BBK 11: ಕೀರ್ತಿರಾಜ್ ಮುಂದೆ ಕಿಚ್ಚನ ಲುಕ್ ಫುಲ್ ಟ್ರೋಲ್; ಅಂಥದ್ದೇನಾಯ್ತು?

By ಎಸ್ ಸುಮಂತ್

ಬಿಗ್ ಬಾಸ್‌ಗೆ ಎರಡು ರೀತಿಯ ಫ್ಯಾನ್ಸ್ ಇದ್ದಾರೆ. ಇಡೀ ಬಿಗ್ ಬಾಸ್ ನೋಡುವ ವರ್ಗ ಒಂದು ಕಡೆಯಾದರೆ, ವೀಕೆಂಡ್ ಶೋ ನೋಡುವವರು ಮತ್ತೊಂದು ವರ್ಗ. ಎಂಥವರೇ ಆಗಲೀ ಸುದೀಪ್ ಮಾತನಾಡುವ ರೀತಿಗೆ, ಅವರ ನಿರೂಪಣೆಗೆ ಫಿದಾ ಆಗದೆ ಇರಲಾರರು. ಹಾಗೇ ತಪ್ಪು ಮಾಡಿದ ಮನೆ ಮಂದಿಗೆ ತಮ್ಮದೇ ಸ್ಟೈಲ್ ನಲ್ಲಿ ಬುದ್ದಿ ಮಾತು ಹೇಳುತ್ತಾರೆ.

ವೀಕೆಂಡ್ ಶೋನಲ್ಲಿ ಸುದೀಪ್ ಬಂದ್ರೇನೆ ಒಂದು ಕಳೆ. ವೀಕ್ ಡೇಸ್ ಶೋನಲ್ಲಿ ಏನೇ ಹಾರಾಟ ಆಡಿದರು ಕೂಡ ಸುದೀಪ್ ಕೇಳುವ ಒಂದೇ ಒಂದು ಪ್ರಶ್ನೆಗೆ ಗಪ್‌ ಚುಪ್ ಆಗಿ ಹೋಗ್ತಾರೆ. ಸುದೀಪ್ ಫನ್ ಮಾಡ್ತಾರೆ, ಮನೆ ಮಂದಿಯೊಳಗಿರುವ ಮನಸ್ಸಿನ ನೋವು, ಅಸಮಾಧಾನವನ್ನು ಕೆಲವೊಂದು ಟಾಸ್ಕ್‌ಗಳ ಮೂಲಕ ಹೊರ ಹಾಕಿಸುತ್ತಾರೆ. ಆದರೆ ಈ ವೀಕೆಂಡ್ ಶೋನಲ್ಲಿ ಸುದೀಪ್ ಅವರ ಕೊಟ್ಟ ಒಂದು ರಿಯಾಕ್ಷನ್ ಹಲವರಿಗೆ ಬೇಸರ ತರಿಸಿದೆ.

bigg boss Kannada 11 Sudeep Looks Trolled when Dharma Keerthiraj on stage

ವೇದಿಕೆಯಲ್ಲಿ ಧರ್ಮ ಕೀರ್ತಿರಾಜ್

ಈ ವಾರ ನಿರೀಕ್ಷಿತ ಸ್ಪರ್ಧಿಯೇ ಮನೆಯಿಂದ ಹೊರಗೆ ಬಂದಿದ್ದಾರೆ. ಧರ್ಮ ಕೀರ್ತಿರಾಜ್ ಬಿಗ್ ಬಾಸ್‌ನಿಂದ ಹೊರಗೆ ಬಂದಿದ್ದಾರೆ. ಈ ವೇಳೆ ಸುದೀಪ್ ಅವರ ಜೊತೆಗೆ ವೇದಿಕೆ ಮೇಲೆ ಬಿಗ್ ಬಾಸ್ ಮನೆಯ ಜರ್ನಿಯ ಬಗ್ಗೆ ಹಂಚಿಕೊಂಡಿದ್ದರು. ಮನೆಯಿಂದ ಹೊರ ಬರುವುದಕ್ಕೆ ಅಲ್ಲಿ ಅರ್ಥ ಮಾಡಿಕೊಳ್ಳುವುದು ತಡವಾಯ್ತು ಎಂದಿದ್ದಾರೆ.

ವ್ಯಂಗ್ಯದ ರಿಯಾಕ್ಷನ್ ಕೊಟ್ರಾ ಕಿಚ್ಚ?

