BBK 11: ಬಿಗ್ ಟ್ವಿಸ್ಟ್.. ಈ ವಾರ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದು ಯಾರು ಗೊತ್ತಾ?
ಬಿಗ್‌ಬಾಸ್ ಕನ್ನಡ ಸೀಸನ್ 11 ಇದೀಗ 6ನೇ ವಾರದ ಅಂತ್ಯಕ್ಕೆ ಬಂದು ನಿಂತಿದೆ. ಲಾಯರ್ ಜಗದೀಶ್ ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೆ ಕ್ರೇಜ್ ಕೊಂಚ ಕಮ್ಮಿ ಆಗಿರುವುದು ನಿಜ. ಆದರೂ ಹನುಮಂತ ಎಂಟ್ರಿಯಿಂದ ನಿಧಾನವಾಗಿ ಶೋ ವೀಕ್ಷಕರನ್ನು ಸೆಳೆಯುತ್ತಿದೆ. ಇನ್ನು ಕಿಚ್ಚನ ವಾರಾಂತ್ಯದ ಎಪಿಸೋಡ್‌ಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.
6ನೇ ಶನಿವಾರ ಕಿಚ್ಚನ ಪಂಚಾಯ್ತಿ ಕೊಂಚ ಲವಲವಿಕೆಯಿಂದ ಕೂಡಿತ್ತು. ಸ್ಪರ್ಧಿಗಳಿಗೆ ಹೆಚ್ಚು ಕ್ಲಾಸ್ ತೆಗೆದುಕೊಳ್ಳದೇ ತಮಾಷೆಯಾಗಿಯೇ ಕೆಲವರ ಕಿವಿಹಿಂಡುವ ಕೆಲಸ ಮಾಡಿದರು ಕಿಚ್ಚ. ಆಗೊಮ್ಮೆ ಹೋಗೊಮ್ಮೆ ಕೊಂಚ ಖಾರವಾಗಿ ಕ್ಲಾಸ್ ತೆಗೆದುಕೊಂಡರು. ಚೈತ್ರಾ ಕುಂದಾಪುರ ತಮಗೆ ತಾವೇ ಪೂಜೆ ಮಾಡಿಕೊಂಡಂತ ಸನ್ನಿವೇಶದ ಬಗ್ಗೆ ಸುದೀಪ್ ಪ್ರಸ್ತಾಪಿಸಿದರು. ಅದಕ್ಕೆ ಸಂಬಂಧಿಸಿ ಒಂದಷ್ಟು ಮೀಮ್ಸ್ ತೋರಿಸಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು.

ಈ ವಾರ ಭವ್ಯಗೆ 'ಉತ್ತಮ' ಎನ್ನುವ ಪ್ರಶಂಸೆ ಸಿಕ್ಕಿದೆ. ಅದೇ ರೀತಿ ಸುರೇಶ್ ಹಾಗೂ ಧನರಾಜ್‌ಗೆ ಕಳಪೆ ಪಟ್ಟವೂ ಸಿಕ್ಕಿದೆ. ಹನುಮಂತ ಮುಗ್ಧ ಹೌದಾ? ಅಲ್ಲವಾ? ಎನ್ನುವ ಚರ್ಚೆ ಕೂಡ ನಡೀತು.
ಇದೆಲ್ಲದರ ನಡುವೆ ಈ ವಾರ ಯಾರು ಬಿಗ್‌ಬಾಸ್ ಮನೆಯಿಂದ ಹೊರ ಬರುತ್ತಾರೆ ಎನ್ನುವ ಕುತೂಹಲ ಕೂಡ ವೀಕ್ಷಕರಲ್ಲಿದೆ. ಈ ವಾರ 7 ಜನ ಸ್ಪರ್ಧಿಗಳು ಮನೆಯಿಂದ ಹೊರ ಬರಲು ನಾಮಿನೇಟ್ ಆಗಿದ್ದರು. ಭವ್ಯಾ, ಮೋಕ್ಷಿತಾ, ಚೈತ್ರಾ, ಧರ್ಮ, ತ್ರಿವಿಕ್ರಮ್, ಧನರಾಜ್, ಸುರೇಶ್ ಈ ಬಾರಿ ನಾಮಿನೇಟ್ ಆದವರ ಲಿಸ್ಟ್‌ನಲ್ಲಿದ್ದಾರೆ. ಅದರಲ್ಲಿ ಮೋಕ್ಷಿತಾ ಹಾಗೂ ತ್ರಿವಿಕ್ರಮ್ ಸೇಫ್ ಆಗಿದ್ದಾರೆ. ಈ ವಿಚಾರವನ್ನು ನಿನ್ನೆ ಸಂಚಿಕೆಯಲ್ಲಿ ಸುದೀಪ್ ತಿಳಿಸಿದ್ದಾರೆ.
ಭವ್ಯಾ ಅಥವಾ ಗೌತಮಿ ಈ ವಾರ ಮನೆಯಿಂದ ಹೊರಬೇಕು ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಭವ್ಯಾ ಮುಂದಿನ ವಾರವೂ ಬಿಗ್‌ಬಾಸ್ ಮನೆಯಲ್ಲಿ ಇರಬೇಕು ಎನ್ನುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಇನ್ನುಳಿದ ಐವರಲ್ಲಿ ಯಾರು ಮನೆಯಿಂದ ಹೊರ ಬರುತ್ತಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿದೆ.

