BBK 11; ಚೈತ್ರಾ ಕುಂದಾಪುರ ಬಿಗ್ ಬಾಸ್ ಜರ್ನಿ ಮುಗೀತಾ? ಈ ವಾರ ಎಲಿಮಿನೇಟ್?

ಮತ್ತೊಂದು ವೀಕೆಂಡ್ ಬಂದಿದೆ. ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಮತ್ತೊಂದು ಎಲಿಮಿನೇಷನ್ ಆಗಿದೆ. 9 ಜನ ಸ್ಪರ್ಧಿಗಳಲ್ಲಿ ಈಗಾಗಲೇ ಹನುಮಂತ ಫಿನಾಲೆ ಟಿಕೆಟ್ ಪಡೆದಿದ್ದಾರೆ. ಇನ್ನುಳಿದ 8 ಜನರಲ್ಲಿ ಇವತ್ತು(ಜನವರಿ 12) ಬಿಗ್‌ಬಾಸ್ ಜರ್ನಿ ಮುಗಿಸಿದ್ದಾರೆ.

ಫಿನಾಲೆಗೆ ಇನ್ನೊಂದು ವಾರ ಬಾಕಿಯಿದೆ. ಆದರೂ ಮನೆಯೊಳಗೆ 9 ಜನ ಇದ್ದಾರೆ. ವೀಕೆಂಡ್ ಡಬಲ್ ಎಲಿಮಿನೇಷನ್ ಇರುತ್ತದೆ ಎನ್ನುವುದು ಬಹಳ ಜನರ ನಿರೀಕ್ಷೆ ಆಗಿತ್ತು. ಆದರೆ ಅದು ಸುಳ್ಳಾಗಿದೆ ಎಂದು ಹೇಳಲಾಗುತ್ತಿದೆ. ಒಬ್ಬರು ಮಾತ್ರ ಸೂಪರ್ ಸಂಡೇ ವಿತ್ ಸುದೀಪ್ ಎಪಿಸೋಡ್‌ ವೇಳೆ ಹೊರಕ್ಕೆ ಬಂದಿದ್ದಾರೆ.

Bigg Boss kannada 11 Not Two one Contestant Eliminated this weekend

ಈಗಾಗಲೇ ಭಾನುವಾರ ಎಪಿಸೋಡ್ ಚಿತ್ರೀಕರಣ ಮುಕ್ತಾಯವಾಗಿದೆ. ಯಾರು ಈ ವಾರ ಎಲಿಮಿನೇಟ್ ಆಗಿದ್ದಾರೆ ಎನ್ನುವುದು ಗೊತ್ತಾಗಿದೆ. ಈ ಸ್ಪರ್ಧಿ ಎಲಿಮಿನೇಟ್ ಆಗಬೇಕು ಎಂದು ಮೊದಲ ವಾರದಿಂದಲೂ ಕೆಲ ವೀಕ್ಷಕರು ಬಯಸಿದ್ದರು. ಇಷ್ಟು ದಿನವಾದರೂ ಇವರು ಹೇಗೆ ಮನೆಯೊಳಗೆ ಉಳಿದುಕೊಂಡಿದ್ದಾರೆ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದರು. ಚೈತ್ರಾ ಕುಂದಾಪುರ ಬಿಗ್‌ಬಾಸ್ ಜರ್ನಿ ಅಂತ್ಯವಾಗಿದೆ ಎನ್ನಲಾಗ್ತಿದೆ.

