BBK 11; ಧನರಾಜ್ ಮೇಲೆ ಮುಗಿಬಿದ್ದ ರಜತ್; ಮನೆಯಿಂದ ಹೊರಬರುವ ಶಿಕ್ಷೆ?

ಬಿಗ್‌ಬಾಸ್ ಮನೆಯಲ್ಲಿ ಹೈಡ್ರಾಮಾ ಮುಂದುವರೆದಿದೆ. ಈಗಾಗಲೇ 11 ಸೀಸನ್ ಕೊನೆ ಹಂತಕ್ಕೆ ಬಂದು ತಲುಪಿದೆ. ಮನೆಯಲ್ಲಿ ಸ್ಪರ್ಧಿಗಳ ನಡುವೆ ಅಸಮಾಧಾನ ಭುಗಿಲೆದ್ದಿದೆ. ಸ್ನೇಹಿತರಾಗಿದ್ದವರೆಲ್ಲಾ ಎದುರು ಬದಿರಾಗಿದ್ದಾರೆ. ಸೈಲೆಂಟ್ ಆಗಿದ್ದವರು ವೈಲೆಂಟ್ ಆಗುತ್ತಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ರಜತ್ ಆರ್ಭಟ ಜೋರಾಗಿದೆ.

ಲಾಯರ್ ಜಗದೀಶ್ ಹಾಗೂ ರಂಜಿತ್ ತಮ್ಮ ಅತಿರೇಕದ ವರ್ತನೆಯಿಂದ ಶಿಕ್ಷೆ ಅನುಭವಿಸಿ ಬಿಗ್‌ಬಾಸ್ ಮನೆ ತೊರೆದಿದ್ದರು. ಇದೀಗ ರಜತ್ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ. ಧನರಾಜ್ ಮೇಲೆ ಹಲ್ಲೆ ಮಾಡಲು ರಜತ್ ಯತ್ನಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ವೈರಲ್ ಆಗುತ್ತಿದೆ. ಜಗದೀಶ್ ಹಾಗೂ ರಂಜಿತ್‌ಗೆ ಸಿಕ್ಕ ಶಿಕ್ಷೆ ರಜತ್‌ಗೂ ಸಿಗುತ್ತಾ ಕಾದು ನೋಡಬೇಕಿದೆ.

Bigg Boss kannada 11 Rajath-dhanraj Get Into Ugly Physical Fight

ಪ್ರೋಮೊದಲ್ಲಿ "ನಿನ್ನ ಮೂತಿ ಒಡೆದೇ ಹೊರಕ್ಕೆ ಹೋಗೋದು" ಎಂದು ಧನರಾಜ್‌ಗೆ ರಜತ್ ಹೇಳುವುದು, ಬಳಿಕ ಮುಂದೆ ನಿಂತು ಮಾತನಾಡುತ್ತದ್ದ ಧನರಾಜ್ ಮೇಲೆ ರಜತ್ ಮುಗಿಬಿದ್ದಿರುವುದನ್ನು ನೋಡಬಹುದು. ಇತರೆ ಸ್ಪರ್ಧಿಗಳು ಜಗಳ ಬಿಡಿಸಲು ಮುಂದಾಗಿದ್ದಾರೆ.

ಈ ವಾರ ಮನೆಯಲ್ಲಿ ಯಾರಿಗೆ ಉತ್ತಮ ಹಾಗೂ ಯಾರಿಗೆ ಕಳಪೆ ಪಟ್ಟ ಕೊಡಬೇಕು ಎನ್ನುವ ಚರ್ಚೆ ನಡೆದಿದೆ. ಈ ವೇಳೆ ಧನರಾಜ್ ಕಳಪೆ ಪಟ್ಟವನ್ನು ರಜತ್‌ಗೆ ಕೊಟ್ಟು ಅದಕ್ಕೆ ಕಾರಣ ಹೇಳಲು ಮುಂದಾಗಿದ್ದಾರೆ. ಕೂಡಲೇ ಎದುರಿಗೆ ಕೂತಿದ್ದ ರಜತ್ ಗರಂ ಆಗಿದ್ದಾರೆ. ಯಾಕೆ ನನಗೆ ಕಳಪೆ ಎಂದು ಕೇಳುವ ರೀತಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಧನರಾಜ್ ಸಮಾಧಾನದಿಂದಲೇ ಉತ್ತರಿಸಲು ಮುಂದಾಗಿದ್ದಾರೆ. ಇದ್ದಕ್ಕಿದ್ದಂತೆ ರಜತ್ ಕೆರಳಿದ್ದಾರೆ.

