BBK 11: ಈ ವಾರ ಎಲಿಮಿನೇಟ್ ಅಲ್ಲ, ಶೋ ಕ್ವಿಟ್ ಮಾಡಿ ಹೊರ ಬಂದವರು ಯಾರು?
ಬಿಗ್‌ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆ ಕಡೆ ಮುಖ ಮಾಡಿದೆ. ಮೂವರು ವೈಲ್ಡ್ ಕಾರ್ಡ್ ಎಂಟ್ರಿ ಜೊತೆ ಶೋ ವೀಕ್ಷಕರನ್ನು ರಂಜಿಸುತ್ತಿದೆ. ಕಳೆದ ವಾರ ಧರ್ಮ ಕೀರ್ತಿರಾಜ್ ಎಲಿಮಿನೇಟ್ ಆಗಿ ಹೊರ ಬಂದಿದ್ದರು. ಈ ವಾರ ಮತ್ತೊಬ್ಬರು ಶೋ ಕ್ವಿಟ್ ಮಾಡಿ ಮನೆ ತೊರೆದಿದ್ದಾರೆ ಎನ್ನಲಾಗ್ತಿದೆ.
ಗ್ರ್ಯಾಂಡ್ ಫಿನಾಲೆಗೆ ಇನ್ನು 4 ವಾರ ಮಾತ್ರ ಬಾಕಿಯಿದೆ. ಆರಂಭದಲ್ಲಿ ಯಾರು ಸೈಲೆಂಟ್ ಎಂದುಕೊಂಡಿದ್ದರೋ ಅವರು ಈಗ ವೈಲೆಂಟ್ ಆಗುತ್ತಿದ್ದಾರೆ. ಇನ್ನು ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿ ರಜತ್ ಆರ್ಭಟ ಜೋರಾಗಿದೆ. ಹಳೆ ಸ್ಪರ್ಧಿಗಳಿಗೆಲ್ಲಾ ಖಡಕ್ ತಿರುಗೇಟು ಕೊಡುತ್ತಾ ನಾನೇ ಬಿಗ್‌ಬಾಸ್ ಎನ್ನುವಂತೆ ಆಡುತ್ತಿದ್ದಾರೆ. ಶೋಭಾ ಶೆಟ್ಟಿ ದರ್ಬಾರ್ ಕೂಡ ಏನೂ ಕಮ್ಮಿಯಿಲ್ಲ.

ಈ ವಾರ ಗಂಟುಮೂಟೆ ಕಟ್ಟಿಕೊಂಡು ಬಿಗ್‌ಬಾಸ್ ಮನೆಯಿಂದ ಹೊರ ಬರಲು 7 ಜನ ನಾಮಿನೇಟ್ ಆಗಿದ್ದಾರೆ. ಗೋಲ್ಡ್ ಸುರೇಶ್, ಶೋಭಾ ಶೆಟ್ಟಿ, ಶಿಶಿರ್, ಭವ್ಯಾ, ಚೈತ್ರಾ, ತ್ರಿವಿಕ್ರಮ್, ಐಶ್ವರ್ಯ ಲಿಸ್ಟ್‌ನಲ್ಲಿದ್ದಾರೆ. ಈ ವಾರ ಇಬ್ಬರು ಎಲಿಮಿನೇಷನ್ ಆಗುವ ಸಾಧ್ಯತೆಯಿದೆ. ಶನಿವಾರದ ಕಿಚ್ಚನ ಪಂಚಾಯ್ತಿ ಕೊನೆಯಲ್ಲಿ ಗೋಲ್ಡ್ ಸುರೇಶ್ ಹಾಗೂ ತ್ರಿವಿಕ್ರಮ್ ಸೇಫ್ ಆಗಿದ್ದಾರೆ.
ಇನ್ನುಳಿದ 5 ಜನರಲ್ಲಿ ಇಬ್ಬರು ಎಲಿಮಿನೇಟ್ ಆಗಿ ಈ ವಾರ ಬಿಗ್‌ಬಾಸ್ ಮನೆ ತೊರೆಯುತ್ತಾರೆ. ಆದರೆ ಅದರಲ್ಲಿ ಒಬ್ಬರು ತಾವಾಗಿಯೇ ಶೋ ಕ್ವಿಟ್ ಮಾಡಿ ಹೊರಬಂದಿರುವುದಾಗಿ ಗುಸುಗುಸು ಶುರುವಾಗಿದೆ. ಬಿಗ್‌ಬಾಸ್ ಮನೆ ಒಳಗೆ ಹೋದವರ ಅಷ್ಟು ಸುಲಭವಾಗಿ ಹೊರಗೆ ಬರಲು ಸಾಧ್ಯವಿಲ್ಲ. ಅನಿವಾರ್ಯ ಕಾರಣಗಳು ಇದ್ದಾಗ ಮಾತ್ರ ಸಾಧ್ಯ.
ಕೆಲವೊಮ್ಮೆ ಸ್ಪರ್ಧಿಗಳು ನಾನು ಈ ಮನೆಯೊಳಗೆ ಇರಲ್ಲ, ಬಿಗ್‌ಬಾಸ್. ಬಾಗಿಲು ತೆಗೀರಿ. ಹೊರಗೆ ಹೋಗ್ತೀನಿ ಎಂದು ಹಾರಾಡುವುದು ನೋಡಿದ್ದೇವೆ. ಇತ್ತೀಚೆಗೆ ರಜತ್ ಮೇಲೆ ಬೇಸರಗೊಂಡು ಗೋಲ್ಡ್ ಸುರೇಶ್ ಮನೆಯಿಂದ ಹೊರಬರುವುದಾಗಿ ಹೇಳಿದ್ದಾರೆ. ಅಂದಹಾಗೆ ಹೀಗೆ ಬಿಗ್‌ಬಾಸ್ ಮನೆ ತೊರೆಯಲು ಬಯಸಿದವರೆ ಕೊನೆಗೆ ವಿನ್ನರ್ ಆಗಿರುವ ಉದಾಹರಣೆ ಕೂಡ ಇದೆ.
ಶೋಭಾ ಶೆಟ್ಟಿ 2 ವಾರಗಳ ಹಿಂದೆ ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು. ಆದರೆ ಇದೀಗ ದಿಢೀರನೆ ಮನೆಯಿಂದ ಹೊರ ಬಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ಸ್ವತಃ ತಾವೇ ಶೋನಿಂದ ಕ್ವಿಟ್ ಆಗಿದ್ದಾರೆ ಎನ್ನಲಾಗ್ತಿದೆ. ಮನೆಯೊಳಗೆ ಎಂಟ್ರಿ ಕೊಟ್ಟ ಕೂಡಲೇ ಬಹಳ ಅಬ್ಬರಿಸಿದ್ದರು.

