BBK 12 ; ಅಯ್ಯೋ.. ಶಾಕಿಂಗ್ ಎಲಿಮಿನೇಷನ್ ; ಹೊರಬಂದ ಅಭಿಷೇಕ್

"ಬಿಗ್ ಬಾಸ್'' ಕೇವಲ ಕಾರ್ಯಕ್ರಮ ಮಾತ್ರ ಅಲ್ಲ. ವ್ಯಕ್ತಿ ಮತ್ತು ವ್ಯಕ್ತಿತ್ವಗಳ ಸಂಘರ್ಷ ಕೂಡ ಹೌದು. ಈ ಸಂಘರ್ಷದಲ್ಲಿ ಕೆಲವರು ಕುತಂತ್ರದಿಂದ ಯುದ್ಧ ಗೆಲ್ಲಲು ಮುಂದಾಗುತ್ತಾರೆ. ಇನ್ನೂ ಕೆಲವರು ತಮ್ಮನ್ನು ತಾವು ಶ್ರೇಷ್ಠ ಎಂದುಕೊಳ್ಳುತ್ತಾರೆ. ಮತ್ತೊಬ್ಬರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಎಷ್ಟೇ ಪ್ರಯತ್ನ ಮಾಡಿದರೂ ಕೂಡ ವಾರಾಂತ್ಯಕ್ಕೆ ಒಬ್ಬರಲ್ಲೊಬ್ಬರು ಮನೆಯಿಂದ ಹೊರಗಡೆ ಬರಲೇಬೇಕು.

ನಿಯಮಾನುಸಾರ ''ಅಗ್ನಿ ಪರೀಕ್ಷೆ''ಯನ್ನು ಎದುರಿಸಲೇಬೇಕು. ಇಂದು ( ಭಾನುವಾರ-ಡಿಸೆಂಬರ್ 7 ) ಕೂಡ ಕನ್ನಡದ ''ಬಿಗ್ ಬಾಸ್'' ಮನೆಯಲ್ಲಿ ಈ ಅಗ್ನಿ ಪರೀಕ್ಷೆ ನಡೆದಿದ್ದು ಅಭಿಷೇಕ್ ಮನೆಯಿಂದ ಹೊರ ಬಂದಿದ್ದಾರೆ.

bigg-boss-kannada-12-abhisheks-sudden-exit-leaves-housemates-stunned

ಹೌದು, ಇಂದು ಕಿಚ್ಚನ ಪಂಚಾಯ್ತಿಯಲ್ಲಿ ಅಭಿ, ಸೂರಜ್ ಮತ್ತು ಮಾಳು ಮೇಲೆ ತೂಗುಗತ್ತಿ ನೇತಾಡುತ್ತಿತ್ತು. ಹಲವರು ಅಭಿಷೇಕ್ ಕ್ಯಾಪ್ಟನ್ ಆದ ಹಿನ್ನೆಲೆ ಮನೆಯಿಂದ ಹೊರಗಡೆ ಬರುವುದಿಲ್ಲ ಎಂದುಕೊಂಡಿದ್ದರು. ಆದರೆ.. ಸುದೀಪ್ ಈ ಮೂವರನ್ನೂ ಆಕ್ಟಿವಿಟಿ ರೂಮ್‌ಗೆ ಕಳುಹಿಸಿದರು. ಅಲ್ಲಿ ಮೂವರದ್ದು ಸೂಟ್‌ಕೇಸ್‌ಗಳಿದ್ದವು. ಆಗಲೂ ಕೂಡ ಅಭಿಷೇಕ್ ಬಚಾವ್ ಆಗ್ತಾರೆ ಎನ್ನುವ ನಂಬಿಕೆ ಹಲವರಲ್ಲಿತ್ತು.

ಆದರೆ..ದುರಾದೃಷ್ಟ, ಅಭಿ ಸೂಟ್‌ಕೇಸ್‌ನಲ್ಲಿ 'The End' ಬರಹದ ಪ್ಲೆಕಾರ್ಡ್‌ ಇತ್ತು. ಅಲ್ಲಿಗೆ ಸೂರಜ್‌ ಮತ್ತು ಮಾಳು ಸೇಫ್‌ ಆಗಿ ಮನೆಯಲ್ಲಿ ಜರ್ನಿ ಮುಂದುವರಿಸಿದರು. ಅಭಿಷೇಕ್ ಮನೆನಯಿಂಧ ಹೊರ ಬಂದರು. ಈ ಹಿನ್ನೆಲೆ ಸದ್ಯ ಹಲವರಿಗೆ ಶಾಕ್ ಆಗಿದೆ. ''ಬಿಗ್ ಬಾಸ್'' ಅಂದರೆ ಅನಿರೀಕ್ಷಿತ , ನಂಬರ್‌ ಲಕ್‌ ಮೇಲೆ ನಂಬಿಕೆ ಇಟ್ಟಿದ್ದ ಅಭಿಗೆ ಅದೃಷ್ಟ ಕೈಕೊಡ್ತು ಎನ್ನುವ ಅಭಿಪ್ರಾಯ ಕೂಡ ಸದ್ಯ ವ್ಯಕ್ತವಾಗುತ್ತಿದೆ.

