BBK 11: ಐಶ್ವರ್ಯಾ ಕಾರಣಕ್ಕೆ ಕಿತ್ತೋಯ್ತಾ ಅನುಷಾ-ಧರ್ಮ ಪ್ರೀತಿ?
ಬಿಗ್ ಬಾಸ್ ಮನೆಗೂ ಪ್ರೀತಿ ಪ್ರೇಮಕ್ಕೂ ಅವಿನಾಭಾವ ಸಂಬಂಧವಿದ್ದಂತೆ. ಪ್ರತಿ ಸೀಸನಲ್ಲೂ ಇಲ್ಲ ಆರಂಭದಲ್ಲಿ ಲವ್ ಆಗುತ್ತೆ, ಅಂತ್ಯಕ್ಕೆ ಢಮ್ ಎನ್ನುತ್ತೆ. ಇಲ್ವಾ ಅಂತ್ಯದಲ್ಲಿ ಲವ್ ಆಗಿ ಸೀಸನ್ ಮುಗಿಯುವುದರೊಳಗೆ ಆ ಪ್ರೀತಿ ಬ್ರೇಕಪ್ ಆಗುತ್ತೆ.
ಕೆಲವರ ಪ್ರೀತಿ ಮಾತ್ರ ಮದುವೆಯ ತನಕ ಹೋಗಿ ಹೊಸ ಜೀವನಕ್ಕೆ ಕಾಲಿಡುವುದು. ಹಾಗೇ ಬಿಗ್ ಬಾಸ್‌ನಿಂದ ಹುಟ್ಟಿದ ಪ್ರೀತಿ ಮದುವೆಯ ತನಕ ತಲುಪಿದ್ದು ಒಂದೇ ಪ್ರೀತಿ ಅದು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ. ಈಗ ಆ ಪ್ರೀತಿ ಕೂಡ ಜೊತೆಗೆ ಇಲ್ಲ.

ಇಷ್ಟೆಲ್ಲ ಹೇಳುವುದಕ್ಕೆ ಕಾರಣ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ನಡೆಯುತ್ತಿರುವ ಲವ್ ಸ್ಟೋರಿಗಳು. ಅದರಲ್ಲೂ ಧರ್ಮ ಮತ್ತು ಅನುಷಾ ನಡುವೆ ಮೊದಲೇ ಲವ್ ಇತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ನಡುವೆ ಐಶ್ವರ್ಯಾ ಪಾಪ ಪ್ರಜ್ಞೆಯಿಂದ ಕೂತಿದ್ದಾರೆ.
ಮನೆ ಸದಸ್ಯರಿಂದ ಉಪದೇಶ
ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಅನುಷಾ ಹಾಗೂ ಧರ್ಮ ಜೊತೆ ಜೊತೆಯಾಗಿಯೇ ಇದ್ದರು. ಅಡುಗೆ ಮನೆಯಲ್ಲಾಗಲಿ, ಸೋಫಾ ಮೇಲಾಗಲಿ ಇಬ್ಬರೇ ಕಾಣಿಸುತ್ತಿದ್ದರು. ಕೆಲವೊಂದು ಸಲ ನಾಮಿನೇಟ್ ಮಾಡುವಾಗ ಅದೇ ಕಾರಣವನ್ನು ಮನೆಯವರು ಕೊಟ್ಟಿದ್ದು ಇದೆ. ಯಾವಾಗಲೂ ಇಬ್ಬರೆ ಇರುತ್ತಾರೆ ಎಂದು. ಅಷ್ಟು ಅನ್ಯೋನ್ಯವಾಗಿದ್ದ ಜೋಡಿ ಈಗ ದೂರ ದೂರ ಆಗಿದೆ.
ನಾಮಿನೇಷನ್ ಹೊತ್ತಿಸಿದ ಬೆಂಕಿ
ನೇರ ನಾಮಿನೇಷನ್ ಮಾಡಬೇಕೆಂದು ಇತ್ತಿಚೆಗೆ ಬಿಗ್ ಬಾಸ್ ಹೇಳಿದಾಗ ಧರ್ಮ ಕೂಡ ಅನುಷಾ ಅವರ ಹೆಸರನ್ನೇ ತೆಗೆದುಕೊಂಡರು. ಇದು ಸಹಜವಾಗಿಯೇ ನಂಬಿಕೆಗೆ ಪೆಟ್ಟು ಬಿದ್ದಂತೆ ಆಗಿದೆ. ಇದನ್ನ ಅನುಷಾ ಕಡೆಯಿಂದ ಸಹಿಸಿಕೊಳ್ಳಲು ಆಗಿಲ್ಲ. ಅಗ್ರೆಷನ್ ಎಂದ ಧರ್ಮನಿಗೆ ನೀವೇಗಿದ್ದೀರಾ ಮನೆಯಲ್ಲಿ ಅನ್ನೋದು ಗೊತ್ತಾ ಎಂದೇ ಅನುಷಾ ಪ್ರಶ್ನೆ ಮಾಡಿದ್ದಾರೆ. ನೇರ ನಾಮಿನೇಷನ್ ಅನುಷಾ ಹಾಗೂ ಧರ್ಮ ನಡುವಿನ ಬಂಧವನ್ನೆ ಕಡಿದು ಹಾಕಿದೆ.
