BBK 11; ಒಂಭತ್ತು ಜನ ಸ್ಪರ್ಧಿಗಳಲ್ಲಿ ಮೊದಲ ಫೈನಲಿಸ್ಟ್ ಹೆಸರು ಬಹಿರಂಗ; ಮನೆ ಮಂದಿಗೆ ಶಾಕ್!
ಬಿಗ್‌ಬಾಸ್ ಕನ್ನಡ ಸೀಸನ್ 11 ಫಿನಾಲೆ ಕಡೆಗೆ ದಾಪುಗಾಲು ಇಟ್ಟಿದೆ. ಈ ಬಾರಿ 17 ಜನ ಸ್ಪರ್ಧಿಗಳು ಮನೆಯೊಳಗೆ ಹೋಗಿದ್ದರು. ಅದರಲ್ಲಿ ಇಬ್ಬರು ಶಿಕ್ಷೆ ಅನುಭವಿಸಿ ಹೊರಬಂದರು. 3 ಜನ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದರು. ಅದರಲ್ಲಿ ಇಬ್ಬರು ಆಟ ಅರ್ಧಕ್ಕೆ ಬಿಟ್ಟು ಕ್ವಿಟ್ ಮಾಡಿ ಬಂದಿದ್ದರು.
ಗ್ರ್ಯಾಂಗ್ ಫಿನಾಲೆ ಇನ್ನೆರಡು ವಾರ ಮಾತ್ರ ಬಾಕಿಯಿದೆ. ಅಸಲಿ ಆಟ ಈಗ ಶುರುವಾಗಿದೆ. ಸದ್ಯ ಮನೆಯೊಳಗೆ 9 ಜನ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ವೀಕೆಂಡ್ ಇಬ್ಬರು ಎಲಿಮಿನೇಟ್ ಆಗುವ ಸಾಧ್ಯತೆಯಿದೆ. ಇನ್ನು ಈಗಾಗಲೇ ಒಬ್ಬರು ಫಿನಾಲೆಗೆ ಟಿಕೆಟ್ ಪಡೆದಿದ್ದಾರೆ. ವಾರದ ಕೊನೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

ವಾರದ ಹಿಂದೆ 'ಟಿಕೆಟ್ ಟು ಫಿನಾಲೆ' ಎಂದು ಹೇಳಿ ಬಿಗ್‌ಬಾಸ್ ಕುತೂಹಲ ಹುಟ್ಟುಹಾಕಿದ್ದರು. ವಿಭಿನ್ನ ಟಾಕ್ಸ್‌ಗಳನ್ನು ಕೊಡಲಾಗುತ್ತಿತ್ತು. ಅದರಲ್ಲಿ ಉತ್ತಮ ಪ್ರದರ್ಶನ ತೋರಿದವರು ಫಿನಾಲೆ ಕಡೆ ನಿಧಾನವಾಗಿ ಹೆಜ್ಜೆ ಹಾಕಿದ್ದಾರೆ. ಆದರೆ ಈಗ 9 ಜನರಲ್ಲಿ ಒಬ್ಬರಿಗೆ ಫಿನಾಲೆ ಟಿಕೆಟ್ ಸಿಕ್ಕಿದೆ. ನಟ ಶರಣ್ ಹಾಗೂ ನಟಿ ಅದಿತಿ ಪ್ರಭುದೇವ ಟಿಕೆಟ್ ನೀಡಿದ್ದಾರೆ.
ಗಾಯಕ ಹನುಮಂತ ಬಿಗ್‌ಬಾಸ್ ಕನ್ನಡ 11 ಫಿನಾಲೆ ಪ್ರವೇಶಿಸಿದ್ದಾರೆ. ಹೌದು ಶುಕ್ರವಾರ ನೀಡಿದ ಟಾಸ್ಕ್‌ವೊಂದರಲ್ಲಿ ಗೆದ್ದು ಹನುಮಂತ ಗಮನ ಸೆಳೆದಿದ್ದಾರೆ. ಜೀ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಬಂದು ಹನುಮಂತ ಗಮನ ಸೆಳೆದಿದ್ದ. ಈ ಬಾರಿ ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದರು. ರಂಜಿತ್ ಹಾಗೂ ಲಾಯರ್ ಜಗದೀಶ್ ಮನೆಯಿಂದ ಹೊರಬಂದಾಗಿ ಒಳಗೆ ಹೋಗಿದ್ದವರು ಹನುಮಂತ.
