BBK 11: ಅನುಷಾ ತಲೆಗೆ ಮೊಟಕಿದ ಚೈತ್ರಾ ಕುಂದಾಪುರ; ನುಚ್ಚುನೂರಾಯ್ತು ಮನಸ್ಸುಗಳು
ಬಿಗ್ ಬಾಸ್ ಕನ್ನಡ ಸೀಸನ್ 11 ಐದು ವಾರಗಳು ಕಂಪ್ಲೀಟ್ ಆಗಿದೆ. ವೀಕೆಂಡ್‌ನಲ್ಲಿ ಬಂದಿದ್ದ ಕಿಚ್ಚ ಸುದೀಪ್ ಮತ್ತೆ ಎಲ್ಲರಿಗೂ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಿ ಎಂದು ಬುದ್ಧಿ ಹೇಳಿದ್ದಾರೆ. ಎಲ್ಲರಿಗಿಂತಲೂ ತಡವಾಗಿ ಬಂದ ಹನುಮಂತ ಬಿಗ್ ಬಾಸ್ ಸೀಸನ್ 11 ರ ಕಿಚ್ಚನ ಮೊದಲ ಚಪ್ಪಾಳೆಯನ್ನು ಪಡೆದಿದ್ದಾನೆ. ಇದರಿಂದ ಎಲ್ಲರಿಗೂ ಖುಷಿಯಾಗಿರುವುದಕ್ಕಿಂತಲೂ ಹೊಟ್ಟೆ ಕಿಚ್ಚು ಹೆಚ್ಚಾಗಿದೆ. ಇತ್ತ ಮಾನಸ ತುಕಾಲಿ ಬಿಗ್ ಬಾಸ್ ಮನೆಯಿಂದ ಕೊನೆಗೂ ಹೊರಬಂದಿದ್ದು, ಅಭಿಮಾನಿಗಳು ಫುಲ್ ಹ್ಯಾಪಿ ಆಗಿದ್ದಾರೆ. ಮನೆಯಲ್ಲಿ ಸದ್ಯ 13 ಕಂಟೆಸ್ಟೆಂಟ್‌ಗಳು ಉಳಿದುಕೊಂಡಿದ್ದಾರೆ.
ಎಲ್ಲರೊಂದಿಗೂ ಚೈತ್ರಾ ಜಗಳ
ಇನ್ನು ಚೈತ್ರಾ ಕುಂದಾಪುರ ಮನೆಗೆ ಬಂದ ಮೊದಲ ದಿನದಿಂದಲೂ ಜಗಳ ಆಡಿಕೊಂಡು, ವಾದ ಮಾಡಿಕೊಂಡು ಮುನ್ನಡೆದಿದ್ದಾರೆ. ಮಾತು ಬರುತ್ತೆ ಎಂಬ ಒಂದೇ ಕಾರಣಕ್ಕೆ ಎಲ್ಲರಿಗಿಂತಲೂ ಮೊದಲೇ ಮಾತನಾಡಿ ಹಲವರಿಂದ ದೂರ ಉಳಿಯುತ್ತಿದ್ದಾರೆ. ಚೈತ್ರಾ ಅವರ ಜೊತೆಗೆ ಜಗಳವೇ ಮಾಡಬಾರದು ಎಂದು ಮನೆಯವರೆಲ್ಲಾ ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗುವುದಿಲ್ಲ. ಚೈತ್ರಾ ಕೂಡ ಈಗ ಇದ್ದ ಹಾಗೆ ಮತ್ತೊಂದು ಗಳಿಗೆ ಇರುವುದಿಲ್ಲ. ಯಾರ ಬಳಿ ಯಾವ ಮಾತಿಗೆ ಜಗಳ ಮಾಡುತ್ತಾರೆ ಎಂಬುದನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಈಗಾಗಲೇ ಮನೆಯಲ್ಲಿದ್ದ ಯಮುನಾ, ಜಗದೀಶ್, ಹಂಸಾ, ಮಾನಸ ಎಲ್ಲರ ಜೊತೆಗೂ ಜಗಳ ಮಾಡಿದ್ದರು. ಅಷ್ಟೇ ಅಲ್ಲದೇ, ಮಂಜು, ಮೋಕ್ಷಿತಾ, ಗೌತಮಿ, ಐಶ್ವರ್ಯ, ಧನರಾಜ್, ಅನುಷಾ ಎಲ್ಲರೊಂದಿಗೂ ವಾದ ಮಾಡಿದ್ದರು. ಇದೀಗ ಇಂದಿನ (ನವೆಂಬರ್ 4) ಎಪಿಸೋಡ್‌ನಲ್ಲಿ ಮತ್ತೆ ಅನುಷಾ ಜೊತೆಗೆ ಜಗಳ ಮಾಡಿಕೊಂಡಿದ್ದಾರೆ.

