BBK 11: ನಾಲ್ಕೇ ದಿನಕ್ಕೆ ಈ ಬಾರಿ ಬಿಗ್ ಬಾಸ್ ವಿಜೇತನನ್ನು ಆಯ್ಕೆ ಮಾಡಿಬಿಟ್ರಾ ವೀಕ್ಷಕರು?

By ಎಸ್ ಸುಮಂತ್

ಈ ಬಾರಿ ಬಿಗ್ ಬಾಸ್ ಕನ್ನಡ ಶೋ ನರಕ ಹಾಗೂ ಸ್ವರ್ಗ ಎಂಬ ಕಾನ್ಸೆಪ್ಟ್ ಮೇಲೆ ಸಾಗಿದೆ. ಈಗಾಗಲೇ ಏಳು ಮಂದಿ ನರಕದಲ್ಲಿದ್ದು, ಹತ್ತು ಮಂದಿ ಸ್ವರ್ಗದಲ್ಲಿದ್ದಾರೆ. ಅದ್ಯಾವಾಗ ನರಕ ಹಾಗೂ ಸ್ವರ್ಗದಲ್ಲಿರುವವರು ಎಕ್ಸ್ ಚೇಂಜ್‌ ಆಗ್ತಾರೋ ಗೊತ್ತಿಲ್ಲ. ಟಾಸ್ಕ್‌ಗಳ ಮೂಲಕವೇ ಬದಲಾವಣೆ ಆಗಲಿದೆ. ಆದರೆ ಈ ಮಧ್ಯೆ ನಾಮಿನೇಷನ್ ಪ್ರಕ್ರಿಯೆ ಸದ್ದು ಮಾಡುತ್ತಿದೆ.

ಪ್ರತಿ ವಾರ ಕೂಡ ಮನೆ ಮಂದಿಗೆ ನಾಮಿನೇಷನ್ ಪ್ರಕ್ರಿಯೆ ಇರುತ್ತದೆ. ಮನೆಯೊಳಗಿನ ಸ್ಪರ್ಧಿಗಳೇ ನಾಮಿನೇಷನ್ ಮಾಡುತ್ತಾರೆ. ಹೀಗೆ ನಾಮಿನೇಷನ್ ಆದವರಿಗೆ ಒಮ್ಮೊಮ್ಮೆ ಬಿಗ್ ಬಾಸ್ ಟಾಸ್ಕ್ ನೀಡಿ ಬಚಾವ್ ಮಾಡುತ್ತದೆ, ಇನ್ನೊಮ್ಮೆ ವೋಟಿಂಗ್ ಮೂಲಕವೂ ಬಚಾವ್ ಆಗುತ್ತಾರೆ. ಆದರೆ ಈ ಬಾರಿ ಉಗ್ರಂ ಮಂಜು ಪ್ರದರ್ಶನ ನೋಡಿದವರು ತಮ್ಮ ಅಭಿಪ್ರಾಯವನ್ನೇ ಚೇಂಜ್ ಮಾಡಿಕೊಂಡಿದ್ದಾರೆ.

Bigg Boss kannada 11 Ugramm manju steels fans hearts with his performance

ಮೊದಲ ವಾರ ಉಗ್ರಂ ಮಂಜು ಸೇಫ್

ಈ ವಾರ ಉಗ್ರಂ ಮಂಜು, ಯಮುನಾ, ಜಗದೀಶ್, ಹಂಸ, ಭವ್ಯಾ, ಚೈತ್ರಾ, ಶಿಶಿರ್, ಮೋಕ್ಷಿತಾ, ಮಾನಸ ನಾಮಿನೇಟ್ ಆಗಿದ್ದಾರೆ. ಆದರೆ ಇವರಲ್ಲಿ ನಾಮಿನೇಷನ್‌ನಿಂದ ಪಾರಾಗುವುದಕ್ಕೆ ಈ ವಾರವೇ ಅವಕಾಶ ಸಿಕ್ಕಿತ್ತು. ಅದನ್ನು ಬಿಗ್ ಬಾಸ್ ನೀಡಿದ್ದು, ಮಂಜು ಸೇಫ್ ಆಗಿದ್ದಾರೆ.

ಮನೆಯಲ್ಲಿ ಉಗ್ರಂ ಮಂಜುದೇ ಹವಾ

ನಾಮಿನೇಷನ್‌ನಿಂದ ಪಾರಾಗುವುದಕ್ಕೆ ಬಿಗ್ ಬಾಸ್ ಹೊಸ ಟಾಸ್ಕ್ ಒಂದನ್ನು ನೀಡಿತ್ತು. ಒಂದು ಬಕೆಟ್‌ನಲ್ಲಿ ನಾಮಿನೇಷನ್ ಆದವರ ಫೋಟೋಗಳಿರುತ್ತವೆ. ಆ ಬಕೆಟ್‌ಗೆ ಮಣ್ಣು ತುಂಬಿಸಬೇಕು. ನಾಮಿನೇಷನ್ ಆದವರು ಅದನ್ನು ತಡೆಯಬೇಕು. ಯಾರ ಬಕೆಟ್‌ನಲ್ಲಿ ನೀರು ಕಡಿಮೆ ಇರುತ್ತದೋ ಅವರು ಪಾರಾದಂತೆ. ಅದರಂತೆ ಉಗ್ರಂ ಮಂಜು ಗೆದ್ದಿದ್ದಾರೆ. ಅದರ ಜೊತೆಗೆ ಜನರ ಮನಸ್ಸನ್ನು ಗೆದ್ದಿದ್ದಾರೆ. ಉಗ್ರಂ ಮಂಜು ಬರೀ ವಿಲನ್ ಎಂದುಕೊಂಡಿದ್ದವರಿಗೆ ಬೇರೆಯದ್ದೇ ಮುಖ ಅನಾವರಣವಾಗಿದೆ. ಈ ಬಾರಿಯ ಸೀಸನ್‌ನಲ್ಲಿ ಮಾನಸ ಹಾಗೂ ಧನರಾಜ್ ಮಾತ್ರ ಎಂಟರ್‌ಟೈನ್‌ಮೆಂಟ್ ಎಂದುಕೊಂಡಿದ್ದರೆ ಉಗ್ರಂ ಮಂಜು ಅದಕ್ಕಿಂತ ಮೇಲೆ.

