ಅವಸರದ ನಿರ್ಧಾರ, ಬಿಗ್‌ಬಾಸ್ ಮೇಲೆ ಕಂಪ್ಲೇಂಟ್ ಇದೆ ಎಂದ ಸುದೀಪ್

ಹೊಸ ಬಿಗ್‌ಬಾಸ್ ಕನ್ನಡ ಸೀಸನ್ 3ನೇ ವಾರಾಂತ್ಯಕ್ಕೆ ತಲುಪಿದೆ. ಈ ಬಾರಿ ಶೋ ಸಾಕಷ್ಟು ವಿಚಾರಗಳಿಂದ ಭಾರೀ ಸುದ್ದಿ ಆಗುತ್ತಿದೆ. ಬಿಗ್‌ಬಾಸ್ ನಿಮಯ ಮೀರಿದ್ದಕ್ಕಾಗಿ ವಾರದ ನಡುವೆ ರಂಜಿತ್ ಹಾಗೂ ಜಗದೀಶ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಸುದೀಪ್ ನಾನು ಮುಂದಿನ ಸೀಸನ್ ನಿರೂಪಣೆ ಮಾಡಲ್ಲ ಎಂದು ಘೋಷಿಸಿದ್ದಾರೆ.

ಈ ಬಾರಿ 17 ಮಂದಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ಅದರಲ್ಲಿ ಮೊದಲ ವಾರವೇ ಯಮುನಾ ಶ್ರೀನಿಧಿ ಎಲಿಮಿನೇಟ್ ಆಗಿ ಹೊರ ಬಂದಿದ್ದರು. 2ನೇ ವಾರ ದಸರಾ ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಎಲಿಮಿನೇಷನ್ ಇರಲಿಲ್ಲ. ಇದೀಗ 3ನೇ ವೀಕೆಂಡ್ ಬಂದಿದೆ. ಆದರೆ ವಾರದ ನಡುವೆಯೇ ಇಬ್ಬರೂ ಹೊರ ಬಂದಿರುವುದರಿಂದ 'ವಾರದ ಕತೆ ಕಿಚ್ಚನ ಜೊತೆ' ಎಪಿಸೋಡ್ ಕುತೂಹಲ ಮೂಡಿಸಿದೆ.

Bigg Boss kannada 11 What Sudeep will say about Jagdish amp amp Ranjith Mid-week Eviction

ಬಿಗ್‌ಬಾಸ್ ಮನೆಯಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ನಟ ಸುದೀಪ್ ವೇದಿಕೆಯಲ್ಲಿ ಏನು ಮಾತನಾಡುತ್ತಿದ್ದಾರೆ ಎನ್ನುವ ಬಗ್ಗೆ ಭಾರೀ ನಿರೀಕ್ಷೆಯಿದೆ. ಸದ್ಯ 'ವಾರದ ಕತೆ ಕಿಚ್ಚನ ಜೊತೆ' ಮೊದಲ ಪ್ರೋಮೊ ಹೊರಬಿದ್ದಿದೆ. ಕಿಚ್ಚನ ಪಂಚಾಯ್ತಿಯಲ್ಲಿ ಬಿಗ್ ಬಾಸ್‍‍ ನಿರ್ಧಾರದ ಬಗ್ಗೆ ಚರ್ಚೆ ಎನ್ನುವ ಕ್ಯಾಪ್ಷನ್ ಕೊಟ್ಟು ಕಲರ್ಸ್ ಕನ್ನಡ ಪ್ರೋಮೊ ಹಂಚಿಕೊಂಡಿದೆ.

"ಇಷ್ಟು ದಿನ ಮನೆಯವರು ಮಾಡುತ್ತಿದ್ದ ತಪ್ಪುಗಳ ಬಗ್ಗೆ ಚರ್ಚೆ ಮಾಡುತ್ತಿದ್ದ ಈ ವೇದಿಕೆಯಲ್ಲಿ ಈ ಸಲ ಕಂಪ್ಲೇಂಟ್ ಇರುವುದು ಬಿಗ್‌ಬಾಸ್ ಮೇಲೆ" ಎನ್ನುವ ಸುದೀಪ್ ಹೇಳಿಕೆಯೊಂದಿಗೆ ಪ್ರೋಮೊ ಮೂಡಿ ಬಂದಿದೆ. ಬಿಗ್‌ಬಾಸ್ ಅವಸರದ ನಿರ್ಧಾರ ತಗೊಂಡ್ರಾ? ಅಥವಾ ತಗೊಂಡ ನಿರ್ಧಾರ ತಪ್ಪಾಗಿದ್ಯಾ? ಎನ್ನುವ ಡೈಲಾಗ್‌ ಜೊತೆಗೆ ಪ್ರೋಮೊ ಕುತೂಹಲ ಮೂಡಿಸಿದೆ.

