BBK 11: ಬಿಗ್ ಬಾಸ್‌ಗೆ ಸುದೀಪ್‌ಗಿಂತ ದೊಡ್ಡವರಿಲ್ಲ; ಚೈತ್ರಾ ಮಾತಿಗೆ ಭಟ್ರ ಖಡಕ್ ಉತ್ತರ

By ಎಸ್ ಸುಮಂತ್

ಸುದೀಪ್ ಅವರು ಮಾತೃವಿಯೋಗದ ನೋವಿನಿಂದ ಹೊರ ಬಂದಿಲ್ಲ. ಆ ನೋವಿನಿಂದ ಹೊರ ಬರುವುದು ಅಷ್ಟು ಸುಲಭವೂ ಅಲ್ಲ. ಹೆತ್ತ ತಾಯಿ, ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಜೀವವದು. ಹೀಗಾಗಿ ನೋವಿನಲ್ಲಿರುವ ಸುದೀಪ್ ಅವರನ್ನು ಬಿಗ್ ಬಾಸ್ ಕೂಡ ಬಲವಂತ ಮಾಡಿಲ್ಲ. ಬದಲಿಗೆ ಬೇರೆ ರೀತಿಯಾಗಿ ವೀಕೆಂಡ್ ಕಾರ್ಯಕ್ರಮವನ್ನು ನಡೆಸಿಕೊಟ್ಟಿದೆ. ರಾಧಾ ಹಿರೇಗೌಡರ್, ಯೋಗರಾಜ್ ಭಟ್, ಸೃಜನ್ ಲೋಕೇಶ್ ಅವರನ್ನು ಗೆಸ್ಟ್ ಆಗಿ ಕರೆಸಿದ್ದಾರೆ.

ಯೋಗರಾಜ್ ಭಟ್ಟರ ವೀಕೆಂಡ್ ಪಂಚಾಯ್ತಿ ಅದ್ಭುತವಾಗಿತ್ತು. ಒಂದಷ್ಟು ಅರಿವನ್ನು ಮೂಡಿಸಿದರು. ಅದರಲ್ಲೂ ಕಳೆದ ವೀಕೆಂಡ್ ಪಂಚಾಯ್ತಿ ಆದಮೇಲೆ ಚೈತ್ರಾ, ಸುದೀಪ್ ಅವರ ಬಗ್ಗೆಯೇ ಮಾತನಾಡಿದ್ದಿದ್ದು ಜನತೆಗೆ ಇಷ್ಟವಾಗಿರಲಿಲ್ಲ. ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೀಗ ಅದಕ್ಕೆಲ್ಲ ಯೋಗರಾಜ ಭಟ್ಟರೇ ಉತ್ತರ ಕೊಟ್ಟಿದ್ದಾರೆ.

Bigg boss kannada 11 Yogaraj Bhatt reveals in house why sudeep couldn t come to show

ಚೈತ್ರಾ ಉತ್ತರಕ್ಕೆ ಖಡಕ್ ಉತ್ತರ

ಯೋಗರಾಜ್ ಭಟ್ಟರು ಹಲವು ವಿಚಾರಗಳನ್ನು ಮಾತನಾಡಿ, ಬಳಿಕ ನೇರವಾಗಿ ಚೈತ್ರಾ ವಿಚಾರಕ್ಕೆ ಬಂದಿದ್ದಾರೆ. 'ನೇರವಾಗಿ ಸುದೀಪ್ ಸರ್ ಅವರ ಬಗ್ಗೆ ಮಾತಾಡ್ತೀರಿ. ಜಗದೀಶ್ ಅವರನ್ನು ಹೀರೋ ಮಾಡಿ, ನಮ್ಮನ್ನೆಲ್ಲ ವಿಲನ್ ಮಾಡಿದ್ರಿ ಅಂತೀರಾ. ನಿಮ್ಮನ್ನ ವಿಲನ್ ಮಾಡಿ ಸುದೀಪ್ ಸರ್ ಅವರಿಗೆ ಏನು ಲಾಭ. ಇಷ್ಟು ವರ್ಷ ಬಿಗ್ ಬಾಸ್ ನಡೆಸಿಕೊಂಡು ಬಂದಿದ್ದಾರೆ. ಅವರೂ ಈ ರೀತಿ ಮಾಡ್ಕೊಂಡು ಬಂದಿದ್ದಾರಾ..? ಒಂದು ತಿಳ್ಕೊಳಿ ಬಿಗ್ ಬಾಸ್ ಶೋಗೆ ಸುದೀಪ್ ಸರ್ ಬಿಟ್ರೆ ಬೇರೆ ಯಾರೂ ದೊಡ್ಡವರು ಇಲ್ಲ. ಪ್ರೇಕ್ಷಕರು ಇರಬಹುದು' ಎಂದಿದ್ದಾರೆ.

