BBK 11 Grand Finale: ಸೆಕೆಂಡ್ ರನ್ನರ್ ಅಪ್ ರಜತ್; ಸಿಕ್ಕ ನಗದು ಬಹುಮಾನ ಎಷ್ಟು?
ಬಿಗ್‌ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಅಂತಿಮ ಹಂತಕ್ಕೆ ಬಂದು ನಿಂತಿದೆ. ಆರು ಜನ ಫೈನಲಿಸ್ಟ್‌ಗಳಲ್ಲಿ 4 ಜನ ಹೊರ ಬಂದಿದ್ದಾರೆ. ಭವ್ಯಾ ಗೌಡ, ಮಂಜು, ಮೋಕ್ಷಿತಾ ಹೊರಬಂದ ಬಳಿಕ ಬಳಿಕ ರಜತ್ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಸ್ವತಃ ಸುದೀಪ್ ಮನೆಯೊಳಗೆ ಹೋಗಿ ಹನುಮಂತ, ರಜತ್ ಹಾಗೂ ತ್ರಿವಿಕ್ರಮ್ ಅವರನ್ನು ಹೊರಗೆ ಕರೆತಂದರು.
ವೇದಿಕೆಯಲ್ಲಿ ಮೂವರಲ್ಲಿ ರಜತ್ ಸೋತರು. ತ್ರಿವಿಕ್ರಮ್ ಹಾಗೂ ಹನುಮಂತ ಮೊದಲ ಎರಡು ಸ್ಥಾನಕ್ಕೆ ಏರಿದರು. ಬಿಗ್‌ಬಾಸ್ ಶೋ ಶುರುವಾಗಿ 50 ದಿನಗಳ ಬಳಿಕ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಜತ್ ಮನೆಯೊಳಗೆ ಹೋಗಿದ್ದರು. 70 ದಿನಗಳ ಕಾಲ ಮನೆಯೊಳಗೆ ಉಳಿದುಕೊಂಡಿದ್ದರು. ತಮ್ಮ ಆರ್ಭಟದ ಮೂಲಕ ಎಲ್ಲರನ್ನು ನಡುಗಿಸಿದ್ದರು.

ಬಿಗ್‌ಬಾಸ್ ಕನ್ನಡ 11 ಸೀಸನ್‌ಗಳಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಇಷ್ಟು ಉತ್ತಮವಾಗಿ ಬೇರೆ ಯಾರೂ ಆಡಿರಲಿಲ್ಲ. ಅಪಾರ ಅಭಿಮಾನಿ ಬಳಗವನ್ನು ರಜತ್ ಸೃಷ್ಟಿಸಿಕೊಂಡಿದ್ದಾರೆ. ಅವರ ಆಟದ ಬಗ್ಗೆ ಸುದೀಪ್ ಕೂಡ ಮೆಚ್ಚುಗೆಯ ಮಾತನ್ನಾಡಿದರು. ತಮ್ಮನ್ನು ಈ ಹಂತಕ್ಕೆ ಕರೆತಂದ ಎಲ್ಲರಿಗೂ ರಜತ್ ಧನ್ಯವಾದ ತಿಳಿಸಿದರು. ಇನ್ನು 3ನೇ ಸ್ಥಾನ ಪಡೆದ ರಜತ್‌ಗೆ ಒಟ್ಟು 10 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ.
ಈ ಹಿಂದೆ ಕೂಡ ಕೆಲ ರಿಯಾಲಿಟಿ ಶೋಗಳಲ್ಲಿ ರಜತ್ ಭಾಗವಹಿಸಿದ್ದರು. ಆದರೆ ಬಿಗ್‌ಬಾಸ್ ಬಹಳ ದೊಡ್ಡ ವೇದಿಕೆ. 50 ದಿನಗಳ ಬಳಿಕ ಬಂದು ಹೊಸ ಇನ್ನಿಂಗ್ಸ್ ಆರಂಭಿಸಿ ಹೇಳಿದಂತೆಯೇ ರಜತ್ ಆಡಿ ಗೆದ್ದರು. ಸೆಕೆಂಡ್ ರನ್ನರ್ ಅಪ್ ಆಗಿದ್ದರೂ ವಿನ್ನರ್‌ಗಿಂತ ಕಮ್ಮಿ ಇಲ್ಲ ಎನ್ನುವಂತೆ ಪ್ರದರ್ಶನ ತೋರಿದರು. ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡರು.
ನಿಮಗೆ ಬಿಗ್‌ಬಾಸ್ ಮನೆಯಿಂದ ಹೊರಗಡೆ ಎಷ್ಟು ಕ್ರೇಜ್ ಇದೆ, ಅಭಿಮಾನಿಗಳು ಇದ್ದಾರೆ ಅಂತ ನಿಮಗೆ ಗೊತ್ತಿಲ್ಲ. ನಿಮ್ಮ ಪತ್ನಿಗೆ ಗೊತ್ತು ಎಂದು ಸ್ವತಃ ಸುದೀಪ್ ಮೆಚ್ಚುಗೆ ಸೂಚಿಸಿದರು. ನಿಮ್ಮ ಆಗಮನದಿಂದ ಈ ಸೀಸನ್ ಕಳೆ ಕೊಂಚ ಹೆಚ್ಚಿತು. ನೀವು ಈ ಸೀಸನ್ ಗೇಮ್ ಚೇಂಜರ್ ಎಂದು ಸುದೀಪ್ ಮೆಚ್ಚುಗೆ ಸೂಚಿಸಿದ್ದರು. ಇದಕ್ಕೂ ಮುನ್ನ ರಜತ್‌ಗೆ ಸುದೀಪ್ ಒಂದು ಜಾಕೆಟ್ ಉಡುಗೊರೆಯಾಗಿ ಕೊಟ್ಟಿದ್ದರು.
ಕೊನೆಯದಾಗಿ ಮಾತನಾಡಿದ ರಜತ್ ಶೋ ಮುಗಿದ ಮೇಲೆ ಒಂದು ಪಾರ್ಟಿ ಮಾಡೋಣ ಸರ್ ಎಂದು ಸುದೀಪ್ ಬಳಿ ಮನವಿ ಮಾಡಿದರು. ಅದಕ್ಕೆ ಕಿಚ್ಚ ಕಂಡಿತ ಎಂದರು. ಇನ್ನು ಶೀಘ್ರದಲ್ಲೇ ಪತಿ ಜೊತೆ ಥಾಯ್ಲೆಂಡ್ ಟ್ರಿಪ್ ಹೋಗುವಂತೆ ಅಕ್ಷಿತಾಗೆ ಸುದೀಪ್ ಹೇಳಿದರು. ಅವರು ಖಂಡಿತ ಎಂದು ಖುಷಿ ವ್ಯಕ್ತಪಡಿಸಿದರು.


Click it and Unblock the Notifications