ಪ್ರತಿವಾರ ಮನೆಯಲ್ಲಿ ಏನೇ ನಡೆದರೂ ಅದು ಶನಿವಾರ, ಭಾನುವಾರ ಸುದೀಪ್ ಪಂಚಾಯ್ತಿಯಲ್ಲಿ ಚರ್ಚೆಗೆ ಬರುತ್ತದೆ. ಯಾರದರೂ ಚೆನ್ನಾಗಿ ಆಟ ಆಡಿದ್ದರೆ ಕಿಚ್ಚನ ಚಪ್ಪಾಳೆ ಸಿಗುತ್ತದೆ. ಯಾರದರೂ ತಪ್ಪು ಮಾಡಿದರೆ ಮಾತಿನ ಏಟು ಬೀಳುತ್ತದೆ. ಯಾರೇ ಆಗಿದ್ದರೂ ಮುಲಾಜಿಲ್ಲದೇ ಸುದೀಪ್ ಕೆಂಡಾಮಂಡಲವಾಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ.

2 ವಾರದ ಹಿಂದೆ ಉದ್ದಟತನ ಮೆರಿದಿದ್ದ ಲಾಯರ್ ಜಗದೀಶ್‌ ವಿರುದ್ಧ ಸುದೀಪ್ ಚಾಟಿ ಬೀಸಿದ್ದರು. ಬಿಗ್ ಬಾಸ್‌ ಶೋವನ್ನು ನಾನು ಎಕ್ಸ್‌ಪೋಸ್‌ ಮಾಡ್ತೀನಿ, ಡೆಸ್ಟ್ರಾಯ್ ಮಾಡ್ತೀನಿ, ಪ್ರೋಗ್ರಾಂ ಹಾಳು ಮಾಡಲಿಲ್ಲ ಅಂದ್ರೆ ನನ್ನ ಹೆಸರು ಬೇರೆ ಇಡಿ" ಎಂದೆಲ್ಲಾ ಹಾರಾಡಿದ್ದ ಜಗದೀಶ್‌ಗೆ ಸುದೀಪ್ ಖಡಕ್ ಎಚ್ಚರಿಕೆ ಕೊಟ್ಟಿದ್ದರು. "ಪ್ರೋಗ್ರಾಂ ಹಾಳು ಮಾಡೋಕೆ ನಿಮ್ಮಪ್ಪರಾಣೆಗೂ ಸಾಧ್ಯವಿಲ್ಲ" ಎಂದು ತಿವಿದಿದ್ದರು.

ಬಿಗ್‌ಬಾಸ್ ಮನೆಯಲ್ಲಿ ಮಹಿಳೆಯರನ್ನು ನಿಂದಿಸಿದ ಕಾರಣಕ್ಕೆ ಲಾಯರ್ ಜಗದೀಶ್ ಹೊರಬರುವಂತಾಗಿದೆ. ಮನೆಯಿಂದ ಹೊಬಂದ ಬಳಿಕ ಜಗದೀಶ್ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಸುದೀಪ್ ಕ್ಷಮೆಯನ್ನು ಕೇಳಿದ್ದಾರೆ. ನಿಮ್ಮ ಸಲಹೆಯಿಂದ ನಾನು ಸಾಕಷ್ಟು ಕಲಿತಿದ್ದೇನೆ ಎಂದಿದ್ದಾರೆ.

ಜಗದೀಶ್ ಅವರನ್ನು ತಳ್ಳಿದ ಕಾರಣಕ್ಕೆ ರಂಜಿತ್ ಅವರಿಗೂ ಬಿಗ್‌ಬಾಸ್ ಮನೆಯಿಮದ ಗೇಟ್‌ಪಾಸ್ ಸಿಕ್ಕಿದೆ. ಬಿಗ್‌ಬಾಸ್ ನಿಯಮದ ಪ್ರಕಾರ ಯಾರ ಮೇಲೆ ಯಾರು ಕೈ ಮಾಡಬಾರದು. ವೀಕ್ಷಕರಲ್ಲಿ ಕೆಲವರು ರಂಜಿತ್ ಮಾಡಿದ್ದು ತಪ್ಪು ಎಂದು ವಾದಿಸುತ್ತಿದ್ದಾರೆ. ಹೆಣ್ಣು ಮಕ್ಕಳ ಮೇಲೆ ಜಗದೀಶ್ ಬೀಳಲು ಹೋದರೂ ಅದಕ್ಕೆ ರಂಜಿತ್ ತಳ್ಳಿದರು, ಅಲ್ಲಿರಲ್ಲಿ ಯಾವುದೇ ತಪ್ಪಿಲ್ಲ ಎನ್ನುವವರು ಇದ್ದಾರೆ.

More from Filmibeat

English summary
BBK 11: Varada kathe kicchana jothe latest episode Promo Goes viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X