ಮಾತು ಬಿಟ್ಟ ಅನುಷಾ
ನೇರ ನಾಮಿನೇಷನ್‌ನಲ್ಲಿ ಜಗಳವಾದ ಮೇಲೆ ಅನುಷಾ, ಧರ್ಮ ಅವರ ಜೊತೆಗೆ ಮಾತು ಬಿಟ್ಟಿದ್ದಾರೆ. ಐಶ್ವರ್ಯಾ ಹಾಗೂ ಧರ್ಮ ಜೋಡಿ ಆಟ ಆಡುತ್ತಿದ್ದಾರೆ. ಧರ್ಮ ನೈಟ್ ಗುಡ್ ನೈಟ್ ಎಂದರೂ ಅನುಷಾ ಕಡೆಯಿಂದ ರೆಸ್ಪಾನ್ಸ್ ಇಲ್ಲ. ಮನೆಗೆ ನಾವೇನು ಜಗಳ ಆಡುವುದಕ್ಕೆ ಬಂದಿದ್ದೀವಾ? ಮಾತಾಡಿಸು ಎಂದರೂ ಅನುಷಾ ಮಾತಾಡಿಲ್ಲ. ಕಡೆಗೆ ನಿಮ್ಮನ್ನ ಮಾತಾಡಿಸುವ ಅವಶ್ಯಕತೆ ನಮಗಿಲ್ಲ ಎಂದೇ ಹೇಳಿದ್ದಾರೆ. ಅದನ್ನು ಕೇಳಿಸಿಕೊಂಡ ಧರ್ಮ ಸರಿ ಬಿಡು ಎಂದು ನಡೆದಿದ್ದಾರೆ.
ಐಶ್ವರ್ಯಾ ಬಹಳ ಬೇಸರ
ಇದೆಲ್ಲವನ್ನು ನಿಂತು ನೋಡಿದ್ದ ಐಶ್ವರ್ಯಾಗೆ ಈಗ ಪಾಪಪ್ರಜ್ಞೆ ಕಾಡುವುದಕ್ಕೆ ಶುರುವಾಗಿದೆ. ನನ್ನಿಂದ ಏನಾದ್ರೂ ಇಬ್ವರ ಪ್ರೀತಿ ಕಿತ್ತೋಯ್ತಾ? ಎಂಬ ಯೋಚನೆಗೆ ಕಣ್ಣೀರು ಹಾಕಿದ್ದಾರೆ. ಮೋಕ್ಷಿತಾ, ಧನರಾಜ್, ಗೌತಮಿ, ಹನುಮಂತು ಕೂತು ಊರ ಕಣ್ಣು ಯಾರ ಕಣ್ಣು ಹಾಡು ಹಾಡುತ್ತಾ ಇದ್ರು. ಆಗ ಯಾವ ಮಸಣಿ ಕಣ್ಣು ಬಿತ್ತಮ್ಮ ಬಿತ್ತಮ್ಮ ಧರ್ಮಣ್ಣನ ಪ್ರೀತಿ ಮ್ಯಾಗೆ ಎಂಬ ಸಾಲನ್ನು ಹನುಮಂತು ಸೇರಿಸಿದರು. ಆಗ ಐಶ್ವರ್ಯಾ, ಎಲ್ಲರೂ ಧರ್ಮ ಅವರ ಪ್ರೀತಿ ಹೋಯ್ತು ಹೋಯ್ತು ಅಂತಿದ್ದಾರೆ. ನಾನೇನು ಮಾಡಿದೆ ಎಂದಾಗ ಶಿಶಿರ್, ನಿನ್ನಿಂದ ಹೋಯ್ತು ಅಂತ ಯಾರೇಳಿದ್ದು ಎಂದು ಸಮಾಧಾನ ಮಾಡಿದ್ದಾರೆ.


Click it and Unblock the Notifications