ತಮ್ಮ ಗಾಯನದಿಂದ ಮಾತ್ರವಲ್ಲದೇ ಬಹಳ ಬೇಗ ಬಿಗ್‌ಬಾಸ್ ಮನೆ ಆಟಕ್ಕೆ ಹನುಮಂತ ಹೊಂದಿಕೊಂಡಿದ್ದರು. ಲುಂಗಿ, ಶರ್ಟ್ ಲುಕ್‌ನಲ್ಲೇ ಮನೆಯೊಳಗೆ ಕಾಣಿಸಿಕೊಂಡು ಮೋಡಿ ಮಾಡಿದರು. ಟಾಸ್ಕ್‌ಗಳಲ್ಲಿ ಉತ್ತಮವಾಗಿ ಆಡಿ ವೀಕ್ಷಕರನ್ನು ರಂಜಿಸಿದರು. ಉತ್ತಮ, ಕಳಪೆ, ಕಿಚ್ಚನ ಚಪ್ಪಾಳೆ, ಕ್ಯಾಪ್ಟನ್ ಹೀಗೆ ಎಲ್ಲಾ ಪಟ್ಟವೂ ಸಿಕ್ಕಿತ್ತು. ಈ ವಾರ ಕೂಡ ಮನೆಯ ಕ್ಯಾಪ್ಟನ್ ಆಗಿ ಹನುಮಂತ ಆಯ್ಕೆ ಆಗಿದ್ದಾರೆ.
3ನೇ ಬಾರಿ ಹನುಮಂತ ಕ್ಯಾಪ್ಟನ್ ಪಟ್ಟ ಅಲಂಕರಿಸಿದಂತಾಗಿದೆ. ಬಿಗ್‌ಬಾಸ್ ಮನೆಗೆ 21ನೇ ದಿನ ಹನುಮಂತ ಎಂಟ್ರಿ ಕೊಟ್ಟಿದ್ದರು. ಇದೀಗ ಶೋ ಹೆಚ್ಚು ಕಮ್ಮಿ 100 ದಿನದ ಸಮೀಪಕ್ಕೆ ಬಂದಿದೆ. ಹಲವು ವಿಶೇಷಗಳಿಗೆ ಸೀಸನ್ 11 ಸಾಕ್ಷಿ ಆಗಿದೆ. ಮೊದಲ ದಿನದಿಂದ ಇದ್ದು ಪ್ರಬಲ ಸ್ಪರ್ಧಿ ಎನಿಸಿಕೊಂಡವರನ್ನು ಹಿಂದಿಕ್ಕಿ ಹಳ್ಳಿ ಹೈದ ವೀಕ್ಷಕರ ಮನಗೆದ್ದಿದ್ದಾರೆ.
ಹನುಮಂತ ದಿಢೀರನೆ ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಾಗ ಭಾರೀ ಚರ್ಚೆ ನಡೆದಿತ್ತು. ಕುರಿಗಾಯಿ ಹಳ್ಳಿ ಹೈದನಿಗೆ ಈ ಶೋ ಬೇಕಿರಲಿಲ್ಲ. ಬಹಳ ದಿನ ಮನೆಯಲ್ಲಿ ಇರಲ್ಲ, ಒಂದೆರಡು ವಾರ ಇದ್ದರೆ ಹೆಚ್ಚು ಎಂದು ಕೆಲವರು ಊಹಿಸಿದ್ದರು. ಆದರೆ ಎಲ್ಲರ ನಿರೀಕ್ಷೆ ಮೀರಿ ಒಂದೇ ವಾರದಲ್ಲಿ ಬಿಗ್‌ಬಾಸ್ ವಾತಾವರಣಕ್ಕೆ ಹನುಮಂತ ಒಗ್ಗಿಕೊಂಡಿದ್ದರು. ಇದೀಗ ಫಿನಾಲೆಗೂ ಎಂಟ್ರಿ ಕೊಟ್ಟಿದ್ದಾರೆ.
ಸದ್ಯ ಮಂಜು, ರಜತ್, ಚೈತ್ರಾ, ಗೌತಮಿ, ಮೋಕ್ಷಿತಾ, ಭವ್ಯಾ, ಧನರಾಜ್, ತ್ರಿವಿಕ್ರಮ್ ಜೊತೆ ಹನುಮಂತ ಸೇರಿ 9 ಜನ ಸ್ಪರ್ಧಿಗಳಿದ್ದಾರೆ. ಇನ್ನುಳಿದ 8 ಜನರಲ್ಲಿ 5 ಜನರಿಗೆ ಫಿನಾಲೆ ಟಿಕೆಟ್ ಸಿಗುವ ನಿರೀಕ್ಷೆಯಿದೆ.


Click it and Unblock the Notifications