ಗೌತಮಿಯನ್ನು ಉಳಿಸಿದ ಚೈತ್ರಾ
ಬಿಗ್ ಬಾಸ್ ಇಂದು (ನವೆಂಬರ್ 4) ಮನೆಯ ಸದಸ್ಯರಿಗೆ ಟಾಸ್ಕ್ ಒಂದನ್ನು ನೀಡಿದ್ದಾರೆ. ಲುಡೋ ಆಟ ಇದಾಗಿದ್ದು, ಇದರಲ್ಲಿ ಕಾಯಿಗಳು ಸಾಗುವ ದಾರಿಯಲ್ಲಿ ಕೆಲವೊಂದು ಚೌಕದಲ್ಲಿ ಕೆಲ ವಿಚಾರಗಳನ್ನು ಬರೆಯಲಾಗಿದೆ. ಅದರಂತೆ ಹನುಮಂತ ಉರುಳಿಸಿದ ದಾಯದ ಪ್ರಕಾರ ನಾಮಿನೇಟ್ ಆಗಿರುವವರಲ್ಲಿ ಒಬ್ಬರನ್ನು ಸೇವ್ ಮಾಡುವ ಅವಕಾಶವಿತ್ತು. ಆ ಅವಕಾಶವನ್ನು ಚೈತ್ರಾ ಗೌತಮಿಗೆ ನೀಡಿದ್ದಾರೆ. ಇದರಿಂದ ಅನುಷಾ ಅವರಿಗೆ ಬೇಸರವಾಗಿದೆ. ಚೈತ್ರಾ ಅವರು ಗೌತಮಿಯನ್ನು ನಾಮಿನೇಷನ್‌ನಿಂದ ಉಳಿಸಿದ್ದಕ್ಕೆ ಆಟ ಮುಗಿದ ಬಳಿಕ ಸೋಫಾ ಮೇಲೆ ಅನುಷಾ, ಭವ್ಯಾಗೌಡ, ತ್ರಿವಿಕ್ರಮ್ ಹಾಗೂ ಧರ್ಮ ಕುಳಿತು ಮಾತನಾಡುತ್ತಿರುತ್ತಾರೆ. ಈ ವೇಳೆಗೆ ಚೈತ್ರಾ ಅಲ್ಲಿಗೆ ಬರುತ್ತಾರೆ.
ಪಗಡೆ ಆಟದ ಮಹಿಮೆಯಲ್ಲಿ ಚೂರಾಯ್ತಾ ಮನಸ್ಸುಗಳು?
