BBK11: ಈ ವಾರ ಡಬಲ್ ಶಾಕ್: ಇಬ್ಬರು ಹೊರಗೆ ಬರ್ತಾರಾ, ಇಬ್ಬರು ಒಳಗೆ ಹೋಗ್ತಾರಾ?
ಮತ್ತೊಂದು ವೀಕೆಂಡ್ ಬಂದಿದೆ. ಬಿಗ್‌ಬಾಸ್ ಮನೆಗೆ ಕಿಚ್ಚ ಸುದೀಪ್ ಆಗಮನವಾಗಿದೆ. ಕಿಚ್ಚನ ಪಂಚಾಯ್ತಿ ಅರ್ಧ ಮುಗಿದಿದೆ. ಸೂಪರ್ ಸಂಡೇ ವಿತ್ ಸುದೀಪ ಶೋ ನೋಡೋಕೆ ವೀಕ್ಷಕರು ಕಾಯುತ್ತಿದ್ದಾರೆ. ಈ ವಾರ ಎರಡೆರಡು ಎಲಿಮಿನೇಷನ್ ಇದೆ ಎಂದು ಶಾಕ್ ಕೊಟ್ಟಿದ್ದಾರೆ.
ಬಿಗ್‌ಬಾಸ್ ಕನ್ನಡ 11 ಈಗಾಗಲೇ 7 ವಾರಗಳ ಅಂತ್ಯಕ್ಕೆ ಬಂದು ನಿಂತಿದೆ. ಅಚ್ಚರಿಯ ಎಲಿಮಿನೇಷನ್‌ಗಳು ನಡೆದಿದೆ. ಜಗದೀಶ್ ಹಾಗೂ ರಂಜಿತ್ ಶಿಕ್ಷೆ ಅನುಭವಿಸಿ ಮನೆಯಿಂದ ಹೊರದೂಡಲ್ಪಟ್ಟಿದ್ದಾರೆ. ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಉತ್ತಮ ರೀತಿಯಲ್ಲಿ ಆಡುತ್ತಿದ್ದಾನೆ. ಇದೆಲ್ಲದರ ನಡುವೆ ಈ ವಾರ ಯಾರು ಮನೆಯಿಂದ ಹೊರಗೆ ಬರ್ತಾರೆ ಎನ್ನುವ ಕುತೂಹಲವಿದೆ. ಜೊತೆಗೆ ಕಿರುತೆರೆ ಒಬ್ಬ ನಟ ಹಾಗೂ ನಟಿ ಹೊಸದಾಗಿ ಮನೆಯೊಳಗೆ ಹೋಗ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.

ಈ ವಾರ ಬರೋಬ್ಬರಿ 10 ಮಂದಿ ನಾಮಿನೇಟ್ ಆಗಿದ್ದಾರೆ. ಈಗಾಗಲೇ ಶನಿವಾರದ ಎಪಿಸೋಡ್‌ನಲ್ಲಿ ತ್ರಿವಿಕ್ರಮ್, ಮೋಕ್ಷಿತಾ, ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯಾ ಸೇಫ್ ಆಗಿದ್ದಾರೆ. ಇದು ಜೋಡಿ ವಾರ ಆಗಿತ್ತು ಅಲ್ವಾ? ಹಾಗಿದ್ರೆ ಈ ವಾರ ಯಾರು? ಅಥವಾ ಯಾರ್ಯಾರು? ಹೋಗ್ತಾರೆ? ಮುಂದಿನ ಎಪಿಸೋಡ್‌ವರೆಗೂ ಕಾಯ್ತಾ ಇರಿ ಎಂದು ಸುದೀಪ್ ಹೇಳಿದ್ದರು. ಹಾಗಾಗಿ ಈ ವಾರ ಡಬಲ್ ಎಲಿಮಿನೇಷನ್ ಪಕ್ಕಾ ಎನ್ನಲಾಗ್ತಿದೆ.
ಒಂದೆರಡು ವಾರದ ಎಲಿಮಿನೇಷನ್ ಇಲ್ಲದೇ ಶೋ ಮುಂದುವರೆದಿದೆ. ಇದೀಗ ಮತ್ತಿಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ರೂಪದಲ್ಲಿ ಮನೆ ಪ್ರವೇಶಿಸುತ್ತಿದ್ದಾರೆ ಎನ್ನಲಾಗ್ತಿದೆ. ಹಾಗಾಗಿ ಈ ವಾರ ಇಬ್ಬರಿಗೆ ಮನೆಯಿಂದ ಗೇಟ್ ಪಾಸ್ ಸಿಗುವ ಸಾಧ್ಯತೆ ಹೆಚ್ಚಿದೆ. ಅಂದಹಾಗೆ ಈ ವಾರದ ಪ್ರದರ್ಶನ ಗಮನಿಸಿದ್ದಾಗ ಧರ್ಮ, ಧನರಾಜ್ ಹಾಗೂ ಅನುಷಾ ರೈ ಡೇಂಜರ್ ಜೋನ್‌ನಲ್ಲಿದ್ದಾರೆ.