ಒಂದ್ಕಾಲದಲ್ಲಿ ತಮ್ಮ ಮಾತುಗಾರಿಕೆಯಿಂದ ಕರಾವಳಿ ಭಾಗದಲ್ಲಿ ಬಹಳ ಜನಪ್ರಿಯತೆ ಗಳಿಸಿದವರು ಚೈತ್ರಾ ಕುಂದಾಪುರ. ಸುದ್ದಿ ವಾಹಿನಿಗಳಲ್ಲಿ ಕೂಡ ಕೆಲಸ ಮಾಡಿದ್ದರು. ಹಿಂದೂ ಫೈರ್‌ ಬ್ರ್ಯಾಂಡ್ ಎಂದೇ ಖ್ಯಾತರಾಗಿದ್ದು. ಬಳಿಕ ಗಂಭೀರ ಪ್ರಕರಣದಲ್ಲಿ ಜೈಲು ಸೇರಿದ್ದರು. ಬಿಗ್‌ಬಾಸ್ ಮನೆಯೊಳಗೆ ಇದ್ದಾಗಲೇ ಹೊರಬಂದು ಆ ಪ್ರಕರಣದ ವಿಚಾರಣೆ ಎದುರಿಸಿದ್ದರು. ಬಳಿಕ ಮತ್ತೆ ಮನೆಯೊಳಗೆ ಹೋಗಿದ್ದರು.

ಈ ವಾರ ಎಲಿಮಿನೇಟ್ ಆಗಲು 5 ಜನ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಭವ್ಯ ಗೌಡ, ಧನರಾಜ್, ಮೋಕ್ಷಿತಾ, ತ್ರಿವಿಕ್ರಮ್, ಚೈತ್ರಾ ಕುಂದಾಪುರ ಆ ಲಿಸ್ಟ್‌ನಲ್ಲಿ ಇದ್ದರು. ಚೈತ್ರಾ ಅವರಿಗೆ ಹೆಚ್ಚು ವೋಟ್ ಬೀಳುತ್ತಿಲ್ಲ ಆದರೂ ಹೇಗೆ ಸೇಫ್ ಆಗುತ್ತಿದ್ದಾರೆ ಎಂದು ಕೆಲವರು ಭಾವಿಸಿದ್ದರು. ಐವರಲ್ಲಿ ಚೈತ್ರಾ, ಮೋಕ್ಷಿತಾ, ಧನರಾಜ್ ಕೊನೆಗೆ ಉಳಿದಿದ್ದರು. ಅದಲ್ಲಿ ಮೋಕ್ಷಿತಾ ಸೇಫ್ ಆಗಿ ಧನರಾಜ್ ಹಾಗೂ ಚೈತ್ರಾ ಕೊನೆಗೆ ಬಂದಿದ್ದರು. ಆದರೆ ಅಂತಿಮವಾಗಿ ಚೈತ್ರಾ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಚೈತ್ರಾ ಕುಂದಾಪುರ ತಮ್ಮ 105 ದಿನಗಳ ಬಿಗ್‌ಬಾಸ್ ಜರ್ನಿ ಅಂತ್ಯಗೊಳಿಸಿದ್ದಾರೆ ಎನ್ನಲಾಗ್ತಿದೆ. ಮೊದಲಿನಿಂದಲೂ ಕೆಲ ವೀಕ್ಷಕರು ಚೈತ್ರಾ ಎಲಿಮಿನೇಟ್ ಆಗಬೇಕು ಎಂದು ಬಯಸಿದ್ದರು. ಇಷ್ಟು ದಿನವಾದರೂ ಆಕೆ ಹೇಗೆ ಮನೆಯೊಳಗೆ ಉಳಿದುಕೊಂಡಿದ್ದಾರೆ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದರು.

Bigg Boss kannada 11 Not Two one Contestant Eliminated this weekend

ಚೈತ್ರಾ ಕುಂದಾಪುರ ಬಿಗ್‌ಬಾಸ್‌ ಮನೆಯೊಳಗೆ ಹೋಗಿದ್ದು ಅಚ್ಚರಿ ಎನಿಸಿತ್ತು. ಗಂಭೀರ ಪ್ರಕರಣದಲ್ಲಿ ಸಿಲುಕಿರುವವರನ್ನು ಶೋಗೆ ಆಯ್ಕೆ ಮಾಡಿದ್ದು ಸರಿಯಲ್ಲ ಎನ್ನುವ ಚರ್ಚೆ ಕೂಡ ನಡೆದಿತ್ತು. ಇನ್ನು ಚೈತ್ರಾ ತಮ್ಮ ಜೋರು ಮಾತಿನಿಂದ ಶೋನಲ್ಲಿ ಭಾರೀ ಆರ್ಭಟ ನಡೆಸುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಅಷ್ಟರಮಟ್ಟಿಗೆ ನಿಜವಾಗಲಿಲ್ಲ.

