BBK 11: ಬಿಗ್‌ಬಾಸ್ ಮನೆಗೆ ಎರಡು ಕಾರುಗಳು ಎಂಟ್ರಿ; ಹೊರಗೆ ಬಂದಿದ್ದು ಯಾರು?

ಸುದೀಪ್ ಆಗಮನವಾಗದೇ ಬಿಗ್‌ಬಾಸ್ ಸೀಸನ್ 11ರ ಒಂದು ವೀಕೆಂಡ್ ಮುಕ್ತಾಯವಾಗಿದೆ. ತಾಯಿ ಅಗಲಿಕೆಯ ನೋವಿನಲ್ಲಿರುವ 'ಕಿಚ್ಚ ವಾರದ ಕಥೆ ಕಿಚ್ಚನ ಜೊತೆ' ಹಾಗೂ 'ಸೂಪರ್ ಸಂಡೇ ವಿತ್ ಸುದೀಪ' ಎಪಿಸೋಡ್‌ಗಳ ಚಿತ್ರೀಕರಣಕ್ಕೆ ಹಾಜರ್ ಆಗಲಿಲ್ಲ. ಆದರೆ ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಟ ಸೃಜನ್ ಲೋಕೇಶ್ ಎರಡು ಸಂಚಿಕೆಗಳ ನೇತೃತ್ವ ವಹಿಸಿದ್ದಾರೆ.

ಮಾಜಿ ಬಿಗ್‌ಬಾಸ್ ಸ್ಪರ್ಧಿಯೂ ಆಗಿರುವ ಸೃಜನ್ ಲೋಕೇಶ್ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿಸಿರುವುದು ಗೊತ್ತಾಗುತ್ತಿದೆ. ಈಗಾಗಲೇ ಬಿಗ್‌ಬಾಸ್ ಸೀಸನ್ 11ರ ನಾಲ್ಕು ವಾರಗಳು ಕಂಪ್ಲೀಟ್ ಆಗಿದೆ. ಮೂವರು ಮನೆಯಿಂದ ಹೊರ ಬಂದಿದ್ದಾರೆ. ಮೊದಲ ವಾರವೇ ಯಮುನಾ ಶ್ರೀನಿಧಿ ಎಲಿಮಿನೇಟ್ ಆಗಿದ್ದರು. ಎರಡನೇ ವಾರ ದಸರಾ ಸಂಭ್ರಮದಲ್ಲಿ ಎಲಿಮಿನೇಷನ್ ಇರಲಿಲ್ಲ. ಮೂರನೇ ವಾರ ನಡುವೆಯೇ ಜಗದೀಶ್ ಹಾಗೂ ರಂಜಿತ್ ಮನೆಯಿಂದ ಹೊರಬರುವ ಶಿಕ್ಷೆ ಎದುರಿಸಿದ್ದರು.

Bigg Boss kannada 11 Manasa or bhavya Who will get evicted this week

ನಾಲ್ಕನೇ ವಾರ ಮೋಕ್ಷಿತಾ, ಭವ್ಯಾ, ಚೈತ್ರಾ, ಗೌತಮಿ, ಹಂಸಾ, ಮಂಜು, ಮಾನಸಾ, ಶಿಶಿರ್ ಹಾಗೂ ಗೋಲ್ಡ್‌ ಸುರೇಶ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ. ಸುದೀಪ್ ಬದಲು ಎಲಿಮಿನೇಷನ್ ಮಾಡಲು ಸೃಜನ್ ಲೋಕೇಶ್ ಮನೆ ಒಳಗೆ ಹೋಗಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ವೈರಲ್ ಆಗುತ್ತಿದೆ. ಮನೆ ಎಂಟ್ರಿ ಕೊಡುತ್ತಿದ್ದಂತೆ ಟಾಕಿಂಗ್ ಸ್ಟಾರ್ ಸ್ಪರ್ಧಿಗಳಿಗೆ ಸಿಹಿಯಾದ ಟಾಸ್ಕ್ ಕೊಟ್ಟಿದ್ದಾರೆ.

ಟಾಸ್ಕ್ ಬಳಿಕ ಎಲಿಮಿನೇಷನ್ ಆಗಿರುವುದು ಯಾರು ಎಂದು ಹೇಳಲು ಮುಂದಾಗಿದ್ದಾರೆ. ಮಾನಸಾ ಕಣ್ಣೀರು ಹಾಕಿದ್ದಾರೆ. ಮನೆ ಒಳಗೆ ಎರಡು ಕಾರುಗಳು ಬಂದಿದೆ. ಅದರಲ್ಲಿ ಒಬ್ಬರು ಹತ್ತಿ ಹೊರ ಬಂದಿರುವಂತೆ ತೋರಿಸಲಾಗಿದೆ. ಆದರೆ ಅದು ಯಾರು? ಎನ್ನುವುದು ಇನ್ನು ಖಚಿತವಾಗಲಿಲ್ಲ. ಕೆಲವರ ಪ್ರಕಾರ ಈ ವಾರ ಯಾವುದೇ ಎಲಿಮಿನೇಷನ್ ನಡೆದಿಲ್ಲ ಎನ್ನಲಾಗ್ತಿದೆ. ಅದಕ್ಕೆ ಕಾರಣವೂ ಇದೆ.

