BBK 11: ಬಿಗ್ ಬಾಸ್ ಫಿನಾಲೆಗೆ ಹೋಗುವ ಒಬ್ಬರ ಹೆಸರು ಹೇಳಿದ ಸೃಜನ್ ಲೋಕೇಶ್!

By ಎಸ್ ಸುಮಂತ್

ಬಿಗ್ ಬಾಸ್ ಸೀಸನ್ 11 ಕನ್ನಡದಲ್ಲಿ ಸ್ಪರ್ಧಿಗಳು ಸದ್ಯಕ್ಕೆ ಆಟದ ಕಡೆಗೆ ಗಮನ ಕೊಟ್ಟಿದ್ದಾರೆ. ಬಿಗ್ ಬಾಸ್ ಅಂದ್ರೆ ಒಂದಷ್ಟು ನೆನಪು, ಒಂದಷ್ಟು ಗಳಿಕೆ, ಉಳಿಕೆ ಅನ್ನೋದು ಅವರ ತಲೆಯಲ್ಲಿ ಬರ್ತಾ ಇಲ್ಲ. ಹೀಗಾಗಿ ಬಿಗ್ ಬಾಸ್ ಅಂದ್ರೆ ಏನು..? ಅಲ್ಲಿ ಮಾಡಬೇಕಾದದ್ದು ಏನು ಎಂಬುದು ಮನೆಯೊಳಗಿರುವ ಯಾರಿಗೂ ಅರ್ಥವೇ ಆಗುತ್ತಿಲ್ಲ. ಬಿಗ್ ಬಾಸ್ ಅಂದ್ರೆ ಆಟ ಅಷ್ಟೇ ಆಡಬೇಕು. ಆದರೆ ಕೆಲವರು ನಾನು ಉಳಿಯಬೇಕು ಎನ್ನುವುದನ್ನು ಮಾತ್ರ ತಲೆಯಲ್ಲಿಟ್ಟುಕೊಂಡಿದ್ದಾರೆ.

ಬಿಗ್ ಬಾಸ್ ಹೊರಗೆ ನಿಂತು ನೋಡುವುದಕ್ಕೂ, ಒಳಗೆ ಬಂದು ಎಲ್ಲವನ್ನು ಫೀಲ್ ಮಾಡಿ ಆಡುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಏನೇ ಸ್ಟಾಟರ್ಜಿ ಮಾಡಿದ್ರು ಅದು ಬಿಗ್ ಬಾಸ್ ಪ್ಲ್ಯಾನ್ ಮುಂದೆ ವರ್ಕ್ ಆಗಲ್ಲ. ಈಗ ಎಲ್ಲರನ್ನು ಎಚ್ಚರಿಸೋದಕ್ಕೆ ಬಿಗ್ ಬಾಸ್ ಅನುಭವಿ ಆಟಗಾರರನ್ನು ಕಳುಹಿಸಿದೆ.

Bigg Boss kannada 11 No Contestant Eliminated On Forth week

ನಾಮಿನೇಷನ್‌ನಿಂದ ಪಾರಾಗಲು ಹೊಸ ಟಾಸ್ಕ್

ಈ ವಾರ ಸ್ಪೆಷಲ್ ಗೆಸ್ಟ್‌ಗಳು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಕಡೆಯದಾಗಿ ಸೃಜನ್ ಲೋಕೇಶ್ ಕೂಡ ಬಂದಿದ್ದರು. ತಮ್ಮದೇ ರೀತಿಯಲ್ಲಿ ನಕ್ಕು ನಲಿಸಿದರು. ಅಷ್ಟೇ ಅಲ್ಲ ನಾಮಿನೇಷನ್‌ನಲ್ಲಿದ್ದವರನ್ನು ಪಾರು ಮಾಡುವ ಟಾಸ್ಕ್‌ಗಳನ್ನು ಆಡಿಸಿದರು.

ಸೃಜನ್ ಮಾತಿಗೆ ಮನೆಯವರಿಗೂ ಕುತೂಹಲ

ಸೃಜನ್ ನೇತೃತ್ವದಲ್ಲಿ ಆಡಿಸಿದ ಆಟಗಳೇ ಹಾರ್ಟ್ ಬೀಟ್ ಜೋರು ಮಾಡುವಂತಿತ್ತು. ಎಲಿಮಿನೇಷನ್‌ನಿಂದ ಪಾರಾದವರು ಖುಷಿ ಪಟ್ರೆ ಪಾರಾಗದವರ ಆತಂಕ ಜಾಸ್ತಿಯಾಗ್ತಾ ಇತ್ತು. ಇದರ ಜೊತೆಗೆ ಸೃಜನ್ ಹೊಸದೊಂದು ಬಾಣ ಬಿಟ್ಟಿದ್ದರು. ಫಿನಾಲೆಯಲ್ಲಿ ಇರುವ ಒಬ್ಬರ ಹೆಸರನ್ನು ನಾನು ಹೋಗುವುದಕ್ಕೂ ಮುನ್ನವೇ ಸೂಚಿಸುತ್ತೀನಿ ಎಂದಿದ್ದರು. ಈ ಮಾತು ಮನೆಯವರಿಗೆಲ್ಲ ಮತ್ತಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಯಾರಿರಬಹುದು ಎಂದು ತಲೆ ಕೆಡಿಸಿಕೊಂಡಂತೆ ಆಗಿತ್ತು.