— Colors Kannada (@ColorsKannada) November 4, 2024
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30
#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/QttgRNJa8Z
ತಲೆಗೆ ಮೊಟಕಿದ ಚೈತ್ರಾ ಕುಂದಾಪುರ
ಅನುಷಾ ರೈ "ನಾಮಿನೇಷನ್‌ನಿಂದ ಉಳಿಸಲು ನಿಮಗೆ ನಾವ್ಯಾರು ಕಾಣಲಿಲ್ಲವಾ ಎಂಬಂತೆ ಮಾತನಾಡುತ್ತಾರೆ. ಚೈತ್ರಾಳ ಮುಂದೆ ನಾವೆಲ್ಲರೂ ನಿಮ್ಮ ಕಣ್ಣಿಗೆ ಕಾಣಿಸಲಿಲ್ಲವೇ ಗೌತಮಿ ಅವರನ್ನು ಸೇವ್ ಮಾಡಿದ್ದೀರಿ" ಎಂದು ಪ್ರಶ್ನಿಸುತ್ತಾಳೆ. ಆಗ ಚೈತ್ರಾ "ಹೌದು ನನ್ನ ಕಣ್ಣಿಗೆ ಕಾಣಿಸಿದರೂ ಕಾಣಿಸದಿರುವಂತೆಯೇ ನಾನು ಆಟ ಆಡುತ್ತೇನೆ" ಎಂದು ಹೇಳುತ್ತಾಳೆ. ಆಗ ಅನುಷಾ "ಬ್ಯಾಡ ಬಿಡು ಕಣ್ಣವ್ವಾ. ನಮಗೆಲ್ಲಾ ಯಾಕೆ ಎನ್ನುವಾಗಲೇ ಚೈತ್ರಾ, ಅನುಷಾ ತಲೆಗೆ ಮೊಟಕುತ್ತಾರೆ. ತಕ್ಷಣವೇ ಕೋಪ ಮಾಡಿಕೊಳ್ಳುವ ಅನುಷಾ ಶಟ್ ಅಪ್, ಗೆಟ್ ಲಾಸ್ಟ್ ಎಂದು ಬೈಯುತ್ತಾರೆ. ಆಗ ಚೈತ್ರಾ "ಅಮ್ಮಾ ತಾಯಿ ತಪ್ಪಾಯ್ತು. ಮತ್ಯಾವತ್ತೂ ನಾನು ನಿನ್ನ ಜೊತೆಗೆ ಮಾತನಾಡುವುದಿಲ್ಲ" ಎಂದು ಹೇಳುತ್ತಾ, ಇದೆಲ್ಲಾ ನೆನಪಿನಲ್ಲಿ ಇಟ್ಟುಕೊಂಡಿರುತ್ತೇನೆ ಎಂದು ಎದ್ದು ಹೋಗುತ್ತಾರೆ.
ಐ ಡೋಂಟ್ ಕೇರ್ ಎಂದ ಅನುಷಾ
ಚೈತ್ರಾ ಮಾತಿಗೆ ಅನುಷಾ ಕೂಡ ಐ ಡೋಮಟ್ ಕೇರ್ ಎಂದು ಹೇಳುತ್ತಾರೆ. ಈಗ ಚೈತ್ರಾ ಮತ್ತು ಅನುಷಾ ನಡುವೆಯೂ ವೈಮನಸ್ಸು ಶುರುವಾಗಿದೆ. ಈ ಹಿಂದೆ ಚೈತ್ರಾ ಹಾಗೂ ಧನರಾಜ್ ಅವರ ಜೊತೆಗೂ ಹೀಗೆ ನಡೆದುಕೊಂಡಿದ್ದರು. ಮೊದಲ ಸುತ್ತಿನಲ್ಲಿ ಧನರಾಜ್ ಅವರನ್ನು ಸೇವ್ ಮಾಡಿ ನಂತರದ ಸುತ್ತಿನಲ್ಲಿ ಧನರಾಜ್ ಅನ್ನು ನಾಮಿನೇಟ್ ಮಾಡಿ ಸುಳ್ಳು ಹೇಳುತ್ತಾರೆ. ಸತ್ಯ ಗೊತ್ತಾದ ಬಳಿಕ ಧನರಾಜ್ ಕೂಡ ಚೈತ್ರಾ ಅವರೊಂದಿಗೆ ಜಗಳ ಮಾಡಿಕೊಳ್ಳುತ್ತಾರೆ.


Click it and Unblock the Notifications











