BBK 11 Grand Finale: ಕೊನೆಗೂ ಭವ್ಯಾ ಗೌಡ ಎಲಿಮಿನೇಟ್; ಮಾತಲ್ಲೇ ತಿವಿದ ಕಿಚ್ಚ
ಬಿಗ್‌ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆ ಗ್ರ್ಯಾಂಡ್ ಆಗಿಯೇ ಶುರುವಾಗಿದೆ. ಕಿಚ್ಚ ಭರ್ಜರಿ ಡ್ಯಾನ್ಸ್ ಮಾಡಿ ವೇದಿಕೆಗೆ ಬಂದಿದ್ದಾರೆ. ಬೆಳಗ್ಗೆಯಿಂದಲೇ ಚಿತ್ರೀಕರಣ ಆರಂಭವಾಗಿತ್ತು. ಈಗಾಗಲೇ ಒಬ್ಬರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗ್ತಿದೆ. ಭವ್ಯಾ ಗೌಡ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.
ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ರಜತ್ ಮೊದಲ ಎಲಿಮಿನೇಷನ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿತ್ತು. 50 ದಿನಗಳ ಬಳಿಕ ಮನೆಗೆ ಬಂದ ರಜತ್ ಯಾವುದೇ ಕಾರಣಕ್ಕೂ ವಿನ್ನರ್ ಆಗೋಕೆ ಸಾಧ್ಯವಿಲ್ಲ ಎನ್ನುವುದು ಕೆಲವರ ವಾದ. ಎಲಿಮಿನೇಟ್ ಆಗಿರುವ ಮೊದಲ ಫೈನಲಿಸ್ಟ್ ಅವರೇ ಎನ್ನುವುದು ಊಹಾಪೋಹ ಆಗಿತ್ತು. ಆದರೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ.

ಭವ್ಯಾ ಗೌಡ ವಿನ್ ಆಗುತ್ತಾರೆ ಎಂದೇ ಕೆಲವರು ಭಾವಿಸಿದ್ದರು. ಈ ಬಾರಿ ಮಹಿಳಾ ಸ್ಪರ್ಧಿಗೆ ಟ್ರೋಫಿ ಗೆಲ್ಲುವ ಅವಕಾಶ ಸಿಗುವ ಸಾಧ್ಯತೆಯಿದೆ ಎನ್ನುವ ಚರ್ಚೆ ಕೂಡ ಕಳೆದೊಂದು ವಾರದಿಂದ ಕೇಳಿಬರ್ತಿತ್ತು. 6 ಜನ ಫೈನಲಿಸ್ಟ್‌ಗಳಲ್ಲಿ ಭವ್ಯಾ ಹಾಗೂ ಮೋಕ್ಷಿತಾ ಮಹಿಳಾ ಸ್ಪರ್ಧಿಗಳಾಗಿದ್ದರು. ಭವ್ಯಾ ಗೌಡ ಗೆಲ್ಲಬಹುದು ಎಂದುಕೊಂಡಿದ್ದವರಿಗೆ ಶಾಕ್ ಆಗಿದೆ.
ಈಗಾಗಲೇ ಭವ್ಯಾ ಗೌಡ ಎಲಿಮಿನೇಟ್ ಆಗಿದ್ದಾರೆ. 6ನೇ ಸ್ಥಾನಕ್ಕೆ ಆಕೆ ತೃಪ್ತಿಕೊಂಡಿದ್ದಾರೆ. ನೀಲಿ ಬಣ್ಣದ ಡಿಸೈನರ್ ಗೌನ್‌ನಲ್ಲಿ ಭವ್ಯಾ ಗೌಡ ಕಾಣಿಸಿಕೊಂಡಿದ್ದರು. ಜಬರ್ದಸ್ತ್ ಡ್ಯಾನ್ಸ್ ಪರ್ಫಾರ್ಮನ್ಸ್ ಕೂಡ ಮಾಡಿದ್ದರು.
