BBK12 Grand Finale: ಅಶ್ವಿನಿ ಬದಲಾದ್ರು ಅದೃಷ್ಟ ಬದಲಾಗಲಿಲ್ಲ; 3ನೇ ಸ್ಥಾನಕ್ಕೆ ಕುಸಿದ ಛಲಗಾತಿ

ಬಿಗ್‌ಬಾಸ್ ಮನೆಯಲ್ಲಿ ಈ ಬಾರಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದವರು ಅಶ್ವಿನಿ ಗೌಡ. ಕೆಲ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದ ಅಶ್ವಿನಿ ಕನ್ನಡಪರ ಹೋರಾಟಗಳಲ್ಲಿ ಕೂಡ ಗುರ್ತಿಸಿಕೊಂಡಿದ್ದರು. ನಾನು ಬಿಗ್‌ಬಾಸ್ ಶೋ ನೋಡುತ್ತಿರಲಿಲ್ಲ, ಆದರೆ ಸ್ಪರ್ಧಿಯಾಗುವ ಅವಕಾಶ ಸಿಕ್ಕಾಗ ಒಪ್ಪಿಕೊಂಡೆ ಎಂದು ಮನೆ ಪ್ರವೇಶಿಸಿದ್ದರು.

ನಟಿ ಶ್ರುತಿ ಬಿಟ್ಟರೆ ಈವರೆಗೆ ಮಹಿಳಾ ಸ್ಪರ್ಧಿ ಬಿಗ್‌ಬಾಸ್ ಕನ್ನಡ ಟ್ರೋಫಿ ಗೆದ್ದಿಲ್ಲ. ಈ ಬಾರಿ ಅಶ್ವಿನಿ ಆ ದಾಖಲೆ ಮಾಡುತ್ತಾರೆ ಎಂದೇ ಸಾಕಷ್ಟು ಜನ ಭಾವಿಸಿದ್ದರು. ಕೊನೆಕೊನೆಗೆ ಕನ್ನಡ ಪರ ಹೋರಾಟಗಾರರ ಬೆಂಬಲ ಕೂಡ ಸಿಕ್ಕಿತ್ತು. ಆರಂಭದಲ್ಲಿ ಮಾಡಿದ ತಪ್ಪುಗಳಿಂದ ಎಚ್ಚೆತ್ತುಕೊಂಡು ಬದಲಾಗಿದ್ದ ಅಶ್ವಿನಿ ಕೊನೆ ವಾರದಲ್ಲಿ ಕಿಚ್ಚನ ಚಪ್ಪಾಳೆ ಗಿಟ್ಟಿಸಿ ಸಂಭ್ರಮಿಸಿದ್ದರು.

Bigg Boss Kannada 12 Ashwini Gowda s Winning Journey Ends with a Proud 3rd Place Finish

ಟ್ರೋಫಿ ಗೆಲ್ಲುವ ಅಶ್ವಿನಿ ಕನಸು ಮಾತ್ರ ಈಡೇರಲಿಲ್ಲ. 3ನೇ ಸ್ಥಾನಕ್ಕೆ ಆಕೆ ತೃಪ್ತಿಪಟ್ಟುಕೊಂಡಿದ್ದಾರೆ. ರಕ್ಷಿತಾ ವಿಚಾರದಲ್ಲಿ ಅಶ್ವಿನಿ ನಡೆ ಸಾಕಷ್ಟು ಚರ್ಚೆಗೆ ಗುರಿ ಆಗಿತ್ತು. ಆಕೆ ಬಳಸಿದ ಪದಗಳು ವಿವಾದ ಸೃಷ್ಟಿಸಿತ್ತು. ಬಳಿಕ ಅದನ್ನೆಲ್ಲಾ ಸರಿಪಡಿಸಿಕೊಂಡು ಅಶ್ವಿನಿ ಬದಲಾಗಿದ್ದರು. ತಮ್ಮ ನೈಜ ಆಟದಿಂದ ಗಮನ ಸೆಳೆದರು. ತಮ್ಮದೇ ಜರ್ನಿ ವಿಟಿ ನೋಡಿ ಅಶ್ವಿನಿ ಗೌಡ ಭಾವುಕರಾದರು.

ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ಇಲ್ಲಿವರೆಗೆ ಬಂದಿದ್ದೀನಿ. ಇದು ಸಮಾಧಾನ ತಂದಿದೆ ಎಂದಿ ಅಶ್ವಿನಿ ವೇದಿಕೆಯಲ್ಲಿ ಹೇಳಿದರು. ಸ್ವತಃ ಸುದೀಪ್ ಮನೆ ಒಳಗೆ ಹೋಗಿ ಟಾಪ್-3 ಸ್ಪರ್ಧಿಗಳನ್ನು ವೇದಿಕೆಗೆ ಕರೆದುಕೊಂಡು ಬಂದರು. ಕಿಚ್ಚನ ಚಪ್ಪಾಳೆ ಫೋಟೊಗಳಿಗೆ ಆಟೋಗ್ರಾಫ್ ಮಾಡಿ ಸುದೀಪ್ ಮೂವರಿಗೂ ಕೊಟ್ಟರು. ವೇದಿಕೆಯಲ್ಲಿ ಬಂದ ಬಳಿಕ ಕೊನೆಯ ಎಲಿಮಿನೇಷನ್ ಪ್ರಕ್ರಿಯೆ ನಡೀತು.

ಮೂವರನ್ನು ವೇದಿಕೆಯಲ್ಲಿ ನಿಲ್ಲಿಸಿ ಲೈಟ್ಸ್ ಆಗಿ ಯಾರಿಗೆ ಅಂತಿಮವಾಗಿ ಕೆಂಪು ಬಣ್ಣದ ಲೈಟ್ ನಿಲ್ಲುತ್ತದೆ ಅವ್ರಿಗೆ 3ನೇ ಸ್ಥಾನ ಎಂದು ಸುದೀಪ್ ಘೋಷಿಸಿದರು. ಹಸಿರು, ಕೆಂಪು ಬಣ್ಣದ ಲೈಟ್ಸ್ ಆಟದಲ್ಲಿ ಅಶ್ವಿನಿ ಅದೃಷ್ಟ ಕೈಕೊಟ್ಟಿತ್ತು. ವೇದಿಕೆಯಲ್ಲಿ ಮತ್ತೊಮ್ಮೆ ರಕ್ಷಿತಾಗೆ ಅಶ್ವಿನಿ ಕ್ಷಮೆ ಕೇಳಿದರು. ನಮ್ಮ ಮಾವನ ಮಗನಿಗೆ(ಗಿಲ್ಲಿ) ಆಲ್‌ ದಿ ಬೆಸ್ಟ್ ಎಂದು ಹೇಳಿ ಅಶ್ವಿನಿ ನಗು ಬೀರಿದರು. 3ನೇ ಸ್ಥಾನ ಪಡೆದ ಅಶ್ವಿನಿಗೆ 14 ಲಕ್ಷ ರೂ. ನಗದು ಬಹುಮಾನ ಸಿಕ್ತು.

More from Filmibeat

Read more about: bigg boss 12 bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X