BBK 11: ಬೆಂಕಿ ಹತ್ತಿಸ್ತೀನಿ ಎಂದ ಚೈತ್ರಾ; ಇನ್ಮುಂದೆ ಬಿಗ್ ಬಾಸ್ ಮನೆಯಲ್ಲಿ ಹೊಗೆಯೋ ಹೊಗೆ!

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ವಾರವಿಡಿ ಅಲ್ಲಿನವರ ಜಗಳ, ಗುದ್ದಾಟ, ಭಿನ್ನಾಭಿಪ್ರಾಯ ಇವೆಲ್ಲವನ್ನು ನೋಡಿ ನೋಡಿ ಸುಸ್ತಾದ ಪ್ರೇಕ್ಷಕರಿಗೆ ವೀಕೆಂಡ್‌ನಲ್ಲಿ ಬೂಸ್ಟ್ ಕೊಡೋದು ಕಿಚ್ಚ ಸುದೀಪ್ ಅವರ ಪಂಚಾಯ್ತಿ. ವೀಕ್ಷಕರು ಮೊದಲೇ ಗೆಸ್ ಮಾಡಿ ಬಿಡುತ್ತಾರೆ. ಯಾರಾದರೂ ರಾಂಗ್ ಡಿಸಿಷನ್ ತೆಗೆದುಕೊಂಡರೆ ಅಥವಾ ತಪ್ಪಾಗಿ ಮಾತಾಡಿದರೆ ಇರಿ ಇರಿ ನಿಮಗೆ ಶನಿವಾರ, ಭಾನುವಾರ ಇದೆ ತಾಳ್ಮೆಯಿಂದ ಇರಿ ಎಂದು ಕಮೆಂಟ್ ಹಾಕುವುದಕ್ಕೆ ಶುರು ಮಾಡುತ್ತಾರೆ.

ವೀಕ್ಷಕರು ಗೆಸ್ ಮಾಡಿದಂತೆ ಸುದೀಪ್ ಮನೆಯ ವಾತಾವರಣವನ್ನು ಸರಿ ಮಾಡುತ್ತಾರೆ. ನಾನೇ ಎಲ್ಲಾ ಎಂದು ಮೆರೆಯುವವರಿಗೂ ಸಮಾಧಾನವಾಗಿಯೇ ಬಿಸಿ ಮುಟ್ಟಿಸುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಹಾರಾಡಿದರೂ ಪ್ರಯೋಜನವಿಲ್ಲ ಎಂಬುದನ್ನು ಮನವರಿಕೆ ಮಾಡುತ್ತಾರೆ. ಈ ವಾರ ಕಿಚ್ಚನ ಪಂಚಾಯ್ತಿಯಲ್ಲಿ ವೀಕ್ಷಕರಿಂದ ಸ್ಪರ್ಧಿಗಳಿಗೆ ಗಿಫ್ಟ್ ಬಂದಿದ್ದನ್ನು ನೋಡಬಹುದು.

Bigg boss kannada 11 The contestants receive special gifts

ಸ್ಪರ್ಧಿಗಳಿಗೆ ಬಂತು ವಿಶೇಷ ಗಿಫ್ಟ್‌ಗಳು

ಕಳೆದ ಸೀಸನ್‌ನಲ್ಲೂ ಬಿಗ್ ಬಾಸ್ ಫ್ಯಾನ್ಸ್ ಒಂದಷ್ಟು ಗಿಫ್ಟ್ ಕಳುಹಿಸಿದ್ದರು. ಆದರೆ ಈ ಬಾರಿ ಅದೇ ರೀತಿ ಗಿಫ್ಟ್‌ಗಳು ಬಂದಿದ್ದು, ಬಹಳ ಬೇಗ ಬಂದಿದೆ. ಬಿಗ್ ಬಾಸ್ ಮನೆಗೆ ಬರುವುದಕ್ಕೂ ಮುನ್ನ ಆ ಸ್ಪರ್ಧಿಗಳು ಜನತೆಗೆ ಕಂಡಿದ್ದು ಹೇಗೆ..? ಬಿಗ್ ಬಾಸ್ ಮನೆಗೆ ಬಂದಾಗ ಹೇಗೆ ಆಗಿದ್ದಾರೆ..? ಯಾವ ಥರ ಆಡಬೇಕಾಗಿದೆ..? ವೀಕ್ಷಕರ ನಿರೀಕ್ಷೆ ಏನಿತ್ತು..? ಈ ಎಲ್ಲವನ್ನು ಆಧಾರವಾಗಿಟ್ಟುಕೊಂಡು ಪ್ರತಿಯೊಬ್ಬ ಸ್ಪರ್ಧಿಗೂ ಗಿಫ್ಟ್ ನೀಡಲಾಗುತ್ತದೆ.