ಕೆಲವರು ಅಭಿಷೇಕ್ ''ಬಿಗ್‌ ಬಾಸ್‌'' ಮನೆಯಲ್ಲಿ ಇನ್ನೂ ಹೆಚ್ಚು ಮಾತನಾಡಬೇಕಿತ್ತು, ಆಕ್ಟಿವ್ ಆಗಿ ಇರಬೇಕಿತ್ತು ಎಂದರೆ.. ಇನ್ನೂ ಕೆಲವರು ಅವರ ಮೌನವೇ ಅವರ ಈ ಸೋಲಿಗೆ ಕಾರಣ ಎನ್ನುತ್ತಿದ್ದಾರೆ.ಯಾರು ವೋಟ್ ಹಾಕದಿದ್ರು ಸ್ಪಂದನ ಮತ್ತು ಕಾವ್ಯನ ''ಬಿಗ್ ಬಾಸ್‌'' ಸೇವ್ ಮಾಡ್ತಾ ಇದೆ ಎಂದು ಕೂಡ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಒಳ್ಳೆ ಲೀಡರ್ ಶಿಫ್ ಇತ್ತು ಗುರು ನಿನಗೂ ಕೂಡಾ, ಆದರೂ ನಿಮ್ಮ ಬದಲು ಸ್ಪಂದನ ಬರಬೇಕಿತ್ತು ಎಂದು ಕೂಡ ಹಲವರು ಹೇಳುತ್ತಿದ್ದಾರೆ. ಅಭಿಷೇಕ್ ಬದಲು ಸ್ಪಂದನ ಎಲಿಮೆಟ್ ಆಗ್ಬೇಕಿತ್ತು ಎಂದು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಇನ್ನೂ ಕೆಲವರು ಮನೆಯ ನಿಯಮಗಳನ್ನು ಮೀರದ, ಯಾರ ಜೊತೆಯೂ ಜಗಳ ಮಾಡದ, ವಿನಾ ಕಾರಣ ಮಾತನಾಡದ, ಬೆನ್ನ ಹಿಂದೆಯೂ ನಿಂದನೆ ಮಾಡದ, ಅಭಿಷೇಕ್ ಆ ಮನೆಯಲ್ಲಿ ಇರಲು ಸೂಕ್ತವಾದ ವ್ಯಕ್ತಿಯಲ್ಲ, ಇಷ್ಟು ದಿನ ಮನೆಯಲ್ಲಿರುವ ಅರ್ಹತೆ ಕೂಡ ಅವರಿಗೆ ಇರಲಿಲ್ಲ, ಕೊನೆಗೂ ಮನೆಯಿಂದ ಹೊರ ಬಂದಿದ್ದೇ ಒಳ್ಳೇದಾಯ್ತು ಎನ್ನುವ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದ್ದಾರೆ.

bigg-boss-kannada-12-abhisheks-sudden-exit-leaves-housemates-stunned

ಅಂದ್ಹಾಗೇ ಈ ವಾರ ಗಿಲ್ಲಿ, ಕಾವ್ಯಾ, ಅಶ್ವಿನಿ, ಧ್ರುವಂತ್, ಧನುಶ್, ಸೂರಜ್, ಮಾಳು, ರಾಶಿಕಾ, ಸ್ಪಂದನಾ ನಾಮಿನೇಟ್ ಆಗಿದ್ದರು. ಎಲ್ಲರೂ ಸೇಫ್ ಆಗಿ ಕೊನೆಯದಾಗಿ ಸೂರಜ್, ಮಾಳು ಮತ್ತು ಅಭಿಷೇಕ್ ಮಾತ್ರವೇ ಉಳಿದುಕೊಂಡರು. ಅವರು ಮೂವರನ್ನೂ ಆಕ್ಟಿವಿಟಿ ರೂಂಗೆ ಕಳಿಸಲಾಯ್ತು. ಮೂವರ ಮುಂದೆ ಸೂಟ್​ಕೇಸ್ ಇಡಲಾಗಿತ್ತು. ಸೂಟ್​​ಕೇಸ್​​ನಲ್ಲಿ ಅವರ ಎವಿಕ್ಷನ್​​ಗೆ ಸಂಬಂಧಿಸಿದ ಬೋರ್ಡ್ ಇಡಲಾಗಿತ್ತು. ಅಭಿಷೇಕ್ ಅವರ ಸೂಟ್​ಕೇಸ್​​ನಲ್ಲಿ ''ದಿ ಎಂಡ್'' ಎಂದು ಬರೆದಿತ್ತು. ಈ ಮೂಲಕ ಅಭಿಷೇಕ್ ಅವರ ಆಟ ಅಂತ್ಯವಾಗಿದ್ದು ಮುಂದಿನ ವಾರ ಯಾರ ಆಟ ಮುಕ್ತಾಯವಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ಹಲವರ ಅಭಿಲಾಷೆಯಂತೆ ಸ್ಪಂದನಾ ಮನೆಯಿಂದ ಮುಂದಿನ ವಾರವಾದರೂ ಹೊರ ಬರುತ್ತಾರಾ..? ಎಂದು ನೋಡಬೇಕಿದೆ.

More from Filmibeat

English summary
Intrigue & Detail Did the audience vote him out? Get the complete lowdown on Abhishek's controversial eviction from Bigg Boss Kannada 12 on Day 70,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X