ಈಗಾಗಲೇ ಅನುಷಾ ರೈ ಬಿಗ್‌ಬಾಸ್ ಜರ್ನಿ ಮುಗಿಸಿ ಮನೆಯಿಂದ ಹೊರಬಂದಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆರಂಭದಲ್ಲಿ ಅನುಷಾ ಗುಂಪಲ್ಲಿ ಗೋವಿಂದ ಎನ್ನುವಂತೆ ಇದ್ದರು. ಬಳಿಕ ನಿಧಾನವಾಗಿ ದೊಡ್ಮನೆ ಆಟಕ್ಕೆ ಒಗ್ಗಿಕೊಂಡಿದ್ದರು. ಇನ್ನು ಧರ್ಮ ಜೊತೆಗಿನ ಆತ್ಮೀಯ ಒಡನಾಟದಿಂದಲೂ ಆಕೆ ಗಮನ ಸೆಳೆದಿದ್ದರು.
ಒಂದು ಕಡೆ ಮನೆಯಲ್ಲಿ ಗಲಾಟೆ ನಡೆಯುತ್ತಿದ್ದರೆ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಧರ್ಮಗೆ ಅನುಷಾ ಚಪಾತಿ ತಿನ್ನಿಸುತ್ತಿದ್ದ ಸನ್ನಿವೇಶ ವೈರಲ್ ಆಗಿತ್ತು. ಬಿಗ್‌ಬಾಸ್ ಮನೆಯಲ್ಲಿ ಇವರಿಬ್ಬರು ಲವ್ ಕಪಲ್ ಎಂದೇ ಜನಪ್ರಿಯರಾಗಿದ್ದರು. ಇದೀಗ ಅನುಷಾ ರೈ ಬಿಗ್‌ಬಾಸ್ ಮನೆಯಿಂದ ಹೊರಬಂದಿರುವುದು ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿಬರ್ತಿದೆ.
ಅನುಷಾ ಜೊತೆ ದೊಡ್ಮನೆ ಜರ್ನಿ ಮುಗಿಸಿದ ಮತ್ತೊಬ್ಬ ಸ್ಪರ್ಧಿ ಯಾರು? ಎನ್ನುವ ಕುತೂಹಲವೂ ಇದೆ. ಒಂದೇ ದಿನ ಇಬ್ಬರೂ ಹೊರ ಬರ್ತಾರಾ? ಅಥವಾ ವಾರದ ಮಧ್ಯೆ ಮತ್ತೊಂದು ಎಲಿಮಿನೇಷನ್ ಶಾಕ್ ಕಾದಿದ್ಯಾ? ಗೊತ್ತಿಲ್ಲ. ಒಟ್ಟಾರೆ ಈ ವೀಕೆಂಡ್ ಎಲಿಮಿನೇಷನ್ ಭಾರೀ ಕುತೂಹಲ ಮೂಡಿಸಿರುವುದು ಸುಳ್ಳಲ್ಲ. ಅದಕ್ಕೆಲ್ಲಾ ಇನ್ನು ಕೆಲವೇ ನಿಮಿಷಗಳಲ್ಲಿ ಉತ್ತರ ಸಿಗಲಿಲ್ಲ.
ಈ ವಾರ ಶಿಶಿರ್, ಧರ್ಮ, ಧನರಾಜ್, ಮೋಕ್ಷಿತಾ, ಸುರೇಶ್, ಮಂಜು, ಭವ್ಯಾ, ಗೌತಮಿ, ಹನುಮಂತ, ಅನುಷಾ ಸೇರಿ ಬರೋಬ್ಬರಿ 10 ಜನ ನಾಮಿನೇಟ್ ಆಗಿದ್ದರು. ಈ ವಾರ ಇಬ್ಬಿಬ್ಬರು ಸ್ಪರ್ಧಿಗಳು ಜೋಡಿಯಾಗಿ ಟಾಸ್ಕ್‌ಗಳಲ್ಲಿ ಭಾಗವಹಿಸಿದ್ದರು. ಈ ವೇಳೆ ಸಾಕಷ್ಟು ಕಿರಿಕ್‌ಗಳು ನಡೆದಿತ್ತು. ಬಾತ್‌ರೂಮ್ ಏರಿಯಾದಲ್ಲಿ ಕುಸಿದು ಬಿದ್ದಿದ್ದ ಚೈತ್ರಾ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಘಟನೆಯೂ ನಡೆಯಿತು.


Click it and Unblock the Notifications











