BBK 11: ಈ ವಾರ ಎಲಿಮಿನೇಷನ್ ಇಲ್ವಾ? ಸೀಕ್ರೆಟ್ ರೂಮ್‌ಗೆ ಹೋಗಿದ್ಯಾರು ಗೊತ್ತಾ?

ಬಿಗ್‌ಬಾಸ್ ಕನ್ನಡ ಸೀಸನ್ 11 ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಈಗಾಗಲೇ 11ನೇ ವಾರದ ಅಂತ್ಯಕ್ಕೆ ಶೋ ಬಂದು ತಲುಪಿದೆ. ಗೆಲ್ಲುವ ಸ್ಪರ್ಧಿ ಎನಿಸಿಕೊಂಡಿದ್ದವರು ಎಲಿಮಿನೇಟ್ ಆಗಿ ಹೊರಗೆ ಬಂದಿದ್ದಾರೆ. ಈ ಮತ್ತೊಮ್ಮೆ ಕಿಚ್ಚನ ಪಂಚಾಯ್ತಿ ನಡೆದಿದೆ.

ಈ ವಾರ ದೊಡ್ಮನೆ ತೊರೆಯಲು ಭವ್ಯಾ, ಮೋಕ್ಷಿತಾ, ಚೈತ್ರಾ, ಗೋಲ್ಡ್ ಸುರೇಶ್, ಐಶ್ವರ್ಯಾ, ರಜತ್, ಮಂಜು ಹಾಗೂ ಗೌತಮಿ ನಾಮಿನೇಟ್ ಆಗಿದ್ದರು. ಶನಿವಾರದ ಎಪಿಸೋಡ್‌ನಲ್ಲಿ ರಜತ್ ಹಾಗೂ ಗೌತಮಿ ಸೇಫ್ ಆಗಿದ್ದಾರೆ. ಇನ್ನುಳಿದವರಲ್ಲಿ ಯಾರು ಈ ವಾರ ಬಿಗ್‌ಬಾಸ್ ಜರ್ನಿ ಮುಗಿಸುತ್ತಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿದೆ.

Bigg boss kannada 11 No Eviction in this week but Makers Plan This Major twist

ಈ ವಾರ ಎಲಿಮಿನೇಷನ್ ಇಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ಹಿಂದೆ ಕೂಡ ಕೆಲ ವೀಕೆಂಡ್‌ಗಳಲ್ಲಿ ಎಲಿಮಿನೇಷನ್ ಇರಲಿಲ್ಲ. ಅದೇ ರೀತಿ ವಾರದ ನಡುವೆ ಮನೆಯಿಂದ ಹೊರಬಂದವರು ಇದ್ದಾರೆ. ಈ ವಾರವೇ ಅಂಥದ್ದೇ ಒಂದು ಟ್ವಿಸ್ಟ್ ಸಿಗುತ್ತಿದೆ ಎಂದು ಹೇಳಲಾಗ್ತಿದೆ. ಎಲಿಮಿನೇಷನ್ ಬದಲು ಒಬ್ಬರು ಬಿಗ್‌ಬಾಸ್ ಮನೆಯ ಸೀಕ್ರೆಟ್ ರೂಮ್‌ಗೆ ಹೋಗ್ತಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ.

ಈವರೆಗೆ ಯಮುನಾ, ಹಂಸಾ, ಮಾನಸ, ಅನುಷಾ ಹಾಗೂ ಧರ್ಮ ಸೇರಿ ಬಿಗ್‌ಬಾಸ್ ಮನೆಯಿಂದ 5 ಜನ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಲಾಯರ್ ಜಗದೀಶ್ ಹಾಗೂ ರಜತ್ ಶಿಕ್ಷೆ ಅನುಭವಿಸಿ ಮನೆ ತೊರೆಯುವಂತಾಯಿತು. ಹನುಮಂತ, ರಜತ್, ಶೋಭಾ ಶೆಟ್ಟಿ ವೈಲ್ಡ್‌ ಕಾರ್ಡ್ ಎಂಟ್ರಿ ಪಡೆದಿದ್ದರು. ಅದರಲ್ಲಿ ಕಳೆದ ವಾರ ಶೋಭಾ ತಾವಾಗಿಯೇ ಮನೆಯಿಂದ ಹೊರ ಬಂದರು.

ಅಂದಹಾಗೆ ಈ ವೀಕೆಂಡ್ ಬಿಗ್‌ಬಾಸ್ ವೋಟಿಂಗ್ ಲೈನ್ ಓಪನ್ ಆಗಲಿಲ್ಲ. ಗುರುವಾರ ರಾತ್ರಿಯೇ ವೋಟಿಂಗ್ ಲೈನ್ಸ್ ತೆರೆಯಬೇಕಿತ್ತು. ಹಾಗಾಗಿ ಈ ವಾರ ಎಲಿಮಿನೇಷನ್ ಇರಲ್ಲ ಎನ್ನುವ ಅನುಮಾನ ಮೂಡಿತ್ತು. ಅದೇ ನಿಜವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಚೈತ್ರಾ ಕುಂದಾಪುರ ಬಿಗ್‌ಬಾಸ್ ಮನೆಯ ಸೀಕ್ರೆಟ್ ರೂಮ್‌ಗೆ ಹೋಗಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.

