BBK 11; ಬಿಗ್‌ಬಾಸ್ ಟ್ರೋಫಿ ಗೆದ್ದ ಹನುಮಂತ; ಜೀ ಕನ್ನಡ ಪ್ರತಿಕ್ರಿಯೆ

By ಎಸ್ ಸುಮಂತ್

ಬಿಗ್ ಬಾಸ್ ಸೀಸನ್ 11 ಮುಕ್ತಾಯವಾಗಿದೆ. ಐದು ಕೋಟಿಗೂ ಅಧಿಕ ವೋಟ್ ಪಡೆದು ಹನುಮಂತ ವಿನ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವಷ್ಟು ದಿನವೂ ಎಂದಿಗೂ ತನ್ನ ವ್ಯಕ್ತಿತ್ವವನ್ನ ಬದಲಾಯಿಸಿಕೊಳ್ಳಲೇ ಇಲ್ಲ. ತಾನಾಯ್ತು ತನ್ನ ಪಾಡಾಯ್ತು ಎಂದು ಇದ್ದವರು. ತನ್ನ ದೋಸ್ತನ ಜೊತೆಗಿನ ಬಾಂಧವ್ಯ ಬಿಟ್ಟರೆ ಅಲ್ಲಿ ಬೇರೆನು ಇರಲಿಲ್ಲ. ಕಡೆಗೂ ಉತ್ತರ ಕರ್ನಾಟಕದ, ಹಳ್ಳಿ ಹೈದ, ಹಾಡುಗಾರ ವಿನ್ನರ್ ಆಗಿ, ಟ್ರೋಫಿ ತಗೊಂಡು ಮನೆಗೆ ಹೊರಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳದ್ದು ಒಂದೇ ದೂರು. ಹನುಮಂತು ನಾವೂ ನೋಡಿದ ರೀತಿ ಇಲ್ಲ. ಇನ್ನೋಸೆಂಟ್ ಇಲ್ಲ, ನಾಟಕ ಮಾಡ್ತಾನೆ ಅಂತ. ಆದರೆ ಒಬ್ಬ ವ್ಯಕ್ತಿ ನಾಟಕ ಮಾಡೋದಾದ್ರೆ ಎಷ್ಟು ದಿನ ಮಾಡಬಹುದು. ಕೋಪ ಹೆಚ್ಚಾದಾಗಲಾದರೂ, ಪರಿಸ್ಥಿತಿ ಬದಲಾದಗಾದರೂ ಸೀಮಿತ ಕಳೆದುಕೊಳ್ಳಬೇಕಾಗಿತ್ತು. ಆದರೆ ಹನುಮಂತು ಬಂದ ದಿನದಲ್ಲಿ ಹೇಗಿದ್ದರೋ ವಿನ್ನರ್ ಎಂದು ಅನೌನ್ಸ್ ಮಾಡಿದಾಗಲೂ ಹಾಗೆಯೇ ಇದ್ದರು.

Bigg Boss Kannada 11 Zee Kannada Reaction For Hanumantha lamani winning trophy

ಜೀ ಕನ್ನಡದ ಕುಡಿ ಹನುಮಂತ

ಕನ್ನಡದಲ್ಲಿ ಮನರಂಜನೆಯ ಚಾನೆಲ್‌ಗಳು ನಾಲ್ಕೈದು ಇದಾವೆ. ಅವರಲ್ಲಿಯೂ ಸ್ಪರ್ಧೆ ಇದೆ. ಟಿಆರ್‌ಪಿಗಾಗಿ ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ. ಅದರಲ್ಲೂ ಕನ್ನಡದಲ್ಲಿ ಜೀ ಕನ್ನಡ ಹಾಗೂ ಕಲರ್ಸ್ ಕನ್ನಡದ ನಡುವೆ ಸ್ಪರ್ಧೆ ಇದೆ. ಒಂದಕ್ಕಿಂತ ಒಂದು ಉತ್ತಮ ಪ್ರೋಗ್ರಾಂಗಳನ್ನ ಕೊಡುವುದಕ್ಕೇನೆ ಕಾಯುತ್ತಿರುತ್ತಾರೆ. ಇದೀಗ ಜೀ ಕನ್ನಡದವರು ಕಲರ್ಸ್ ಕನ್ನಡದಲ್ಲಿ ಗೆದ್ದ ಪ್ರತಿಭೆ ಹನುಮಂತುಗೆ ವಿಶ್ ಮಾಡಿದ್ದಾರೆ.

