BBK 11: ಹೆಣ್ಣು ಮಗಳೇ ಬಿಗ್‌ಬಾಸ್ ಕನ್ನಡ 11ರ ವಿನ್ನರ್? ಟ್ರೋಫಿ ಕೊಡ್ತಿದ್ಯಾ ಸುಳಿವು?
ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆ ವೀಕ್ ನಡೆಯುತ್ತಿದೆ. ಭಾನುವಾರ ಯಾರಾಗ್ತಾರೆ? ಬಿಗ್ ಬಾಸ್ ವಿನ್ನರ್ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಸಾಕಷ್ಟು ಜನ ಈಗಾಗಲೇ ಊಹೆ ಮಾಡುವುದಕ್ಕೂ ಶುರು ಮಾಡಿದ್ದಾರೆ. ಫಿನಾಲೆ ವಾರದಲ್ಲಿ ಉಗ್ರಂ ಮಂಜು, ತ್ರಿವಿಕ್ರಂ, ಹನುಮಂತ, ರಜತ್, ಮೋಕ್ಷಿತಾ, ಭವ್ಯಾ ತಲುಪಿದ್ದಾರೆ. ಹನುಮಂತ ಈ ಬಾರಿಯ ವಿನ್ನರ್ ಎಂದು ಹಲವರು ಹೇಳುತ್ತಿದ್ದಾರೆ.
ಇನ್ನು ಇದು ಸೀಸನ್ 11. ಈಗಾಗಲೇ 10 ಸೀಸನ್ ಮುಗಿದಿದೆ. ಇಷ್ಟು ಸೀಸನ್‌ಗಳಲ್ಲಿ ಒಂದೇ ಬಾರಿ ಮಹಿಳಾ ಸ್ಪರ್ಧಿ ಗೆದ್ದಿರೋದು. ಬಿಗ್ ಬಾಸ್ ಕನ್ನಡ ಸೀಸನ್ -3ರಲ್ಲಿ ನಟಿ ಶೃತಿ ಟ್ರೋಫಿ ಎತ್ತಿ ಹಿಡಿದಿದ್ದರು. ಬಳಿಕ ಮತ್ಯಾವ ಮಹಿಳಾ ಸ್ಪರ್ಧಿಯೂ ಈ ಸಾಧನೆ ಮಾಡಲಿಲ್ಲ. ಸೀಸನ್ 10ರಲ್ಲಿ ಸಂಗೀತಾ ಕಪ್ ಗೆದ್ದೇ ಗೆಲ್ತಾರೆ ಎನ್ನುವಾಗಲೇ ಜಸ್ಟ್ ಮಿಸ್ ಆಗಿತ್ತು. ಆ ಆಸೆ ಈ ಸೀಸನ್‌ನಲ್ಲಿ ಈಡೇರಬಹುದಾ..?

ಅಖಾಡದಲ್ಲಿ ಘಟಾನುಘಟಿಗಳು
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಘಟಾನುಘಟಿ ಸ್ಪರ್ಧಿಗಳೇ ಫಿನಾಲೆ ಅಂಗಳಕ್ಕೆ ತಲುಪಿದ್ದಾರೆ. ಈ ಸೀಸನ್‌ನ ವಿಶೇಷತೆ ಎಂದರೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದವರೇ ಮೊದಲಿಂದ ಇದ್ದ ಸ್ಪರ್ಧಿಗಳಿಗಿಂತ ಸ್ಟ್ರಾಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಹನುಮಂತ ತನ್ನದೇ ಮುಗ್ಧ ಸ್ವಭಾವ, ಹಾಡುಗಾರಿಕೆಯಿಂದ ಜನರ ಮನಸ್ಸನ್ನ ಗೆದ್ದಿದ್ದರೆ, ರಜತ್ ಏಕ್ ಧಮ್ ಪಂಚ್ ಕೊಟ್ಟು ಉಳಿದುಕೊಂಡಿದ್ದಾರೆ.
ಮನೆಯಲ್ಲಿ ಉಳಿದ ಮೋಕ್ಷಿತಾ-ಭವ್ಯಾ
ರಜತ್ ಹಾಗೂ ಮಂಜು ನಿಂತರೆ ಕಿರುಚಾಟವೇ ಜೋರು. ತ್ರಿವಿಕ್ರಂ ಟಾಸ್ಕ್‌ಗಳಲ್ಲೂ ಸ್ಟ್ರಾಂಗ್. ಹೀಗೆ ನಾಲ್ವರು ಪುರುಷ ಸ್ಪರ್ಧಿಗಳ ನಡುವೆ ತಮ್ಮದೇ ಆದ ವ್ಯಕ್ತಿತ್ವದ ಮೂಲಕ ಇಬ್ಬರು ಮಹಿಳಾ ಸ್ಪರ್ಧಿಗಳು ನಿಂತಿದ್ದಾರೆ. ಮೋಕ್ಷಿತಾ ಹಾಗೂ ಭವ್ಯಾ. ಅದರಲ್ಲೂ ಹೆಚ್ಚು ನಾಮಿನೇಷನ್ ಆಗಿದ್ದೇ ಮೋಕ್ಷಿತಾ. ಜನರು ಅವರನ್ನ ಇಲ್ಲಿಯವರೆಗೂ ಉಳಿಸಿಕೊಂಡರು. ಇನ್ನು ಭವ್ಯಾ ಕೂಡ ಹೊರಗೆ ಹೋಗಿಯೇ ಬಿಟ್ಟರು ಎಂದುಕೊಳ್ಳುವ ಹಂತಕ್ಕೆ ಬಂದು ಬಚಾವ್ ಆಗಿದ್ದಾರೆ.

