BBK 11: ಕ್ಲೀನ್ ಮಾಡ್ತೀನಿ ಎಂದ ತ್ರಿವಿಕ್ರಂ, ಹಣ್ಣುಗಾಯಿ ಮಾಡ್ತೀನಿ ಎಂದ ರಜತ್ ; ರಿವೇಂಜ್ ಹೇಗಿರುತ್ತೆ?

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಅಧಿಕಾರದ ಟಾಸ್ಕ್ ಬಂದಾಗೆಲ್ಲಾ ಎದುರಾಳಿಗಳು ಅದರಲ್ಲೂ ಮಂಜು ಟೀಂ ಕಣ್ಣೀರಾಕಿಸುವುದರಲ್ಲಿ ಎಕ್ಸ್ ಪರ್ಟ್. ರಾಜರ ಆಳ್ವಿಕೆಯ ಕಾನ್ಸೆಪ್ಟ್ ಕೊಟ್ಟಾಗಲೂ ಮಂಜು ನಡೆ ಒಂದಷ್ಟು ಮನೆ ಮಂದಿಗೆ ಬೇಸರ ತರಿಸಿತ್ತು. ಇದೀಗ ರೆಸಾರ್ಟ್‌ನಲ್ಲೂ ಅದೇ ರೀತಿ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಕಣ್ಣೀರು ಹಾಕಿಸಿದ್ದಾರೆ.

ಆಟ ಆಡುವುದರಲ್ಲೂ, ಅಧಿಕಾರ ಚಲಾಯಿಸಬೇಕು ಎಂದಾಗಲೂ ಮಂಜು ಅತಿಯಾಗಿ ಮಾಡುತ್ತಾರೆ. ಅಧಿಕಾರ ನಮಗೆ ಸಿಕ್ಕಿದೆ ಎಂಬ ಫೀಲ್ ನಲ್ಲಿರುತ್ತಾರೆ ವಿನಃ ಎದುರಿದ್ದವರಿಗೆ ಅದರಿಂದ ನೋವಾಗ್ತಾ ಇದೆಯಾ ಎಂಬುದನ್ನು ಯೋಚಿಸುವುದಕ್ಕೂ ಹೋಗುವುದಿಲ್ಲ.

Bigg Boss kannada 11 Rajath and Trivikram challenged Manju in resort task

ಮಂಜು ಜೊತೆಗೆ ಈಗ ಚೈತ್ರಾ ಕೂಡ ಸೇರಿಕೊಂಡಿದ್ದಾರೆ. ಅವರ ನಡೆಗೆ ಮನೆಯ ಕ್ಯಾಪ್ಟನ್ ಆದಂತ ಭವ್ಯಾ ಗೌಡ ಅವರೇ ಇಂದು ಕಣ್ಣೀರಾಕುತ್ತಾ ಕೂತಿದ್ದಾರೆ.

ಬಿಗ್ ಬಾಸ್ ಮನೆ ಈಗ ರೆಸಾರ್ಟ್

ಬಿಗ್ ಬಾಸ್ ಆಗಾಗ ಒಂದೊಂದು ವಿಶೇಷ ರೀತಿಯಲ್ಲಿ ಬದಲಾಗುತ್ತದೆ. ಹಳ್ಳಿ ಮನೆಯಾಗಿ, ರಾಜಕೀಯ ಪಡಸಾಲೆಯಾಗಿ ಬದಲಾಗುತ್ತದೆ. ಇದೀಗ ರೆಸಾರ್ಟ್ ಆಗಿ ಪರಿವರ್ತನೆ ಮಾಡಿದ್ದು, ಬಿಗ್ ಬಾಸ್ ಸ್ಪರ್ಧಿಗಳನ್ನೆ ಎರಡು ಭಾಗವಾಗಿ ಮಾಡಿದೆ. ಒಂದು ಟೀಂ ಸಿಬ್ಬಂದಿಗಳು ಇನ್ನೊಂದು ಟೀಂ ಅತಿಥಿಗಳು. ಈಗ ಅತಿಥಿಗಳಾಗಿ ಮಂಜು ಮತ್ತು ಚೈತ್ರಾ ಟೀಂ ಇದೆ. ಕ್ಯಾಪ್ಟನ್ ಆಗಿರುವ ಭವ್ಯಾ ಟೀಂ ಸಿಬ್ಬಂದಿಯಾಗಿದ್ದಾರೆ.