ವಿವಾದಗಳಿಂದ ಸುದ್ದಿಯಾಗಿ ಜನಪ್ರಿಯತೆ ಗಳಿಸಿದವರು ಚೈತ್ರಾ ಕುಂದಾಪುರ. ವಂಚನೆ ಆರೋಪ ಪ್ರಕರಣದಲ್ಲಿ ಆಕೆಯ ಬಂಧನವಾಗಿ ಜೈಲು ಶಿಕ್ಷೆ ಸಹ ಎದುರಿಸಿದ್ದರು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. ಇದೇ ಪ್ರಕರಣ ಸಂಬಂಧ ಚೈತ್ರಾ ಇತ್ತೀಚೆಗೆ ಕೋರ್ಟ್ ವಿಚಾರಣೆಗೂ ಹಾಜರಾಗಿದ್ದರು. ಬಿಗ್‌ಬಾಸ್ ಮನೆಯಿಂದ ನೇರವಾಗಿ ಕೋರ್ಟ್‌ಗೆ ತೆರಳಿ ವಿಚಾರಣೆ ಮುಗಿಸಿ ಮತ್ತೆ ಮನೆ ಒಳಗೆ ಹೋಗಿದ್ದರು.

ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ರೂ. ಹಣ ಪಡೆದು ವಂಚನೆ ಮಾಡಿದ್ದ ಪ್ರಕರಣದಲ್ಲಿ ಚೈತ್ರಾ ಹೆಸರು ಕೇಳಿಬಂದಿತ್ತು. ಇನ್ನು ವೀಕೆಂಡ್ ಪಂಚಾಯ್ತಿಯಲ್ಲಿ ಊಹಿಸಿದಂತೆಯೇ ಮೋಕ್ಷಿತಾ ಹಾಗೂ ತ್ರಿವಿಕ್ರಮ್‌ಗೆ ಸುದೀಪ್ ಕ್ಲಾಸ್ ತಗೊಂಡಿದ್ದಾರೆ.

ಈ ವಾರ ಬಿಗ್‌ಬಾಸ್ ಮನೆಯಲ್ಲಿ ರಜತ್ ಕಿಶನ್‌ಗೆ ಉತ್ತಮ ಹಾಗೂ ಚೈತ್ರಾ ಕುಂದಾಪುರಗೆ ಕಳಪೆ ಪಟ್ಟ ಸಿಕ್ಕಿದೆ. ಬಿಗ್‌ಬಾಸ್ 11ನೇ ಸೀಸನ್ 12ನೇ ವಾರಕ್ಕೆ ಕಾಲಿಡುತ್ತಿದೆ. ಆದರೆ ಮನೆಯೊಳಗೆ ಸ್ಪರ್ಧಿಗಳ ಸಂಖ್ಯೆ ಜಾಸ್ತಿಯಿದೆ. ಈ ವಾರ ಕೂಡ ಎಲಿಮಿನೇಷನ್ ನಡೆದಿಲ್ಲ. ಹಾಗಾದರೆ ಮುಂದೆ ಆಟ ಹೇಗಿರುತ್ತದೆ. ಎಷ್ಟು ಜನರಿಗೆ ಫಿನಾಲೆಗೆ ಹೋಗುವ ಅವಕಾಶ ಸಿಗುತ್ತದೆ ಎನ್ನುವ ಕುತೂಹಲ ಮೂಡಿದೆ.

ಈ ವಾರದ ಮಧ್ಯೆ ಎಲಿಮಿನೇಷನ್ ನಡೆದರೂ ಅಚ್ಚರಿಪಡಬೇಕಿಲ್ಲ. ಬಿಗ್‌ಬಾಸ್‌ನಲ್ಲಿ ಆಗಿಂದಾಗ್ಗೆ ಅಂತಹ ಟ್ವಿಸ್ಟ್ ಸಿಗುತ್ತದೆ. ಇನ್ನು ಚೈತ್ರಾ ಕುಂದಾಪುರ ಸೀಕ್ರೆಟ್ ರೂಮ್‌ಗೆ ಹೋಗಿದ್ದು ನಿಜಾನಾ? ಎಷ್ಟು ದಿನ ಅಲ್ಲೇ ಇರುತ್ತಾರೆ? ಎನ್ನುವ ಲೆಕ್ಕಾಚಾರ ಕೂಡ ನಡೀತಿದೆ.

More from Filmibeat

English summary
BBK 11; This contestant to enter Bigg Boss secret room
Read more about: bigg boss kannada 11 bigg boss tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X