BBK 11 Grand Finale: ವಿನ್ನರ್ ತ್ರಿವಿಕ್ರಮ್ ಅಲ್ಲ ಮತ್ಯಾರು? ಲೀಕ್ ಆಯ್ತಾ ಸೀಕ್ರೆಟ್?
ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಬಹಳ ಕುತೂಹಲ ಮೂಡಿಸಿದೆ. ಭವ್ಯಾ ಗೌಡ ಬಳಿಕ ಯಾರು ಹೊರಗೆ ಬಂದರು ಎನ್ನುವ ಬಗ್ಗೆ ಇನ್ನು ಖಚಿತ ಮಾಹಿತಿ ಇಲ್ಲ. ಉಗ್ರಂ ಮಂಜು ಎಲಿಮಿನೇಟ್ ಆಗಿದ್ದಾರೆ ಎನ್ನುವ ಗುಸುಗುಸು ಮಧ್ಯಾಹ್ನದಿಂದಲೇ ಶುರುವಾಗಿದೆ.
ಉಗ್ರಂ ಮಂಜು ಬಳಿಕ ಮೋಕ್ಷಿತಾ ಕೂಡ ಹೊರ ಬಂದಿದ್ದು ತ್ರಿವಿಕ್ರಮ್, ಹನುಮಂತ ಹಾಗೂ ರಜತ್ ಮಾತ್ರ ಇದ್ದಾರೆ ಎನ್ನಲಾಗ್ತಿದೆ. ಮೂವರನ್ನು ವೇದಿಕೆಗೆ ಕರೆದುಕೊಂಡು ಬರಲು ಸುದೀಪ್ ಮನೆಯೊಳಗೆ ಹೋಗಿದ್ದಾರೆ ಎನ್ನುವ ಚರ್ಚೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ.

ತ್ರಿವಿಕ್ರಮ್ ವಿನ್ನರ್ ಎನ್ನುವ ಚರ್ಚೆ ಕೂಡ ಶುರುವಾಗಿದೆ. ಅಷ್ಟರಲ್ಲೇ ವಿನ್ನರ್ ಹನುಮಂತ ಎನ್ನುವ ಮತ್ತೊಂದು ಟಾಪಿಕ್ ಚರ್ಚೆಗೆ ಬಂದಿದೆ. ಅದಕ್ಕೆ ಕಾರಣ ವಿಕಿಪಿಡಿಯ. ಹೌದು ವಿಕಿಪಿಡಿಯಾದಲ್ಲಿ ಈಗಾಗಲೇ ಬಿಗ್‌ಬಾಸ್ ಕನ್ನಡ ಸೀಸನ್ 11ರ ಫಲಿತಾಂಶ ಹೊರ ಬಿದ್ದಿದೆ. ಅದರ ಪ್ರಕಾರ ಹನುಮಂತ ವಿನ್ನರ್ ಎಂದು ನಮೂದಿಸಲಾಗಿದೆ. ಹಾಗಿದ್ದರೆ ಯಾರು ವಿನ್ನರ್ ಎನ್ನುವ ಸೀಕ್ರೆಟ್ ಅಷ್ಟು ಬೇಗ ಲೀಕ್ ಆಗಿ ಬಿಡ್ತಾ? ಎನ್ನುವ ಚರ್ಚೆ ಶುರುವಾಗಿದೆ.
ವಿಕಿಪಿಡಿಯದಲ್ಲಿ ಇರುವ ಎಲ್ಲಾ ಮಾಹಿತಿಯನ್ನು ಸತ್ಯ ಎಂದು ನಂಬಲು ಸಾಧ್ಯವಿಲ್ಲ. ಕಾರಣ ಯಾರು ಬೇಕಾದರೂ ಅದನ್ನು ಬದಲಿಸಬಹುದು. ಈ ಹಿಂದೆ ಕೂಡ ಇದೇ ರೀಯಿ ವಿಕಿಪಿಡಿಯದಲ್ಲಿ ತಪ್ಪು ಮಾಹಿತಿ ಅಪ್‌ಡೇಟ್ ಆಗಿರುವ ಉದಾಹರಣೆಗಳಿವೆ. ಆದರೆ ವಿಕಿಪಿಡಿಯದಲ್ಲಿ ಬಹುತೇಕ ಸರಿಯಾದ ಮಾಹಿತಿ ಇರುತ್ತದೆ. ಹಾಗಾಗಿ ಸಾಕಷ್ಟು ಜನ ಅದನ್ನು ನಂಬುತ್ತಾರೆ. ಅದು ಸರಿ ಎಂದು ಫಾಲೋ ಮಾಡುತ್ತಾರೆ.
ಕೆಲವೇ ನಿಮಿಷಗಳಲ್ಲಿ ಫಲಿತಾಂಶ ಹೊರ ಬೀಳಲಿದೆ. ಮಂಜು ಹೊರಗೆ ಬಂದಿರುವುದರಿಂದ ಈಗ 4 ಜನ ಮನೆಯೊಳಗೆ ಇದ್ದಾರೆ. ಕೆಲ ಮೂಲಗಳ ಪ್ರಕಾರ ಮೋಕಿತಾ ಕೂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ ಎನ್ನಲಾಗ್ತಿದೆ. ಆಕೆ ಕೂಡ ಎಲಿಮಿನೇಟ್ ಆಗಿದ್ದು ಇನ್ನುಳಿದ ಮೂವರನ್ನು ಸುದೀಪ್ ವೇದಿಕೆಗೆ ಕರೆದುಕೊಂಡು ಬಂದಿದ್ದಾರೆ. ರಜತ್ ಗೆಲ್ಲವುದು ಕಷ್ಟ ಎಂದೇ ಕೆಲವರು ವಾದಿಸುತ್ತಿದ್ದಾರೆ. ಅದೇ ನಿಜವಾಗಿದ್ದರೆ ಸುದೀಪ್ ವೇದಿಕೆಯಲ್ಲಿ ತ್ರಿವಿಕ್ರಮ್ ಹಾಗೂ ಹನುಮಂತ ಕೈಗಳನ್ನು ಹಿಡಿದು ಯಾರಾದರೂ ಒಬ್ಬರ ಕೈ ಮೇಲೆತ್ತಲಿದ್ದಾರೆ.
ತ್ರಿವಿಕ್ರಮ್ ಗೆಲ್ಲಬಹುದು ಎನ್ನುವುದು ಕೆಲವರ ಲೆಕ್ಕಾಚಾರ. ಆದರೆ ವಿಕಿಪಿಡಿಯದಲ್ಲಿ ಹನುಮಂತ ವಿನ್ನರ್ ಎಂದು ಹಾಕಲಾಗಿದೆ. ಹಾಗಾಗಿ ಕಾದು ನೋಡಬೇಕಿದೆ. 11 ಗಂಟೆ ವೇಳೆಗೆ ಅಂತಿಮ ಫಲಿತಾಂಶ ಹೊರ ಬೀಳಲಿದೆ.


Click it and Unblock the Notifications











