Mokshitha Pai:ವಿದೇಶ ಪ್ರವಾಸದಲ್ಲಿರುವ ಮೋಕ್ಷಿತ ಪೈ: ಬಿಗ್‌ಬಾಸ್‌ಗೆ ಹೋಗ್ತಾರಾ ಇಲ್ವಾ?
'ಪಾರು' ಧಾರಾವಾಹಿಯ ಮೂಲಕ ಎಲ್ಲರ ಮನಗೆದ್ದ ನಟಿ, ಹಳ್ಳಿಯ ಹೆಣ್ಣು ಮಗಳು ಯಾವ ರೀತಿ ಬದುಕು ನಡೆಸುತ್ತಾರೆ ಎನ್ನುವುದನ್ನು ಮನಮುಟ್ಟುವ ಹಾಗೆ ನಟನೆ ಮಾಡಿ ತೋರಿಸಿರುವ ನಟಿ ಮೋಕ್ಷಿತ ಪೈ. ಪಾರು ಧಾರಾವಾಹಿ ಮುಗಿದ ಬಳಿಕ ಇದೀಗ ಈ ನಟಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಇದೀಗ ಧಾರಾವಾಹಿಯಲ್ಲಿ ನಟನೆ ಮಾಡಲು ಮೋಕ್ಷಿತ ಪೈ ಅವರಿಗೆ ಸಾಕಷ್ಟು ಆಫರ್‌ಗಳು ಕೂಡ ಬರುತ್ತಿದೆ. ಆದರೆ ಮೋಕ್ಷಿತಾ ಅವರು ಕಿರುತೆರೆಯಿಂದ ಕೊಂಚ ಅಂತರವನ್ನು ಕಾಯ್ದುಕೊಂಡಿದ್ದಾರೆ.
'ಪಾರು' ಮುಗಿದ ಬಳಿಕ ಮೋಕ್ಷಿತಾ ಪೈ ಹೊಸ ಪ್ರಾಜೆಕ್ಟ್‌ಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಆಗಾಗ ಯೂಟ್ಯೂಬ್‌ನಲ್ಲಿ ತಮ್ಮನೊಂದು ಕಾಣಿಸಿಕೊಂಡು ಸುದ್ದಿಯಾಗಿದ್ದರು. ಆದು ಬಿಟ್ಟರೆ ಹೊಸ ಧಾರಾವಾಹಿ ಅಥವಾ ಸಿನಿಮಾ ಬಗ್ಗೆ ಮಾಹಿತಿಯನ್ನು ಹೊರ ಹಾಕಿಲ್ಲ. ಆದರೆ, ಈ ಬಿಡುವಿನ ಸಮಯವನ್ನು ಮೋಕ್ಷಿತಾ ಎಂಜಾಯ್ ಮಾಡುತ್ತಿದ್ದಾರೆ. ವಿದೇಶಕ್ಕೆ ಪ್ರವಾಸ ಹೋಗಿ ಬಂದಿದ್ದಾರೆ.

ಇನ್ನೇ ಕೆಲವೇ ದಿನಗಳಲ್ಲಿ ಆರಂಭ ಆಗುತ್ತಿರುವ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಮೋಕ್ಷಿತಾ ಪೈ ಸ್ಪರ್ಧಿಯಾಗಿ ಹೋಗುತ್ತಾರೆ ಅನ್ನೋ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. 'ಪಾರು' ಧಾರಾವಾಹಿ ಬಳಿಕ ಮೋಕ್ಷಿತಾ ಪೈ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಬಹುದೆಂದು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದರು. ಆದರೆ, ಮೋಕ್ಷಿತಾ ವಿದೇಶ ಪ್ರವಾಸದ ಫೋಟೊಗಳನ್ನು ಒಂದಾದ ಮೇಲೊಂದರಂತೆ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಹೌದು, ಮೋಕ್ಷಿತಾ ಪೈ ತನ್ನ ಇನ್‌ಸ್ಟಾಗ್ರಾಂನಲ್ಲಿ ಕೆಲವು ಫೋಟೊಗಳನ್ನು ಶೇರ್ ಮಾಡಿದ್ದಾರೆ. ತನ್ನ ಗೆಳೆತಿಯೊಂದಿಗೆ ವಿದೇಶದ ಪ್ರಕೃತಿ ಸೌಂದರ್ಯವನ್ನು ಆನಂದಿಸುತ್ತಿರುವುದು