BBK 11: ಬಹಳ ಹಾರಾಡುತಿದ್ದ ರಜತ್ ಬಾಲ ಕತ್ತರಿಸಿದ ಕಿಚ್ಚ ಸುದೀಪ್!

By ಎಸ್ ಸುಮಂತ್

ಬಿಗ್ ಬಾಸ್ ಕನ್ನಡ ಸೀಸನ್ 11ಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಜತ್ ಹಾಗೂ ಶೋಭಾ ಶೆಟ್ಟಿ ಬಂದಿದ್ದಾರೆ. ರಜತ್ ಆರಂಭದಿಂದಾನು ಒಳ್ಳೆ ರೌಡಿಸಂ ತೋರಿಸುವ ರೀತಿಯೇ ಆಟವಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರಬೇಕು ಅಂದ್ರೆ ಧ್ವನಿ ಜೋರಾಗಿರಬೇಕು ಎಂದೇ ಥಿಂಕ್ ಮಾಡಿದ್ದಾರೆ ಎನಿಸುತ್ತದೆ. ಅದಕ್ಕೆ ಬಂದಾಗಿನಿಂದ ಸವಾಲುಗಳನ್ನು ಹಾಕುತ್ತಲೇ ಇದ್ದಾರೆ. ಅದರಲ್ಲೂ ಮಂಜುಗೆ ನೇರಾ ನೇರ ಸವಾಲು ಹಾಕಿದ್ದಾರೆ.

ರಜತ್ ಬಂದಾಗಿನಿಂದ ಶಾಂತಿಯುತ ವಾತಾವರಣವೇ ಇಲ್ಲ. ನಮ್ಮ ಮನೆಯಲ್ಲಿ ಪಾತ್ರೆನೆ ತೊಳೆದಿಲ್ಲ ಗುರು. ಅದು ಮಾಡಿಲ್ಲ, ಇದು ಮಾಡಿಲ್ಲ ಅಂತಾನೇ ರಜತ್ ಎಲ್ಲರ ಮುಂದೆ ಓಡಾಡುತ್ತಿರುತ್ತಾರೆ. ಅಷ್ಟೇ ಅಲ್ಲ ಅವರ ಬಾಯಿಂದ ಬರೋದೆ ಅಸಭ್ಯವಾದ ಮಾತು. ಬಿಲ್ಡಪ್ ಕೊಟ್ಕೊಂಡು ಓಡಾಡೋದಲ್ಲದೆ ಕಿವಿ ಮುಚ್ಚಿಕೊಳ್ಳುವಂತ ಮಾತನ್ನೇ ಆಡುತ್ತಾ ಇರುತ್ತಾರೆ.

Bigg Boss kannada 11 Sudeep warns Rajath For His Aggressive Behaviour

ರಜತ್‌ಗೆ ಬೆವರಿಳಿಸಿದ ಕಿಚ್ಚ

ವಾರದ ಕಥೆ ಕಿಚ್ಚನ ಜೊತೆ ಶನಿವಾರದ ಪಂಚಾಯ್ತಿಯಲ್ಲಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಕಳೆದ ವಾರವಷ್ಟೇ ವೈಲ್ಡ್ ಕಾರ್ಡ್ ಮೂಲಕ ರಜತ್ ಎಂಟ್ರಿ ಕೊಟ್ಟಿದ್ದರು. ಆಡಿದ ಮಾತುಗಳು ಒಂದೊಂದು ಮುತ್ತುಗಳಾಗಿತ್ತು. ಆ ಮಾತುಗಳು ಕಿಚ್ಚನ ಕೋಪಕ್ಕೂ ಗುರಿಯಾಗಿದೆ. ಇಂದು ಪಂಚಾಯ್ತಿಯಲ್ಲಿ ರಜತ್‌ಗೆ ಎಚ್ಚರಿಕೆ ನೀಡಿದ್ದಾರೆ.

