BBK 11: ಹೈಡ್ರಾಮ ಮಾಡಿ ಬಿಗ್‌ಬಾಸ್ ಮನೆಯಿಂದ ಹೊರಬಂದ ಶೋಭಾ ಫಸ್ಟ್ ರಿಯಾಕ್ಷನ್

ಬಿಗ್‌ಬಾಸ್ ಮನೆಯಿಂದ ಈ ವಾರ ಮತ್ತೊಬ್ಬರು ಹೊರ ಬಂದಿದ್ದಾರೆ. ಅದು ಎಲಿಮಿನೇಟ್ ಆಗಿ ಅಲ್ಲ. ಬದಲಿಗೆ ಶೋ ಕ್ವಿಟ್ ಮಾಡಿ ಪಟ್ಟು ಹಿಡಿದು ದೊಡ್ಮನೆ ತೊರೆದಿದ್ದಾರೆ. ಕಳೆದ ವಾರ ನಾಮಿನೇಷನ್‌ನಲ್ಲಿ ಶೋಭಾ ಶೆಟ್ಟಿ ಹೆಸರು ಜನ ವೋಟ್ ಮಾಡಿ ಸೇವ್ ಮಾಡಿದ್ದರು. ಆದರೂ ಆಕೆ ಮನೆಯಿಂದ ಹೊರ ಬರುವ ನಿರ್ಧಾರ ತೆಗೆದುಕೊಂಡಿದ್ದರು.

ಇದೀಗ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. "ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಟಾಪ್ ಪಯಣ ಮುಗಿದಿದೆ. ಆಟದ ಮೇಲೆ ಗಮನ ಹೊಡಲು ಆರೋಗ್ಯ ಸಹಕರಿಸುತ್ತಿಲ್ಲ, ಮುನ್ನಡೆಯುವ ಇಚ್ಛೆಯಿದ್ದರೂ ದೇಹ ಮುಂದುವರೆಯಲು ಬಿಡುತ್ತಿಲ್ಲ. ಯಾರನ್ನು, ಯಾವುದನ್ನು ನಾನು ಹಗುರವಾಗಿ ತೆಗೆದುಕೊಂಡಿಲ್ಲ. ಜೀವನದ ಜವಾಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನನ್ನ ಈ ನಿರ್ಧಾರ" ಎಂದು ಶೋಭಾ ಬರೆದುಕೊಂಡಿದ್ದಾರೆ.

Bigg Boss kannada 11 Shobha Shetty shares her first reaction after exit from house

"ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಅಭಾರಿಯಾಗಿದ್ದೇನೆ. ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ ನನ್ನ ಜನರಿಗೆ, ಕಲರ್ಸ್ ಕನ್ನಡ ತಂಡಕ್ಕೆ ಹಾಗು ನನ್ನ ಪ್ರೀತಿಯ ಕಿಚ್ಚ ಸುದೀಪ್ ಸರ್ ನಿಮಗೆ ಧನ್ಯವಾದಗಳು" ಎಂದು ತಿಳಿಸಿದ್ದಾರೆ.

ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ನಿಮ್ಮ ಮುಂದೆ ಖಂಡಿತಾ ನಾನು ಬರುವೆ. ಇಂತಿ ನಿಮ್ಮ ಪ್ರೀತಿಯ ಶೋಭಾ ಶೆಟ್ಟಿ ಎಂದು ಪೋಸ್ಟ್ ಮಾಡಿದ್ದಾರೆ.

ಭಾನುವಾರದ ಎಪಿಸೋಡ್‌ನಲ್ಲಿ ಶೋಭಾ ನೀವು ಸೇವ್ ಆಗಿದ್ದೀರಾ ಎಂದು ಸುದೀಪ್ ಎಂದು ಹೇಳಿದ್ದರು. ಆದರೆ ಶೋಭಾ ಕೂಡಲೇ ಅಳಲು ಶುರು ಮಾಡಿದ್ದರು. ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದೇನೆ ಎಂದಿದ್ದರು. ಬಳಿಕ ಸುದೀಪ್ ಬುದ್ದಿ ಹೇಳಿ ಸಮಾಧಾನ ಮಾಡಿದ್ದರು. ಮನಸ್ಸು ಬದಲಾಯಿಸಿದ್ದ ಆಕೆ ಮತ್ತೆ ಮನೆಯಿಂದ ಹೊರ ಹೋಗುತ್ತೇನೆ ಎಂದು ಪಟ್ಟು ಹಿಡಿದರು. ಬಳಿಕ ಗರಂ ಆಗಿದ್ದ ಸುದೀಪ್ ಹೊರಗಿ ಹೋಗಿ ಎಂದು ಹೇಳಿದ್ದರು.