ಮಹಿಳಾ ಸ್ಪರ್ಧಿ ಕೈಗೆ ಕಪ್?
ಇಷ್ಟು ದಿನಗಳ ಕಾಲ ರಂಜಿಸಿಕೊಂಡು ಬಂದ ಮಹಿಳಾ ಸ್ಪರ್ಧಿಗಳು ಈ ಬಾರಿ ಕಪ್ ಗೆಲ್ಲುತ್ತಾರಾ..? ಕಿಚ್ಚನ ಕೊನೆಯ ಸೀಸನ್ ಇದು. ಅವರು ಇನ್ಮುಂದೆ ಬಿಗ್ ಬಾಸ್ ನಡೆಸಿಕೊಡಲ್ಲ ಎಂಬ ನೋವನ್ನ ಮಹಿಳಾ ಸ್ಪರ್ಧಿಗಳ ಗೆಲುವು ಮರೆಸುತ್ತಾ. ಇದನ್ನ ನಾವೂ ಹೇಳ್ತಾ ಇರೋದಲ್ಲ ಒಂದಷ್ಟು ಬಿಗ್ ಬಾಸ್ ನೋಡುವ ಪಂಡಿತರು ಹೇಳ್ತಾ ಇರೋದು. ಸೀಸನ್ 11 ಇತಿಹಾಸ ಸೃಷ್ಟಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಟ್ರೋಫಿ ನೋಡಿ ಲೆಕ್ಕಾಚಾರ!
ಈ ಹಿಂದೆ ಅಂದ್ರೆ ಹಿಂದಿಯ ಸೀಸನ್ 15ರಲ್ಲಿ ಮಹಿಳಾ ಸ್ಪರ್ಧಿ ವಿನ್ ಆಗಿದ್ರು. ಆಗ ತೇಜಸ್ವಿ ಪ್ರಕಾಶ್ ಅವರಿಗೆ ನೀಡಿದ್ದ ಟ್ರೋಫಿ ಪಕ್ಷಿಯ ರೆಕ್ಕೆ ಆಕಾರದಲ್ಲಿ ಇತ್ತು. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲೂ ಟ್ರೋಫಿ ಬದಲಾಗಿದೆ. ಎರಡು ರೆಕ್ಕೆಗಳಿರುವ ಟ್ರೋಫಿ ನೀಡಲಾಗುತ್ತಿದೆ. ಹಾಗಾಗಿ ಮಹಿಳಾ ಸ್ಪರ್ಧಿ ಗೆದ್ದು ಬಿಡ್ತಾರಾ? ಎನ್ನುವ ಊಹಾಪೋಹ ಕೆಲವರದ್ದು. ಒಂದು ವೇಳೆ ಆ ಅಂದಾಜು ನಿಜವಾದರೆ ಗೆಲ್ಲುವುದು ಮೋಕ್ಷಿತಾನಾ..? ಭವ್ಯಾನಾ ಎಂಬ ಕುತೂಹಲವಿದೆ.


Click it and Unblock the Notifications











