕಿರಿ ಅಷ್ಟಿಷ್ಟಲ್ಲ. ಇನ್ನು ಜಗದೀಶ್ ಕೈಲಿ ಮನೆಯ ಕೆಲಸಗಳನ್ನು ಮಾಡಿಸಲು ಕ್ಯಾಪ್ಟನ್ ಬಹಳ ಕಷ್ಟಪಡುವಂತಾಗಿದೆ.
ಕ್ಯಾಪ್ಟನ್ ಆಗಿ ಆರ್ಡರ್ ಮಾಡುವ ಬದಲು ಜಗದೀಶ್ ಹೇಳಿದಂತೆ ಕೇಳುವ ಪರಿಸ್ಥಿತಿ ಬಂದಿದೆ. ಆರಂಭದಿಂದಲೂ ಬಹಳ ಅಬ್ಬರಿಸುತ್ತಿದ್ದ ಜಗದೀಶ್ ಇತ್ತೀಚೆಗೆ ಲವಯ್ ಬಾಯ್ ಆಗಿಬಿಟ್ಟಿದ್ದಾರೆ. ಜಗಳದ ಜೊತೆಗೆ ಈಗ ಫ್ಲರ್ಟ್ ಮಾಡಲು ಆರಂಭಿಸಿದ್ದಾರೆ. ಮೊನ್ನೆ 'ಐ ಲವ್ ಯುವ ಕ್ಯಾಪ್ಟನ್' ಎಂದು ಶಾಕ್ ಕೊಟ್ಟಿದ್ದು ಗೊತ್ತೇಯಿದೆ.

'ಮುಂಗಾರು ಮಳೆ' ಚಿತ್ರದಲ್ಲಿ ಗಣೇಶ್ ಎದೆ ಮೇಲೆ ಪೂಜಾ ಗಾಂಧಿ ಕಾಲಿಟ್ಟು ಹೋಗುವ ಸನ್ನಿವೇಶವೂ ಬಿಗ್‌ಬಾಸ್ ಮನೆಯಲ್ಲಿ ರೀ ಕ್ರಿಯೇಟ್ ಆಗಿ ಬಿಟ್ಟಿತ್ತು. ಜಗದೀಶ್ ಎದೆ ಮೇಲೆ ಹಂಸ ಕಾಲಿಟ್ಟು ಹೋದ ಸನ್ನಿವೇಶ ವೈರಲ್ ಆಗಿತ್ತು. ಇನ್ನು ಕೋಪದಲ್ಲಿ ಕೆಲವೊಮ್ಮೆ ಹಂಸಾ ಏಕವಚನದಲ್ಲಿ ಜಗದೀಶ್ ವಿರುದ್ಧ ಕೂಗಾಡುತ್ತಿದ್ದಾರೆ. ಸದ್ಯ ಇದೀಗ ಜಗ್ಗು ಪೋಲಿ ಮಾತುಗಳು ವೈರಲ್ ಆಗುತ್ತಿದೆ.
ಮೊದಲಿನಿಂದಲೂ ಬಿಗ್‌ಬಾಸ್ ಶೋ ಬಗ್ಗೆ ಒಂದು ಆರೋಪವಿದೆ. ಮನರಂಜನೆಯ ಹೆಸರಿನಲ್ಲಿ ಈ ಶೋನಲ್ಲಿ ಕೊಡುವ ಕೆಲವು ಟಾಸ್ಕ್‌ಗಳು ಸ್ಪರ್ಧಿಗಳ ಪೋಷಾಕು, ನಡೆ, ನುಡಿ ಎಲ್ಲದರ ಬಗ್ಗೆ ಅಸಮಾಧಾನ ವ್ಯಕ್ಯವಾಗಿತ್ತಲೇ ಇದೆ. ತಮಿಳುನಾಡಿನಲ್ಲಿ ಬಿಗ್‌ಬಾಸ್ ಶೋ ನಿಲ್ಲಿಸುವಂತೆ ಪ್ರತಿಭಟನೆ ಕೂಡ ನಡೆದಿತ್ತು. ಕೆಲವರು ಬೈಯ್ದುಕೊಂಡೇ ಶೋ ನೋಡುತ್ತಾರೆ. ಹಿಂದಿ ಬಿಗ್‌ಬಾಸ್ ಶೋಗೆ ಹೋಲಿಸಿದರೆ ಕನ್ನಡ ಶೋ ಕೊಂಚ ಮಟ್ಟಿಗೆ ಸಹ್ಯ ಎನಿಸುತ್ತದೆ.