ಕುತೂಹಲ ತಡೆಯಲಾಗದೆ ಕೇಳಿದ ಮಾನಸ

ಫೈನಲಿ ಸೃಜನ್ ಲೋಕೇಶ್ ಹೋಗುವ ಸಮಯವೂ ಬಂದಿತ್ತು. ಹಂಸ ಹಾಗೂ ಮೋಕ್ಷಿತಾ ಅವರ ಎಲಿಮಿನೇಷನ್ ಪ್ರಕ್ರಿಯೆ ಇನ್ನು ಇರುವಾಗಲೇ ಸೃಜನ್ ಹೊರಟು ನಿಂತರು. ಎಲ್ಲರಿಗೂ ಮತ್ತಷ್ಟು ಕಿವಿ ಮಾತು ಹೇಳಿದರು. ಸೃಜನ್ ಬಂದ ಖುಷಿಗೆ‌ ಮನೆಯವರೆಲ್ಲ ಸೇರಿ 'ತೇರಾ ಏರಿ ಅಂಬರದಾಗೆ ನೇಸರ ನಗುತಾನೆ' ಎಂಬ ಹಾಡಿಗೆ ಹೊಸ ರೂಪ ಕೊಟ್ಟು ಸೃಜನ್ ಅವರಿಗಾಗಿ ಅರ್ಪಿಸಿದರು. ಇನ್ನೇನು ಸೃಜನ್ ಹೊರಡಬೇಕು ಎನ್ನುವಾಗ ಮಾನಸ ಆ ವಿಚಾರವನ್ನು ನೆನಪು ಮಾಡಿದರು. ಫಿನಾಲೆಗೆ ಬರುವ ವ್ಯಕ್ತಿ ಬಗ್ಗೆ ಹೇಳ್ತೀನಿ ಅಂದ್ರಿ ಎಂದಾಗ, ಸೃಜನ್ ಅವ್ರು ಬೇರೆ ಯಾರು ಅಲ್ಲ ಬಿಗ್ ಬಾಸ್ ಅಂತ ಯಾಮಾರಿಸಿ ಹೊರಟರು.

ಈ ವಾರ ನೋ ಎಲಿಮಿನೇಷನ್

ಈ ವಾರ ಕಮೆಂಟ್‌ಗಳನ್ನೆಲ್ಲಾ ನೋಡಿದಾಗ ಮಾನಸ ಹೊರಗೆ ಬರ್ತಾರೆ ಎನ್ನುವಂತಾಗಿತ್ತು . ಆದರೆ ಕೊನೆ ಗಳಿಗೆಯಲ್ಲಿ ಮಾನಸಾ ಸೇಫ್ ಆದರು. ಹಂಸ‌ ಮತ್ತು ಮೋಕ್ಷಿತಾ ನಡುವೆ ಪೈಪೋಟಿ ಇತ್ತು. ನೋಡುಗರಿಗೂ ಇದು ಶಾಕಿಂಗ್ ಎನಿಸಿತ್ತು. ಹೊರಗೆ ಬಂದರೆ ಹಂಸ ಬರಬಹುದು ಎಂದು ಕೊನೆ ಗಳಿಗೆಯಲ್ಲಿ ಗೆಸ್ ಮಾಡಲಾಗಿತ್ತು. ಆದರೆ ಈ ವಾರ ನೋ ಎಲಿಮಿನೇಷನ್ ಎನ್ನುವುದು ಗೊತ್ತಾಗಿದೆ. ಒಮ್ಮೊಮ್ಮೆ ಸ್ಪರ್ಧಿಗಳು ಸ್ಟ್ರಾಂಗ್ ಆಗದೇ ಇದ್ದಾಗ ಬಿಗ್ ಬಾಸ್ ಈ ರೀತಿ ಎಲಿಮಿನೇಷನ್ ಹಂತಕ್ಕೆ ತಂದು ಅರ್ಥ ಮಾಡಿಸುವುದು ಉಂಟು.

More from Filmibeat

English summary
Colors kannada bigboss Written Update on Bigboss season 11 October 27th episode. Here is the details about Srujan Lokesh just said about Bigg Boss finale;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X