ಆರಂಭದ ಎರಡು ವಾರ ಲಾಯರ್ ಜಗದೀಶ್ ಆರ್ಭಟದ ಮುಂದೆ ಚೈತ್ರಾ ಡಲ್ಲಾಗಿಬಿಟ್ಟರು. ಬಳಿಕ ಅದೇ ಮುಂದುವರೆಯಿತು. ಆಗೊಮ್ಮೆ ಈಗೊಮ್ಮೆ ಅಬ್ಬರಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಸೈಲೆಂಟ್ ಆಗಿಬಿಟ್ಟರು. ಮಂಜು, ತ್ರಿವಿಕ್ರಮ್ ಎದುರು ಕೂಡ ಚೈತ್ರಾ ಮಾತು ನಡೆಯಲಿಲ್ಲ. ರಜತ್ ಬಂದಮೇಲೆ ಮುಗಿದೇ ಹೋಯ್ತು. ಸೋಶಿಯಲ್ ಮೀಡಿಯಾದಲ್ಲಿ ಚೈತ್ರಾ ಬಹಳ ಟ್ರೋಲ್ ಎದುರಿಸಿದ್ದರು.

ಕೆಲ ವೀಕ್ಷಕರು ಬೇಗ ಚೈತ್ರಾ ಅವರನ್ನು ಮನೆಯಿಂದ ಹೊರಗೆ ಕಳುಹಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದರು. ಶೋ ನಡುವೆಯೇ ಚೈತ್ರಾ ಮನೆಯಿಂದ ಹೊರಬಂದು ಕೋರ್ಟ್ ವಿಚಾರಣೆ ಎದುರಿಸಿ ಮತ್ತೆ ಒಳಗೆ ಹೋಗಿದ್ದು ಭಾರೀ ಸುದ್ದಿ ಆಗಿತ್ತು.

ಈ ಬಾರಿ ಬಿಗ್‌ಬಾಸ್ ಶೋ 105ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಇನ್ನು ಮನೆಯೊಳಗೆ 8 ಜನ ಸ್ಪರ್ಧಿಗಳಿದ್ದಾರೆ. ಜನವರಿ 26ರಂದು ಗ್ರ್ಯಾಂಡ್ ಫಿನಾಲೆ ನಡೆಯುವ ಸಾಧ್ಯತೆಯಿದೆ. ಅಷ್ಟರಲ್ಲಿ ಇಬ್ಬರು ಅಥವಾ ಮೂವರು ಮನೆಯಿಂದ ಹೊರಬರಲಿದ್ದಾರೆ. ಈ ವಾರದ ನಡುವೆ ಮತ್ತೊಂದು ಎಲಿಮಿನೇಷನ್ ನಡೆಯುವ ಸಾಧ್ಯತೆಯಿದೆ.

ಈ ಬಾರಿ ಯಾರು ಬಿಗ್‌ಬಾಸ್ ಟ್ರೋಫಿ ಗೆಲ್ಲುತ್ತಾರೆ ಎನ್ನುವ ಬಗ್ಗೆ ಬಹಳ ಕುತೂಹಲವಿದೆ. ಯಾರು ಗೆಲ್ಲುತ್ತಾರೆ ಎಂದು ಊಹಿಸುವುದೇ ಕಷ್ಟವಾಗುತ್ತಿದೆ. ಹನುಮಂತಗೆ ಫಿನಾಲೆ ಟಿಕೆಟ್ ಸಿಕ್ಕಿದೆ. ಆದರೂ ಅಷ್ಟು ಸುಲಭವಾಗಿ ಗೆಲ್ತಾರಾ ಎನ್ನುವ ಚರ್ಚೆ ಕೂಡ ನಡೀತಿದೆ.

More from Filmibeat

English summary
BBK 11; Do you know who finished the Bigg Boss journey this week?
Read more about: bigg boss bigg boss kannada 11 tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X