BBK 11 Finale: ಶಾಲಾ ಮಕ್ಕಳ ಬಾಯಲ್ಲೂ ಬರ್ತಾ ಇರೋದು ಅದೊಂದೆ ಹೆಸರು!

By ಎಸ್ ಸುಮಂತ್

ಬಿಗ್ ಬಾಸ್ ವಿನ್ನರ್ ಹೆಸರು ಘೋಷಿಸೋಕೆ ಕ್ಷಣಗಣನೆ ಶುರುವಾಗಿದೆ. ಶನಿವಾರ ಒಂದು ದಿನ ಕಳೆದರೆ ಕರ್ನಾಟಕದ ಜನತೆಗೆ ಬಿಗ್ ಬಾಸ್ ವಿನ್ನರ್ ಯಾರೆಂಬ ಸತ್ಯ ದರ್ಶನವಾಗುತ್ತದೆ. ಆದರೆ ಆ ಗೆಲುವು ಹೊರಗೆ ಬರೋದಕ್ಕೂ ಮುನ್ನ ಒಂದಷ್ಟು ಮಂದಿಗೆ ಟೆನ್ಶನ್ ಇದ್ದಿದ್ದೆ. ಅದರಲ್ಲೂ ಮನೆಯೊಳಗೆ ಇರುವ ಆರು ಮಂದಿಗೆ ಈ ಎರಡು ದಿನ ನಿಲ್ಲಲು ಆಗದೆ, ಕೂರಲು ಆಗದೆ ಇರುವಂತ ದಿನ.

ಈಗ ಮನೆಯಲ್ಲಿರುವ ಸ್ಪರ್ಧಿಗಳಿಗೆ ಹೆಚ್ಚು ಕೆಲಸವಿಲ್ಲ. ಫಿನಾಲೆಗೆ ರೆಡಿಯಾಗಬೇಕು ಅಷ್ಟೇ. ಅಡುಗೆ ಮಾಡಿಕೊಳ್ಳುವ ಟೆನ್ಶನದ ಕೂಡ ಇರಲ್ಲ. ಹೊರಗಡೆಯಿಂದಾನೇ ರುಚಿ ರುಚಿಯಾದ ಅಡುಗೆ ಬರ್ತಾ ಇರುತ್ತದೆ. ಇಷ್ಟು ದಿ‌ನ ತಮಗೆ ಬಂದಂತೆ ಅಡುಗೆ ಮಾಡಿಕೊಂಡು ರುಚಿ ಇಲ್ಲದಿದ್ದರು ತಿನ್ನುತ್ತಾ ಇದ್ದರು. ಆದರೆ ಈಗ ಹಾಗಲ್ಲ. ಎಷ್ಟೇ ರುಚಿಯ ಊಟ ಕಣ್ಣ ಮುಂದೆ ತಂದಿಟ್ಟರು ಹಸಿವೇ ಆಗದ ಮನಸ್ಥಿತಿಯಲ್ಲಿ ಬಿಗ್ ಬಾಸ್ ಇದ್ದಾರೆ.

Bigg Boss kannada 11 School children request to vote Mokshita

ಇಂದಿನ ದಿನ ಬಹಳ ಮುಖ್ಯ

ಸ್ಪರ್ಧಿಗಳು ಇಷ್ಟು‌ ದಿನ ನಾಮಿನೇಷನ್ ಆಗ್ತಾ ಇದ್ರು. ಅದೃಷ್ಟ ಜನರ ಮನಸ್ಸು ಗೆದ್ದು, ಅವರಿಂದ ವೋಟ್ ಪಡೆದು ಹೇಗೋ ಬಚಾವ್ ಆಗಿ ಬಿಡ್ತಾ ಇದ್ರು. ಹಾಗೇ ಬಚಾವ್ ಆದವರಲ್ಲಿ ಮಂಜು, ಮೋಕ್ಷಿತಾ, ತ್ರಿವಿಕ್ರಂ, ರಂಜಿತ್, ಹನುಮಂತು, ಭವ್ಯಾ ಇದಾರೆ. ಆದರೆ ಈ ದಿನ ರಾತ್ರಿ ಬಹಳ ಮುಖ್ಯ. ಒಬ್ಬ ವ್ಯಕ್ತಿಗೆ 99 ಬಾರಿ ವೋಟ್ ಮಾಡುವ ಅವಕಾಶವಿದೆ. ಜನರು ಹೆಚ್ವು ಯಾರ ಮೇಲೆ ಆಶೀರ್ವಾದ ಮಾಡಿ, ವೋಟ್ ಮಾಡುತ್ತಾರೋ ಅವರೇ ಬಿಗ್ ಬಾಸ್ ಟ್ರೋಫಿ ಗೆಲ್ಲೋದು.

