BBK 11: ಮತ್ತೆ ಮಿಡ್ ವೀಕ್ ಎಲಿಮಿನೇಷನ್ ಕ್ಯಾನ್ಸಲ್
ಕಳೆದ ಮೂರು ದಿನಗಳಿಂದ ಯಾರು ಬಿಗ್‌ಬಾಸ್ ಮನೆಯಿಂದ ಹೊರ ಬರುತ್ತಾರೆ ಎನ್ನುವ ಬಗ್ಗೆ ಭಾರೀ ಚರ್ಚೆ ನಡೀತಿತ್ತು. ಮಿಡ್ ವೀಕ್ ಎಲಿಮಿನೇಷನ್ ಬಹಳ ಕುತೂಹಲ ಮೂಡಿಸಿತ್ತು. ಪ್ರಬಲ ಸ್ಪರ್ಧಿಯೇ ಮನೆಯಿಂದ ಹೊರ ಬರುತ್ತಾರೆ ಎನ್ನಲಾಗುತ್ತಿತ್ತು. ಆದರೆ ಮತ್ತೆ ಎಲಿಮಿನೇಷನ್ ಕ್ಯಾನ್ಸಲ್ ಆಗಿದೆ.
ನಿನ್ನೆಯ ಬಿಗ್‌ಬಾಸ್ ಮನೆಯ ಮಹಾದ್ವಾರವನ್ನು ತೆರೆದಿಡಲಾಗಿತ್ತು. ಯಾರು ಮನೆಯಿಂದ ಹೊರ ಹೋಗುತ್ತಾರೆ ಎನ್ನುವುದು ಗೊತ್ತಿಲ್ಲ ಎಂದು ಬಿಗ್‌ಬಾಸ್ ಹೇಳಿದ್ದರು, ಕೊನೆಗೂ ಮನೆಯಿಂದ ಒಬ್ಬರು ಗೇಟ್‌ಪಾಸ್ ಪಡೆದು ಹೊರ ಬಂದಿದ್ದಾರೆ ಎನ್ನುವ ಗುಸು ಗುಸು ಕೇಳಿಬಂದಿತ್ತು.

ಕಳೆದ ವೀಕೆಂಡ್ ಚೈತ್ರಾ ಕುಂದಾಪುರ ದೊಡ್ಮನೆ ಜರ್ನಿ ಮುಗಿಸಿ ಹೊರಗೆ ಬಂದಿದ್ದರು. ಇನ್ನು 8 ಜನ ಮನೆಯೊಳಗೆ ಉಳಿದುಕೊಂಡಿದ್ದರು. ಅದರಲ್ಲಿ ಒಬ್ಬರು ಎಲಿಮಿನೇಟ್ ಆಗುತ್ತಾರೆ ಎನ್ನಲಾಗಿತ್ತು. ನಿನ್ನೆ ಎಪಿಸೋಡ್‌ನಲ್ಲಿ ನಿರಾಸೆ ಕಾದಿತ್ತು. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಸಣ್ಣ ರಿಲೀಫ್ ಕೊಡಲಾಗಿತ್ತು. ಆದರೆ ಹಬ್ಬದ ಮುಗಿದ ಮೇಲೆ ಮನೆ ಮಂದಿಗೆ ಶಾಕ್ ಕಾದಿದೆ.
ಗೌತಮಿ ಜಾಧವ್ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ ಎನ್ನುವ ಊಹಾಪೋಹ ಇತ್ತು. ಆದರೆ ಅದು ಸುಳ್ಳಾಗಿದೆ. ಇವತ್ತು ಕೂಡ ಯಾರು ಮನೆಯಿಂದ ಹೊರ ಬಂದಿಲ್ಲ. ಬಿಗ್‌ಬಾಸ್ ಜರ್ನಿ 109ನೇ ದಿನಕ್ಕೆ ಕಾಲಿಟ್ಟಿದೆ. ಮತ್ತೆ ಯಾವಾಗ ಎಲಿಮಿನೇಷನ್ ಎಂದು ವೀಕ್ಷಕರು ಕಾಯುವಂತಾಗಿದೆ.
ಸದ್ಯ ಮನೆಯಲ್ಲಿ ಇರುವ 8 ಜನ ಸ್ಪರ್ಧಿಗಳಲ್ಲಿ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದವರು. ಹನುಮಂತ 21 ದಿನಗಳ ಬಳಿಕ ದೊಡ್ಮನೆ ಪ್ರವೇಶಿಸಿದ್ದರು. 90 ದಿನಗಳ ಕಾಲ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಈಗಾಗಲೇ ಫಿನಾಲೆ ಟಿಕೆಟ್ ಸಿಕ್ಕಿದೆ. ಇನ್ನುಳಿದ 7 ಜನರಲ್ಲಿ ಜನವರಿ 26ರಂದು ನಡೆಯುವ ಫಿನಾಲೆ ವೇದಿಕೆಗೆ ಯಾರೆಲ್ಲಾ ಏರುತ್ತಾರೆ ಕಾದು ನೋಡಬೇಕಿದೆ.