ಕಣ್ಣೀರು ಹಾಕಿದ ಹೆಣ್ಣು ಮಕ್ಕಳು

ಮಂಜು ಮಹಾರಾಜ ಆಗಿದ್ದಾಗಲೂ ಸೇವೆಯನ್ನ ಚೆನ್ನಾಗಿಯೇ ಮಾಡಿಸಿಕೊಂಡಿದ್ದಾರೆ. ಈಗ ಅವರ ಜೊತೆಗೆ ಚೈತ್ರ ಬೇರೆ ಸೇರಿಕೊಂಡು ಆಟ ಶುರು ಮಾಡಿದ್ದಾರೆ. ಮನೆ ಮಂದಿಗೆಲ್ಲಾ ಅದು ಬೇಕು ಇದು ಬೇಕು ಅಂತ ಹಿಂಸೆ ಕೊಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಲೈಟ್ಸ್ ಆಫ್ ಆದ ಮೇಲೆ ಮಲಗಬೇಕು. ಅದು ಸ್ಪರ್ಧಿಗಳಿಗೆ ಬಿಟ್ಟದ್ದು. ಆದರೆ ಲೈಟ್ಸ್ ಆಫ್ ಆದ ಮೇಲೂ ಸೇವೆ ಮಾಡಿಸಿಕೊಳ್ಳುವ ಪ್ಲ್ಯಾನ್ ಮಾಡಿದ್ದಾರೆ. ಐಶ್ವರ್ಯಾ ಬಂದು ನನ್ನ ತಲೆ ಒತ್ತಬೇಕು ಎಂದು ಚೈತ್ರಾ ಅರ್ಡರ್ ಮಾಡಿದರೆ, ಮ್ಯೂಸಿಕಲ್ ನೈಟ್ ಬೇಕು ಎಂದು ಮಂಜು ಹಠ ಮಾಡಿದ್ದಾರೆ.

ತ್ರಿವಿಕ್ರಂ ಮೇಲೆ ಮಂಜು ಗರಂ

ಎಲಿಮಿನೇಟ್ ಆಗಿದ್ದ ತ್ರಿವಿಕ್ರಂ ಮತ್ತೆ ಮನೆಗೆ ಬಂದಿದ್ದಾರೆ. ಬದಲಾಗುವ ನಿರೀಕ್ಷೆ ಇದೆ. ಹಾಗಂತ ತ್ರಿವಿಕ್ರಂ ಬೇಜಾನ್ ಎಗರಾಡುವುದಕ್ಕೆ ಹೋಗುತ್ತಿಲ್ಲ. ಸೈಲೆಂಟ್ ಆಗಿಯೇ ಉತ್ತರ ಕೊಡುತ್ತಿದ್ದಾರೆ. ರಾತ್ರಿ ಕ್ಲೀನ್ ಮಾಡಬೇಕು ಎಂಬ ಮಾತು ಬಂದಾಗ 'ಆಯ್ತು ಮಾಡೋಣಾ. ಕ್ಲೀನ್ ಮಾಡುವ ಸಮಯ ಬಂದಿದೆ' ಎಂದಿದ್ದಾರೆ. ಅದಕ್ಕೆ ಮಂಜು ಟಾಂಗ್ ನೀಡಿದ್ದು, ನನ್ನನ್ನೇ ಮನೆಗೆ ಕಳಿಸ್ತೀನಿ ಅಂತ ಹೇಳು ಅಂತ ಜೋರು ಮಾಡಿದ್ದಾರೆ.

ರಿವೇಂಜ್ ಹೇಗಿರಬಹುದು?

ಬಿಗ್ ಬಾಸ್‌ನಲ್ಲಿ ಯಾವುದೇ ಟಾಸ್ಕ್ ನೀಡಿದರು, ಒಮ್ಮೆ ಒಂದು ಟೀಂಗೆ ಸಿಕ್ಕರೆ ಮತ್ತೊಂದು ಸಲ ಮತ್ತೊಂದು ಟೀಂಗೆ ಸಿಗುತ್ತೆ. ಆದರೆ ಶಕ್ತಿವಂತರಾದರೆ ಎದುರಾಳಿ ತಂಡದಿಂದ ಸೇವೆ ಮಾಡಿಸಿಕೊಳ್ಳುತ್ತಾರೆ. ಈಗ ಮಂಜು ಟೀಂಗೆ ರಜತ್ ಅಲಿಯಾಸ್ ಬುಜ್ಜಿ ಸವಾಲು ಹಾಕಿದ್ದಾರೆ. 'ನಮಗೂ ಬರುತ್ತಲ್ವಾ ಆಗ ಹಣ್ಣುಗಾಯಿ ನೀರುಗಾಯಿ ಮಾಡದೆ ಇದ್ದರೆ ನನ್ನ ಹೆಸರು ಬುಜ್ಜಿ ಅಲ್ಲ' ಎಂದು ಸವಾಲು ಹಾಕಿದ್ದಾರೆ. ರಿವೇಂಜ್ ಯಾವ ರೀತಿ ಇರಬಹುದು ಎಂಬ ಕುತೂಹಲ ವೀಕ್ಷಕರಿಗೆ ಇದೆ.

More from Filmibeat

English summary
BBK 11; Here is the details about Rajath and Trivikram challenge Manju;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X