ಮಂಜು ಕೆಣಕಿದರೆ ಮಾತ್ರ ಉಗ್ರಂ

ನಟ ಉಗ್ರಂ ಮಂಜು ಮನೆಯೊಳಗಿನ ಮಂದಿಯನ್ನೆಲ್ಲಾ ನಗಿಸುತ್ತಾ ಇದ್ದಾರೆ. ಅದರಲ್ಲೂ ಜಗದೀಶ್ ಹಾಗೂ ಯಮುನಾ ಅವರನ್ನು ಇಮಿಟೇಟ್ ಮಾಡುವ ಉಗ್ರಂ ಮಂಜು, ಎಲ್ಲರನ್ನು ನಗಿಸಿದ್ದಾರೆ. ಅಷ್ಟೇ ಅಲ್ಲ ಎಲ್ಲರು ಮಲಗಿದ್ದಾಗ ಒಬ್ಬರೇ ಎದ್ದು ಮಾತನಾಡಿ ಭವ್ಯಾ, ಧನರಾಜ್ ಇಬ್ಬರನ್ನು ದಂಗುಬಡಿಸಿದ್ದಾರೆ. ನಿದ್ದೆಗಣ್ಣಿನಲ್ಲಿ ನಡೆಯುವ ಅಭ್ಯಾಸವೇನಾದ್ರೂ ಇದೆಯಾ ಎಂದು ಅನುಮಾನ ಪಟ್ಟಿದ್ದಾರೆ.

Bigg Boss kannada 11 Ugramm manju steels fans hearts with his performance

ಲಾಯರ್ ಜಗದೀಶ್‌ಗೆ ಟಫ್ ಫೈಟ್!

ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಹಾಗೂ ಲಾಯರ್ ಜಗದೀಶ್ ಆರ್ಭಟ ಜೋರಾಗಿದೆ. ಅದರಲ್ಲೂ ಜಗದೀಶ್ ಎದುರು ಯಾರು ಮಾತನಾಡಲು ಆಗುತ್ತಿಲ್ಲ. ಅಷ್ಟರಮಟ್ಟಿಗೆ ಆರ್ಭಟ ನಡೆಸುತ್ತಿದ್ದಾರೆ. ನಾನು ಮಾಡಿದ್ದೇ ಸರಿ ಎಂದು ವಾದಿಸಿ ಕಿರುಚಾಡುತ್ತಿದ್ದಾರೆ. ಆದರೆ ಜಗದೀಶ್‌ ಸರಿಯಾಗಿ ತಿರುಗೇಟು ಕೊಡುತ್ತಿರುವುದು ಉಗ್ರಂ ಮಂಜು ಮಾತ್ರ.

ಗೆಲ್ಲುವ ಅಭ್ಯರ್ಥಿ ಅಂತಿದ್ದಾರೆ ಫ್ಯಾನ್ಸ್

ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜು ಇರುವ ರೀತಿಗೆ ಎಲ್ಲರೂ ಶಬ್ಬಾಶ್ ಹೇಳಿದ್ದಾರೆ. ಬಿಗ್ ಬಾಸ್ ಗೆಲ್ಲಲು ಹೊಂದಾಣಿಕೆ, ಜನರ ಪ್ರೀತಿ, ಮನೆಯಲ್ಲಿ ನೀಡುವ ಟಾಸ್ಕ್, ಮನರಂಜನೆ ನೀಡುವುದು ಈ ಎಲ್ಲವೂ ಬಹಳ ಮುಖ್ಯವಾಗುತ್ತದೆ. ಸದ್ಯ ಉಗ್ರಂ ಮಂಜು ಈ ಎಲ್ಲದರಲ್ಲೂ ಪರ್ಫೆಕ್ಟ್ ಇದಾರೆ. ಟಾಸ್ಕ್ ವಿಚಾರ ಬಂದಗಲೂ ಅಷ್ಟೆ ಯಾವುದಕ್ಕೂ ಕಾಂಪ್ರಮೈಸ್ ಆಗಲ್ಲ. ನಕ್ಕು ನಲಿಸುತ್ತಿರುವ ಉಗ್ರಂ ಮಂಜು ಈ ಬಾರಿಯ ವಿನ್ನರ್ ಆಗುವ ಲಕ್ಷಣಗಳಿವೆ ಎಂದು ವೀಕ್ಷಕರು ಹಾರೈಸುತ್ತಿದ್ದಾರೆ.

More from Filmibeat

English summary
BBK 11: Fans are predicting that this contestant will become the finalist;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X