ಬಿಗ್‌ಬಾಸ್ ಕನ್ನಡ ಸೀಸನ್ 11 ಯಾವಾಗ ಶುರು? ಯಾರೆಲ್ಲಾ ದೊಡ್ಮನೆ ಒಳಗೆ ಹೋಗ್ತಾರೆ?

ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್. ಹಿಂದಿಯಲ್ಲಿ ಮೊದಲು ಹಿಟ್ ಆಗಿದ್ದ ಶೋ ಬಳಿಕ ಕನ್ನಡದಲ್ಲಿ ಬಂದು ಗಮನ ಸೆಳೆದಿತ್ತು. ಕಿಚ್ಚ ಸುದೀಪ್ ನಿರೂಪಣೆ ಶೋನ ಹೈಲೆಟ್. ಈಗಾಗಲೇ ಬಿಗ್‌ಬಾಸ್ ಕನ್ನಡ 10 ಸೀಸನ್‌ಗಳು ಯಶಸ್ವಿಯಾಗಿ ಮೂಡಿ ಬಂದಿದೆ. ಇದೀಗ 11ನೇ ಸೀಸನ್‌ಗೆ ವೇದಿಕೆ ಸಿದ್ಧವಾಗುತ್ತಿದೆ.

ಪ್ರತಿ ಬಾರಿ ಅಕ್ಟೋಬರ್‌ ತಿಂಗಳಲ್ಲಿ ಶೋ ಆರಂಭವಾಗುತ್ತದೆ. ಈ ಬಾರಿ ಅದೇ ರೀತಿ ಪ್ಲ್ಯಾನ್ ಮಾಡಲಾಗುತ್ತಿದೆ. ಸಂಥಿಂಗ್ ಸ್ಪೆಷಲ್ ಎಂದು ಹೇಳಿ ಕಳೆದ ಸೀಸನ್‌ ಯಶಸ್ವಿ ಮಾಡಿತ್ತು ಕಲರ್ಸ್ ಕನ್ನಡ. ಈ ಬಾರಿ ಕೂಡ ಶೋ ನಡೆಸಲು ಸಕಲ ಸಿದ್ಧತೆ ಆರಂಭವಾಗಿದೆ. ತೆರೆಮರೆಯಲ್ಲಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಕೂಡ ನಡೀತಿದೆ ಎನ್ನಲಾಗ್ತಿದೆ.

Bigg Boss kannada 11 Rumored contestants host when and where to watch

ವಿವಿಧ ಮನಸ್ಥಿತಿಯ ಸ್ಪರ್ಧಿಗಳನ್ನು 100 ದಿನಗಳ ಕಾಲ ಒಂದೇ ಮನೆಯಲ್ಲಿ ಕೂಡಿ ಹಾಕುವುದು. ಹೊರಗಿನ ಪ್ರಪಂಚದ ಸಂಪರ್ಕ ಇಲ್ಲದಂತೆ ನೋಡಿಕೊಂಡು ಅವರಿಗೆ ಟಾಸ್ಕ್‌ಗಳನ್ನು ಕೊಟ್ಟು ಆಟ ಆಡಿಸುವುದೇ ಬಿಗ್‌ಬಾಸ್ ಶೋ. ಸುತ್ತಾ ಕ್ಯಾಮರಾಗಳನ್ನು ಇಟ್ಟು ಸ್ಪರ್ಧಿಗಳ ಥರಾವರಿ ಭಾವನೆಗಳನ್ನು ಸೆರೆ ಹಿಡಿದು ವೀಕ್ಷಕರ ಮುಂದೆ ಇಡಲಾಗುತ್ತದೆ. ಇಡೀ ದಿನ ಮನೆಯಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವುದರ ಹೈಲೆಟ್ ಅನ್ನು ಸಂಜೆ 1 ಗಂಟೆ ಕಾಲ ಪ್ರಸಾರ ಮಾಡಲಾಗುತ್ತಿದೆ.

ಓಟಿಟಿ ಟ್ರೆಂಡ್ ಶುರುವಾದ ಬಳಿಕ ಇಡೀ ದಿನದ ಸಾಕಷ್ಟು ಸಂಗತಿಗಳನ್ನು ನೇರವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ತೋರಿಸುವ ಪ್ರಯತ್ನ ಸಹ ನಡೀತಿದೆ. ಕಳೆದ ಬಾರಿ ಕನ್ನಡ ಬಿಗ್‌ಬಾಸ್ ಶೋ ಓಟಿಟಿಯಲ್ಲಿ 24 ಗಂಟೆ ಪ್ರಸಾರವಾಗಿತ್ತು. ಈ ಬಾರಿ ಕೂಡ ಅದೇ ರೀತಿಯಲ್ಲಿ ಪ್ಲ್ಯಾನ್ ಮಾಡಲಾಗುತ್ತಿದೆ. ಸೆಪ್ಟೆಂಬರ್‌ನಲ್ಲೇ ಈ ಬಾರಿ ಸೀಸನ್ 11 ಶುರುವಾಗುವ ನಿರೀಕ್ಷೆಯಿದೆ.