ಈ ವೇಳೆ ಕೀರ್ತಿರಾಜ್ ಕೂಡ ಮಗನ ಬಗ್ಗೆ ಹೆಮ್ಮೆಯ ಮಾತುಗಳನ್ನ ಆಡಿದ್ದರು. 'ಬಿಗ್ ಬಾಸ್ ಗೆಲ್ಲಲಿಲ್ಲ ಎಂಬ ಬೇಸರವಿದ್ದರೂ, ನೀನು ಇಷ್ಟು ದಿನ ಇದ್ದ ರೀತಿಗೆ ಕರುನಾಡ ಜನ ಮನ ಗೆದ್ದಿದ್ದೀಯಾ. ಅದು ನಮಗೆ ತುಂಬಾನೇ ಖುಷಿ ಕೊಟ್ಟ ವಿಚಾರವಾಗಿದೆ' ಎಂದಿದ್ದಾರೆ. ಆಗ ಸುದೀಪ್ ಅವರು, ನಿಮ್ಮ ಒಳ್ಳೆಯತನದ ಬಗ್ಗೆ ಬಹಳಷ್ಟು ಚೆನ್ನಾಗಿ ಮಾತನಾಡಿದರು, ಯಾಕೆ ಹೊರಗೆ ಬಂದ್ರಿ ಹೇಳಿ ಎಂದಿದ್ದಾರೆ. ಇಲ್ಲಿ ಸುದೀಪ್ ಅವರು ಮುಂದಕ್ಕೆ ಹೋಗೋಣ ಎಂಬ ರಿಯಾಕ್ಷನ್‌ನಲ್ಲಿದ್ದರು.

ಕಿಚ್ಚನ ರಿಯಾಕ್ಷನ್ ಟ್ರೋಲ್

ಈ ವಿಡಿಯೋ ಈಗ ಟ್ರೋಲ್‌ಗೆ ಕಾರಣವಾಗಿದೆ. ಟ್ರೋಲ್ ಮಾಡಿದವರು 'ಕಿಚ್ಚನ ಈ ಲಾಸ್ಟ್ ಲುಕ್ ಇಷ್ಟವಾಗಲಿಲ್ಲ. ಕೀರ್ತಿ ರಾಜ್ ಅವರು ಕೂಡ ಹಿರಿಯ ಕಲಾವಿದರು' ಎಂಬುದನ್ನು ಮೆನ್ಶನ್ ಮಾಡಿದ್ದಾರೆ. ಈ ಟ್ರೋಲ್ ಮಾಡಿದವರ ಉದ್ದೇಶ, ಸುದೀಪ್ ಅವರು ಕೀರ್ತಿರಾಜ್ ಅವರ ಬಳಿ ಅಭಿಪ್ರಾಯ ಕೇಳಿದಾಗ ಒಂದು ಸ್ಮೈಲ್ ಆದರೂ ಕೊಡಬಹುದಿತ್ತು. ಏನು ರಿಯಾಕ್ಷನ್ ಕೊಡದೆ ಧರ್ಮ ಅವರ ಬಳಿ ಮಾತನಾಡಿದ್ದು, ಅವರಿಗೆ ಬೇಸರ ತರಿಸಿದೆ.

ಕಮೆಂಟ್ ಸೆಕ್ಷನ್ ಆಫ್

ಈ ವಿಡಿಯೋ ಅಪ್ಲೋಡ್ ಮಾಡಿರುವುದು ಮಲ್ಲಿಕಾರ್ಜುನ್ ಎಂಬ ಪೇಜ್‌ನಲ್ಲಿ. ಆದರೆ ಕಮೆಂಟ್ ಸೆಕ್ಷನ್ ಆಫ್ ಮಾಡಲಾಗಿದೆ. ಇನ್ನು ಈ ವಿಡಿಯೋಗೆ ಈಗಾಗಲೇ 82 ಸಾವಿರಕ್ಕೂ ಹೆಚ್ಚು ಜನ ಲೈಕ್ ಕೊಟ್ಟಿದ್ದಾರೆ. ಮೊದಲೇ ಧರ್ಮ, ದರ್ಶನ್ ಅವರ ಅಭಿಮಾನಿ ಹೊರಗೆ ಬಂದ್ರಾ ಎಂಬೆಲ್ಲಾ ಪ್ರಶ್ನೆಗಳು ಚರ್ಚೆಯಾಗುತ್ತಿರುವ ಬೆನ್ನಲ್ಲೇ ಈ ವಿಡಿಯೋ ಕೂಡ ಟ್ರೋಲ್ ಆಗ್ತಾ ಇದೆ. ಆದರೆ ಸುದೀಪ್ ಅವರಿಗೆ ಸಮಯದ ಅಭಾವವೋ, ಧರ್ಮ ಹೇಳಿದಂತೆ ಆಡಲಿಲ್ಲ ಎಂಬ ಬೇಸರವೋ ಇದ್ದೀತೇನೋ. ಯಾಕಂದ್ರೆ ಧರ್ಮ ಆರಂಭದಲ್ಲಿ ಬಂದಾಗ ಅನುಷಾ ರೈ ಹಾಗೂ ಧರ್ಮ ಅವರನ್ನ ವೇದಿಕೆ ಮೇಲೆ ನಿಲ್ಲಿಸಿ ಫನ್ ಮಾಡಿದ್ದು ಕೂಡ ಇದೇ ಸುದೀಪ್ ಅವರು. ಸದ್ಯಕ್ಕೆ ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಾ ಇದೆ.

More from Filmibeat

English summary
BBK 11: Here is the details about Kiccha Sudeep gets trolled for the way he behaved in front of Keerthiraj;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X