ಮೊದಲ ವಾರವೇ ಯುಮುನಾ ಶ್ರೀನಿಧಿ ಮನೆಯಿಂದ ಎಲಿಮಿನೇಟ್ ಆಗಿದ್ದರು. ಎರಡನೇ ವಾರ ಯಾವುದೇ ಎಲಿಮಿನೇಷನ್ ಇರಲಿಲ್ಲ. 3ನೇ ವಾರ ಜಗದೀಶ್ ಹಾಗೂ ರಂಜಿತ್ ಶಿಕ್ಷೆ ರೂಪದಲ್ಲಿ ಹೊರ ಬಂದಿದ್ದರು. ಆದರೆ ನಾಲ್ಕನೇ ವಾರದ ಆರಂಭದಲ್ಲೇ ಹಂಸ ಎಲಿಮಿನೇಟ್ ಆಗಿದ್ದರು. 5ನೇ ವಾರ ಮಾನಸ ಸಂತೋಷ್ ಬಿಗ್‌ಬಾಸ್ ಮನೆಯ ಜರ್ನಿ ಮುಗಿಸಿದ್ದರು.
ಅಚ್ಚರಿ ಎನ್ನುವಂತೆ ಈ ವಾರ ಕೂಡ ಯಾವುದೇ ಎಲಿಮಿನೇಷನ್ ಇಲ್ಲ ಎನ್ನಲಾಗ್ತಿದೆ. ನಾಮಿನೇಷನ್ ಆಗಿರುವ ಇನ್ನುಳಿದ ಐವರು ಕೂಡ ಸೇಫ್ ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಮುಂದಿನ ವಾರದ ನಡುವೆಯೇ ಯಾರಾದರೂ ಒಬ್ಬರು ಮನೆಯಿಂದ ಹೊರ ಬಂದರೂ ಅಚ್ಚರಿ ಪಡಬೇಕಿಲ್ಲ.
ಈಗಾಗಲೇ ಕೆಲ ಸ್ಪರ್ಧಿಗಳು ಬಿಗ್‌ಬಾಸ್ ಆಟಕ್ಕೆ ಹೊಂದಿಕೊಂಡಿದ್ದಾರೆ. ಕೆಲವರಿಗೆ ಇನ್ನು ಆಟ ಏನು ಎನ್ನುವುದು ಅರ್ಥವಾಗಿಲ್ಲ. ಆದರೆ ಇನ್ನು ಕೆಲವರಿಗೆ ಅರ್ಥವೇ ಆಗಿಲ್ಲ. ಈ ವಿಚಾರವನ್ನು ಸುದೀಪ್ ತಿಳಿಸಿದ್ದಾರೆ. ಇನ್ನು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಹನುಮಂತ ಎರಡು ವಾರ ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದರು. ತ್ರಿವಿಕ್ರಮ್ ಮುಂದಿನ ವಾರಕ್ಕೆ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.
ಒಟ್ಟಾರೆ ಆಟ ದಿನದಿಂದ ದಿನಕ್ಕೆ ಕುತೂಹಲದ ಘಟ್ಟಕ್ಕೆ ತಲುಪುತ್ತಿದೆ. ಆದರೆ ಈ ಕ್ಷಣಕ್ಕೂ ಯಾರು 100 ದಿನಗಳನ್ನು ಪೂರೈಸಿ ಟ್ರೋಫಿ ಎತ್ತಿ ಹಿಡಿಯುತ್ತಾರೆ ಎನ್ನುವ ಬಗ್ಗೆ ಯಾವುದೇ ಸುಳಿವು ಸಿಗ್ತಿಲ್ಲ. ಎಲ್ಲದ್ದಕ್ಕೂ ಶೀಘ್ರದಲ್ಲೇ ಉತ್ತರ ಸಿಗಲಿದೆ.


Click it and Unblock the Notifications