ನಿಧಾನವಾಗಿ ರಜತ್ ಮಾತಿನ ದಾಟಿ ಬದಲಾಗಿದೆ. ನಿನ್ನೆ ಹುಟ್ಟಿ ಇವತ್ತು ಬಂದಿಲ್ಲ ಕಣೋ ನಾನು ಬಿಗ್‌ಬಾಸ್‌ಗೆ, ತಾಖತ್ತಿದ್ದರೆ ಈಗ ತೋರ್ಸೋ ಎಂದಿದ್ದಾರೆ. ಆಗ ಧನರಾಜ್ ಈಗ ಮುಖ ಮೂತಿ ಹೊಡಿತ್ತೀನಿ ಅಂದ್ರಲ್ಲ, ಹೊಡೀರಿ ಎಂದಿದ್ದಾರೆ. ಕೂಡಲೇ ರತನ್ ಎದ್ದು ಧನರಾಜ್‌ ಮೇಲೆ ಹಲ್ಲೆಗೆ ಯತ್ನಿಸಿರುವುದನ್ನು ನೋಡಬಹುದು. ಪ್ರೋಮೊ ನೋಡಿ ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.

ವಾಗ್ವಾದದ ಬಗ್ಗೆ ಕೆಲವರು ಧನರಾಜ್ ಬೆಂಬಲಕ್ಕೆ ನಿಂತಿದ್ದಾರೆ. ಮತ್ತೆ ಕೆಲವರು ರಜತ್ ಪರ ಬ್ಯಾಟ್ ಬೀಸಿದ್ದರು. ಧನರಾಜ್ ಸಿಂಪಥಿ ಕಾರ್ಡ್ ಪ್ಲೇ ಮಾಡ್ತಿದ್ದಾರೆ ಎನ್ನುವುದು ಕೆಲವರ ವಾದ. ರಜತ್ ಸುಖಾಸುಮ್ಮನೆ ಎಲ್ಲದ್ದಕ್ಕೂ ಗರಂ ಆಗಬೇಡ, ಹಳ್ಳಕ್ಕೆ ಬೀಳಬೇಡ, ನಿನ್ನ ಆಟ ನೀನು ಆಡು ಎಂದು ಕಿವಿ ಮಾತು ಹೇಳುವವರು ಇದ್ದಾರೆ.

ಬಿಗ್‌ಬಾಸ್ ಕನ್ನಡ ಸೀಸನ್ 11 ಇದೀಗ 75ನೇ ದಿನಕ್ಕೆ ಕಾಲಿಟ್ಟಿದೆ. ಈ ವಾರದ ಆರಂಭದಲ್ಲೇ ನಾಮಿನೇಷನ್ ಪ್ರಕ್ರಿಯೆ ಮುಗಿಗಿದೆ. ಈ ವಾರ ಘಟಾನುಘಟಿಗಳೇ ಎಲಿಮಿನೇಷನ್ ಆಗಲು ನಾಮಿನೇಟ್ ಆಗಿದ್ದಾರೆ. ಕಳೆದ ವಾರ ಯಾವುದೇ ಯಾರು ಮನೆಯಿಂದ ಹೊರ ಬಂದಿರಲಿಲ್ಲ. ಐಶ್ವರ್ಯ ಹಾಗೂ ಚೈತ್ರಾ ಇನ್ನೇನು ಎಲಿಮಿನೇಟ್ ಆಗಿಯೇ ಬಿಟ್ಟರು ಎನ್ನುವಂತೆ ತೋರಿಸಿ ಟ್ವಿಸ್ಟ್ ಕೊಟ್ಟಿದ್ದರು. ಆದರೆ ಈ ವಾರ ಒಬ್ಬರಲ್ಲ, ಇಬ್ಬರು ಮನೆಯಿಂದ ಹೊರ ಬರುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.

ಭವ್ಯ ಗೌಡ, ಧನರಾಜ್, ತ್ರಿವಿಕ್ರಮ್, ಶಿಶಿರ್, ರಜತ್, ಮೋಕ್ಷಿತಾ, ಹನುಮಂತ ಹಾಗೂ ಚೈತ್ರಾ ಈ ವಾರ ನಾಮಿನೇಟ್ ಆಗಿದ್ದಾರೆ. ಮನೆಯ ಸದಸ್ಯರನ್ನು ಎರಡು ಗುಂಪುಗಳಾಗಿ ಮಾಡಿ ಟಾಸ್ಕ್‌ಗಳನ್ನು ಆಡಿಸಲಾಗುತ್ತಿದೆ. ಈ ವಾರ ಗೌತಮಿ ಜಾಧವ್ ಕ್ಯಾಪ್ಟನ್ ಆಗಿದ್ದಾರೆ. ಇನ್ನು ಆರಂಭದ ದಿನಗಳಲ್ಲಿ ಉಗ್ರಂ ಮಂಜು, ಮೋಕ್ಷಿತಾ ಹಾಗೂ ಗೌತಮಿ ಒಂದು ತಂಡ, ಒಬ್ಬರನ್ನು ಒಬ್ಬರು ಬಿಟ್ಟುಕೊಡಲ್ಲ ಎನ್ನುವಂತಿದ್ದರು. ಆದರೆ ಈಗ ಪರಸ್ಥಿತಿ ಬದಲಾಗಿದೆ. ಮಂಜು- ಗೌತಮಿ ಸ್ನೇಹದಲ್ಲಿ ಬಿರುಕು ಮೂಡಿದೆ.

More from Filmibeat

English summary
BBK 11: Rajath Kishan attempts to hit Dhanraj; promo goes viral;
Read more about: bigg boss bigg boss kannada 11 tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X