BBK 11: ಬಯಸಿ ಕಳಪೆ ತಗೊಂಡು ಕಣ್ಣೀರಿಟ್ಟ ಶೋಭಾ; ಧನರಾಜ್ ಬಳಿ ಹೇಳಿದ್ದೇ ತಪ್ಪಾಯ್ತಾ?

By ಎಸ್ ಸುಮಂತ್

ಬಿಗ್ ಬಾಸ್ ಕನ್ನಡ ಸೀಸನ್ 11 ಹತ್ತನೇ ವಾರದತ್ತ ಸಾಗುತ್ತಿದೆ. ಒಬ್ಬೊಬ್ಬರಿಗೂ ಗೆಲ್ಲುವ ಹಠ ಹೆಚ್ಚಾಗಿದೆ. ಒಬ್ಬೊಬ್ಬರೇ ಮನೆಯಿಂದ ಖಾಲಿಯಾಗುತ್ತಿದ್ದಾರೆ. ಇನ್ನು ಉಳಿದಿರುವುದು ಕೆಲವು ದಿನಗಳು ಮಾತ್ರ. ಈ ಕೆಲವು ದಿನಗಳಲ್ಲಿ ಯಾರೂ ಉಳಿದುಕೊಳ್ಳುತ್ತಾರೆ ಅನ್ನೋದೆ ಮುಖ್ಯವಾಗುತ್ತದೆ. ನಾಮಿನೇಷನ್, ಎಲಿಮೇಮಿನೇಷನ್ ಎಷ್ಟು ಟಫ್ ಆಗುತ್ತಾ ಹೋಗುತ್ತದೆಯೋ ಆಟ ಕೂಡ ಅಷ್ಟೇ ಸ್ಟ್ರಾಂಗ್ ಆಗುತ್ತಾ ಹೋಗುತ್ತದೆ.

ಮನೆಗೆ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದವರು ಕೂಡ ಸರಿಯಾಗಿ ಹಾವಳಿ ಇಡುತ್ತಿದ್ದಾರೆ. ಮಂಜುಗೆ ಮಂಜುನೇ ಸರಿಸಾಟಿ ಎಂದುಕೊಂಡಿದ್ದರೆ, ತ್ರಿವಿಕ್ರಮ್ ಸ್ಟ್ರಾಂಗ್ ಎಂದುಕೊಂಡರೆ ಈಗ ಮಂಜುಗೆ ಸರಿಯಾಗಿ ಠಕ್ಕರ್ ಕೊಡ್ತಾ ಇರೋದೆ ರಜತ್. ಮನೆಯೊಳಗೆ ಸವಾಲಿನ ಮೇಲೆ ಸವಾಲು ಶುರುವಾಗಿದೆ. ಎರಡೆರಡು ಟೀಂ ಮಾಡಿಕೊಂಡು ಕಿತ್ತಾಡೋಕೆ ಶುರು ಮಾಡಿದ್ದಾರೆ.

Bigg boss kannada 11 Shobha Shetty upset with worst performer tag

ಹತ್ತನೇ ವಾರಕ್ಕೆ ಹುಲಿ ಕ್ಯಾಪ್ಟನ್

ಶುಕ್ರವಾರ ಹೊಸ ಕ್ಯಾಪ್ಟನ್‌ಗಾಗಿ ಟಾಸ್ಕ್‌ಗಳು ನಡೆಯುತ್ತವೆ. ಅದರಂತೆ ಬಿಗ್ ಬಾಸ್ ಕೋಲಿನ ಸಹಾಯದಿಂದ ನೀರು ತಂದು ಕ್ಯಾಪ್ಟನ್ ಆಗಲು ಅರ್ಹರಲ್ಲ ಎಂಬುವರ ಫೋಟೋ ಇರುವ ಬಾಕ್ಸ್ ನಲ್ಲಿ ತುಂಬುವ ಟಾಸ್ಕ್ ನೀಡಿತ್ತು. ಕೊನೆಯಲ್ಲಿ ಕ್ಯಾಪ್ಟನ್ ಸ್ಪರ್ಧೆಯ ಸಾಲಿನಲ್ಲಿದ್ದವರೆಲ್ಲ ಔಟ್ ಆದರೂ. ಆದರೆ ಧನರಾಜ್ ಪಾತ್ರೆಗೆ ಅಷ್ಟೊಂದು ನೀರು ತುಂಬಿರಲಿಲ್ಲ. ಹೀಗಾಗಿ ಈ ವಾರದ ಕ್ಯಾಪ್ಟನ್ ಆಗಿಬಿಟ್ರು. ಬೆಳಗ್ಗೆಯೇ ಹನುಮಂತು ಈ ಬಾರಿ ಕ್ಯಾಪ್ಟನ್ ಆಗೋ ಲಕ್ಷಣ ಕಾಣಿಸ್ತಾ ಇದೆ ಬಿಡಪ್ಪ ಎಂದಿದ್ದರು.