ಶೋಭಾ ಬಹಳ ಜೋರಾಗಿಯೇ ಬಿಗ್‌ಬಾಸ್ ಮನೆ ಒಳಗೆ ಹೋಗಿದ್ದರು. ಉಗ್ರಂ ಮಂಜು ಹಾಗೂ ಗೌತಮಿ ವಿರುದ್ಧ ಕೆಂಡಕಾರಿದ್ದರು. ಮುಖವಾಡ ಕಳುಚುತ್ತೀನಿ ಅಂತೆಲ್ಲಾ ಆರ್ಭಟಿಸಿದ್ದರು. ಆದರೆ ಒಂದು ವಾರದ ನಂತರ ತಣ್ಣಗಾಗಿಬಿಟ್ಟರು. ಬಳಿಕ ಅವರಿಬ್ಬರ ಜೊತೆ ರಾಜಿ ಮಾಡಿಕೊಂಡಿದ್ದರು. ಎರಡನೇ ವಾರದ ಕೊನೆಗೆ ಕಳಪೆ ಬೋರ್ಡ್ ಸಿಕ್ಕಿತ್ತು.
ಕನ್ನಡ ನಟಿ ಶೋಭಾ ಬಳಿಕ ತೆಲುಗು ಕಿರುತೆರೆಯಲ್ಲಿ ಮಿಂಚಿದ್ದರು. ತೆಲುಗು ಬಿಗ್‌ಬಾಸ್ ಮನೆಗೂ ಭೇಟಿ ನೀಡಿ ಅಬ್ಬರಿಸಿದ್ದರು. ಕಳೆದೆರಡು ವಾರಗಳಿಂದ ಕನ್ನಡ ಬಿಗ್‌ಬಾಸ್ ಮನೆಗೆ ಎಂಟ್ರಿ ಆಗಿ ವೀಕ್ಷಕರನ್ನು ರಂಜಿಸುತ್ತಾ ಬರುತ್ತಿದ್ದಾರೆ.
ಇನ್ನು ಕಳಪೆ ಪಟ್ಟ ಹೊತ್ತು ಶೋಭಾ ಬಿಗ್‌ಬಾಸ್ ಮನೆಯ ಜೈಲಿಗೆ ಹೋಗಿದ್ದರು. ಈ ವೇಳೆ ಬೇಸರದಿಂದ ಕಣ್ಣೀರು ಹಾಕಿದ್ದರು. ತೆಲುಗು ಬಿಗ್‌ಬಾಸ್ ಸೀಸನ್ 7ರಲ್ಲಿ ಶೋಭಾ ಫಿನಾಲೆವರೆಗೆ ಹೋಗಿದ್ದಾರೆ. ಫಿನಾಲೆಗಿಂತ ಒಂದು ವಾರ ಮುನ್ನ ಎಲಿಮಿನೇಟ್ ಆಗಿದ್ದರು.
ಇನ್ನುಳಿದ 5 ಜನರಲ್ಲಿ ಇಬ್ಬರು ಎಲಿಮಿನೇಟ್ ಆಗಿ ಈ ವಾರ ಬಿಗ್‌ಬಾಸ್ ಮನೆ ತೊರೆಯುತ್ತಾರೆ. ಆದರೆ ಅದರಲ್ಲಿ ಒಬ್ಬರು ತಾವಾಗಿಯೇ ಶೋ ಕ್ವಿಟ್ ಮಾಡಿ ಹೊರಬಂದಿರುವುದಾಗಿ ಗುಸುಗುಸು ಶುರುವಾಗಿದೆ.


Click it and Unblock the Notifications