ಹೆಮ್ಮೆಯ ಮಾತುಗಳನ್ನಾಡಿದ ಜೀ

'ಪ್ರೀತಿಯ ಹನುಮಂತ, ನಮ್ಮ ಸರಿಗಮಪ ವೇದಿಕೆಗೆ ಈ ಅದಮ್ಯ ಪ್ರತಿಭೆಯನ್ನು ಹುಡುಕಿ, ಬೆಳಕಿಗೆ ತಂದ ಜೀ ಕನ್ನಡಕ್ಕೆ ನಿಮ್ಮ ಬಗ್ಗೆ ಹೆಮ್ಮೆ ಇದೆ. ನಿಮ್ಮಂತಹ ನೆಲಮೂಲದ ಪ್ರತಿಭೆಯನ್ನು ಹುಡುಕಿ ಬೆಳಕಿಗೆ ತಂದ ಜೀ ಕನ್ನಡ ನಿಮ್ಮ ಗೆಲುವನ್ನು ಸಂಭ್ರಮಿಸುತ್ತದೆ. ಹನುಮಂತ ಅವರೇ ನಿಮ್ಮ ಗೆಲುವಿಗೆ ಹಾರ್ದಿಕ ಅಭಿನಂದನೆಗಳು' ಎಂದು ಜೀ ಕನ್ನಡ ಬರೆದಿದೆ.

ಇದೇ ಮೊದಲು

ಈ ರೀತಿ ಅಭಿನಂದನೆ ಸಲ್ಲಿಸಿರುವುದು ಇದೇ ಮೊದಲ ಸಲ. ಯಾಕಂದ್ರೆ ಜೀ ಕನ್ನಡ ಹಾಗೂ ಕಲರ್ಸ್ ಕನ್ನಡ ಪ್ರತಿ ಸ್ಪರ್ಧಿಗಳು. ಈ ಹಿಂದೆಲ್ಲಾ ಒಂದು ಚಾನೆಲ್‌ನಲ್ಲಿ ಕಾಣಿಸಿಕೊಂಡವರು ಮತ್ತೊಂದು ಚಾನೆಲ್ ನಲ್ಲಿ ಕಾಣಿಸಿಕೊಳ್ಳುವಂತೆ ಇರಲಿಲ್ಲ. ಈಗ ನಿಯಮ ಬದಲಾಗಿರಬಹುದು. ಹೀಗಾಗಿ ಜೀ ನಲ್ಲಿ ಅಭಿನಯಿಸಿದ ಕಲಾವಿದರು ಕಲರ್ಸ್ ಕನ್ನಡದಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಬಿಗ್ ಬಾಸ್‌ನಲ್ಲೂ ಜೀ ಕನ್ನಡದ ಕಲಾವಿದರು ಭಾಗಿಯಾಗಿದ್ದಾರೆ. ಈ ರೀತಿಯ ಅಭಿನಂದನೆ ಸಲ್ಲಿಸಿರುವುದು ಇದೇ ಮೊದಲ ಬಾರಿಗೆ ಆಗಿದೆ.

ಶುಭಾಶಯಗಳ ಮಹಾಪೂರ

ಇನ್ನು ಹನುಮಂತುಗೆ ವೋಟ್‌ಗಳ ಸಂಖ್ಯೆ ಏನು ಕಡಿಮೆ ಬಿದ್ದಿಲ್ಲ. ಅವರ ಊರಿನಲ್ಲಂತೂ ಎಲ್ಲಿ ನೋಡಿದರಲ್ಲಿ ಹನುಮಂತು ಪೋಸ್ಟರ್‌ಗಳೇ ಕಣ್ಣಿಗೆ ರಾರಾಜಿಸುತ್ತಿವೆ. ಸದ್ಯ ಬೆಂಗಳೂರಿನಲ್ಲಿಯೇ ಇರುವ ಹನುಮಂತ ಅವರು ಊರಿಗೆ ಬರಲೆಂದು ಅಭಿಮಾನಿಗಳು, ಸ್ನೇಹಿತರು ಕಾಯುತ್ತಿದ್ದಾರೆ. ಹನುಮಂತ ಹಾಡು, ಆತನ ಮುಗ್ಧತೆಗೆ ಫ್ಯಾನ್ಸ್ ಕಳೆದೋಗಿದ್ದಾರೆ‌. ಹಾಡಿ ಹೊಗಳುತ್ತಿದ್ದಾರೆ.

More from Filmibeat

English summary
Colors kannada bigboss Written Update on Zee Kannada poster. Here is the details about zee Kannada congratulate bigg boss winner hanumantha;
Read more about: bigg boss bigg boss kannada 11 tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X