ಧನರಾಜ್ ಬಳಿ ಶೋಭಾ ಬೇಸರ

ಇನ್ನು ಧನರಾಜ್ ಜೊತೆಗೆ ಶೋಭಾ ಕೂತು ತಿಂಡಿ ತಿನ್ನುವಾಗ ವಾರದ ವಿಮರ್ಶೆಯಲ್ಲಿ ತೊಡಗಿದ್ದರು. ಈ ವಾರ ನಾನು ಏನು ಮಾಡಿಲ್ಲ ಎನಿಸುತ್ತದೆ ಎಂದಿದ್ದರು. ನಾನು ಮಾತ್ರವಲ್ಲ, ಯಾರೂ ಏನು ಮಾಡಿಲ್ಲ. ಸುಮ್ಮನೆ ನಾನೇ ಹೋಗಿ ಕಳಪೆ ಬೋರ್ಡ್ ಹಾಕಿಕೊಂಡು ಜೈಲಿನಲ್ಲಿ ಕೂತು ಬಿಡಬೇಕು ಎನಿಸುತ್ತಿದೆ ಎಂದಿದ್ದರು. ಧನರಾಜ್ ಬಳಿ ಈ ರೀತಿ ಹೇಳಿದ್ದೆ ಶೋಭಾಗೆ ಮುಳುವಾಯ್ತಾ ಅಂತ.

ಧನರಾಜ್‌ಗೆ ಸ್ಪೆಷಲ್ ಅಧಿಕಾರ

ಅಂದಹಾಗೆ ಧನರಾಜ್ ಕ್ಯಾಪ್ಟನ್ ಆದ ಮೇಲೆ ಒಂದಷ್ಟು ವಿಶೇಷ ಅಧಿಕಾರವನ್ನು ಪಡೆದಿದ್ದಾರೆ. ಪ್ರತಿಸಲ ಹೊಸ ಕ್ಯಾಪ್ಟನ್ ಬಂದಾಗಲೂ ಬಿಗ್ ಬಾಸ್ ಏನಾದರೊಂದು ವಿಶೇಷ ಅಧಿಕಾರವನ್ನು ಹೆಚ್ಚು ಮಾಡುತ್ತಾರೆ. ಅದರಂತೆ ಹತ್ತನೇ ವಾರಕ್ಕೆ ಕ್ಯಾಪ್ಟನ್ ಆಗಿರುವ ಧನರಾಜ್ ಗೆ ಉತ್ತಮ ಹಾಗೂ ಕಳಪೆ ಒಬ್ಬರೇ ಆಯ್ಕೆ ಮಾಡುವ ಅವಕಾಶ ನೀಡಿದೆ.

ಕಳಪೆ ಪಟ್ಟ ಹೊತ್ತ ಶೋಭಾ

ಧನರಾಜ್ ಬಿಗ್ ಬಾಸ್ ಕೊಟ್ಟ ಅಧಿಕಾರ ಬಳಸಿಕೊಂಡು, ಶೋಭಾ ಹೇಳಿದ್ದ ಮಾತು ನೆನಪಿಟ್ಟುಕೊಂಡು, ಶೋಭಾ ಅವರಿಗೇನೆ ಕಳಪೆ ಕೊಟ್ಟಿದ್ದಾರೆ. ಈ ವಾರ ಪೂರ್ತಿ ನೀವೂ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ ಎಂಬ ಕಾರಣ ಹೇಳಿದ್ದಾರೆ. ಧನರಾಜ್ ಕಳಪೆ ಕೊಟ್ಟ ತಕ್ಷಣ ರೊಚ್ಚಿಗೆದ್ದ ಶೋಭಾ ನನ್ನನ್ನೇ ಯಾಕೆ ಟಾರ್ಗೆಟ್ ಮಾಡೋದು ಎಂದಿದ್ದಾರೆ. ಆಯ್ತು ಕೊಡಿ ಕಳಪೆ ತೆಗೆದುಕೊಳ್ತೀನಿ ಎಂದು ಸವಾಲಿನಂತೆ ಮಾತಾಡಿ, ಅವರ ಅಮ್ಮನಿಗೆ ಕ್ಷಮೆ ಕೇಳಿದ್ದಾರೆ. ಜೈಲಿಗೆ ಹೋಗಿ ಮಲಗಿ, ಕಣ್ಣೀರು ಹಾಕುತ್ತಾ ನಂಗೆ ಕಳಪೆ ಕೊಡುತ್ತಾರೆಂದು ಭಾವಿಸಿಯೇ ಇರಲಿಲ್ಲ ಎಂದಿದ್ದಾರೆ. ಆದರೆ ಬೆಳಗ್ಗೆಯೆಲ್ಲಾ ಈ ವಾರ ಏನು ಮಾಡಿಲ್ಲ ಎಂದು ಕೊರಗಿದ್ದ ಶೋಭಾ ಅದೇ ರಿಯಲ್ ಆಗಿದ್ದರೆ ಕಳಪೆ ಸ್ವೀಕರಿಸಬಹುದಿತ್ತು ಅಲ್ವಾ.

More from Filmibeat

English summary
BBK 11: Here is the details about Shobha gets angry at Dhanraj giving her worst performer tag;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X