BBK 11: ರಜತ್ ಜೊತೆ ಕಿರಿಕ್, ಬಿಗ್‌ಬಾಸ್ ಮನೆಯಿಂದ ಹೊರಬಂದ್ರಾ ಸುರೇಶ್?

ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಕಿರಿಕ್, ವಾಗ್ವಾದ, ಗಲಾಟೆ ಹೊಸದೇನು ಅಲ್ಲ. ಅದರಲ್ಲೂ ಟಾಸ್ಕ್‌ಗಳ ವೇಳೆ ಮಾರಾಮಾರಿ ನಡೆದಿರುವ ಉದಾಹರಣೆಗಳಿವೆ. ಇನ್ನು ಕಿರಿಕ್ ವೇಳೆ ಅವಾಚ್ಯ ಪದಗಳಿಂದ ನಿಂದಿಸುವಂತಹ ಸನ್ನಿವೇಶಗಳ ಎದುರಾಗುತ್ತವೆ. ಇದು ಮತ್ತಷ್ಟು ತಿಕ್ಕಾಟಕ್ಕೆ ಕಾರಣವಾಗುತ್ತದೆ.

ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಕೆಟ್ಟ ಪದಗಳನ್ನು ಬಳಸಿದ ಕಾರಣಕ್ಕೆ ಲಾಯರ್ ಜಗದೀಶ್ ಶಿಕ್ಷೆ ಅನುಭವಿಸಿ ಮನೆಯಿಂದ ಹೊರಬಿದ್ದರು. ಜೊತೆಗೆ ರಂಜಿತ್ ಕೂಡ ಹೊರ ಬರುವಂತಾಗಿತ್ತು. ಹಲ್ಲೆ ಯತ್ನ ಆರೋಪದಡಿ ಅವರಿಗೂ ಶಿಕ್ಷೆ ಎದುರಾಗಿತ್ತು. ಇದೀಗ ಬಿಗ್‌ಬಾಸ್ ಮನೆಗೆ ಮತ್ತಿಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ರಜತ್ ಜೊತೆಗೆ ಶೋಭಾ ಶೆಟ್ಟಿ ಹೊಸದಾಗಿ ಮನೆ ಸೇರಿದ್ದಾರೆ.

Bigg Boss kannada 11 Rajath and gold Suresh ugly fight over task

ರಜತ್ ಬುಜ್ಜಿ ಈ ಹಿಂದೆ ಕೂಡ ಕೆಲ ರಿಯಾಲಿಟಿ ಶೋಗಳಲ್ಲಿ ಭಾಗಿ ಆಗಿದ್ದರು. ವೈಲ್ಡ್ ಕಾರ್ಡ್ ಎಂಟ್ರಿ ವೇಳೆ ವೇದಿಕೆಯಲ್ಲೇ ಖಡಕ್ ಡೈಲಾಗ್‌ಗಳನ್ನು ಹೊಡೆದಿದ್ದರು. ಇನ್ನು ಮನೆ ಪ್ರವೇಶಿಸಿದ ಬಳಿಕ ರಜತ್ ಹಾಗೂ ಶೋಭಾ ಇಬ್ಬರೂ ಮನೆಯ ಸ್ಪರ್ಧಿಗಳಿಗೆ ತಮ್ಮ ಮಾತಿನ ಏಟು ಕೊಟ್ಟಿದ್ದರು. ಇದೀಗ ಟಾಸ್ಕ್ ವೇಳೆ ಗೋಲ್ಡ್ ಮಂಜು ಮೇಲೆ ರಜತ್ ತಿರುಗಿ ಬಿದ್ದಿದ್ದಾವೆ. ಈ ವೇಳೆ ರಜತ್ ಆಡಿದ ಒಂದು ಮಾಡು ಸುರೇಶ್ ಬೇಸರಕ್ಕೆ ಕಾರಣವಾಗಿದೆ.