ಸಾಮಾನ್ಯವಾಗಿ ಬಿಗ್‌ಬಾಸ್‌ ಶೋನಲ್ಲಿ ವಾರಕ್ಕೆ ಒಬ್ಬರನ್ನು ಎಲಿಮಿನೇಟ್ ಮಾಡಲಾಗುತ್ತದೆ. ಕೆಲವೊಮ್ಮೆ ಇಬ್ಬರು ಹೊರ ಬಂದಿರುವ ಉದಾಹರಣೆ ಕೂಡ ಇದೆ. ಎಲಿಮಿನೇಟ್ ಆಗದೇ ಇರುವುದನ್ನು ನೋಡಿದ್ದೇವೆ. ಮೂರನೇ ವಾರ ಜಗದೀಶ್ ಹಾಗೂ ರಂಜಿತ್ ಇಬ್ಬರೂ ಹೊರಬಂದಿರುವುದರಿಂದ ಈ ವಾರವೂ ಯಾವುದೇ ಎಲಿಮಿನೇಷನ್ ನಡೆದಿಲ್ಲ ಎನ್ನಲಾಗ್ತಿದೆ. ಆದರೆ ರಾತ್ರಿ ಎಪಿಸೋಡ್ ನೋಡಿದ ಬಳಿಕ ಖಚಿತ ಮಾಹಿತಿ ಸಿಗಲಿದೆ.

ಶನಿವಾರದ ಎಪಿಸೋಡ್‌ನಲ್ಲಿ ನಿರ್ದೇಶಕ ಯೋಗರಾಜ್ ಭಟ್ ಮನೆಯೊಳಗೆ ಹೋಗಿ ಪಂಚಾಯ್ತಿ ನಡೆಸಿದ್ದರು. ಮಾನಸಾ ಸೇರಿದಂತೆ ಕೆಲವರಿಗೆ ನಗುನಗುತ್ತಾ ಕ್ಲಾಸ್ ತಗೊಂಡಿದ್ದರು. ವೀಕ್ಷಕರು ನಿಮ್ಮನ್ನು ನೋಡಿ ಗೊಂದಲಕ್ಕೀಡಾಗುತ್ತಿದ್ದಾರೆ. ನಾಟಕ ಬೇಡ ನೈಜವಾಗಿ ಆಟ ಆಡಿ ಎಂದು ಕಿವಿ ಮಾತು ಹೇಳಿದ್ದರು. ಎಲ್ಲರೂ ಭಟ್ರ ಮಾತುಗಳಿಗೆ ತಲೆದೂಗಿದ್ದರು. ಇನ್ನು ಮುಂದೆ ಇಂತಹ ತಪ್ಪು ಮಾಡಲ್ಲ ಎಂದು ಹೇಳಿದ್ದಾರೆ. ಮುಂದೆ ಉತ್ತಮವಾಗಿ ಆಡಿ ವೀಕ್ಷಕರ ಮನಗೆಲ್ಲುವ ಪಣ ತೊಟ್ಟಿದ್ದಾರೆ.

ನಟ ಸೃಜನ್ ಲೋಕೇಶ್‌ಗೆ ಬಿಗ್‌ಬಾಸ್ ಮನೆ ಹೊಸದಲ್ಲ. ಎರಡನೇ ಸೀಸನ್‌ಗೆ ಸ್ವತಃ ಸ್ಪರ್ಧಿಯಾಗಿ ಹೋಗಿದ್ದರು. ಫಸ್ಟ್ ರನ್ನರ್ ಅಪ್ ಎನಿಸಿಕೊಂಡಿದ್ದರು. ಇನ್ನು ಕಲರ್ಸ್ ಕನ್ನಡ ವಾಹಿನಿಯ ಕೆಲ ಶೋಗಳ ನಿರೂಪಕರಾಗಿ ತೀರ್ಪುಗಾರರಾಗಿ ಸೃಜನ್ ಗುರ್ತಿಸಿಕೊಂಡಿದ್ದಾರೆ. ಶೀಘ್ರದಲ್ಲೇ 'ಮಜಾಭಾರತ' ಹೊಸ ಸೀಸನ್ ಆರಂಭವಾಗುವ ನಿರೀಕ್ಷೆಯಿದೆ. ಅಭಿಮಾನಿಗು ಕೂಡ ಈ ಶೋ ಆರಂಭಿಸುವಂತೆ ಮನವಿ ಮಾಡುತ್ತಿದ್ದಾರೆ.

More from Filmibeat

English summary
BBK 11; Srujan Lokesh entered Bigg boss kannada house for elimination
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X