ಈಗಾಗಲೇ ಎಲಿಮಿನೇಟ್ ಆಗಿದ್ದ ಸ್ಪರ್ಧಿಗಳು ಬಿಗ್‌ಬಾಸ್ ಫಿನಾಲೆ ವೇದಿಕೆಗೆ ಬಂದಿದ್ದಾರೆ. ಕೆಲವರು ಪರ್ಫಾರ್ಮನ್ಸ್ ಮಾಡಿ ರಂಜಿಸಿದ್ದಾರೆ. ಅವರನ್ನೆಲ್ಲಾ ಸುದೀಪ್ ಮಾತನಾಡಿದ್ದಾರೆ. ಯಾರಿಗೆ ಯಾರು ಗೆಲ್ಲಬೇಕು, ಯಾರು ಗೆಲ್ಲಬಾರದು ಎನಿಸುತ್ತದೆ ಎಂದು ಕೇಳಿದ್ದಾರೆ. ಆಗ ಒಬ್ಬೊಬ್ಬರು ತಮ್ಮ ಫೇವರಿಟ್ ಸ್ಪರ್ಧಿಗಳನ್ನು ಸೂಚಿಸಿದ್ದರು.
ಮೊದಲ ದಿನದಿಂದಲೂ ಭವ್ಯಾ ಗೌಡ ದೊಡ್ಮನೆ ಒಳಗೆ ಇದ್ದರು. ಟಾಸ್ಕ್ ಹಾಗೂ ಎಂಟರ್‌ಟೈನ್‌ಮೆಂಟ್ ಎರಡರಲ್ಲೂ ಸಾಧ್ಯವಾದಷ್ಟು ಭವ್ಯಾ ಗೌಡ ಗೆದ್ದಿದ್ದರು. ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿತ್ತು. ಎರಡು ವಾರ ಮನೆಯ ಕ್ಯಾಪ್ಟನ್ ಆಗಿದ್ದರು. ಹನುಮಂತನ ಜೊತೆ ಸಣ್ಣದಾಗಿ ಕಿರಿಕ್ ಕೂಡ ಮಾಡಿಕೊಂಡಿದ್ದರು. ಆಕೆಗೆ 60 ಲಕ್ಷಕ್ಕೂ ಅಧಿಕ ಮತಗಳು ಸಿಕ್ಕಿತ್ತು.
ಕಳೆದ ಸೀಸನ್‌ನಲ್ಲಿ 6ನೇ ಸ್ಥಾನದಲ್ಲಿದ್ದ ಸ್ಪರ್ಧಿಗೆ 20 ಲಕ್ಷ ಮತಗಳು ಮಾತ್ರ ಸಿಕ್ಕಿತ್ತು. ಆ ಲೆಕ್ಕದಲ್ಲಿ 3 ಪಟ್ಟು ಹೆಚ್ಚು ಮತಗಳು ಭವ್ಯಾ ಗೌಡ ಪಡೆದಂತಾಗಿದೆ. ಭವ್ಯಾ ಗೌಡ ಅವರಿಗೆ ಈ ಬಾರಿ ತಾವು ಟ್ರೋಫಿ ಗೆಲ್ಲುವ ಬಗ್ಗೆ ನಂಬಿಕೆ ಇರಲಿಲ್ಲ. ಈ ಬಗ್ಗೆ ಸುದೀಪ್ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಭವ್ಯಾ ವೇದಿಕೆಗೆ ಬಂದಾಗಲೂ ಈ ವಿಚಾರ ಪ್ರಸ್ತಾಪಿಸಿ ಸುದೀಪ್ ಕಿವಿ ಹಿಂಡಿದರು. ಕಲರ್ ಕನ್ನಡ ವಾಹಿನಿಯ 'ಗೀತಾ' ಧಾರಾವಾಹಿಯಲ್ಲಿ ನಟಿಸಿ ಭವ್ಯಾ ಗಮನ ಸೆಳೆದಿದ್ದರು. ಬಿಗ್‌ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಆಕೆ ಒಳಗೆ ಹೋಗಿದ್ದರು.
ಇನ್ನು ಬಿಗ್‌ಬಾಸ್ ಸೀಸನ್ 11ರ ಪ್ರಯೋಜಕರಿಂದ ಒಟ್ಟು ಮೂರುವರೆ ಲಕ್ಷ ನಗದು ಬಹುಮಾನ ಭವ್ಯಾ ಗೌಡ ಅವರಿಗೆ ಸಿಕ್ಕಿದೆ.


Click it and Unblock the Notifications