ಭಾನುವಾರದ ಎಪಿಸೋಡ್‌ನಲ್ಲಿ ಶೋಭಾ ಶೆಟ್ಟಿ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಗ್ಗೆ ಮಾಹಿತಿ ಇರಲಿಲ್ಲ. ಇನ್ನು ಸೋಮವಾರದ ಎಪಿಸೋಡ್‌ನಲ್ಲಿ ಬಿಗ್‌ಬಾಸ್ ಮುಖ್ಯದ್ವಾರದ ಮೂಲಕ ಮನೆಯಿಂದ ಹೊರ ಬರುವಂತೆ ಹೇಳಿದ್ದರು. ಸ್ವಇಚ್ಛೆಯಿಂದ ಮನೆ ತ್ಯಜಿಸಲು ಶೋಭಾ ಬಯಸಿರುವುದರಿಂದ ಹೊರ ಬನ್ನಿ ಎಂದರು.

ಬಿಗ್‌ಬಾಸ್ ಮಾತು ಕೇಳಿ ಮುಖ್ಯದ್ವಾರದ ಮುಂದೆ ನಿಂತಿದ್ದ ಶೋಭಾ ಕಣ್ಣಿರು ಹಾಕಿದರು. ಎಲ್ಲರಿಗೂ ಧನ್ಯವಾದ ತಿಳಿಸಿದರು. ತಮ್ಮ ಆಪ್ತರಲ್ಲಿ ಕ್ಷಮೆ ಕೇಳಿದರು. ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದರು. ಬಳಿಕ ಹೊಸ ಕ್ಯಾತೆ ತೆಗೆದರು. ಈಗ ಮನೆಯಿಂದ ಹೊರಹೋಗಬೇಕು ಅನ್ನಿಸುತ್ತಿಲ್ಲ ಎಂದರು. ಆದರೂ ಬಿಗ್‌ಬಾಸ್ ಮನೆ ಡೋರ್ ಓಪನ್ ಆಯಿತು. ಅಳುತ್ತಲೇ ಮನೆಯಿಂದ ಶೋಭಾ ಹೊರ ಬಂದಿದ್ದರು.

ಬಿಗ್‌ಬಾಸ್ ತೆಲುಗು ಸೀಸನ್ 7ರಲ್ಲಿ ಶೋಭಾ ಶೆಟ್ಟಿ ಭಾಗಿ ಆಗಿದ್ದರು. ಫಿನಾಲೆಗೆ ಇನ್ನು ಒಂದು ವಾರ ಇರುವಾಗ ಹೊರ ಬಂದಿದ್ದರು. ಎರಡು ವಾರಗಳ ಹಿಂದೆ ಕನ್ನಡ ಬಿಗ್‌ಬಾಸ್ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದರು. ರಜತ್ ಜೊತೆ ಮನೆಯೊಳಗೆ ಹೋಗಿದ್ದರು. ಒಳಗೆ ಪ್ರವೇಶಿಸುತ್ತಿದ್ದಂತೆ ಉಗ್ರಂ ಮಂಜು ಹಾಗೂ ಗೌತಮಿ ವಿರುದ್ಧ ಕೆಂಡಕಾರಿದ್ದರು. ನಿನ್ನ ಮುಖವಡ ಕಳಚುತ್ತೇನೆ ಎಂದು ಅಬ್ಬರಿಸಿದ್ದರು.

ಇದೀಗ ಎರಡು ವಾರಕ್ಕೆ ಶೋಭಾ ಶೆಟ್ಟಿ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಎಲಿಮಿನೇಟ್ ಆಗದೇ ಸ್ವ ಇಚ್ಛೆಯಿಂದ ಮನೆ ತೊರೆದಿದ್ದಾರೆ. ಅಭಿಮಾನಿಗಳು ಆಕೆಯ ಬೆಂಬಲಕ್ಕೆ ನಿಂತಿದ್ದಾರೆ.

More from Filmibeat

English summary
BBK 11: Everything as reason Behind, says Shobha Shetty after quit bigg boss show;
Read more about: bigg boss bigg boss kannada 11 tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X