ರಜತ್ ಈಗ ಗಪ್ ಚುಪ್

ಅಂದು ಆಡಿದ ಮಾತುಗಳನ್ನೆಲ್ಲ ಎಲ್ಲಿ ನನ್ನ ಮುಂದೆ ಆಡಿ ಈಗ ಎಂದಾಗ ರಜತ್ ತಪ್ಪಾಯ್ತು ಸರ್. ಇನ್ಮುಂದೆ ಆ ರೀತಿಯ ಮಾತುಗಳನ್ನ ಆಡಲ್ಲ ಎಂದಿದ್ದಾರೆ. ಆಗ ಸುದೀಪ್ ಅವರು, ನೋನೋ ಆಡೋದಕ್ಕೆ ಅವಕಾಶವೇ ಇಲ್ಲ.. ನೇರವಾಗಿ ಬಾಗಿಲು ತೆರೆಯುತ್ತೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಕಿಚ್ಚ ಸುದೀಪ್ ಒಳ್ಳೆಯವರಿಗೆ, ಒಳ್ಳೆಯತನಕ್ಕೆ ಭೇಷ್ ಎಂದು ಬೆನ್ನು ತಟ್ಟುತ್ತಾರೆ, ಕೇಳಿದ್ದನ್ನು ಕೊಡುತ್ತಾರೆ. ಈಗ ಹನುಮಂತು ಒಳ್ಳೆಯತನಕ್ಕೆ ಕಿಚ್ಚ ಸುದೀಪ್ ಅವರೇ ಮನಸೋತಿಲ್ವಾ ಹಾಗೆ. ಏನಾದರೂ ಜಾಸ್ತಿ ಹಾರಾಡಿದರೆ ರೆಕ್ಕೆಯನ್ನ ಮಾತಲ್ಲೇ ಕಟ್ಟು ಮಾಡಿ ಬಿಡುತ್ತಾರೆ.

ಕಿಚ್ಚನ ಮಾತಿಗೆ ಫ್ಯಾನ್ಸ್ ಕಾತರ

ಕಿಚ್ಚನ ಪಂಚಾಯ್ತಿ ಶುರುವಾಗುವುದಕ್ಕೂ ಮುನ್ನವೇ ಕಲರ್ಸ್ ಕನ್ನಡ ವೀಕ್ಷಕರ ಮುಂದೆ ಪ್ರಶ್ನೆ ಇಡುತ್ತದೆ. ಕಿಚ್ಚನಿಗೆ ನಿಮ್ಮ ಪ್ರಶ್ನೆಗಳೇನು..? ಈ ಪೋಸ್ಟ್‌ಗೆ ಆಲ್ಮೋಸ್ಟ್ ಎಲ್ಲರೂ ಕಿಟ್ಟ ಉತ್ತರ ರಜತ್. ವೈಲ್ಡ್ ಕಾರ್ಡ್ ಎಂಟ್ರಿ ರಜತ್‌ಗೆ ಬಾದ್ ಶಾ ಬೆವರಿಳಿಸುವುದನ್ನು ನೋಡಬೇಕಿದೆ ಎಂದು. ಇದೀಗ ಅದು ನಿಜವಾಗಿದೆ. ಇನ್ಮೇಲಾದ್ರೂ ರಜಯ್ ಗಪ್ ಚುಪ್ ಆಗ್ತಾರಾ ನೋಡಬೇಕಿದೆ.

ಇನ್ಮೇಲೆ ರಿಯಲ್ ಆಟ

ರಜತ್ ನಾಲಿಗೆಗೆ ಯಾವುದೇ ಥರದ ಬ್ರೇಕ್ ಇಲ್ಲ ಎನಿಸುತ್ತದೆ. ಹೆಣ್ಣು ಮಕ್ಕಳು ಇದೆ ಎಂಬುದನ್ನು ನೋಡಲ್ಲ ಹುಂಬತನ ತೋರಿಸುತ್ತಾರೆ. ಸೆಡೆ ನನ್ ಮಗ, ವೇಸ್ಟ್ ಬಾಡಿ, ಮುಚ್ಕೊಂಡು ಹೋಗೋಲೋ, ಈ ಸೆಡೆಗಳನ್ನೆಲ್ಲ ಮನೆಗೆ ಕಳುಹಿಸಿಯೇ ನಾನು ಮನೆಗೆ ಹೋಗೋದು. ರಜತ್ ಮಾತು ಈ ಥರ ಇರುತ್ತವೆ. ಈ ಮಾತುಗಳನ್ನು ಕೇಳೋದಕ್ಕೆ ಆಗುತ್ತಿಲ್ಲ. ತಿದ್ದಿಕೊಳ್ಳಿ ಎಂದು ಮೆನ್ಶನ್ ಮಾಡಿ ಕಳಪೆ ಕೊಟ್ಟರು ಅಲ್ಲಿಯೂ ಅದೇ ಪದ ಬಳಕೆ, ಅದೇ ಸೆಡೆಗಳು. ಅದರ ಜೊತೆಗೆ ಇನ್ಮೇಲೆ ರಿಯಲ್ ಆಟ ಶುರು ಗುರು ಎಂಬ ಬಿಲ್ಡಪ್ ಮಾತು. ಇದಕ್ಕೆಲ್ಲ ಕಿಚ್ಚ ಸರಿಯಾಗಿ ಬೆವರಿಳಿಸಿದ್ದಾರೆ.

More from Filmibeat

English summary
BBK 11: Kichcha Sudeep Slams Rajath For Using Foul Language
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X