59 ದಿನಗಳಿಂದ ರಜತ್ ಬಿಗ್‌ಬಾಸ್ ಮನೆಯಲ್ಲಿ ಇದ್ದಾರೆ. ತಮ್ಮ ಖಡಕ್ ಮಾತುಗಳಿಂದ ಎಲ್ಲರ ಬಾಯಿ ಮುಚ್ಚಿಸುತ್ತಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಆಗಿರುವುದರಿಂದ ರಜತ್ ಫಿನಾಲೆಗೆ ಹೋಗುವುದು, ಒಂದು ವೇಳೆ ಹೋದರೂ ಗೆಲ್ಲುವುದು ಅನುಮಾನ ಎನ್ನುವ ಲೆಕ್ಕಾಚಾರ ನಡೀತಿದೆ. ಈ ವಾರ ನಾಮಿನೇಷನ್ ವೇಳೆಯೂ ಮಂಜುಗೆ ಮಾತಿನ ಏಟು ಕೊಟ್ಟಿದ್ದಾರೆ.
ಇನ್ನು ಇದ್ದಕ್ಕಿದಂತೆ ಧನರಾಜ್ ಕಂಬ್ಯಾಕ್ ಮಾಡಿದ್ದಾರೆ. ಅವರ ಪರ ಅಭಿಮಾನಿಗಳು ಬ್ಯಾಟ್ ಬೀಸುತ್ತಿದ್ದಾರೆ. ಈ ವಾರ ನಾಮಿನೇಷನ್‌ನಿಂದ ಪಾರಾಗಲು ಸ್ಪರ್ಧಿಗಳಿಗೆ ಟಾಸ್ಕ್‌ಗಳು ಸಿಕ್ಕಿತ್ತು. puzzle ಮುಗಿಸು ಟಾಸ್ಕ್‌ನಲ್ಲಿ ಚೆನ್ನಾಗಿ ಆಡಿ ಧನರಾಜ್ ಸೇಫ್ ಆಗಿದ್ದರು. ಆದರೆ ಅವರು ಮೋಸ ಮಾಡಿರುವುದು ಬಯಲಾಗಿತ್ತು.
ಟಾಸ್ಕ್ ವೇಳೆ ಧನರಾಜ್ ನಿಮಯ ಮುರಿದಿದ್ದರಿಂದ ಈ ಗೆಲುವನ್ನು ಒಪ್ಪಲು ಸಾಧ್ಯವಿಲ್ಲ ಎಂದು ವೀಕ್ಷಕರು ಹೇಳಿದ್ದರು. ಇದೇ ಕಾರಣಕ್ಕೆ ಮಿಡ್ ವೀಕ್ ಎಲಿಮಿನೇಷನ್ ಕ್ಯಾನ್ಸಲ್ ಆಗಿದೆ. ಆದರೆ ವೀಕೆಂಡ್ ಖಂಡಿತ ಡಬಲ್ ಎಲಿಮಿನೇಷನ್ ಇರುತ್ತದೆ. ಇದನ್ನು ಬಿಗ್‌ಬಾಸ್ ಸಹ ಸ್ಪಷ್ಟಪಡಿಸಿದ್ದಾರೆ.
ವೀಕೆಂಡ್ ಭವ್ಯಾ ಹಾಗೂ ರಜತ್ ಬಿಗ್‌ಬಾಸ್ ಜರ್ನಿ ಮುಗಿಸಬಹುದು ಎನ್ನುವುದು ಕೆಲವರ ಲೆಕ್ಕಾಚಾರ. ಮೊದಲಿನಿಂದ ಸ್ಪರ್ಧಿಗಳು ಆಡುತ್ತಾ ಬಂದ ರೀತಿ ನೋಡಿ ಕೆಲವರು ಈ ರೀತಿ ಊಹಿಸುತ್ತಿದ್ದಾರೆ. ರಜತ್ ಬದಲು ಧನರಾಜ್ ಮನೆಯಿಂದ ಹೊರ ಬಂದರೂ ಅಚ್ಚರಿ ಪಡಬೇಕಿಲ್ಲ. ಶೀಘ್ರದಲ್ಲೇ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಇದೆಲ್ಲದರ ನಡುವೆ ಯಾರು ಗೆದ್ದು ಟ್ರೋಫಿ ಎತ್ತಿ ಹಿಡಿಯುತ್ತಾರೆ? ಎನ್ನುವ ಕುತೂಹಲವೂ ಮೂಡಿದೆ.


Click it and Unblock the Notifications