ಮನೆಯವರಿಂದ ಜನರಲ್ಲಿ ಮನವಿ

ಸ್ಪರ್ಧಿಗಳ ಪರವಾಗಿ ಅವರ ಮನೆಯವರು ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡ್ತಾ ಇದ್ದಾರೆ. ಬಿಗ್ ಬಾಸ್‌ನಿಂದ ಪ್ರತಿದಿನ ಕಳುಹಿಸುವ ಪ್ರೋಮೋ ಹಾಕ್ತಾ ಇರ್ತಾರೆ ಅವರ ಬಗ್ಗೆ ವೋಟ್ ಕೇಳುತ್ತಾ ಇರುತ್ತಾರೆ. ಇದೀಗ ಸಂಬಂಧಿಕರು, ಸ್ನೇಹಿತರು ಎಲ್ಲರೂ ಕಡೆ ಮೂಮೆಂಟ್ ನಲ್ಲಿ ಮೋಕ್ಷಿತಾ ಅವರನ್ನ ಗೆಲ್ಲಿಸಿ ಎನ್ನುತ್ತಿದ್ದಾರೆ. ವೋಟ್ ಮಾಡುವಂತೆ ಜನರಿಗೆ ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದಾರೆ.

ವೋಟ್ ಫಾರ್.. ಮೋಕ್ಷಿತಾ

ಶ್ರೀ ಜಗಜ್ಯೋತಿ ವಿದ್ಯಾವರ್ಧಕ ಸಂಘದ ಕಡೆಯಿಂದಾನೂ ಅಭಿಯಾನ ಶುರು ಮಾಡಿದ್ದಾರೆ. ವೋಟ್ ಫಾರ್ ಮೋಕ್ಷಿತಾ ಎಂಬ ಅಭಿಯಾನ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ‌ ಮಕ್ಕಳು ಸೇರಿದ್ದಾರೆ. ಮೋಕ್ಷಿತಾ ಪರ ಮುದ್ದು ಮುದ್ದಾದ ಧ್ವನಿಯಲ್ಲಿ ಮಕ್ಕಳು ವೋಟ್ ಕೇಳುತ್ತಿದ್ದಾರೆ. ಮೋಕ್ಷಿತಾ ಅವರನ್ನು ಗೆಲ್ಲಿಸಿ ಎನ್ನುತ್ತಿದ್ದಾರೆ. ಮೋಕ್ಷಿತಾ ಅವರ ಫೋಟೋ ಇರುವ ಬ್ಯಾನರ್ ಹಿಡಿದು ಪ್ರಚಾರಕ್ಕೆ ಇಳಿದಿದ್ದಾರೆ.

Bigg Boss kannada 11 School children request to vote Mokshita

ಮೋಕ್ಷಿತಾ ನಡೆಗೆ ಮೆಚ್ಚುಗೆ

ಮೋಕ್ಷಿತಾಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೋವರ್ಸ್ ಇದಾರೆ. ಅವರು ಬಿಗ್ ಬಾಸ್ ಮನೆಯಲ್ಲಿ ಇರುವ ಸರಳತೆಗೆ ಸಾಕಷ್ಟು ಜನ ಶಬ್ಬಾಶ್ ಎಂದಿದ್ದಾರೆ. ಈಗ ಕಮೆಂಟ್ ಬಾಕ್ಸ್ ನಲ್ಲೂ ಮೋಕ್ಷಿತಾ ಅವರನ್ನ ಹೊಗಳಿದ್ದಾರೆ. ಟಾಸ್ಕ್, ಇಂಡುವಿಷ್ಯುವಲ್ ಆಟ, ಸರಳತೆ, ವ್ಯಕ್ತಿತ್ವ, ಸ್ವಾಭಿಮಾನ, ನಿಯತ್ತು, ಸತ್ಯ, ಗಾಂಭೀರ್ಯ, ಸಂಗೀತ ಹೀಗೆ ಅವರಲ್ಲಿರುವ ಪಾಸಿಟಿವ್ ಅಂಶಗಳನ್ನ ಕಮೆಂಟ್ ಬಾಕ್ಸ್‌ನಲ್ಲಿ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ ಈ ಬಾರಿಯ ಬಿಗ್ ಬಾಸ್ ಗೆಲುವು ಮೋಕ್ಷಿತಾಗೆ ತುಂಬಾ ಅಗತ್ಯವಿದೆ. ಹೀಗಾಗಿ ಅವರನ್ನ ಗೆಲ್ಲಿಸೋಣ ಎನ್ನುತ್ತಿದ್ದಾರೆ.

More from Filmibeat

Read more about: bigg boss bigg boss kannada 11 tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X