BBK 11: ಮತ್ತೆ ಜೈಲಿನೊಳಕ್ಕೆ ಚೈತ್ರಾ ಕುಂದಾಪುರ!; ತಾಳಿ ಹಿಡಿದು ಮಾನಸ ಪ್ರಮಾಣ
ಲಾಯರ್ ಜಗದೀಶ್ ಹಾಗೂ ರಂಜಿತ್ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ವಾರದ ನಡುವೆಯೇ ಎರಡು ಎಲಿಮಿನೇಷನ್ ಶಾಕ್ ಎದುರಾಗಿದೆ. ಬಿಗ್‌ಬಾಸ್ ನಿಯಮಗಳನ್ನು ಮೀರಿದ್ದಕ್ಕೆ ಇಬ್ಬರಿಗೂ ಹೊರ ಬರುವ ಶಿಕ್ಷೆ ಸಿಕ್ಕಿದೆ. ಇದೀಗ ಬಿಗ್‌ಬಾಸ್ ಮನೆಯಲ್ಲಿ 14 ಜನ ಮಾತ್ರ ಉಳಿದುಕೊಂಡಿದ್ದಾರೆ.
ಮನೆ ಚಿಕ್ಕದಾದರೂ ಜಗಳ, ಕಿರಿಕ್ ಮಾತ್ರ ಜೋರಾಗುತ್ತಲೇ ಇದೆ. ಜಗದೀಶ್ ಅನುಪಸ್ಥಿತಿಯಲ್ಲಿ ಉಳಿದವರು ಹೈಲೆಟ್ ಆಗುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಚೈತ್ರಾ ಕುಂದಾಪುರ ಈಗ ಮನೆಯ ಕೇಂದ್ರಬಿಂದು ಆಗುತ್ತಿರುವುದು ಗೊತ್ತಾಗುತ್ತಿದೆ. ಬಿಗ್‌ಬಾಸ್ ಮನೆಯಲ್ಲಿ ಹೊಸ ಚಟುವಟಿಕೆ ಸಿಕ್ಕಿತ್ತು.

ಅಪ್ರಮಾಣಿಕ ಹಾಗೂ ಕುತಂತ್ರಿ ಎನ್ನುವ ಎರಡು ಹಣೆಪಟ್ಟಿಗಳನ್ನು ಕೊಟ್ಟು ಸ್ಪರ್ಧಿಗಳು ಮನೆಯಲ್ಲಿ ಯಾರಿಗೆ ಇದನ್ನು ನೀಡಲು ಬಯಸುತ್ತಾರೆ, ಅದಕ್ಕೆ ಕಾರಣ ಏನು ಎಂದು ಹೇಳುವಂತೆ ಎಲ್ಲರಿಗೂ ಹೇಳಲಾಯಿತು. ಎಲ್ಲರೂ ಈ ಚಟುವಟಿಕೆಯಲ್ಲಿ ಭಾಗವಹಿಸಿದರು. ಕುತಂತ್ರಿ ಹಾಗೂ ಅಪ್ರಮಾಣಿಕ ಹಣೆಪಟ್ಟಿ ಹೆಚ್ಚು ಪಡೆದವರಿಗೆ ಬಿಗ್‌ಬಾಸ್ ಮನೆ ಒಳಗಿನ ಜೈಲಿನ ಒಳಗೆ ಹೋಗುವ ಶಿಕ್ಷೆ ಎದುರಾಯಿತು.
ಬಿಗ್‌ಬಾಸ್ ಮನೆ ಒಳಗೆ ಹೋಗುವ ಮುನ್ನ ಚೈತ್ರಾ ಕುಂದಾಪುರ ಪ್ರಕರಣವೊಂದರಲ್ಲಿ ಜೈಲು ಸೇರಿದ್ದರು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. ಇದೀಗ ಬಿಗ್‌ಬಾಸ್ ಮನೆಯೊಳಗೆ ಹೋಗುವ ಶಿಕ್ಷೆ ಸಿಕ್ಕಿದೆ. ಇನ್ನು ಜೈಲಿನ ಒಳಗೆ ಒಬ್ಬೊಂಟಿಯಾಗಿರುಗ ಚೈತ್ರಾ ಬಳಿ ಮನೆಯ ಇತರ ಸ್ಪರ್ಧಿಗಳು ಬಂದು ಮಾತನಾಡುತ್ತಿದ್ದಾರೆ.
ಚಿಕ್ಕ ಕಾರಣಕ್ಕೆ ಮಾನಸ ಹಾಗೂ ಚೈತ್ರಾ ಕುಂದಾಪುರ ನಡುವೆ ವಾಕ್ಸಮರ ಶುರುವಾಯಿತು. ನೀನು ಆ ಮಾತು ಹೇಳಿದ್ದು ನಿಜ ಎಂದು ಚೈತ್ರಾ ವಾದಿಸಿದರೆ, ನಾನು ಆ ರೀತಿ ಹೇಳಲೇ ಇಲ್ಲ ಎಂದು ಮಾನಸ ವಾದಿಸಿದ್ದಾರೆ. ಈ ವೇಳೆ ಮಾನಸ ಕುತ್ತಿಗೆಯಲ್ಲಿದ್ದ ತಾಳಿ ಕೈಯಲ್ಲಿ ಹಿಡಿದು ನಾನು ಆ ಮಾತು ಹೇಳಲಿಲ್ಲ ಎಂದು ಆಣೆ ಪ್ರಮಾಣ ಮಾಡಿದರು. ಆದರೆ ಅದನ್ನು ಚೈತ್ರಾ ಒಪ್ಪಲಿಲ್ಲ.
ಗೋಲ್ಡ್ ಸುರೇಶ್ ಎದುರು ಮಾತನಾಡಿದ ಒಂದು ಮಾತನ್ನು ನಾನು ಹೇಳಲಿಲ್ಲ ಎಂದು ಮಾನಸ, ನೀನು ಹೇಳಿದ್ದು ನಿಜ ಎಂದು ಚೈತ್ರಾ ವಾಕ್ಸಮರ ನಡೆಸಿದರು. ಬಳಿಕ ಸುರೇಶ್ ಬಂದು ಇಬ್ಬರ ಬಳಿ ತಮ್ಮ ವಾದ ಮುಂದಿಟ್ಟರು. ಜಗದೀಶ್ ಹಾಗೂ ರಂಜಿತ್ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಈ ದಿಢೀರ್ ಶಾಕ್‌ನಿಂದ ಮನೆಮಂದಿ ಇನ್ನು ಹೊರ ಬಂದಿಲ್ಲ. ಅವರಿಬ್ಬರು ಮತ್ತೆ ವಾಪಸ್ ಬರ್ತಾರಾ ಎನ್ನುವ ಕುತೂಹಲವೂ ವೀಕ್ಷಕರಲ್ಲಿದೆ.


Click it and Unblock the Notifications