ಸಿನಿಮಾ ಹಾಗೂ ಕಿರುತೆರೆ ಕಲಾವಿದರ ಜೊತೆಗೆ ಬೇರೆ ಬೇರೆ ಕ್ಷೇತ್ರಗಳ ಹಲವರು ದೊಡ್ಮನೆ ಪ್ರವೇಶಿಸಲಿದ್ದಾರೆ. ಮನೆ ಕೂಡ ಹೊಚ್ಚ ಹೊಸ ರೂಪದಲ್ಲಿ ಕಂಗೊಳಿಸಲಿದೆ. ರಾಜಕೀಯ ಕ್ಷೇತ್ರದವರು ದೊಡ್ಮನೆ ಪ್ರವೇಶಿಸಿದರೆ ಅಚ್ಚರಿ ಪಡಬೇಕಿಲ್ಲ. ವಿವಾದಾತ್ಮಕ ವ್ಯಕ್ತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ದೊಡ್ಮನೆ ಒಳಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ.

Bigg Boss kannada 11 Rumored contestants host when and where to watch

ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಯಾರೆಲ್ಲಾ ಮನೆಯೊಳಗೆ ಹೋಗಬಹುದು ಎನ್ನುವ ಊಹಾಪೋಹ ಈಗಾಗಲೇ ಶುರುವಾಗಿದೆ. ಕಳೆದ ಸೀಸನ್‌ನಲ್ಲಿ ಹಾಸ್ಯನಟ ತುಕಾಲಿ ಸಂತು ಬಿಗ್‌ಬಾಸ್ ಮನೆಗೆ ಹೋಗಿದ್ದರು. ಈ ಬಾರಿ ಅವರ ಪತ್ನಿ ಮಾನಸ ಹೋಗಬಹುದು ಎನ್ನುವುದು ಕೆಲವರ ಲೆಕ್ಕಾಚಾರ. ಕಿರುತೆರೆ ನಡ ವರುಣ್ ಆರಾಧ್ಯ ಕೂಡ ಈ ಲಿಸ್ಟ್‌ನಲ್ಲಿರುವ ಸಾಧ್ಯತೆಯಿದೆ.

ಇನ್ನು 'ಮಜಾಭಾರತ' ಖ್ಯಾತಿಯ ರಾಘವೇಂದ್ರ, ನಟಿಯರಾದ ಭವ್ಯಾ ಗೌಡ, ಮೋಕ್ಷಿತಾ ಪೈ ಹೀಗೆ ಹಲವರ ಹೆಸರುಗಳು ಹರಿದಾಡುತ್ತಿದೆ. ಮಾಜಿ ಸಚಿವ ಈಶ್ವರಪ್ಪ ಕೂಡ ದೊಡ್ಮನೆ ಒಳಗೆ ಹೋಗುತ್ತಾರಾ? ಎಂದು ಗುಸುಗುಸು ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ.

ಸಾಮಾನ್ಯವಾಗಿ ಬಿಗ್‌ಬಾಸ್ ಮನೆಗೆ ಯಾರೆಲ್ಲಾ ಹೋಗುತ್ತಾರೆ ಎನ್ನುವ ಬಗ್ಗೆ ಕೊನೆ ಕ್ಷಣದವರೆಗೂ ಮಾಹಿತಿ ಸಿಗಲ್ಲ. ಕೆಲವೊಮ್ಮೆ ಅಚ್ಚರಿ ಎನ್ನುವಂತೆ ಕೆಲವರು ಮನೆಯೊಳಗೆ ಹೋಗುತ್ತಾರೆ. ಇನ್ನು ಸ್ಪರ್ಧಿಗಳು ಕೂಡ ತಾವು ಶೋನಲ್ಲಿ ಭಾಗಿ ಆಗುವ ಬಗ್ಗೆ ಸುಳಿವು ಬಿಟ್ಟುಕೊಡಲ್ಲ. ಬಿಗ್‌ಬಾಸ್ ಶೋ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಲೇ ಇರುತ್ತದೆ. ಅದನ್ನೆಲ್ಲಾ ಮೀರಿ ಕನ್ನಡದಲ್ಲಿ ಕೂಡ ಶೋ 10 ಸೀಸನ್ ಮುಗಿಸಿ 11ನೇ ಸೀಸನ್‌ಗೆ ಸಜ್ಜಾಗಿದೆ. ಒಳ್ಳೆಯ ಟಿಆರ್‌ಪಿಯನ್ನು ಪಡೆಯುತ್ತಾ ಬರುತ್ತಿದೆ.

More from Filmibeat

English summary
Bigg Boss kannada season 11 contestants tentative list;
Read more about: bigg boss sandalwood tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X