ಬಿಗ್‌ಬಾಸ್ ಮನೆಯಲ್ಲಿ ಈ ಹಿಂದೆ ಕೆಲವರು ನಡುವೆ ಲವ್ ಆಗಿರುವುದು ಇದೆ. ಎಷ್ಟೇ ಕಿರುಚಾಡಿದರೂ ಅರಚಾಡಿದರೂ ಯಾರು ಕೆಟ್ಟ ಹಾಗೂ ಪೋಲಿ ಪದಗಳನ್ನು ಬಳಸುತ್ತಿರಲಿಲ್ಲ. ಒಂದು ವೇಳೆ ಬಳಸಿದರೂ ಅದನ್ನು ಎಡಿಟ್ ಮಾಡಿ ಪ್ರಸಾರ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಹಂಸಾ ಜೊತೆ ಮಾತನಾಡುತ್ತಾ ಲಾಯರ್ ಜಗದೀಶ್ ಮಾತನಾಡಿರುವ ಪೋಲಿ ಮಾತುಗಳು ಸದ್ಯ ವೈರಲ್ ಆಗುತ್ತಿದೆ.
ಲಾಯರ್ ಜಗದೀಶ್ ಕೈಲಿ ಕ್ಯಾಪ್ಟನ್ ಹಂಸಾ ಬಾತ್‌ರೂಮ್ ಕ್ಲೀನ್ ಮಾಡಿಸುವಾಗ ಈ ಮಾತುಗಳು ಬಂದಿದೆ. ಹಂಸ ಮೊದಲಿಗೆ "ಇಷ್ಟು ವರ್ಷದಲ್ಲಿ ನನ್ನ ಗಂಡನಿಗೆ ಕೂಡ ನಾನು ಇಷ್ಟು ಮಸ್ಕಾ ಹೊಡೆದಿಲ್ಲ. ಅಷ್ಟು ಈ ಯಪ್ಪಂಗೆ ಮಸ್ಕಾ ಹೊಡಿತಿದ್ದೀನಿ" ಎಂದಿದ್ದಾರೆ. ಬಳಿಕ ಮಾತು ಮುಂದುವರೆಸಿ "ಇದನ್ನೆಲ್ಲಾ ನೋಡ್ತಿದ್ರೆ ನಿಮ್ಮ ಹೆಂಡ್ತಿ ನಿಮ್ಮ ಕೈಲಿ ಚೆನ್ನಾಗಿ ಕೆಲಸ ಮಾಡಿಸ್ತಾರೆ ಅಂತ ಅನಿಸುತ್ತೆ" ಎಂದು ಹೇಳಿದ್ದಾರೆ. ದಿಢೀರನೆ ಪ್ರತಿಕ್ರಿಯಿಸಿರುವ ಜಗದೀಶ್ "ಚೆನ್ನಾಗಿ ಕೆಲಸ ಮಾಡಿರೋದಿಕ್ಕೆ ಎರಡು ಮಕ್ಕಳಾಗಿವೆ ಅರ್ಥ ಮಾಡ್ಕೊಳಿ" ಎಂದುಬಿಟ್ಟಿದ್ದಾರೆ.
ಜಗದೀಶ್ ಮಾತಿಗೆ ಮರು ಮಾತನಾಡದೇ ಕೂಡಲೇ ಅಲ್ಲಿಂದ ಹಂಸಾ ಅವರು ಹೊರಟು ಹೋಗಿದ್ದಾರೆ. ಸದ್ಯ ಈ ವೀಡಿಯೋ ಶೇರ್ ಮಾಡಿ "ಜಗ್ಗು ಮಹಾನ್ ಪೋಲಿ" ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಹೀಗೆ ಶೇರ್ ಮಾಡಿರುವ ಈ ವೀಡಿಯೋವನ್ನು ಡಿಲೀಟ್ ಮಾಡುವಂತೆ ಮನವಿ ಮಾಡುತ್ತಿದ್ದಾರೆ.
ಮನೆಮಂದಿಯೆಲ್ಲಾ ಕೂತು ನೋಡುವಂತಹ ಕಾರ್ಯಕ್ರಮದಲ್ಲಿ ಈ ರೀತಿಯ ಮಾತುಗಳು ಬೇಡ, ಈ ಬಗ್ಗೆ ಬಿಗ್‌ಬಾಸ್ ಸ್ಪರ್ಧಿಗಳಿಗೆ ಕಿವಿಮಾತು ಹೇಳಬೇಕು. ಒಂದು ವೇಳೆ ಸ್ಪರ್ಧಿಗಳು ಮಾತನಾಡಿದರೂ ಅದನ್ನು ಎಡಿಟ್ ಮಾಡಿ ಶೋ ಪ್ರಸಾರ ಮಾಡಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