ನಾನು ಹೇಳಿದ್ದು ಈ ರೀತಿ ಎಂದ ಚೈತ್ರಾ

ಯೋಗರಾಜ್ ಭಟ್ಟರ ಮಾತು ಕೇಳಿದ ಚೈತ್ರಾ, ಅಂದಿನ ಮಾತಿನ ಬಗ್ಗೆ ಸಮರ್ಥನೆ ಕೊಡುವುದಕ್ಕೆ ಪ್ರಯತ್ನಿಸಿದರು. ನಾನೇಳಿದ್ದು ಹಾಗಲ್ಲ. ಸುದೀಪ್ ಸರ್ ನಮ್ಮನ್ನ ಕೆಟ್ಟವರನ್ನಾಗಿ ಮಾಡ್ತಾ ಇದಾರೆ ಅಂತ ಹೇಳಿದ್ದಲ್ಲ. ಆದರೆ ಜಗದೀಶ್ ಅವರನ್ನ ಹೀರೋ ಆಗಿ ತೋರೊಸುವುದಕ್ಕೆ ಹೊರಟಿದ್ರು ಅಂತೇಳಿದ್ದು ಎಂದು ಸಮರ್ಥನೆ ನೀಡಿದರು.

ಎಪಿಸೋಡ್ ಬಗ್ಗೆ ವಿವರಿಸಿದ ಭಟ್ರು

'ಇಡೀ ನಾಡಿಗೆ ಗೊತ್ತು ಆದರೆ ನಿಮಗೆ ಈ ವಿಚಾರ ಗೊತ್ತಿಲ್ಲ. ಶನಿವಾರ ಪೂರ್ತಿ ತಲೆ ಬಿಸಿ ನಡುವೆ ನಿಮ್ಮಗಳ ಜೊತೆ ಮಾತಾಡಿದ್ದಾರೆ. ಒಂದು ಫೋನ್ ಇದೆ ಎಂದು ಹೇಳಿದ್ದಾರೆ. ಅವರ ತಾಯಿ ಐಸಿಯುನಲ್ಲಿದ್ದರು. ಆದರೆ ಆ ವಿಚಾರಗಳನ್ನು ಕೇಳಿದ ಮೇಲೂ ಇದು ನನ್ನ ಮನೆ, ನಾನೇ ಸಮಸ್ಯೆಗಳನ್ನು ಸರಿ ಮಾಡಬೇಕು ಎಂದು ವಾಪಾಸ್ ವೇದಿಕೆಗೆ ಬಂದ್ರು. ಶನಿವಾರ ರಾತ್ರಿ ಮನೆಗೆ ಹೋದ್ರೆ ಕೊನೆಯ ಮೆಸೇಜ್ ನನ್ನ ತಾಯಿಯನ್ನು ಕಳೆದುಕೊಂಡೆ ಎಂಬ ಸ್ಟೇಟಸ್ ಹಾಕಿದ್ದರು. ಸುದೀಪ್ ಅವರು ತುಂಬಾ ಪ್ರೀತಿಸುವ ವ್ಯಕ್ತಿ' ಎಂದು ಕಿಚ್ಚನ ನೋವಿನ ಸುದ್ದಿಯನ್ನು ಮುಟ್ಟಿಸಿದ್ದಾರೆ.

ಮನೆಮಂದಿ ಸತ್ಯ ತಿಳಿದು ಶಾಕ್

ಸುದೀಪ್ ಅವರ ತಾಯಿ ನಿಧನರಾಗಿದ್ದಾರೆ ಎಂಬುದನ್ನು ತಿಳಿಸಿದ ಯೋಗರಾಜ ಭಟ್ಟರು ಒಂದು ನಿಮಿಷ ಮೌನಾಚರಣೆ ಮಾಡಲು ಸೂಚಿಸಿದರು. ಎಲ್ಲರೂ ನಿಂತು ಸುದೀಪ್ ಅವರ ತಾಯಿ ಸರೋಜಾ ಅವರ ಆತ್ಮಕ್ಕೆ ಶಾಂತಿ ಕೋರಿದರು. ಬಳಿಕ ಯೋಗರಾಜ್ ಭಟ್ಟರು ಮನೆಯಿಂದ ಹೊರಟರು. ಆದರೆ ಮನೆ ಮಂದಿ ಸ್ವಲ್ಪ ಸಮಯ ದುಃಖದಲ್ಲೇ ಇದ್ದರು. ಆಮೇಲೆ ನಾರ್ಮಲ್ ಆಗಿ ಬಿಟ್ಟರು.

More from Filmibeat

English summary
Colors kannada bigboss Written Update on Bigboss season 11 October 27th episode. Here is the details about Yogaraj Bhatt told the news of Sudeep's mother's death;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X