ಹೊಸ ಪ್ರೋಮೊದಲ್ಲಿ ಗೋಲ್ಡ್ ಸುರೇಶ್ ಹಾಗು ರಜತ್ ಮಾತಿನ ಚಕಮಕಿ ಬಗ್ಗೆ ಸುಳಿವು ಸಿಕ್ಕಿದೆ. ರಜತ್ ಮಾತಿಗೆ ಬೇಸರಗೊಂಡ ಸುರೇಶ್ ಬಿಗ್‌ಬಾಸ್ ಕ್ಯಾಮರಾ ಮುಂದೆ ಕಿರುಚಾಡಿದ್ದಾರೆ. ಅವನು ಯಾರು ಆ ರೀತಿ ಹೇಳುವುದಕ್ಕೆ, ಬಾಗಿಲು ತೆಗೆಯಿರಿ. ನಾನು ಆಟ ಆಡಲ್ಲ. ಮನೆಯಿಂದ ಹೊರ ಬರುತ್ತೀನಿ ಬಿಗ್‌ಬಾಸ್‌ಗೆ ಮನವಿ ಮಾಡಿರುವುದನ್ನು ನೋಡಬಹುದು.

ಕೊಳವೆ ಮೂಲಕ ಬರುವ ಚೆಂಡುಗಳನ್ನು ಸಂಗ್ರಹಿಸಿ ಒಂದು ಕಡೆ ಇಡುವ ಟಾಸ್ಕ್‌ ಅನ್ನು ಸ್ಪರ್ಧಿಗಳಿಗೆ ನೀಡಲಾಗಿದೆ. ಬಹಳ ರೋಚಕವಾಗಿ ಸಾಗಿದ ಟಾಸ್ಕ್‌ನಲ್ಲಿ ಸ್ಪರ್ಧಿಗಳ ನಡುವೆ ಕಿರಿಕ್ ಆಗಿದೆ. ಮುಖ್ಯವಾಗಿ ಸುರೇಶ್ ಹಾಗೂ ರಜತ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ವೇಸ್ಟ್‌ ನನ್ಮಗನೇ ಎಂದು ಸುರೇಶ್ ಬಗ್ಗೆ ರಜತ್ ಕೂಗಾಡಿದ್ದಾರೆ. ಇದು ಸುರೇಶ್ ಆಕ್ರೋಶಕ್ಕೆ ಕಾರಣವಾಗಿದೆ.

'ಮಗನೆ, ಗಿಗನೆ' ಅಂತಾರೆ. ಇವನು ನನ್ನ ಅಪ್ಪ ಅಲ್ಲ ಎಂದು ಬಿಗ್‌ಬಾಸ್‌ಗೆ ಸುರೇಶ್ ಹೇಳಿದ್ದಾರೆ. ನಾನು ಆಟ ಆಡಲ್ಲ, ಡೋರ್ ತೆಗೆಯಿರಿ ಹೊರ ಬರುತ್ತೇನೆ ಎಂದು ಸುರೇಶ್ ಬಾಗಿಲು ಬಡಿದಿರುವುದನ್ನು ನೋಡಬಹುದು. ಈಗಾಗಲೇ ಬಿಗ್‌ಬಾಸ್ ಕನ್ನಡ ಸೀಸನ್ 11 ಒಟ್ಟು 50 ದಿನ ಪೂರೈಸಿ ಮುಂದೆ ಸಾಗುತ್ತಿದೆ. ಕಳೆದ ವಾರ ಅನುಷಾ ರೈ ಎಲಿಮಿನೇಟ್ ಆಗಿದ್ದರು. ಅದಕ್ಕೂ ಮುನ್ನ ಯಮುನಾ, ಹಂಸಾ, ಮಾನಸ ದೊಡ್ಮನೆ ಆಟ ಮುಗಿಸಿದ್ದರು.

ಜಗದೀಶ್, ರಂಜಿತ್ ಶಿಕ್ಷೆ ಅನುಭವಿಸಿ ಮನೆಯಿಂದ ಹೊರ ಬಂದಮೇಲೆ ಗಾಯಕ ಹನುಮಂತ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಒಳಗೆ ಹೋಗಿ ಗಮನ ಸೆಳೆದಿದ್ದಾರೆ. ಇದೀಗ ರಜತ್ ಹಾಗೂ ಶೋಭಾ ಕೂಡ ಜೊತೆಯಾಗಿದ್ದಾರೆ. ಕಳೆದ ವಾರ 10 ಜನ ಬಿಗ್‌ಬಾಸ್ ಮನೆಯಿಂದ ಹೊರಬರಲು ನಾಮಿನೇಟ್ ಆಗಿದ್ದರು. ಅದರಲ್ಲಿ ಅನುಷಾ ಜರ್ನಿ ಮುಕ್ತಾಯವಾಗಿತ್ತು.

More from Filmibeat

English summary
BBK 11: Gold Suresh upset with rajith on his bad words, he knock bigg boss house door;
Read more about: bigg boss bigg boss kannada 11 tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X