ವಿಕ್ರಮ್ ಸೈಲೆಂಟ್ ಯಾಕೆ..?

ಧನಂಜಯ್‌ಗೆ ಸೈಕಲ್ ಟೈಯರ್‌ಗೆ ಪಂಪ್ ಮಾಡುವ ಮಷಿನ್ ನೀಡಲಾಗಿದೆ. ಹಾಗೇ ಭವ್ಯಾ ಅವರಿಗೆ ಕ್ಯಾಲ್ಕುಲೇಟರ್ ನೀಡಿದ್ದು, ಬಿಗ್ ಬಾಸ್ ಆಟವನ್ನ ಲೆಕ್ಕಚಾರ ಹಾಕಿಕೊಂಡು ಆಡಿದ್ರೆ ಕಳೆದೇ ಹೋಗ್ತೀರಾ ಎಂದು ಅದರಲ್ಲಿ ಬರೆಯಲಾಗಿದೆ. ಆದರೆ ವಿಕ್ರಮ್‌ಗೆ ಪೀಪಿ ನೀಡಿದ್ದಾರೆ. ಅದರ ಜೊತೆಗೆ ಲೆಟರ್ ಕೂಡ ನೀಡಿದ್ದು, ಸಿಕ್ಕಾಪಟ್ಟೆ ಸೌಂಡ್ ಮಾಡುತ್ತೆ ಅಂತ ತಗೊಂಡೆ, ಆದರೆ ಅಂದುಕೊಂಡಷ್ಟು ಸೌಂಡ್ ಮಾಡಲಿಲ್ಲ ಎಂದು ಬರೆದಿದ್ದಾರೆ.

ಗೌತಮಿ ಮುಖವಾಡ ಹಾಕಿದ್ದಾರಾ?

ಇನ್ನು ಗೌತಮಿ ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಸೈಲೆಂಟ್ ಆಗಿಯೇ ಇದ್ದಾರೆ. ಯಾರ ಜೊತೆಗೂ ಅಷ್ಟೊಂದು ಮಾತಾಡುತ್ತಿಲ್ಲ. ಇದನ್ನು ಕಂಡ ವೀಕ್ಷಕರು ಗೌತಮಿಗೆ ಕಳುಹಿಸಿರುವ ಗಿಫ್ಟ್ ಮುಖವಾಡ. ಅದರಲ್ಲಿ ಒಂದು ಲೆಟರ್ ಕೊಟ್ಟಿದ್ದು, ಮುಖವಾಡ ಕಳಚಿ ಯಾವಾಗ ರಿಯಲ್ ಆಟ ತೋರಿಸುತ್ತೀರಾ ಎಂದು. ಹಾಗಾದ್ರೆ ನೋಡುಗರು ಅಥವಾ ಬಿಗ್ ಬಾಸ್ ಮನೆ ಗೌತಮಿಯ ಇನ್ನೊಂದು ಮುಖವನ್ನೇ ನೋಡಲು ಕಾಯುತ್ತಿದೆ ಎಂದಾಗಿದೆ.

ಇನ್ಮುಂದೆ ಬೆಂಕಿ ಹಚ್ತಾರಂತೆ..!

ಚೈತ್ರಾಗೆ ಅವರ ಅಭಿಮಾನಿ ಅಥವಾ ಹಿತೈಶಿ ಸ್ಪೆಷಲ್ ಗಿಫ್ಟ್ ನೀಡಿ, ಸಂದೇಶವನ್ನು ಕಳುಹಿಸಿದ್ದಾರೆ. ಉರೀತಾ ಇದ್ದ ಫೈಯರ್ ಬ್ರಾಂಡ್ ಹಾರಿ ಹೋಗಿದೆ ಎಂದು ಬರೆದಿದ್ದಾರೆ. ಅದಕ್ಕೆ ಚೈತ್ರಾ ಉತ್ತರ, ಹೊತ್ತಿಕೊಳ್ಳುತ್ತೆ ಬೆಂಕಿ. ಹತ್ತಿಸ್ತೀನಿ ಸರ್ ಎಂದು ಸುದೀಪ್ ಅವರಿಗೆ ಭರವಸೆ ನೀಡಿದ್ದಾರೆ. ಈ ವೇಳೆ ಚೈತ್ರಾ ಅವರ ಕಣ್ಣಲ್ಲಿ ನೀರು ತುಂಬಿತ್ತು ಎನಿಸುತ್ತಿದೆ. ಯಾವ ರೀತಿಯಲ್ಲಿ ಬೆಂಕಿ ಹತ್ತಿಸುತ್ತಾರೆ ಎಂಬುದೇ ಕುತೂಹಲ. ಯಾಕಂದ್ರೆ ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಚೈತ್ರಾ ಸೈಲೆಂಟ್ ಆಗಿ ಏನು ಇಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X