ಈ ಪೋಟೊಗಳಲ್ಲಿ ಸೆರೆಯಾಗಿದೆ. ಅಂದ್ಹಾಗೆ, ಪ್ರವಾಸಿಗರ ನೆಚ್ಚಿನ ತಾಣ ಬಾಲಿಗೆ 'ಪಾರು' ಧಾರಾವಾಹಿಯ ನಾಯಕಿ ಪಯಣ ಬೆಳೆಸಿದ್ದರು. ಅಲ್ಲಿನ ಬ್ಯಾಕ್‌ಗ್ರೌಂಡ್‌ನಲ್ಲಿ ನಿಂತು ತೆಗೆಸಿಕೊಂಡ ಒಳ್ಳೊಳ್ಳೆಯ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಬೆಳ್ಳಂಬೆಳಗ್ಗೆ ಕುಳಿತು ಸೂರ್ಯೋದಯ ಆಗುವ ವೇಳೆ ಗೆಳೆತಿಯ ಜೊತೆ ಕಾಫಿ ಕುಡಿಯುವುದನ್ನು ಕ್ಯಾಪ್ಚರ್ ಮಾಡಲಾಗಿದೆ. ಹಾಗೆಯೇ ಗೆಳತಿಯ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಇನ್ನು ಈ ಫೋಟೋಗಳನ್ನು ತನ್ನ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ಫೋಟೊಗಳಿಗೆ ಸಾಕಷ್ಟು ಲೈಕ್ಸ್ ಕಾಮೆಂಟ್‌ಗಳು ಬರುತ್ತಿವೆ.
ಬಾಲಿಯಲ್ಲಿಯೇ ಇದ್ದಾರಾ?
ಮೋಕ್ಷಿತಾ ಪೈ ಮಾತ್ರ ಅಲ್ಲ, ತನ್ನ ಜೊತೆ ಅಮ್ಮ ಹಾಗೆಯೇ ಸ್ನೇಹಿತರನ್ನು ಮೋಕ್ಷಿತಾ ಕರೆದುಕೊಂಡು ಹೋಗುತ್ತಾರೆ. ಮೋಕ್ಷಿತಾಗೆ ಟ್ರಾವೆಲ್ ಮಾಡುವುದು ಎಂದರೆ ಬಲು ಇಷ್ಟ. ಕಳೆದ ಒಂದು ವಾರದಿಂದ ಬಾಲಿ ಪ್ರವಾಸದ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇದ್ದಾರೆ. ಇನ್ನೂ ಬಾಲಿಯಲ್ಲಿಯೇ ಇದ್ದಾರಾ? ಇಲ್ಲ ಅಲ್ಲಿಗೆ ಹೋಗಿ ಬಂದ ಬಳಿಕ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರಾ? ಅನ್ನೋದು ಗೊತ್ತಾಗಬೇಕಿದೆ.
ಎಲ್ಲರ ಮೆಚ್ಚಿನ ನಟಿ ಮೋಕ್ಷಿತಾ ಪೈ
ಮೋಕ್ಷಿತಾ ಜನ ಮೆಚ್ಚಿದ ಮನೆ ಮಗಳು ಎಂದು ಹೇಳಿದರೆ ತಪ್ಪಾಗದು. ತನ್ನ ನಟನೆಯ ಮೂಲಕ ಎಲ್ಲರ ಮನಸ್ಸನ್ನು ಗೆದ್ದ ಚೋರಿ ಹಳ್ಳಿಯ ಹುಡುಗಿಯ ಪಾತ್ರದಲ್ಲಿ ಮಿಂಚಿದ ನಟಿ ಕೊನೆಗೆ ಅಖಿಲಾಂಡೇಶ್ವರಿ ಯ ಅರಸನ ಕೋಟೆಗೆ ಅರಸಿಯಾದ ಕಥೆ ಬಹಳ ಅದ್ಭುತವಾಗಿ ಮೂಡಿ ಬಂದಿತ್ತು. ಪಾರು ಆಗಿ ಎಲ್ಲರ ಮನಸನ್ನು ಗೆದ್ದಿದ್ದರು. ಕೆಲವು ದಿನಗಳಿಂದ ಬಿಗ್‌ಬಾಸ್‌ಗೆ ಹೋಗುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಆದ್ರೀಗ ಬಾಲಿ ಫೋಟೊಗಳನ್ನು ಹಂಚಿಕೊಂಡಿದ್ದು, ಅವರ ಫ್ಯಾನ್ಸ್ ಗೊಂದಲಕ್ಕೆ ಒಳಗಾಗಿದ್ದಾರೆ.


Click it and Unblock the Notifications











